Friday, August 21, 2009

ಕರ್ನಾಟಕದ ಮತ್ತೊಂದು ಮರುಚುನಾವಣೆ-ವಿಶ್ಲೇಷಣೆ

ಕರ್ನಾಟಕದ ಮರುಚುನಾವಣೆ ಮತ್ತೊಮ್ಮೆ ಅಚ್ಚರಿಯ ಫಲಿತಾಂಶ ತಂದಿದೆ, ಜೆಡಿಎಸ್ ಬಿಟ್ಟರೆ ಎಲ್ಲಾ ಮತ್ತೊಮ್ಮೆ ಆತ್ಮಾವಲೋಕನ ಮತ್ತು ಚಿಂತನಾ ಸಭೆ ನಡೆಸಿ ಎಲ್ಲಿ ಎಡೆವಿದೆವೂ ಅಂತ ಪರಮರ್ಶೆ ಮಾಡಬೇಕಾಗಿದೆ. ಫಲಿತಾಂಶವನ್ನು ರಾಜಕರಣಿ ನೋಡಿದರೆ ಯೋಗಿರಾಜ್ ಭಟ್ಟರ ಡೈಲಾಗ್ ಹೋಡಿಬಹುದು, ಕನ್ನಡ ಜನರನ್ನು ಅರ್ಥ ಮಾಡಿಕೊಳ್ಳುವುದು ಕಷ್ತ. ಲೋಕಸಭೆಯಲ್ಲಿ ಕೊಟ್ಟ ಟ್ರೆಂಡಿಗೂ ಈ ಚುನಾವಣೆಯಲ್ಲಿ ಕೊಟ್ಟ ಟ್ರೆಂಡಿಗೂ ಅಜಗಜಾಂತರ ವ್ಯತ್ಯಾಸ ತಂದಿದೆ.

ಕ್ರಿಕೆಟ್ಟಿನಲ್ಲಿ ಧೋನಿ,ಗಂಭೀರ್,ಯುವರಾಜ್ ಆಡಿ ನಮ್ಮನ್ನು ಗೆಲ್ಲಿಸುತ್ತಾರೆ ಅಂತ ಹೋಗಿ ಅವರೆಲ್ಲಾ ಡಕ್ ಹೊಡೆದು,ಇಶಾಂತ್ ಶರ್ಮ ಸೆಂಚುರಿ ಬಾರಿಸಿದರೆ ಆಗುವ ಶಾಕ್ ರಾಷ್ಟ್ರೀಯ ಪಕ್ಷಗಳಿಗೆ ಆಗಿದೆ. ತಾವೂ ಗೆದ್ದೆ ಗೆಲ್ಲುತ್ತೆವೆ ಅಂತ ಬೀಗಿದ ಕಡೆ ಸೋತು, ಸೋತರೂ ಓಕೆ ಅನ್ನೊ ಕಡೆ ಗೆದ್ದಿರುವುದು ಎಲ್ಲೊ ಅವರಿಗೆ ಖುಷಿ ಪಡಬೇಕೊ ಇಲ್ಲ ಬೇಜಾರು ಮಾಡ್ಕೊಬೇಕೊ ಅಂತ ತಿಳಿಯದಾಗಿದೆ.

ಎಕೋ ಹೀಗಾಯ್ತೋ ನಾನು ಕಾಣೆನೂ ...

ಜಾತಿ ಲೆಕ್ಕಾಚಾರ, ಅಭಿವೃದ್ದಿ ಮಂತ್ರ, ಮಠಾಧೀಪತಿಗಳ ಆಶೀರ್ವಾದ, ಲೋಕಸಬಾ ಚುನಾವಣೆ ಫಲಿತಾಂಶ, ಪಕ್ಷ ಹೊಂದಾಣಿಕೆ ಹೀಗೆ ಹತ್ತು ಹಲವಾರು ಅಂಶಗಳನ್ನು ಇಟ್ಟುಕೊಂಡೆ ಎಲ್ಲಾ ಪಕ್ಷಗಳು ಕಸರತ್ತು ಮಾಡಿದ್ದು, ಆದರೆ ಎಲ್ಲೊ ಒಂದು ಕಡೆ ಲೋಕಸಭಾ ಚುನಾವಣೆಯ ಫಲಿತಾಂಶ, ಹಿಂದಿನ ಅಂಕಿ ಅಂಶ ಅತಿಯಾಗಿ ಆತ್ಮವಿಶ್ವಾಸ ಬೆಳಸಿದ್ದವು. ಅದನ್ನು ಮತದಾರ ಸಾರಸಗಟಾಗಿ ಮುರಿದಿದ್ದಾನೆ. ಇವತ್ತಿನ ವಿದ್ಯಮಾನದಲ್ಲಿ ಪಕ್ಷಹೊಂದಾಣಿಕೆ ಬಹಳ ದೊಡ್ಡ ಅಂಶ ಆಗಿ ನಿಂತಿದೆ, ಬರೀ ಒಳ್ಳೆ ಅಭ್ಯರ್ಥಿಯನ್ನು ನಿಲ್ಲಿಸಿದರೆ ಸಾಲದು, ನಿಮ್ಮ ಎದುರಾಳಿಯ ಮತಗಳನ್ನು ಕಸಿಯುವ ಇನ್ನೊಬ್ಬನನ್ನು ಬೇರೆ ಪಕ್ಷದಿಂದ ಗೆಲ್ಲಿಸಬೇಕು, ಎಕೆಂದರೆ ನಾವು ನೋಡಿದ ಹಾಗೆ ಎಲ್ಲೂ ತ್ರಿಕೋನ ಸ್ಪರ್ಧೆ ಆಗಿಲ್ಲ. ಈ ನಿಟ್ಟಿನಲ್ಲಿ ಅದರಲ್ಲೂ ಮೀಸಲು ಕ್ಷೇತ್ರದಲ್ಲಿ ಬಿ.ಎಸ್.ಪಿ ಬಹಳ ಚೆನ್ನಾಗಿ ಕೆಲ್ಸ ಮಾಡಿದೆ. ಮತಗಳನ್ನು ಒಡೆದು ಗೆಲುವಿನ ಅಂತರವನ್ನು ಎರುಪೇರು ಮಾಡುವ ಸಾಮರ್ಥ್ಯ ಬಹಳ ಚೆನ್ನಾಗಿ ಗಳಿಸಿದೆ. ಒಂದು ರೀತಿಯಲ್ಲಿ ನೇರ ಹಣಾಹಣಿಯಲ್ಲಿ ಕೊನೆಯ ನಿರ್ಣಾಯಕ ಅಂಶ ಬಿ.ಎಸ್.ಪಿಯದೇ ಅಂದರೆ ತಪ್ಪಾಗಲಾರದು.

ಚಿತ್ತಾಪುರದಲ್ಲಿ ನೋಡಿ, ಕಾಂಗ್ರೆಸ್+ ಜೆಡಿಎಸ್ ಮತ ಬಿಜೆಪಿಯನ್ನು ಸೋಲಿಸುತ್ತ ಇತ್ತು. ಆದರೇ ಅತಿವಿಶ್ವಾಸದಿಂದ ಕಾಂಗ್ರೆಸ್ ಸೋಲು ಅನುಭವಿಸಿದೆ. ಕೊಳ್ಳೆಗಾಲದಲ್ಲಿ ಕಾಂಗ್ರೆಸ್ ನ ಸೋಲಿಸಿದ್ದು ಮತ್ತು ಗೆಲುವಿನ ಅಂತರ ಎರುಪೇರು ಮಾಡಿದ್ದು ಸುಭಾಷ್ ಭರಣಿ. ಆ ಮತಗಳು ಕಾಂಗ್ರೆಸಿನದ್ದೆ ಹೆಚ್ಚು.ಇನ್ನ ಗೊವಿಂದರಾಜನಗರಕ್ಕೆ ಬಂದರೆ, ಸೋಮಣ್ಣಗೆ ಅನೇಕ ವಿಷಯಗಳಲ್ಲಿ ಹೊಡೆತ ಬಿತ್ತು. ತಿರುವಳ್ಳುವವರ್ ಪ್ರತಿಮೆ, ಕನ್ನಡಿಗರನ್ನು ಜೈಲಿಗೆ ಹಾಕಿದ್ದು, ಒಕ್ಕಲಿಗರ ಓಟು ಒಟ್ಟಾಗಿ ಕೆಲಸ ಮಾಡಿದ್ದು, ಕೊನೆ ಕ್ಷಣ ತನಕ ಶಿಷ್ಯಂದಿರ ಮನ ಓಲಿಕೆ, ಒಳಗೊಳಗೆ ನಡೆದ ಪಕ್ಷದ ಮಸಲತ್ತು, ಮುಜರಾಯಿ ಇಲಾಖೆಯ ಶಾಪ, ಮುಖ್ಯವಾಗಿ ಜೆಡಿಎಸ್ ಅದರಲ್ಲೂ ಗೌಡರ ತಂತ್ರ..

ಕಾಂಗ್ರೆಸ್ ಕಥೆ

ಕಾಂಗ್ರೆಸ್ ಪ್ರತಿ ಬಾರಿ ಎಲ್ಲಾ ನಾಯಕರನ್ನು ಜೊತೆ ಮಾಡಿಕೊಂಡು ಚುನಾವಣೆ ಎದುರಿಸುತ್ತೆವೆ ಅಂತ ಹೇಳುವುದು, ಹೀನಾಯ ಸೋಲು ಅನುಭವಿಸುವುದು , ನಾವು ನೈತಿಕೆ ಹೊಣೆ ಹೋರುತ್ತೆವೆ ಅಂತ ಹೇಳುವ ಮಾತು ತುಂಬಾ ಸರ್ವಸಾಮನ್ಯ ಆಗಿದೆ. ಕಾಂಗ್ರೆಸ್ ಒಳ್ಳೆ READ MADRID ಪುಟಬಾಲ್ ತಂಡ ಇದ್ದ ಹಾಗೆ, ಅದರಲ್ಲಿ ಇರುವ ಫಟಾನುಘಟಿ ನಾಯಕರು ಬೇರೆ ಎಲ್ಲೂ ಸಿಗುವದಿಲ್ಲ, ಅವರಿಗೆ ಇರುವ ಅನುಭವ, ಶಿಷ್ಯವೃಂದದ ಅನಕೂಲದ ಲಾಭ ಪಡೆಯುವಲ್ಲಿ ಸಂಪೂರ್ಣ ವಿಫಲ ಆಗಿದ್ದಾರೆ.

ಅಪರೇಷನ್ ಕಮಲ


ಬಿಜೆಪಿಗೆ ಇದು ಮಿಶ್ರ ಫಲಿತಾಂಶ, ಅನೇಕ ಕಡೆ ಬಿಜೆಪಿ ಖ್ತಾತೆ ತೆರೆದಿದೆ, ಜನರಿಗೆ ಒಮ್ಮೆ ಇವರಿಗೂ ಕೊಟ್ಟು ನೋಡೊಣ ಅನ್ನೊ ಮನಸ್ಸು ಬಂದಿದೆ,ಅದರಲ್ಲೂ ಹಿಂದುಳಿದ ಮಿಸಲು ಕ್ಷೇತ್ರದಲ್ಲಿ ಗೆದ್ದಿರುವುದು ಸಂತೋಷದ ವಿಷಯ ಅವರಿಗೆ, ಮುಂದೆ ಇದಕ್ಕೆ ಹೆಚ್ಚು ಒತ್ತು ಕೊಟ್ಟರೆ ಕೇವಲ ಮುಂದುವರೆದ ವರ್ಗಗಳ ಪಕ್ಷ ಅನ್ನೋ ಹಣೆಪಟ್ಟಿ ಬದಲಾಯಿಸಬಹುದು.

ಹಾಗೆ ಬಿಜೆಪಿ ತನ್ನ ಆಪರ‍ೇಷನ್ ಕಮಲದ ಬಗ್ಗೆ ಮತ್ತೊಮ್ಮೆ ಗಮನ ಕೊಡಬೇಕು, ಪ್ರಭಾವಶಾಲಿ, ತನ್ನ ಕೆಲ್ಸ ಮತ್ತು ವರ್ಚಸ್ಸಿನಿಂದ ಗೆದ್ದವರನ್ನು ಕರೆ ತರಬೇಕು, ಪಕ್ಷದ ಗುರುತಿನಲ್ಲಿ ಗೆದ್ದವರನ್ನು ತಂದು ಮತ್ತೊಮ್ಮೆ ನಿಲ್ಲಿಸಿ ಸೋತಿರುವುದು ಇದು ಮೂರನೇ ಬಾರಿ, ಎಲ್ಲಾ ಕಡೆ ಲಾಭ ಆಗಿರುವುದು ಜೆಡಿಎಸಗೆ ಅಷ್ಟೆ.

THE WINNER IS ...ಇವೆಲ್ಲಾ ಗಮನಿಸಿದರೆ ಈ ಮರುಚುನಾವಣೆ ಜೆಡಿಎಸ್ ಗೆ ನಿಚ್ಚಳ ಗೆಲುವು ಅನ್ನಬಹುದು, ಯಾಕೆ ಅಂತ ಕೇಳುತ್ತಿರಾ ?

೧) ರಾಮನಗರದಲ್ಲಿ ಮತ್ತೆ ಪ್ರಾಬಲ್ಯ ಮರೆದರೂ, ಸಾಮನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೆವೆ ಅಂತ ಸಾಬೀತು ಮಾಡಿದರು.

೨) ಚೆನ್ನಪಟ್ಟಣದಲ್ಲೂ ಕೂಡ ಗೆದ್ದ್ದಿದ್ದು .

೩) ಗೋವಿಂದರಾಜನಗರದಲ್ಲಿ ಜೆಡಿಎಸ್ ಸಹಾಯದಿಂದಲೇ ಕಾಂಗ್ರೆಸ್ ಗೆದ್ದಿದೆ.

೪) ಚಿತ್ತಾಪುರದಲ್ಲಿ ಜೆಡಿಎಸ್ ಇಂದಲೇ ಕಾಂಗ್ರೆಸ್ ಸೋತಿದೆ.

೫) ಕೊಳ್ಳೆಗಾಲದಲ್ಲಿ ಸಿದ್ದು ಬಣಕ್ಕೆ ಸೋಲು

೩-೪ ನಲ್ಲಿ ಹೇಳಿದ ಹಾಗೆ ಜೆಡಿಎಸ್ ತನ್ನ ಅವಶ್ಯಕತೆ ಬಗ್ಗೆ ಕಾಂಗ್ರೆಸ್ ಬಹಳ ಚೆನ್ನಾಗಿ ಮನವರಿಕೆ ಮಾಡಿದೆ.