Saturday, August 22, 2009
ಮಂತ್ರಗಳಿಂದ ಅಭಿವೃದ್ದಿ ಸಾಧ್ಯ- ಸಂಸ್ಕೃತ ವಿವಿ ಬೇಕೇ ಬೇಕು!!!
Friday, October 31, 2008
ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....

ಸಮಸ್ತ ಕನ್ನಡ ಜನತೆಗೆ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು....
ನಮ್ಮ ಕನ್ನಡ ಪ್ರೇಮ ಸಿರಿಗನ್ನಡಂ ಗೆಲ್ಗೆ ಅನ್ನುವದಕ್ಕೆ, ಇಲ್ಲ ನವೆಂಬರ್ ನಲ್ಲಿ ಒಂದು ಕನ್ನಡ ಚಿತ್ರ ನೋಡುವದಕ್ಕೆ ಮಾತ್ರ ಸೀಮಿತ ಆಗುವುದು ಬೇಡ. ಇದು ನಿತ್ಯೋತ್ಸವ ಆಗಲಿ.
Wednesday, June 13, 2007
ಕನ್ನಡ ಭಾಷೆಗೆ ಮಡಿವಂತಿಕೆ ಬೇಕೆ ??
ಇನ್ನ ಮುಂದೆ ಹೋಗಿ ೧೯೮೮-೯೩ ಸಮಯದಲ್ಲಿ ಬರುತ್ತಿದ್ದ ಕಾಶೀನಾಥ ಚಿತ್ರಗಳನ್ನು ಉದಾಹರಣೆ ಕೊಡುತ್ತಾರೆ.
ಇಷ್ಟೆಲ್ಲಾ ಕೇಳಿದ ಮೇಲೆ ಅನಿಸುವುದು ಎನೆಂದರೆ ಸಮಸ್ಯೆ ಇರುವುದು ಇಂದಿನ ಚಿತ್ರದಲ್ಲಿ ಅಲ್ಲ, ಇವರ ಕೀಳೆರಿಮೆಯಲ್ಲಿ ಮತ್ತು ಇವರ ಅಜ್ಞಾನದಲ್ಲಿ.
ಇವರಿಗೆ ಕನ್ನಡ ಚಿತ್ರಗಳನ್ನು ನಾನು ನೋಡುತ್ತೆನೆ ಎಂದು ಬೇರೆಭಾಷಿಕರ ಮುಂದೆ ಹೇಳಿಕೊಳ್ಳುವುದು, ಪಬ್ಲಿಕ್‍ನಲ್ಲಿ ಕಾಚಾ ಹಾಕಿಕೊಂಡು ನಿಂತ ಹಾಗೆ ಆಗುತ್ತದೆ. ತಮ್ಮ ಈ ಸಮಸ್ಯೆಯನ್ನು ಮುಚ್ಚಿಕೊಳ್ಳಲು ಇವರು ಕಾರಣ ಕೊಡುವುದು quality ಇಲ್ಲಾ ಕಣಮ್ಮ, ಸಾಧುಕೋಕಿಲ ಕಾಮೆಡಿ ನೋಡಿದರೆ ಅಸಹ್ಯ ಆಗುತ್ತದೆ, ಇದೇ ಜನ ತಮಿಳಿನಲ್ಲಿ ಗೌಂಡಾಮಣಿ, ಸೆಂಥಿಲ್ ಇಲ್ಲಾ ಹಿಂದಿಯಲ್ಲಿ ಜಾನಿಲೀವರ್ ಮಾಡುವ ಅಪಹಾಸ್ಯವನ್ನು ನೋಡಿ ನಗುತ್ತಾರೆ. ಇದು ಇವರ hyppocrism ತೋರಿಸುತ್ತದೆ.
ಈ ವರ್ಗದ ಜನರಿಗೆ ನಾನು ಹೇಳುವುದು ಒಂದೇ, ನೋಡದೆ ಮಾತಾನಾಡುವುದು ಉಚ್ಚೆಯನ್ನು ಪಂಚಾಮೃತಾ ಎಂದು ಕರೆದ ಹಾಗೆ. ತಿಳಿದುಕೊಂಡು ಮಾತನಾಡಿ, ನಿಮ್ಮ ಅಜ್ಞಾನವನ್ನೂ ಭಾಷೆಯ ಕುಂಠಿತಕ್ಕೆ ಬಳಸಿ ಮಾರಕ ಮಾಡಬೇಡಿ ಎಂದು.
ಮುಂದುವರೆಯುತ್ತ, ನನಗೆ ಇನ್ನೊಂದು ವರ್ಗದ ಜೊತೆ ಸ್ವಲ್ಪ ಟಕ್ಕರ್ ಆಗುತ್ತದೆ, ಆ ವರ್ಗ ಸ್ವಲ್ಪ ಸಂಸ್ಕೃತ ಪ್ರಿಯರು ಮತ್ತು ತುಂಬಾ ಮಡಿವಂತರೂ. ಅವರ ದೃಷ್ಟಿಯಲ್ಲಿ ಜಗ್ಗೇಶ್ ಮಾತು ಎಂದರೆ ಮೈ ಮೇಲೆ ಜೋಡ್ಯ್ಗಾ(ಜಿರಳೆ) ಬಿಟ್ಟು ಕೊಂಡ ಹಾಗೆ.
ಇಂತಾ ಮಾತುಗಳು ಭಾಷೆಯನ್ನು ಹಾಳು ಮಾಡುತ್ತಿವೆ, ಇನ್ನೂ ಮುಂದೆ ಹೀಗೆ ಬಿಟ್ಟರೆ ನಮ್ಮ ಸಂಸ್ಕೃತಿ ಹಾಳಾಗುತ್ತದೆ ಎಂದು ಸಂಸ್ಕೃತಿಯನ್ನು ಉಡಿದಾರಕ್ಕೆ ಸಿಕ್ಕಿಸಿಕೊಂಡ ಹಾಗೆ ಮಾತನಾಡುತ್ತಾರೆ. ಯಾಕೆ ಇಷ್ಟು ಕೋಪ, ಸ್ವಲ್ಪ ಸಮಾದಾನ ಮಾಡಿಕೊಳ್ಳಿ ಅಂದರೆ , ಎನ್ರಿ ಸಮಧಾನ ಮಾಡಿಕೊಳ್ಳೊದು, ಮುಂದೆ ನಮ್ಮ ಮಕ್ಕಳು "ಡಗಾರ್""ಫಿಗರ್" "ಬೊಂಬಾಟ್", "ಸಖತ್" ಎಂದರೆ ನಾವು ಕೇಳುತ್ತ ಇರಬೇಕಾ, ೭ ಜ್ನಾನಪೀಠ ಪಡೆದ ನಮ್ಮ ಕನ್ನಡವನ್ನು ಕೊಲ್ಲುತ್ತಿದ್ದಾರೆ ಎಂದು ಬೊಬ್ಬಿಡುತ್ತಾರೆ.
ಅದರೆ ನನಗೆ ಹೀಗೆ ಅವರು ಪ್ರತಿ ಬಾರಿ ಪ್ರಶ್ನೆ ಕೇಳಿದಾಗ ಅನಿಸುವುದು, ಕಲಿತರೆ ಎನು ತಪ್ಪು ಎಂದು. ನನಗೆ ಸರಿಯಾಗಿ ನೆನಪಿದೆ, ೧೯೯೮-೯೯ ಸಮಯದಲ್ಲಿ ಕನ್ನಡ ಸ್ಲಾಗ್ಸ ಮೇಲ್ ಒಂದು ಹರಿದಾಡುತ್ತ ಇತ್ತು. ಇದು ನನಗೆ ಬಂದಾಗ ಇದಕ್ಕೆ ನಾನು ಮತ್ತು ನನ್ನ ಸ್ನೇಹಿತರು ೩ ತಿಂಗಳಲ್ಲಿ ನಾನು ಮಾತನಾಡುವ ಅನೇಕ ಶಬ್ಧಗಳನ್ನು ಹಾಕಿದೆವು. ಇದರಲ್ಲಿ ಒಂದು ಊರಿಗೆ ಸೀಮಿತವಾದ ಪದಗಳು ಇದ್ದವು. ಅವೆಲ್ಲವನ್ನೂ ಒಂದಡೇ ಸೇರಿಸಿ ಆಗಿನ ಕಾಲದಲ್ಲಿ ಹಾಕಬಹುದಿತ್ತ "ಧಾರವಾಡ.ಕಾಂ" ಗೆ ಹಾಕಿದೆ. ಯಾಕೆ ಈ ಕೆಲ್ಸಕ್ಕೆ ಕೈ ಹಾಕಿದ ಎಂದರೆ, ನಾವು ಜಗತ್ತಿಗೆ ಕೆಲ ಶಬ್ದಗಳನ್ನು ಕೊಡಬಹುದಾದರೆ ಅವು ಇವು ಮಾತ್ರ. ಇವು ನಮ್ಮ ಸ್ವಂತ ಪದಗಳು, ಮತ್ತು ಇದರಲ್ಲಿ ನಮ್ಮ ಸೊಗಡು ಇದೆ. ಬಾಕಿ ಪದಗಳನ್ನು ನಾವು ಇಂಗ್ಲೀಷ್ ಅಥವಾ ಸಂಸ್ಕೃತದದಿಂದ ಪಡೆದಿದ್ದೆ ಆಗಿದೆ. "ಬಸ್ಸು, ಕಾರು, ಲಾರಿ ..ಟೇಬಲು ... ಈ ಪದಗಳನ್ನು ನಾವು ಮುಂದೆ ವೆಬಸ್ಟರಗೆ ಹಾಕಿಕೊಳ್ಲಿ ಎಂದರೆ ಜನ ನಗುತ್ತಾರೆ ಅಷ್ಟೆ. ಅದೇ "ಸಖತ್", ಬೊಂಬಾಟ್" ಇವು ಒಂದು ದಿನ ಸೇರುವ ಛಾನ್ಸಗಳು ಇವೆ. ಅದಕ್ಕೂ ಹೆಚ್ಚು ಅಂದರೆ ಆಡುವ ಮಾತು ಮತ್ತು ಬರೆಯುವುದು ಒಂದಕ್ಕೆ ಒಂದು ಭಿನ್ನ ನಮ್ಮ ಭಾಷೆಯಲ್ಲಿ. ನನ್ನ ಈ ಊಹೆ ತಪ್ಪಾಗಲಿಲ್ಲ, ಇಂದು ನೋಡಿ ಬೆಂಗಳೂರಿನ
ಅಲಿಖಿತ ಭಾಷೆಯಾಗಿ ಈ ಪದಪುಂಜಗಳು ಬಳಕೆಯಲ್ಲಿವೆ. ಇದಕ್ಕೆ ಆದರೂ ನಾವು ಜಗ್ಗೇಶ & Co ಅಭಾರಿಯಾಗಿರಬೇಕು.
ಇನ್ನೂ ಮುಂದೆ ಹೋಗಿ ಮಡಿವಂತಿಕೆ ತೋರುವ ನಮ್ಮ ಜನ ಕನ್ನಡದಲ್ಲಿ ಕೇವಲ ಒಳ್ಳೆಯ ಕೃತಿಗಳು(ಪ್ರಫುಲ್ಲ ಸಾಹಿತ್ಯ) ಬರಬೇಕು, ಸೆಕ್ಸಗೆ ಸಂಬಂದಿಸಿದ (ಅಶ್ಲೀಲ) ಬರಬಾರದು. ಇದರಿಂದ ಭಾಷೆ ಮಲೀನ ಆಗುತ್ತದೆ ಎಂದು ವಾದಿಸುತ್ತಾರೆ. ಅಲ್ಲಾ ಸ್ವಾಮಿ, ಕವನ-ಕಥೆ-ಕಾದಂಬರಿ ಬಿಟ್ಟು ನಾವು ಇನ್ನೇನು ಯೋಚಿಸಲು ಸಾಧ್ಯವೇ ಇಲ್ಲವೇ. ಈ ಕಥೆ-ಕಾದಂಬರಿ ಎಲ್ಲಾ ದುಡ್ದಿದ್ದು , ಒಳ್ಳೆಯ ಕೆಲ್ಸ ಇದ್ದು ಅದರ ಜೊತೆಗೆ ಸಮಯ ಇರುವ ವರ್ಗಕ್ಕೆ. ಆದರೆ ಸಾಮನ್ಯ ಜನಕ್ಕೆ ಬಡವನಿಗೆ ಅವನ ಕೆಲಸಕ್ಕೆ ಸಹಾಯ ಮಾಡುವ ಇಲ್ಲಾ ಅವನಿಗೆ ಬೇಕಾದ ಒಂದು ವಿಷಯದಲ್ಲಿ ಸಾಹಿತ್ಯ ಇರಬೇಕು ಎಂದು ಆಸೆ ಇರುತ್ತದೆ. ಉದಾ:- ಸೈಕಲ್ ಬಿಡಿಭಾಗಗಳನ್ನು ಬಿಚ್ಚಿ , ಮತ್ತೆ ಜೋಡಿಸುವುದು ಹೇಗೆ. ವಾಚ್ ಬಿಡಿ ಪಾರ್ಟುಗಳ ಬಗ್ಗೆ ಲೇಖನ. ಇಲ್ಲಾ ನಾವು ಬಳಸುವ ಪ್ರತಿಯೋಂದು ವಸ್ತುವಿನ "user guide". ಹಾಗೇಯೆ ಪ್ರತಿ ಜೀವಿಯು necessary evil ಆಗಿರುವ ಲೈಂಗಿಕ ಶಿಕ್ಷಣ ನಮ್ಮ ಭಾಷೆಯಲ್ಲಿ ಮಾತ್ರ ಬರಬೇಕು. ಬೇಡ ಅಂದರೂ ಈ ವಿಷಯದಲ್ಲಿ ಪ್ರತಿ ಪ್ರಜೆಗೂ ಬೇಕು, ನಮ್ಮ ಭಾಷೆಯಲ್ಲಿ ಕೊಡದಿದ್ದರೆ, ಒಂದು ವರ್ಗ ಬೇರೆ ಭಾಷೆಗೆ ಮೊರೆಹೋಗುತ್ತದೆ , ಇನ್ನೊಂದು ವರ್ಗ assume ಮಾಡಿಕೊಂಡು ಇಲ್ಲಾ quality ಇಲ್ಲದ ಅಗ್ಗದ ಸಾಹಿತ್ಯಕ್ಕೆ ಅನಾಹುತಗಳನ್ನು ಮಾಡಿಕೊಳ್ಳುತ್ತಾರೆ. ಇದು ನಮಗೆ ಬೇಕಾ ??
ಒಂದು ಭಾಷೆ ಅನ್ನುವುದು ಮದುವೆಯ ಊಟ ಹಾಗೇ ಇರಬೇಕು, ಅದರಲ್ಲಿ ನಮ್ಮ ಜನರು ಹೇಳುವ ಕೆಟ್ಟದ್ದು-ಒಳ್ಳೆದು ಎಲ್ಲಾ ಇರಬೇಕು. ಊಟದಲ್ಲಿ ಉಪ್ಪಿನಕಾಯಿ ಇರಬೇಕು, ಹಾಗೆಂದ ಮಾತ್ರಕ್ಕೆ ಊಟವೇ ಉಪ್ಪಿನಕಾಯಿ ಆಗಬಾರದು.
ಕೊಸರು:- ಕನ್ನಡದಲ್ಲಿ ಕೆಟ್ಟ ಮಾತು ಇರಬಾರದೆಂದು ಅನೇಕರು ನನ್ಗೆ ಹೇಳಿದ್ದಾರೆ, ಯಾಕೆ ಎಂದು ನನಗೆ ಅರ್ಥ ಆಗಿಲ್ಲ. ಒಂದು ಅಭಿವ್ಯಕ್ತಿಯನ್ನು ಬಿಂಬಿಸುವ ಎಲ್ಲಾ ಪದಗಳು ನಮ್ಮ ಭಾಷೆಯಲ್ಲಿ ಇರಬೇಕು. ದೇವರ ಭಾಷೆಯಾದ ಸಂಸ್ಕೄತದಲ್ಲಿ ಕೂಡ ಬೈಗಳ ಇದ್ದವು ಎಂದು ಎಲ್ಲೊ ಓದಿದ ನೆನಪು.
Tuesday, February 27, 2007
ಭಾಷಾಭಿವೃದ್ದಿ...ಒಂದು ಚಿಂತನೆ.
ಜಗತ್ತಿನಲ್ಲಿ ಭಾಷೆಯಲ್ಲಿ ಮುಖ್ಯ ಅಂಶ ಕಾಣುವದೆನೆಂದರೆ ಕಾಲಕ್ರಮೇಣ ಅದರಲ್ಲಿ ಬದಲಾವಣೆ,ಇದು ನಿರಂತರ ಮತ್ತು ಸ್ವಾಭಾವಿಕ. ಭಾಷೆಯಲ್ಲಿ ಮೂಲ ರೂಪ ಅನೇಕ ಬಾರಿ ಬದಲಾವಣೆಗೊಂಡು ಇನ್ನೊಂದು ರೂಪವನ್ನು ತಾಳಿದೆ,ಇದ್ದ ರೂಪ ಹೋಗುವುದು,ಇನ್ನೊಂದು ಹೊಸ ರೂಪ ಬರುವುದು ನಿತ್ಯ ನಡೆಯುವ ಘಟನೆಗಳು.
ಇಂಥ ಬದಲಾವಣೆಯನ್ನು ತಪ್ಪು-ಸರಿ ಎಂದು ಅಳೆಯಲು ಹೋಗಬಾರದು,ರೂಪಾಂತರಕ್ಕೆ ಅನೇಕ ಕಾರಣಗಳಿರುತ್ತದೆ,ರೂಪಾಂತರ ರಾತ್ರೊ-ರಾತ್ರಿ ಆಗುವ ಒಂದು ಪ್ರಕ್ರಿಯೆ ಅಲ್ಲ. ಅನೇಕ ವರುಷ,ಕೆಲವು ಸಾರಿ ಶತಮಾನಗಳೇ ಬೇಕಾಗಬಹುದು. ಮಹಾತ್ಮನವರು ಹೋಗಿ ಮಹಾತ್ಮವರು ಆಗಿದೆ, ಇದನ್ನು ಸದೃಶಕಾರಲೋಪ ಎನ್ನುತ್ತಾರೆ, ಹಾಗೆ ಕಾಗದ ಹೋಗಿ ಕಾದಗ ಆಗಿದೆ. ಇದನ್ನು ವರ್ಣಪಲ್ಲಟ ಎನ್ನುತ್ತಾರೆ. ಗಮನಿಸಿನೋಡಿ ಅಕ್ಷರಗಳು ಹಿಂದೆ ಮುಂದೆ ಆಗುತ್ತದೆ. ಅನೇಕ ಬಾರಿ ಪ್ರತಿ ಮನುಷ್ಯನಿಗೂ ತಾನು ಆಡುವ ಭಾಷೆಯಲ್ಲಿ ವರ್ಣಪಲ್ಲಟ ಮಾಡುವುದು ಸರ್ವೆಸಾಮನ್ಯ. ಅವಸರವಾಗಿ ಮಾತನಾಡುವಾಗ ಇದು ಹೆಚ್ಚು ಆಗುತ್ತದೆ, ಬಹುಶ ವರ್ಣಪಲ್ಲಟವೇ ಉಳಿದಿರಬಹುದು.
ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಈ ರೀತಿ ಬದಲಾವಣೆ ಆದಾಗ ಮೂಲರೂಪ ಹಾಗು ಬದಲಾದ ರೂಪ ಎರಡನ್ನು ಬಳಸಿಕೊಳ್ಳಬಹುದು. ಹಿಂದೆ ಹೇಳಿದ ಹಾಗೆ ರೂಪಾಂತರಕ್ಕೆ ದ್ವನಿಯೇ ಮುಖ್ಯ ಅಂಶವೆಂದರೆ ತಪ್ಪಾಗಲಾರದು. ಭೌಗೋಳಿಕವಾಗಿ ಭಾಷೆ ಕೂಡ ಅನೇಕ ಪ್ರಭೇದಗಳನ್ನು ಪಡೆದಿದೆ ಅದರಲ್ಲಿ ""ಪ್‍ವು" "ಅ" ಆಗಿ ಪರಿವರ್ತನೆಯಾಗಿರುವುದು. ಅರಸೀಕೆರೆ,ಹಾಸನ,ಮೈಸೂರಿನ ಕೆಳಭಾಗದ ಜನರಲ್ಲಿ ಇದು ಹೆಚ್ಚು ಕಾಣುತ್ತದೆ. ಇದು ತಪ್ಪಲ್ಲ,ಇದು ಸ್ವಾಭಾವಿಕ. ಅದನ್ನು ಹೀಯಾಳಿಸಬಾರದು,ಆ ಪದಗಳನ್ನು ನಮ್ಮ ಪದ ಭಂಡಾರದಲ್ಲಿ ಇಟ್ಟುಕೊಳ್ಳಬೇಕು. ಸಂದರ್ಭಕ್ಕೆ ತಕ್ಕ ಹಾಗೆ ಇವುಗಳನ್ನು ಬಳಸಿಕೊಳ್ಳುವುದು ನಮಗೆ ಬಿಟ್ಟಿದ್ದು. ಉದಾ:- ಕಾಲು ಎಂದರೆ ೨ ಅರ್ಥವಿದೆ,ಒಂದು ವಾಕ್ಯದಲ್ಲಿ ಬಳಸುವ ಬಳಕೆಯಿಂದ ಅದರ ಅರ್ಥ ಬದಲಾಗುತ್ತದೆ. ಹಿಂದೆ ಪಾಲುವಿನ ಮೂಲರೂಪಕ್ಕೆ ಬೇರೆ ಅರ್ಥ ಕೂಡ ಬಂದಿದೆ,ಆದರೆ ೨ ಅರ್ಥಗಳನ್ನು ಸಂದರ್ಭಕ್ಕೆ ತಕ್ಕ ಹಾಗೆ ಬಳಸಬಹುದು.
ಅನೇಕ ಬಾರಿ ಕಾಲಕ್ರಮೇಣ ಶಬ್ಧಗಳು ಕೂಡ expire ಆಗುತ್ತವೆ ಅಂದರೆ ತಪ್ಪಾಗಲಾರದು, ಹಿಂದೆ ನಮ್ಮ ಹಿರಿಯರು ಬಳಸುತ್ತಿದ್ದ ಅನೇಕ ಪದಗಳು ಆಗಿನ ಸಮಾಜದ ವಸ್ತುಗಳ ಹೆಸರುಗಳು ಇಂದು ಕೇಳಸಿಗದು,ಕೇಳಿದರೂ ಅದರ ಅರ್ಥವನ್ನು ಮನದಲ್ಲಿ ಚಿತ್ರಣ ಬರದು, ಮುಂದೆ ಇದರ ಹೊಸ ಪದಗಳು ಹಳೆಯ ಪದಗಳನ್ನು ಹಿಂದೆ ಹಾಕುತ್ತವೆ. ಭಾಷೆಯ ಬದಲಾವಣೆಯನ್ನು TIME and SPACE ಗಳಲ್ಲಿ ಅಳೆಯಬಹುದು, ಅಂದರೆ ಭಾಷೆಯ ಬದಲಾವಣೆಗೆ ಕಾಲ ಮತ್ತು ದೇಶಗಳೆ ಕಾರಣ.ಒಂದು ಸಂಸಾರ ಹೇಗೆ ಬೇರೆಯಾಗಿ ಬೇರೆ ಬೇರೆಯಾಗಿ ವಾಸಿಸಿ ಅವರದೇ ಹೊಸ ಸಂಸಾರದ ಕಟ್ಟ್ಟಳೆಯನ್ನು ತರುತ್ತಾರೊ,ಹಳೆ ಪದ್ಧತಿಗಳನ್ನು ಹೊಸ ಪದ್ದತಿಗಳನ್ನಾಗಿ ಮಾಡಿಕೊಳ್ಳುತ್ತಾರೋ ಹಾಗೆ ಭಾಷೆಯಲ್ಲಿ ಕೂಡ ಇದರ ಸಾಮ್ಯತೆಯನ್ನು ಕಾಣಬಹುದು. ಇದನ್ನು ತಮಿಳ್ ಭಾಷೆಯಲ್ಲಿ ಚೆನ್ನಾಗಿ ಕಾಣಬಹುದು, ದಕ್ಷಿಣ ಆಫ್ರಿಕಾಗೆ ಹೋದ ತಮಿಳರ ಭಾಷೆ,ಶ್ರೀಲಂಕಾದಲ್ಲಿ ನೆಲಸಿರುವ ಜನರ ಭಾಷೆ, ಮತ್ತು ನಮ್ಮ ತಮಿಳುನಾಡಿನ ಜನರ ಭಾಷೆಯನ್ನು ನೋಡಿದರೆ, ೩ ಬೇರೆ ಭಾಷೆಯಾಗಿ ಕಾಣತ್ತದೆ. ಇಲ್ಲಿ ಕಾಲ-ಮತ್ತು-ದೇಶಗಳ ಅಂತರವೇ ಮುಖ್ಯ ಕಾರಣ. ಒಂದು ಪ್ರದೇಶಕ್ಕೆ ಹೋಗಿ ನೆಲಸಿರುವವರ ಮೇಲೆ ಅಲ್ಲಿನ ಬಾಹ್ಯ ಅಂಶಗಳು ಬಹಳ ಪ್ರಭಾವ ಮಾಡುತ್ತದೆ.ಇದಕ್ಕೆ ನಾನು ಹೇಳಿದ್ದ ಮೈಸೂರಿನ ಕೆಳ ಇರುವರಿಗೆ "ಅ" ಮತ್ತು "ಹ" ಕಾರ ಉಚ್ಚಾರಣೆಯ ಬಗ್ಗೆ ಬೇಧವಿದೆ. ಇದು ಇಂದಿನ ಬದಲಾವಣೆಯಲ್ಲ, ಶತನಾನಗಳಷ್ಟು ಹಳೇಯದು ಎಂದು ಪಂಡಿತರ ಅಂಬೋಣ. ೧೯೪೦ ದಶಕದಲ್ಲೇ ನಮ್ಮ ಕೈಲಾಸಂ ಇದರ ಬಗ್ಗೆ ಜೋಕ್ ಮಾಡಿದ್ದಾರೆ.
ಈ ಅಂಶ ಅಲ್ಲಿಂದ ಆಚೆ ಹೋಗದಿರಲು ಪ್ರಕೃತಿಯು ಒಂದು ಕಾರಣವಿರಬಹುದು. ಈ ಬದಲಾವಣೆ ಅಲ್ಲಿಂದ ಆಚೆ ಹೋಗದಿರಲು ಸುತ್ತ ಇರುವ ಬೆಟ್ಟ-ಗುಡ್ಡ ಕಾರಣವಿರಬಹುದು. ಇದು ಕೂಡ ನಮ್ಮ ಒಂದು ಭಾಷೆಯೇ ಎಂದು ನಾವು ಮರೆಯಬಾರದು. ಒಂದು ಉಪಭಾಷೆ ಪ್ರಾದೇಶಿಕ,ಸಾಮಾಜಿಕಗಳಿಂದ ಒಡೆಯುತ್ತದೆ, ಹಿಂದೆ ದ್ರಾವಿಡ ಭಾಷೆಯಲ್ಲಿ ದಕ್ಶಿಣ,ಮಧ್ಯ ಮತ್ತು ಉತ್ತರ ದ್ರಾವಿಡ ಭಾಷೆಗಳಾಗಿದ್ದವು. ದಕ್ಶಿಣ ದ್ರಾವಿಡ ಕನ್ನಡ,ತಮಿಳ್,ತೆಲುಗು ಆದವು ಮತ್ತೆ ವ್ಯತ್ಯಾಸಗಳು ಬಂದು ಕನ್ನಡ ಕೊಡವ ಮತ್ತು ಬಡಗ ಆಯಿತು. ಭಾಷೆಯು ಒಂದು ಸಂಸಾರವಿದ್ದ ಹಾಗೆ ಇಂದಿನ ಕಾಲದ ಹಾಗೆ nuclear ಕುಟುಂಬಗಳನ್ನು ನಾವು ಕಾಣಬಹುದು. ಭಿನ್ನತೆ ಇರುತ್ತದೆ ಆದರ ಭಿನ್ನತೆಯಲ್ಲಿ ಎಕತೆ ಇರುತ್ತದೆ.