Sunday, May 13, 2007

ನಿರೀಕ್ಷೆ ..(ಕವಿತೆ)


ಪೀಠಿಕೆ:- ಕೆಲ ದಿನಗಳ ಹಿಂದೆ ನನ್ನ ಹಳೇ ಗೆಳೆಯರು,ನಾನು ೨೦೦೪ ಇಸವಿಯಲ್ಲಿ ಬರೆದ ಕವಿತೆವನ್ನು ಜ್ಞಾಪಿಸಿಕೊಂಡು,ಕಳುಹಿಸಿ ಕೊಡಿ ಎಂದು ಹೇಳಿದರು. ನನಗೆ ಕಿಂಚಿತ್ತೂ ಕ್ಲೂ ಇರಲಿಲ್ಲ, ಯಾವುದರ ಬಗ್ಗೆ ಹೇಳುತ್ತ ಇದ್ದಾರೆ ಅಂತ. ಕೊನೆಗೂ ಅದನ್ನು ಹುಡುಕುವ ಕೆಲಸಕ್ಕೆ ಕೈ ಹಾಕಿ, ಆ ದಿನಗಳಲ್ಲಿ ನಾನು ಕವಿತೆ ಹಾಕುತ್ತಿದ್ದ ತಾಣದಿಂದ,ಹೆಕ್ಕಿ ಇಲ್ಲಿ ಹಾಕುತ್ತ ಇರುವೆ. ಇದು ಶಬರಿಯ ಹಾಗೇ ಕಾಯುತ್ತಿರುವ ನನ್ನ ಗೆಳತಿಗೆ ....ಮರಳಿ ಬರುವೆನೆಂದು ಹೇಳಿ ಹೊದೆಯೆಲ್ಲ ನಲ್ಲ,

ಬಾರಿ ಬಾರಿ ಬೀಸಿ, ರೋಸಿ ಹೋಯಿತು ಗಾಳಿ,

ನೀನು ಇಲ್ಲ, ನಿನ್ನ ನೆರಳು ಇಲ್ಲ.


ಪ್ರತಿ ದಿನವೂ ನಿನ್ನ ನಿರೀಕ್ಷೆಯಲ್ಲಿ,

ಬಾಗಿಲಿಗೆ ಬಂದು, ಗೋಡೆಗೆ ಒರಗಿ ನಿಂತು,

ಹಾದು ಹೋಗುತ್ತಿದ್ದ ಜನಗಳ ನಡುವೆ ಹುಡುಕುತ್ತಿದ್ದೆ,

ನಿನ್ನ ಮುಖ ಎಲ್ಲಿ.


ಅತ್ತು,ಅತ್ತು ಕಣ್ಣಾಳಿಗಳು ಕೆಂಪಾಗಿ,

ಬಿರುಸಾಗಿ ಹೊಯ್ದ ಮಳೆಗಳಲ್ಲಿ, ಅಡಗಿಸಿತ್ತೆ ನಾ ಕಂಬನಿಗಳ,
ಬರಲಿಲ್ಲ ಕೊನೆಗೂ ನೀನು ಕರಗಿ.


ನಿನ್ನ ಮುಖವನ್ನು ಒಮ್ಮೆ ನೋಡಲು,

ನಿನ್ನ ಧ್ವನಿಯ ಒಮ್ಮೆ ಆಲಿಸಲು,

ಕಾದು ಕುಳಿತಿರುವೆ ನಾ,

ನೋಡುತ್ತಾ ಮುಳುಗುತ್ತಿರುವ ಹಗಲು.

Sunday, May 06, 2007

ಅದು ಹೇಗೆ ಗಾಂಚಲಿ ಆಗುತ್ತದೆ..... !!!

ರೇಖಾ ಬಗ್ಗೆ ಬರೆದು ನಾನು ಅವಳು ಕನ್ನಡದಲ್ಲಿ ಮಾತನಾಡಲಿಲ್ಲ ಅಂತ ಅದನ್ನು ಗಾಂಚಲಿ ಅಂದು ಬರೆದಿದ್ದೇನೋ ಸರಿ, ಆದರೆ ಸ್ವಲ್ಪ ಯೋಚಿಸಿದಾಗ ಕನ್ನಡ ಮುಕುಟ ಮಣಿಗಳು ಎಂದು ನಾವು ಕರೆಯುವ ಅನೇಕ ಕನ್ನಡ ಕವಿಗಳ ಮಾತುಗಳಲ್ಲಿ ೫೦% ಆಂಗ್ಲ ಇರುತ್ತಿದ್ದವು. ಅದರಲ್ಲೂ ಆ ಕವಿವೃಂದ ಬೇಟಿ ಮಾಡಿದರೆ ಅವರ ಮಾತುಗಳೆಲ್ಲಾ ಹೆಚ್ಚಾಗಿ ಆಂಗ್ಲದಲ್ಲಿ ಇದ್ದವು. ಅಷ್ಟಕ್ಕೆ ಏಕೆ, ಅವರ ಮನೆಯಲ್ಲಿ ತಮ್ಮ ಮಕ್ಕಳ ಜೊತೆ, ಇಲ್ಲ್ಲಾ ಇನ್ನೊಬ್ಬ ಕವಿಗಳ ಜೊತೆ ವ್ಯವಹರಿಸೊಕ್ಕೆ ಬರೀ ಇಂಗ್ಲೀಷ್ ಬಳಸಿದ್ದು ಸುಳ್ಳು ಅಲ್ಲ. ಹಾಗೇ ಅಂತ ಅವರಿಗೂ ಗಾಂಚಲಿ ಅಂತ ಕರೆಯಬಹುದೇ ???.

ಎಲ್.ಎಸ್.ಶೇಷಗಿರಿರಾಯರು ಇದನ್ನು ಚೆನ್ನಾಗಿ ಹೇಳಿದ್ದಾರೆ, ಅವರಿಗೆ ಹೃದಾಯಘಾತವಾದಾಗ , ಹೇಗಿದ್ದಿರಿ ಅಂದಾಗ
ಚೆನ್ನಾಗಿದ್ದೇನೆ ಅಂತ ಕನ್ನಡದಲ್ಲಿ ಅನ್ನುವ ಬದಲು ಆಂಗ್ಲದಲ್ಲಿ ಉತ್ತರಿಸಿದರು. ಇದು ಯಾಕೆ ಅಂದರೂ ಅಂತ ಅವರಿಗೂ ಗೊತ್ತಿಲ್ಲ,ಅವರ ಸುಪ್ತ ಆಂಗ್ಲಕರಣವಾಗಿರಬಹುದು. ಇದನ್ನೇ ಮುಂದುವರೆಸುತ್ತ ರೇಖ ಹೇಳಿದ್ದರಲ್ಲಿ ತಪ್ಪಿಲ್ಲ ಅಂತ ವಾದಿಸಬಹುದು. ಆದರೆ ಇದರಲ್ಲಿ ಗಮನಿಸಬೇಕಾದ ಅಂಶವಿದೆ.

೧) ಮನದಾಳವನ್ನು ಕನ್ನಡದಲ್ಲಿ ಹೇಳಲು ಆಗುವದಿಲ್ಲ ಎಂದು ನಮ್ಮ ಹಿರಿಯರು ಮತ್ತು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳು ತೋರಿಸಿಕೊಟ್ಟರೆ ಅದು ಸಮಾಜದ ಮೇಲೆ ಬಹಳ ದುಷ್ಪರೀಣಾಮ ಬೀರುತ್ತದೆ. ಅಷ್ಟು ಕನ್ನಡ ಸೇವೆ ಮಾಡಿ, ಅಷ್ಟು ತಿಳಿದುಕೊಂಡ ಜ್ಞಾನಿಗಳೇ ಇಂಗ್ಲೀಷ್ ಬಳಸಿರಬೇಕಾದರೆ ನಾವು ಮಾಡಿದರೆ ತಪ್ಪೇನು ಎಂದು ಉದಾಸೀನ ನಮ್ಮ ಸಮಾಜದಲ್ಲಿ ಮೂಡುತ್ತದೆ.

೨) ಪ್ರತಿ ಜನರಿಗೆ ತಾನು ಹೇಳುವ ವಿಚಾರ ಬೇರೆಯವರಿಗೆ ಅರ್ಥ ಆಗಬೇಕು ಎಂಬ ಚಟ ಇರುತ್ತದೆ, ಇದಕ್ಕೆ ಎನು ಬೇಕಾದರೂ ಮಾಡಬೇಕೆಂಬ ಛಲ ಮೂಡಿ, ತಾವು ಹೇಳುವ ವಿಷಯವನ್ನು ಆಂಗ್ಲದಲ್ಲಿ ಹೇಳಲು ಹೋಗುತ್ತಾರೆ. ಇದಕ್ಕೆ ನಮ್ಮ ಹಿಂದಿನ ಕವಿಗಳು ಕೊಡುವ ನೆವ ಅಂದರೆ, ಆಂಗ್ಲ ಭಾಷೆ "Langauge of Phrases", ಬಹಳ ಚೆನ್ನಾಗಿ ಹೇಳಬಹುದು, ಕನ್ನಡದಲ್ಲಿ ಅದು ಸಾಧ್ಯವಿಲ್ಲ ಎಂದು. ಅದ್ದರಿಂದ ಗಮನಿಸಿ ನೋಡಿ ಆ ಶತಮಾನದವರೂ ಇವತ್ತಿಗೂ ತಮ್ಮ ಭಾಷಣದಲ್ಲಿ ಕನ್ನಡದಲ್ಲಿ ಹೇಳಿದ್ದರೂ ಕೂಡ ಅದನ್ನೇ flowery English ನಲ್ಲಿ ಹೇಳಿ ನಾನು ಹೇಳಿದ್ದರ ಅರ್ಥ ಇದು ಎಂದು ಮನವರಿಕೆ ಮಾಡಿಕೊಡುತ್ತಾರೆ.

೩) ಇನ್ನೂ ಕೆಲವರು ತಾನು ಬುದ್ಧಿವಂತ, ಓದಿದವನು ಎಂದು ಬೇರೆಯವರಿಗೆ ತಿಳಿಯಲು ಇಂಗ್ಲೀಷ್ ಬಳಸುತ್ತಾರೆ. ಕನ್ನಡದಲ್ಲಿ ಹೇಳಿದ್ದರೆ ತನ್ನನ್ನು ಹಳ್ಳಿಗುಗ್ಗು ಎಂದು ಎಲ್ಲಿ ಅಂದು ಕೊಳ್ಳುತ್ತಾರೆ ಎಂಬ ಭಯ ಮೂಡಿ ಕಷ್ಟ ಪಟ್ಟಿ ಆದರೂ ಬಳಸುತ್ತಾರೆ. ನಮ್ಮ ದೌರ್ಭಾಗ್ಯವೆಂದರೆ ಇವರೇ ಹೆಚ್ಚು ಇರುವುದು, ಇವರಿಗೆ ಮೇಲೆ ಹೇಳಿದವರು ದಾರಿ ತಪ್ಪಿಸಿದರೆ, ಕೋತಿಗೆ ಹೆಂಡ ಕುಡಿಸಿದ ಹಾಗೆ ಆಗುತ್ತದೆ. ಇದನ್ನೇ ರೇಖಾ ಮಾಡಿದ್ದು, ಅವಳನ್ನು ಅನುಸರಿಸುವ ಯುವ ಪಡೆಗೆ ತಪ್ಪು ವಿಷಯ ರವಾನಿಸದ ಹಾಗೆ ಆಗುತ್ತದೆ.
ಅದಕ್ಕೆ ನಾನು ಅದನ್ನು ಗಾಂಚಲಿ ಅಂತ ಹೇಳಿದ್ದು,

ಕನ್ನಡವೆಂದರೆ ಕೇವಲ ಪದ್ಯ-ಗದ್ಯ ಬರೆದು ಜ್ಞಾನಪೀಠ ಪಡೆಯುವ ಭಾಷೆ ಅಲ್ಲ, ನಮ್ಮ ದೈನಿಂದಿನದ ಭಾಷೆ. ಇದರಲ್ಲಿ ಆಗದೇ ಇರುವುದು ಎನು ಇಲ್ಲಾ ಅಂತ ನಮ್ಮ ಸಮಾಜದ ಮಹನೀಯರು ತೋರಿಸಿಕೊಡಬೇಕು.

Friday, May 04, 2007

ಜಿಂಕೆ ಮರಿಗೆ ಬಲೇ ಗಾಂಚಲಿ ..
ಸರಿ ಸುಮಾರು ವರುಷಗಳ ಹಿಂದೆ ಹುಚ್ಚ ಬಂದಾಗ ಅದರಲ್ಲಿ ಮುಗ್ದ ಹೆಣ್ಣು ಮಗಳ ಪಾತ್ರ ಮಾಡಿ ಬೆಳಕಿಗೆ ಬಂದ ಹುಡುಗಿಯೇ
ರೇಖಾ ವೇದವ್ಯಾಸ. ಬರುವಾಗಲೇ ಮಾಡೆಲ್ ಎಂಬ ಹಣೆಪಟ್ಟಿಯನ್ನು ಹಂಚಿಕೊಂಡು ಬಂದ ಹುಡುಗಿ ಎಂಟ್ರಿ ಕೊಟ್ಟಿದ್ದು ಗೌರಮ್ಮ ಆಗಿ.
ಅಭಿನಯದಲ್ಲಿ ಆರಕ್ಕೆ ಎರದೆ ಇದ್ದುದರ ಪರಿಣಾಮವೇ ಮತ್ತೆ ಹೆಚ್ಚು ಅವಕಾಶಗಳು ಬರಲಿಲ್ಲ. ಆಗ ಲೋ ಬಜೆಟ್ ಚಿತ್ರಗಳನ್ನು ಮಾಡುತ್ತಿದ
ಉಷಾಕಿರಣ್ ಮೂವಿಸ್ ಚಿತ್ರ ಸಿಕ್ಕಿದ್ಧು ಇವಳ ಲಕ್ ಖುಲಾಯಿಸಿದ್ದು ನಮ್ಮ ದೌರ್ಭಾಗ್ಯವೇ ಸರಿ. ಮತ್ತೆ ಇವಳು ಕನ್ನಡಕ್ಕೆ ರೀ ಎಂಟ್ರಿ ಕೊಟ್ಟಾಗ
ಅವಳ ಜೊತೆ ಬಹುಭಾಷ ಕಲಾವಿದೆ ಎಂಬ ಕೊಬ್ಬು ಬಂತು. ಇಂದ್ರಜಿತ್ ಇವಳನ್ನು ತನ್ನ ಚಿತ್ರಗಳಲ್ಲಿ ಗ್ಲಾಮರಸ್ ಆಗಿ ತೋರಿಸಿದರು
ಇವಳು ಹೆಚ್ಚು ಪ್ರಚಾರ ಪಡೆಯಲಿಲ್ಲ. ಅಲ್ಲಿಗೆ ಅವಳ ತೆಲುಗು ಚಿತ್ರರಂಗದ ಕೆರಿಯರ್ ಕೂಡ ಮುಗಿದಿತ್ತು,ಆದರೂ ಇವರ ಕೊಬ್ಬು ಮಾತ್ರ ಇಳಿದಿರಲಿಲ್ಲ.
ಮತ್ತೆ ಇವಳಿಗೆ ಆಸರೆ ಆಗಿದ್ದು ಲೊ ಬಜೆಟ್ ನಿರ್ಮಾಪಕರು, ಕನ್ನಡದಲ್ಲಿ ಚೆಲ್ಲಾಟ ಚಿತ್ರದಲ್ಲಿ ಮತ್ತೆ ಇವಳ ಇನ್ನೋಂದು ಇನಿಂಗ್ಸ ಪ್ರಾರಂಭ ಆಯಿತು,
ಕನ್ನಡ ನಾಯಕ-ನಾಯಕಿಯರಿಗೆ ಬೇಡಿಕೆ ಇರುವ ಇಂದಿನ ದಿನಗಳಲ್ಲಿ ಇವಳಿಗೂ ಸ್ವಲ್ಪ ಅವಕಾಶ ಸಿಕ್ಕರೆ ಅವಳ ಭಾಗ್ಯವೆಂದು ತಿಳಿಯದೇ,
ಕನ್ನಡದಲ್ಲಿ ನನಗೆ ಮಾತನಾಡಲು ಆಗುವದಿಲ್ಲ,ಕಷ್ಟ. ಮನದಾಳದ ಮಾತುಗಳನ್ನು ಹೇಳಲು ಇಂಗ್ಲೀಷ್ ಬಳಸುತ್ತೇನೆ ಅಂತ ತೇಮ್ಸ್ ನೀರು ಕುಡಿದು ಬಂದ
ಹಾಗೆ ಆಡುವ ಈ ನಾರಿಮಣಿ ಕನ್ನಡ ಚಿತ್ರ ಮಾಡಲು ಮನಸ್ಸು ಮಾಡಿದ್ದು ನಮ್ಮ ಕನ್ನಡಿಗರ ಸೌಭಾಗ್ಯವೇ ಸರಿ ಅನ್ನಬೇಕು. ಇವಳು ಇತ್ತಿಚಿಗೆ
ಸಾಯಿ ಪ್ರಕಾಶ್ ಅವರ ಹುಟ್ಟಿದರೆ ... ಎಂಬ ಕರುಳಿನ ಕೈ ಹಾಕುವ ಚಿತ್ರದಲ್ಲಿ ಪಾತ್ರ ಕೊಟ್ಟರೆ, ಆ ಶೂಟಿಂಗನಲ್ಲಿ ಹಾಗೇ ಹೇಳಬೇಕೆ ??.
ಇವಳ ಇಂಗ್ಲೀಷ್ ಜ್ಞಾನ ನೋಡಿ ಆ ಪಾತ್ರ ಕೊಟ್ಟಿದ್ದು ಅಲ್ಲ, ಪಾಪ ರಾಧಿಕ ಐ.ಟಿ ಭಯಕ್ಕೆ ನಾಪತ್ತೆ ಆದ್ದುದರಿಂದ ಇವಳ ಬಗುಲಿಗೆ ಅವಕಾಶ ಬಂದಿದೆ ಅಷ್ಟೆಯಾ.
ಅಷ್ಟಕ್ಕೂ ಆವತ್ತಿನ ಶೂಟಿಂಗನಲ್ಲಿ ಎಸ್ಪಿ,ಲಕ್ಷ್ಮೀ ಇದ್ದರು, ಅವರೆಲ್ಲಾ ಬಿಸಿಲಿನಲ್ಲೂ ಕೂಡ ಕನ್ನಡ ಮಾತನಾಡಿದರೆ, ಈ ಪುಣ್ಯಾತ್ತಗಿತ್ತಿ ಬಾಯ್ ನ ಕರೆಸಿ ಕೊಡೆ ಹಿಡಿಸಿಕೊಂಡು
ಬಾಯಿಗೆ ಬಂದದ್ದು ಉಸರಿದಳು. ಮೊದಲೇ ಕಲಾವಿದರಿಗೆ ಭಾಷೆ ಇಲ್ಲಾ ಅನ್ನುವರ ಮಧ್ಯೆ ಇಂಥಾವರನ್ನು ಯಾವ ರೀತಿಯಲ್ಲಿ ಕನ್ನಡತಿ ಎನ್ನಬೇಕು ಎನ್ನುವುದು
ನಮ್ಮ ಮುಂದೆ ಇರುವ ಯಕ್ಷಪ್ರಶ್ನೆ.
ಈ ಎಮ್ಮಾ ಇಷ್ಟು ಆಂಗ್ಲ ಪ್ರೇಮ ತೋರಿಸಿದರ ಕರಾಮತ್ ನೋಡಿದರೆ ಹಾಲಿವುಡಗೆ ಸ್ಕೆಚ್ ಹಾಕಿದ ಹಾಗೆ ಅಂತ ನನಗೆ ಅನಿಸಿದ್ದು ಸರಿ ಅಂತ ಗೂಗಲ್ ದೇವತೆ
ಕೂಡ ಹೇಳಿದಳು. ಹಿಂದೆ ವ್ಯಾಲೆಂಟೆನ್ -ಡೇಗೆ ಒಂದು ಭಾರತೀಯ ಉಪಹಾರ ಕೇಂದ್ರಕ್ಕೆ ಬೇಟಿಕೊಟ್ಟಾಗ ಅಲ್ಲಿ ಅವಳು ತನ್ನ ಹಣೆಬರಹವನ್ನು ಪರೀಕ್ಷಿಸಲು ಹೋರಟಿದ್ದ್ಯು
ಸುಳ್ಳಲ್ಲ.ಅದರೆ ಅದೇನು ಹೆಗ್ಗಳಿಕೆ ಕೂಡ ಅಲ್ಲ, ಅಷ್ಟು ಮನದಾಳ ಹಂಚಿಕೊಳ್ಳಬೇಕೆಂದರೆ ಅಲ್ಲಿಗೆ ಹೋಗಲಿ, ನಮಗೆ ಒಂದು ಪೀಡೆ ತಪ್ಪುತ್ತದೆ ಅಂತ ಗಾಂಧಿನಗರದ ಜನ
ಪಿಸುಗುಟ್ಟಿದ್ಧು ರಟ್ಟಾಗಿದೆ. ಇವಳೂ ಇಲ್ಲಾ ಅಂದರೆ ಕನ್ನಡ ಮಾತನಾಡಲು ಪ್ರಯತ್ನ ಪಡುವ ಮಾನ್ಯ ಇಲ್ಲವೇ ಇವಳ ಜಾಗ ತುಂಬಲು ??

ಕೊಸರು:-ತಮಾಷೆಗಾಗಿ ಬಂದ ಜಿಂಕೆಮರಿ ತುಂಟಾಟ,ಹುಡುಗಾಟ ಮಾಡಿ ಮುಂದಿನ ಚಿತ್ರ ಪೇಚಾಟಕ್ಕೆ ರೆಡಿ ಆಗಿದ್ದಾಳೆ.