Tuesday, March 10, 2009

ಗಾಂಧಿ ವಸ್ತುಗಳಿಗೆ ಬ್ರಾಂದಿ ಹಣ.


ಬಾಪೂಜಿಯವರು ಬಳಸುತ್ತಿದ್ದ ವಸ್ತುಗಳನ್ನು ವಿಜಯಮಲ್ಯ ಆವರು ಹರಾಜಿಸಿ ೯ ಕೋಟಿ ರೂಪಾಯಿ ನೀಡಿ ತಂದಿದ್ದಾರೆ. ಅವರಿಗೆ ಧನ್ಯವಾದಗಳು.

ಆದರೆ ನನಗೆ ಒಂದು ಅನುಮಾನ, ಗಾಂಧಿ ಸ್ಮಾರಕ ನಿಧಿ ಎಂಬುದೊಂದಿದೆ. ಅದರ ವಶದಲ್ಲಿ ೯ ಕೋಟಿ ರೂಪಾಯಿ ಇರಲಿಲ್ಲವೇ ? ಹೋಗಲಿ, ಗಾಂಧೀಜಿ ಹೆಸರಿನಲ್ಲಿ ರಾಜಕೀಯ ಮಾಡುತ್ತ ಬಂದ ಕಾಂಗ್ರೆಸ್ ಪಕ್ಷ ಅಷ್ಟು ಬಡವಾಗಿದೆಯಾ ?

ಯಾಕೆ ಹೇಳುತ್ತಿದ್ದೆನೆಂದರೆ ಬಾಪೂ ಅವರು ಮೊದಲಿನಿಂದಲೂ ಹೆಂಡ ಸಾರಾಯಿಗಳನ್ನು ವಿರೋಧಿಸುತ್ತ ಬಂದವರು, ಅದರ ಸೇವನೆಯನ್ನು ನಿಷೇಧಿಸಬೇಕೆಂದು ಪ್ರತಿಪಾದಿಸಿದವರು , ಅಂಥವರು ಬಳಸುತ್ತಿದ್ದ ವಸ್ತುಗಳನ್ನು ಬ್ರಾಂದಿ-ಬೀರ್ ಮಾರಿ ಬಂದ ಹಣದಲ್ಲಿ ಕೊಂಡು ತಂದಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.

ನನಗೆ ಒಂದು ತಮಿಳ್ ಗಾದೆ ಜ್ಞಾಪಕಕ್ಕೆ ಬರುತ್ತದೆ " ನಾಯಿಯನ್ನು ಮಾರಿ ಬಂದ ಹಣ ಬೊಗಳದು", ಹಾಗೆ ಬ್ರಾಂದಿ ಮಾರಿ ಬಂದ ಹಣದಲ್ಲಿ ಕೊಂಡ ಗಾಂಧಿಜಿಯವರ ವಸ್ತುಗಳಿಗೆ ಅಮಲು ಹತ್ತದು.

ನಿಜಕ್ಕೂ ನಗು ಬರುವ ವಿಷಯ ಎಂದರೆ, ಜಗತ್ತಿನ ಎಲ್ಲೊ ಹರಾಜು ಆಗುತ್ತ ಇದ್ದರೆ, ಇಲ್ಲಿ ನಮ್ಮ ಅದು ನಿಲ್ಲಬೇಕೆಂದು
ಅರ್ಜಿ ಸಲ್ಲಿಸುವುದು, ಅದನ್ನು ಪರಿಗಣಿಸಿ ನಮ್ಮ ಉಚ್ಚ ನ್ಯಾಯಾಲಯ ಅದಕ್ಕೆ ತಡೆ ಆಜ್ಞೆ ಕೊಡುವುದು ನಿಜಕ್ಕೂ ಹಾಸ್ಯಸ್ಪದ.
ಇವರ ಆಜ್ಞೆಯ ಮೇರೆಗೆ ಹೆದರಿ ಇಲ್ಲಾ contempt of court ಆಗುತ್ತದೆ ಎಂದು ಹರಾಜು ನಿಲ್ಲಿಸುತ್ತಾರೆ ಎಂಬ ಯಾವ ಆಧಾರದ ಮೇಲೆ ತೀರ್ಪು ಕೊಟ್ಟರೋ ಕಾಣೆ.

ಇಲ್ಲಿ ಪ್ರಶ್ನೆಗೆ ಬರುವುದು ಗಾಂಧೀ ವಸ್ತು ನಮ್ಮ ಭಾರತದಲ್ಲೇ ಇರಬೇಕೆ ಎನ್ನುವುದು ಇಲ್ಲಾ ಅವರ ಜೀವನದ ಉದ್ದಕ್ಕೂ ಭೋಧಿಸಿದ್ದ
ಭೋಧನೆಗಳನ್ನು ಲೇವಡಿ ಮಾಡಿ, ನೋಡಿ ಕೊನೆಗೆ ನಿಮ್ಮ ಮಾನ ಉಳಿಸಿದ್ದು ನಮ್ಮ ಬ್ರಾಂದಿಯ ಹಣವೇ ಹೊರತು ಬೇರಲ್ಲ ಅನ್ನೊ
ಮಲ್ಯರ ದೇಶಭಕ್ತಿ. ಆಯ್ಕೆ ನಿಮ್ಮದು ...

ಒಟ್ಟಿನಲ್ಲಿ ಗಾಂಧೀಜಿಗೆ ಜೈ ..