Thursday, July 13, 2006

ಹಿಂಸೈ ಅರಸನ್ ಪುಲಕೇಶಿ ೨೩ ...ಯಾಕೆ ವಿರೋಧಿಸಬೇಕು ??


ಗೆಳಯರೇ,
ಹಿಂಸೈ ಅರಸನ್ ಪುಲಕೇಶಿ ೨೩ ಈ ತಮಿಳ್ ಚಿತ್ರದ ಬಗ್ಗೆ
ನಿಮಗೆ ಕಲ್ಯಾಣ ರಾಮನ್ ಅವರ ಪತ್ರ ಬಂದಿರಬಹುದು, ಅದನ್ನು ನೋಡಿ ನಿಮಗೆ ಪಿಚ್ಚು ಅನಿಸಿ ಮತ್ತು ಅದನ್ನು ನಿಮ್ಮ ಇತರ ಗೆಳೆಯರಿಗೆ ಕಳಿಸರಬಹುದು. ಹಾಗಿದ್ದರೆ ನನ್ನ ಪ್ರೇಕ್ಷಕರು ನೀವು ಅಲ್ಲ.

ಮತ್ತೆ ಯಾರು ??
(ಅ) ಆ ಪತ್ರ ನೋಡಿ ನಿಮಗೆ ಏನು ಅನಿಸಲಿಲ್ಲವಾದರೆ..
(ಆ) ಚಿತ್ರವನ್ನು ಚಿತ್ರದ ಹಾಗೆ ನೋಡಬೇಕೆಂದು ವಾದ ಮಾಡುವಿರಾದರೆ,
(ಇ) ಯಾರೋ ಏನೊ ಮಾಡಿದರೆ ನಮಗೆ ಏನು ಅಂತ ನಿಮಗೆ ಅನಿಸಿದರೆ ...

ಮೇಲೆ ಹೇಳಿದ ಹಾಗೆ ನಿಮಗೆ ಓಂದು ರೀತಿ ಅನಿಸಿದರೆ, ನೀವೇ ನನ್ನ ಪ್ರೇಕ್ಷಕ ವೃಂದ...

ಮೊದಲು ಆ ಚಿತ್ರದ ಬಗ್ಗೆ ತಿಳಿದುಕೋಳ್ಳೊಣ,

ಹಾಸ್ಯಚಿತ್ರ ಎಂಬ ಹೆಸರಲ್ಲಿ ಈ ಚಿತ್ರವನ್ನು ತಯಾರಿಸಲಾಗಿದೆ, ಇದು ಕಾಲ್ಪನಿಕ ಕಥೆ ಅಂತ ಅವರು ಸಾರಿ ಸಾರಿ ಹೇಳಿದರೂ
ಚಿತ್ರದ ಉದ್ದಕ್ಕು ನಮ್ಮ ರಾಜರ ಮತ್ತು ನಮ್ಮ ನಾಯಕರನ್ನು ಅವಮಾನಿಸಲಾಗಿದೆ. ೧೭೭೧-೧೭೯೨ ಮಧ್ಯೆ ನಡೆಯುವ ಕಥೆಯಲ್ಲಿ ಪುಲಕೇಶಿ ಎಂಬ ರಾಜನನ್ನು ಸ್ವಂತ ಬುದ್ಧಿ ಇಲ್ಲದ, ಸ್ಥ್ರೀಲೋಲ , ಹೇಡಿ,ಕ್ರೂರಿ ಎಂದು ಚಿತ್ರಿಕರಿಸಲಾಗಿದೆ.

* ಪುಲಕೇಶಿ ಅಪ್ಪನ ಪಾತ್ರನನ್ನು ತಾಯ್ ನಾಗೇಶ ಮಾಡಿದ್ದಾರೆ, ಅವನಿಗೆ ಬಹಳ ದಿನಗಳ ಮೇಲೆ ೨ ಅವಳಿ ಮಕ್ಕಳು ಹುಟ್ಟುತ್ತವೆ, ಅದರಲ್ಲಿ ಸ್ವಂತ ಬುದ್ಧಿ ಇಲ್ಲದ ಮತ್ತು ಇರುವ ಮಕ್ಕಳು. ಸ್ವಂತ ಬುದ್ಧಿ ಇಲ್ಲದ ಪಾತ್ರವು ಕನ್ನಡಿಗರನ್ನು ಪ್ರತಿನಿಧಿಸಿದರೆ ಇನ್ನೊಂದು ಕಟ್ಟಬೊಮ್ಮನ್ ಮಾದರಿಯಲ್ಲಿ ತಮಿಳರ ತರ ಚಿತ್ರಿಕರಿಸಲಾಗಿದೆ.

*" ಸಂಗೋಳ್ಳಿ ರಾಯಣ್ಣ" ಎಂಬುವನು ಬ್ರಿಟಿಷರ ಗುಪ್ತಚರ ಅವನನ್ನು ಪುಲಕೇಶಿ ಅಣ್ಣ ಕಪಾಳಕ್ಕೆ ಹೊಡೆಯುತ್ತಾನೆ.

* Robert Claive ಮುಂತಾದ ಬ್ರಿಟಿಷ ಅಧಿಕಾರಿಗಳ ಜೊತೆ ಕನ್ನಡಿಗರನ್ನು ಗುರುತಿಸುತ್ತಾರೆ.

*ತುಘಲಕ್ ಮಾಡಿದ ಕ್ರಮಗಳನ್ನು ಪುಲಕೇಶಿಯ ಕೈಲಿ ಮಾಡಿಸುತ್ತಾರೆ
.

* ಪಲ್ಲವರ ಸೈನ್ಯ ದಂಡು ಎತ್ತಿ ಬಂದಾಗ ಅವರ ಮುಂದೆ ಟಪಾಲ್-ಗೋಚಿ ಡಾನ್ಸ ಮಾಡಿ ಪ್ರಾಣಭಿಕ್ಷೆ ಕೇಳುತ್ತಾನೆ. ಹೀಗೆ ಹಿಂದೆ ಒಂದು "ಕಂಚಿ ತಲೈಚಿತ್ತವಾನ್ "ಚಿತ್ರದಲ್ಲಿ ನಮ್ಮ ಪುಲಕೇಶಿಯನ್ನು ಭಫೂನ್ ತರ ಚಿತ್ರಿಸಲಾಗಿತ್ತು.

ಹಾಗಿದ್ದರೆ ನಮ್ಮ ಪುಲಕೇಶಿ ಹೇಗಿದ್ದ ??

೧) ಅವನ ಸೈನ್ಯ ಕಂಡರೆ ಸಾಕು ಹೆದರಿಕೊಳ್ಳುತಿದ್ದರು, ೩೦೦೦೦ ಆನೆಗಳು ಅವನ ಸೈನ್ಯದಲ್ಲಿ ಇದ್ದ ಕಾರಣವೇ ಉತ್ತರದ ಕನೋಜಿನ ಚಕ್ರವರ್ತಿ ಹರ್ಷವರ್ಧನ ಇವನಿಗೆ ಶರಣಾಗಿದ್ದು.
೨) ಇವನ ಪರಾಕ್ರಮ ೬-೭ನೇ ಶತಮಾನದಲ್ಲಿ ಭಾರತದ ಉದ್ದ ಅಗಲಕ್ಕೂ ಹಬ್ಬಿತ್ತು. ಇವನ ಪರಾಕ್ರಮ ನೋಡಿ ಸಿಲೋನಿನ ರಾಜ ಇವನ ಸಾಮಂತನಾಗಿದ್ದ. ಉತ್ತರ ಭಾರತದ ಗುಜರಾತಿನಲ್ಲಿ ಇವರ ರಾಜ್ಯದ ಒಂದು ಶಾಖೆ ಇತ್ತು.
೩) ಇವನ ನೌಕ ಸೈನ್ಯ ಆಗಿನ ಕಾಲದಲ್ಲಿ ಬಹಳ ಪ್ರಸಿದ್ದಿ ಪಡೆದಿತ್ತು, ಅದ್ದರಿಂದ ಆಗಿನ ಪರ್ಶಿಯಾ ದೇಶದ ರಾಜ ಇವನ ರಾಜ್ಯಕ್ಕೆ ರಾಯಭಾರಿ ಕಳಿಸಿದ್ದ.
೪) ಸ್ತ್ರೀ ಸಮಾನತೆಯನ್ನು ಮೊದಲು ಭೋದಿಸಿ ಅದನ್ನು ಆಚರಿಸಿದ ಪುಣ್ಯವಂತ ಇವನು, ಇವನ ಸೊಸೆ ಇವರಿಂದ ರಾಜಕೀಯ-ಆಡಳಿತ ಬಗ್ಗೆ ಶಿಕ್ಶಣ ಪಡೆದು ಒಂದು ಶಾಖೆಯನ್ನು ನೋಡಿಕೊಳ್ಳುತ್ತಿದ್ದಳು.


ಇಂತಹ ಮಹಾನ್ ಚಕ್ರವರ್ತಿ ಬಗ್ಗೆ ಹೀಗೆ ಕೀಳಾಗಿ ತೆಗೆಯಲು ಅವರಿಗೆ ಎಷ್ಟು ಕೊಬ್ಬು ಇರಬೇಕು ಹೇಳಿ ...ಅದರ ನಿರ್ಮಾಪಕರಿಗೆ ನಾವು ಕೇಳುವುದು ..

೧) ನಿಮಗೆ ಧೈರ್ಯ ಇದ್ದರೆ ಶಿವಾಜಿ ಇಲ್ಲ ಪಾಂಡ್ಯ ಅಂತ ಹೆಸರಿಡಬೇಕಿತ್ತು.
೨) ನಮಗೆ ಚರಿತ್ರೆ ಬಗ್ಗೆ ಗೊತ್ತಿಲ್ಲ, ಪುಲಕೇಶಿ ಇದ್ದ ಅನ್ನೊಂದು ಗೊತ್ತಿಲ್ಲ ಅನ್ನುವ ಅದರ ನಿರ್ಮಾಪಕನಿಗೆ ನಾಚಿಕೆ ಆಗಬೇಕು. ಹಾಗಿದ್ದರೆ ಪಲ್ಲವ,ಹೈದರಾಲಿ,ಟಿಪ್ಪು ಎಲ್ಲಿಂದ ಬಂದರೂ ??. ಪಲ್ಲವರ ಮುಂದೆ ಹಾಗೆ ಕಾಲಿಗೆ ಬೀಳುವುದು ಇವರಿಗೆ ಹಾಸ್ಯವಿರಬಹುದು ನಮಗೆ ಅಲ್ಲ.


ಇಷ್ಟು ಆಗಿ ನಿಮ್ಮ ಉತ್ತರಕ್ಕ್ಕೆ ನೀವು ಭದ್ದರಾಗಿದ್ದರೆ ..

(ಅ) ನಿಮಗೆ ಖಂಡಿತ ಹೇಡಿತನ ನಿಮ್ಮ ಮೈ-ಮನದಲ್ಲಿ ಆವರಿಸಿದೆ. ಇಲ್ಲವಾದರೆ ನಿಮಗೆ ಕನ್ನಡ ಚರಿತ್ರೆ ಬಗ್ಗೆ ಜ್ಞಾನ ಕಡಿಮೆ ಎಂದು ತೋರಿಸುತ್ತದೆ.

(ಆ) ಸ್ವಾಮಿ, ಅಭಿವ್ಯಕ್ತಿ ಸ್ವಾತಂತ್ರ ನಾವು ಸ್ವಾಗತಿಸುತ್ತೆವೆ, ಆದರೆ ಹಾಗೇ ಅಂತ ಬೇರೆಯವರ sentiments ಜೊತೆ ಆಟವಾಡುವುದು ತಪ್ಪು. ಪ್ರತಿಯೊಂದು ರಾಜ್ಯದ ಅಭಿವೃದ್ದಿ ಮತ್ತು ಸಂಸ್ಕೃತಿಗೆ ಹಿಂದಿನ ಚರಿತ್ರೆಯವರ ಕೊಡುಗೆ ಇದೆ. ನಮ್ಮ ಕೆಲಸಗಳಿಗೆ ನಾವು ಸ್ಪೂರ್ತಿ ತೆಗೆದುಕೊಳ್ಳುವುದು ನಮ್ಮ ಹಿಂದಿನ ರಾಜರಿಂದ. ಅದರಲ್ಲೂ ಶೌರ್ಯ,ಪರಾಕ್ರಮಗಳಿಂದ ೧೦೦೦ ವರುಷ ನಮ್ಮ ನಾಡನ್ನು ಆಳಿ, ತಮ್ಮ ಪರಾಕ್ರಮವನ್ನು ಭಾರತದ ಉದ್ದ-ಅಗಲಕ್ಕೂ ಹಬ್ಬಿಸಿದ ನಮ್ಮ ರಾಜರು ಗೋವಿಂದ-೩, ನೃಪತುಂಗ,ಪುಲಕೇಶಿ,ಮಯೂರ ಮತ್ತು ಕೃಷ್ಣದೇವರಾಯ ನಮಗೆ ಸ್ಪೂರ್ತಿ ಆಗದೆ ಬೇರಯವರಿಗೆ ಆಗುತ್ತಾರೆಯೇ ??
ಇವರನ್ನು ಅವಮಾನಿಸಿದರೆ ನಮ್ಮ ಸಂಸ್ಕೃತಿಯನ್ನು ಅವಮಾನಿಸಿದ ಹಾಗೇ ಅಲ್ಲವೇ ??. ನಿಮಗೆ ಏನು ಅನಿಸದಿದ್ದರೆ ಅದು ನಿಮ್ಮ ಷಂಡತನದ ಪರಮಾವಧಿ.

ಇದನ್ನು ಸಮರ್ಥಿಸುವರಿಗೆ ನಾನು ಕೇಳುವ ಪ್ರಶ್ನೆ, ನಿಮ್ಮ ಕುಟುಂಬ ಬಗ್ಗೆ ಇಲ್ಲ ನಿಮ್ಮ ತಾಯಿ ಬಗ್ಗೆ ಕೀಳಾಗಿ ಇಲ್ಲದ-ಸಲ್ಲದ ವಿಚಾರಗಳನ್ನು ಹಾಸ್ಯ ಎಂದು ಹೇಳಿದರೆ ಒಪ್ಪಿಕೊಳ್ಳುತ್ತಿರಾ ?

(ಇ) ನಾಳೆ ನಾವು ಹಾಗೇ ಮಾಡಿದರೆ ಅವರು ಸುಮ್ಮನೆ ಇರುತ್ತಾರೆಯೇ??, ಅವರಿಗೆ ಇರುವ ಕಳಕಳಿ ನಮಗೆ ಯಾಕೆ ಇಲ್ಲಾ ?
ನಮ್ಮ ಮೌನವನ್ನು ಅವರು weakness ಅಂದುಕೊಂಡು ನಮ್ಮ ಮೇಲೆ ಸವಾರಿ ಮಾಡಲು ಹೊರಡುವದನ್ನು ತಪ್ಪಿಸಲು ನಾವು ಹೋರಾಡದಿದ್ದರೆ ಹೇಗೆ !!!

ನಮ್ಮ ಸ್ವಾಭಿಮಾನವನ್ನು ಕೆಣಕುವ, ಕನ್ನಡಿಗರು ಗಾಂಡುಗಳು ಅಂತ ಬಿಂಭಿಸುವ ಇಂತ ಚಿತ್ರವನ್ನು ವಿರೋಧಿಸದೇ ಪೂಜಿಸಬೇಕೆ ??

ಕೊಸರು:- ಈ ಚಿತ್ರವನ್ನು ಕರ್ನಾಟಕ ಚಲನಚಿತ್ರ ಮಂಡಳಿ ಕರ್ನಾಟಕದ್ಯಾಂತ ನಿಷೇಧಿಸಿದೆ. ಇದು ಒಳ್ಳೆಯ ಸುದ್ದಿ