Sunday, January 14, 2007

sarojini mahishi report ಒಂದು ನೋಟ

ಕನ್ನಡಿಗರಿಗೆ ಉದ್ಯೋಗ ಕ್ಷೇತ್ರದಲ್ಲಿ ದಶಕಗಳಿಂದ ಅನ್ಯಾಯವಾಗುತ್ತಿದೆ,ಇದನ್ನು ಕಂಡು ಕಾಣದ ಹಾಗೆ ಕನ್ನಡಿಗ ಇದ್ದ.
ಕಾಲಕ್ರಮೇಣ ಕನ್ನಡಿಗರು ಸಂಘಟನೆಯಾಗಿ ಇದನ್ನು ಪ್ರಶ್ನಿಸಲು ಆರಂಭಿಸಿದರು. ಮೊದಲು ನೇರವಾಗಿ
ಅನ್ಯಾಯ ಮಾಡುತ್ತಿದ್ದ ಪರಭಾಷಿಕ ಹಿಂದಿನ ಬಾಗಿಲನ್ನು ಹಿಡಿದು ತನ್ನವರಿಗೆ ಕೆಲ್ಸ ಕೊಡಿಸುವ ಕಾರ್ಯ ಮುಂದುವರೆಸುತ್ತಲೆ ಬಂದ.
ಈಗಲೂ ಕೂಡ ಇದು ಸಾಗಿದೆ. ವಲಸೆಯು ಮುಂದುವರೆಯುತ್ತಲೆ ಇದೆ, ಇದರ ದುಷ್ಪರಿಣಾಮ ನಮ್ಮ ನೆಲದಲ್ಲಿ
ಅರ್ಹತೆ,ಓದು ಇರುವ ಕನ್ನಡಿಗ ನಿರುದ್ಯೋಗಿಯಾಗಿದ್ದಾನೆ.
೧೯೮೦ ದಶಕದಲ್ಲಿ ಗೋಕಾಕ್ ಚಳುವಳಿಯ ಯಶಸ್ಸಿನಲ್ಲಿ ಕನ್ನಡಿಗ ತನ್ನ ಉದ್ಯೋಗದ ಹಕ್ಕನ್ನು ಪಡೆಯಲು
ಹೋರಾಟ ನಡೆಸಿದ. ಅದರ ಫಲವೇ ಸರೋಜಿನಿ ಮಹಿಷಿ ವರದಿ.

* ಇದನ್ನು ಯಾರು ನೇಮಿಸಿದರು ಮತ್ತು ಇದರ ಉದ್ದೇಶಗಳೇನು ?

ಇದನ್ನು ನಮ್ಮ ಕರ್ನಾಟಕದ ಸರ್ಕಾರ ರಚಿಸಿತು. ಕನ್ನಡಿನಿಗೆ ಕರ್ನಾಟಕದಲ್ಲಿ ಉದ್ಯೋಗದಲ್ಲಿ ಸಿಂಹಪಾಲು ಮತ್ತು
ಅವನಿಗೆ ಸಿಗಬೇಕಾದ ಹಕ್ಕುಗಳ ಬಗ್ಗೆ ಈ ಸಮಿತಿ ಶಿಫಾರಸು ಮಾಡಿತು.

* ಸಮಿತಿಯಲ್ಲಿ ಯಾರಿದ್ದರು.

ಸಮಿತಿಯ ಅಧ್ಯಕ್ಷರು :- ಸರೋಜಿನಿ ಮಹಿಷಿ
ಅವರ ಜೊತೆಗೆ
* ಸಿದ್ಧಯ್ಯ ಪುರಾಣಿಕ
* ಹನುಮಾನ್
* ಸತ್ಯ
* ಪ್ರಭಾಕರ ರೆಡ್ದಿ
* ನಾರಯಣ ಕುಮಾರ್

ಇದ್ದರು.

* ಈ ಸಮಿತಿ ಎನು ಮಾಡಿತು ?

ಇದು ೩ ವರ್ಷಗಳ ಕಾಲ ಕರ್ನಾಟಕದ್ಯಾಂತ ಪ್ರವಾಸ ಮಾಡಿ ವಿವಿಧ ಉದ್ಯಮ ಕ್ಷೇತ್ರದಲ್ಲಿ
ಕನ್ನಡಿಗರ ವಿವರವನ್ನು ಪಡೆದು ಒಂದು ಶಿಫಾರಸು ಮಾಡಿ ಸರ್ಕಾರಕ್ಕೆ ಸಲ್ಲಿಸಿತು.

* ಮುಖ್ಯ ಶಿಫಾರಸ್ಸು ಎನು ?
-೧- ಅರ್ಹತೆಯುಳ್ಳ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿರುವಾಗ ಉದ್ಯೋಗಾವಕಾಶದಲ್ಲಿ ಅವರಿಗೆ ಮೊದಲ ಆಧ್ಯತೆ
ಮತ್ತು ಹೆಚ್ಚಿನ ಭಾಗ ಅವರಿಗೆ ದೊರಕಬೇಕು.

-೨- ಕೇಂದ್ರ ಸರಕಾರೀ ವಲಯದ ಉದ್ಯಮದಲ್ಲಿ ಕನ್ನಡಿಗರಿಗೆ ಸಲ್ಲತಕ್ಕ ಉದ್ಯೋಗ ಪ್ರಮಾಣ ಹೀಗೆ ಇರಬೇಕು.

॑ ಗ್ರೂಪ್ ಡಿ - ೧೦೦ %

॑ ವೇತನ ೧೨೫೦ ಇರುವ ತನಕ - ೮೦%

॑ ನೇರ ನೇಮಕಾತಿಯಲ್ಲಿ - ೬೫%

-೩- ರಾಜ್ಯ ಸರ್ಕಾರದ ಉದ್ಯಮಗಳಲ್ಲಿ ಉನ್ನತ ಮಟ್ಟದ ತಾಂತ್ರಿಕ ಅರ್ಹತೆಯುಳ್ಳವರು ದೊರಯದೆ ಇರುವಾಗ
ಅಂತ ಕೆಲ್ಸವನ್ನು ಬಿಟ್ಟು ಉಳಿದ ಎಲ್ಲಾ ಕೆಲಸಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡಬೇಕು.


-೪- ಖಾಸಗಿ ಉದ್ಯಮಗಳು ರಾಜ್ಯ ಸರಕಾರದಿಂದ ಕಡಿಮೆ ದರದಲ್ಲಿ ನೆಲ,ಜಲ, ವಿದ್ಯುತ್ ಮುಂತಾದ
ಸೌಲಭ್ಯಗಳನ್ನು ಪಡೆದಿರುವದರಿಂದ , ಅವರ ಮೇಲೆ ಒತ್ತಡ ಹಾಕಿ ಕನ್ನಡಿಗರನ್ನು ನೇಮಿಸುವಂತೆ ಕಡ್ಡಾಯ ಮಾಡಬೇಕು.

-೫- ಉದ್ಯಮಗಳಲ್ಲಿ ಟೈಪಿಸ್ಟ ಮತ್ತು ಅಪ್ರಟಿಂಸ್ ಕೆಲ್ಸಗಳನ್ನು ಸರ್ಕಾರದ ಉದ್ಯೋಗ ವಿನಿಮಯ ಕೇಂದ್ರದಿಂದ ತೆಗೆದುಕೊಳ್ಳಬೇಕು.

-೬- ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಹೆಸರು ನೋಂದಾಯಿಸುವ ಮೊದಲು ಅಭ್ಯರ್ಥಿಗಳು ೧೫ ವರುಷ ರಾಜ್ಯದಲ್ಲಿ
ವಾಸ ಮಾಡಿದ್ದಾರೆ ಎಂಬುದನ್ನು ಈ ಕೆಲ ದಾಖಲೆಗಳನ್ನು ಪರಿಶೀಲಿಸಬೇಕು.
॑॑ ಶಾಲೆಯ ಸರ್ಟಿಫೀಕೆಟ್
॑॑ ಪಡಿತರ ಚೀಟಿ
॑॑ ಮತದಾರರ ಪಟ್ಟೆ
॑॑ ಜನ್ಮದಾಖಲೆ

-೭- ೧೦೦ಕ್ಕಿಂತ ಕೆಲಸಕ್ಕೆ ಹೆಚ್ಚು ಇರುವ ಸಂಸ್ಥೆಗಳಲ್ಲಿ ರಾಜ್ಯದ ಪ್ರತಿನಿಧಿ ಇರಬೇಕೆಂದು ಆ ಉದ್ಯಮಗಳಲ್ಲಿ
ಒತ್ತಡವನ್ನು ತರಬೇಕು.

--೮- ಉದ್ಯಮಗಳಲ್ಲಿ ನೌಕರ ಮಕ್ಕಳಿಗೆ ಆದ್ಯತೆ ಕೋಡುವದನ್ನು ಮೊದಲು ನಿಲ್ಲಿಸಬೇಕು.

-೯- ಸರಕಾರದಲ್ಲಿರುವ ಪ್ರಮುಖ ಸ್ಥಾನಗಳಲ್ಲಿ ನೇಮಿಸುವಾಗ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ
ಕಳಕಳಿ ಇರುವರನ್ನು ನೇಮಿಸಬೇಕು.

--೧೦-- ಲೋಕಸೇವ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನ್ನಡ ಪತ್ರಿಕೆಯನ್ನು ಕಡ್ಡಾಯ ಮಾಡಬೇಕು.
ಕನ್ನಡ ಪತ್ರಿಕೆಯಲ್ಲಿ ಅನುತೀರ್ಣರಾದವರು ಅನರ್ಹರು ಎಂದು ನಿಯಮಗಳನ್ನು ತಿದ್ದುಪಡಿ ಮಾಡಬೇಕು.ಒಟ್ಟು ಎಷ್ಟು ಶಿಫಾರಸ್ಸು ಇದ್ದವು.??
ಒಟ್ಟು ೫೮ ಶಿಫಾರಸ್ಸು ಇದ್ದವು, ಅವುಗಳಲ್ಲಿ ೫೪ ಸರ್ಕಾರವೇ ಮಾಡಬಹುದಿತ್ತು, ಆದರೂ ನಮ್ಮ ಘನ ಸರ್ಕಾರ ಇನ್ನೂ ಮಾಡಿಲ್ಲ.

ಸರ್ಕಾರ ಬದಲಾಯಿತು ಆದರೆ ಇದನ್ನು ಅನುಷ್ಟಾನ ಮಾಡುವ ದಮ್ ಒಂದು ಸರ್ಕಾರಕ್ಕು ಬರಲಿಲ್ಲ.Wednesday, January 10, 2007

Honey Jothe Moon nodokke hoguva munna ....

ಮಧುಚಂದ್ರಕ್ಕೆ ಹೋಗುವ ಮುನ್ನ ..


ಮಧುಚಂದ್ರವು ಭೂಮಿಯಲ್ಲಿ ಬರೆದಿರುತ್ತದೆ, ಅದನ್ನು ಸ್ವರ್ಗವನ್ನು ಮಾಡುವ ಕೆಲಸ ದಂಪತಿಗಳ ಮೇಲೆ ಇರುತ್ತದೆ. ಮದುವೆಯು ಜೀವನದಲ್ಲಿ ಎಷ್ಟು ಮಹತ್ವವನ್ನು ಪಡೆದಿರುತ್ತದೋ
ಹಾಗೇಯೆ ಮಧುಚಂದ್ರವು ಕೂಡ. ಮಧುಚಂದ್ರಕ್ಕೆ ಎಲ್ಲಿ ಹೋಗುವುದು ಎಂದು ನಾನು ಅನೇಕ ಬಾರಿ ಯೋಚಿಸಿ,ತಲೆಕೆಡಿಸಿಕೊಂಡು ಇದ್ದಾಗ ಮದುವೆಯ ತಾರೀಖು ದಿನೇದಿನ ಹತ್ತಿರ
ಬರುತ್ತಿತ್ತು.
ಮನಸ್ಸಲ್ಲಿ ಕಾಡುತ್ತಿದ್ದ ಒಂದೇ ಪ್ರಶ್ನೆ ಮಧುಚಂದ್ರಕ್ಕೆ ಹೇಗೆ ಸ್ಥಳವನ್ನು ಆರಿಸಬೇಕು??

* ಮೊದಲು ಹುಡುಗ-ಹುಡುಗಿ ತಮ್ಮ ಅಭಿರುಚಿಯ ಸ್ಥಳಗಳನ್ನು ಪಟ್ಟಿ ಮಾಡಿಕೊಳ್ಳಬೇಕು ಕೆಲವರಿಗೆ ಸಮುದ್ರದ ಬೀಚ್ ಇಷ್ತವಾದರೆ , ಕೆಲವರಿಗೆ ಚಳಿ ಇರುವ
ಪ್ರದೇಶ ಇಷ್ಟ. ಅನೇಕ ಕಾರಣಗಳಿಂದ ಎತ್ತರದ ಪ್ರದೇಶವನ್ನು ಸಾಮನ್ಯವಾಗಿ ಜನರು ಆಯ್ಕೆ ಮಾಡತ್ತ್ತಾರೆ.

ಇಬ್ಬರಿಗೂ ಒಂದು ಸ್ಥಳವನು ಆರಿಸಲು ಆಗಲಿಲ್ಲವಾದರೆ , ಎರಡು ಪ್ರದೇಶಗಳು ಇರುವ ಹಾಗೆ ಪ್ರವಾಸವನ್ನು ಸರಿಹೊಂದಿಸಿಕೊಳ್ಳಬೇಕು.

* ಸಾಮನ್ಯವಾಗಿ ಪ್ರತಿ ಸ್ಥಳಗಳಿಗೂ ಅದಕ್ಕೆ ಅನುಗುಣವಾದ ಒಂದು ಸೀಜನ್ ಇರುತ್ತದೆ, ಅದನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳವನ್ನು
ಆಯ್ಕ್ಲೆ ಮಾಡಿಕೊಳ್ಳುವುದು ಸೂಕ್ತ.

* ಮಧುಚಂದ್ರಕ್ಕೆ ಎಷ್ಟು ದಿನ ನಿಗದಿ ಆಗಿದೆ ಎನ್ನುವುದು ಮುಖ್ಯ, ದಿನಗಳು ಕಮ್ಮಿ ಇದ್ದರೆ ಹತ್ತಿರದ ಪ್ರದೇಶಕ್ಕೆ ಹೋಗುವುದು ಒಳಿತು. ಇಲ್ಲವಾದಲ್ಲಿ
ಹೆಚ್ಚು ಸಮಯ ಪ್ರಯಾಣದಲ್ಲಿ ಹೋಗುತ್ತದೆ.

* ೧ ವಾರ ಉತ್ತದ ಬೆಟ್, ಒಂದು ವಾರದಲ್ಲಿ ಹೆಚ್ಚೆಂದರೆ ೩ ಸ್ಥಳಗಳು ಮಾತ್ರ ಇರಬೇಕು.
ಇಲ್ಲವಾದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುವುದೇ ದೊಡ್ಡ ಸಮಸ್ಯೆಯಾಗುತ್ತದೆ ಮತ್ತು ಸುಸ್ಥು ಆಗುತ್ತದೆ.

* ನೆನಪಲ್ಲಿ ಇಡಬೇಕಾದ ಅಂಶವೆಂದರೆ ಮಧುಚಂದ್ರ ಸ್ಥಳ ವೀಕ್ಷಣೆಯ ಪ್ರವಾಸವಲ್ಲ. ಹೆಚ್ಚು ಸಮಯವನ್ನು ಶಾಂತಿ ಮತ್ತು ರೊಮ್ಯಂಟಿಕ್ ಪ್ರದೇಶಗಳಲ್ಲಿ
ಕಳೆದರೆ ಸೂಕ್ತ.

* ವಿದೇಶಕ್ಕೆ ಹೋಗುವದಾದರೆ ವೀಸಾ ಮತ್ತು ecnr ಮಾಡಿಸಿಕೊಳ್ಳಿ, ಕೆಲವು ದೇಶಗಳಲ್ಲಿ VISA ON ARRIVAL ಕೋಡುತ್ತಾರೆ, ಅಂತಹ ದೇಶಗಳಲ್ಲಿ
ENNR ಇರಬೇಕು. ಹಿಂದೆ passport ಕೊಡುವಾಗ ಒಂದು ತರಲೆ ಕೆಲಸ ಮಾಡಿದ್ದರು ಅದೇ ಇದು. ಇದನ್ನು ತೆಗೆಸಲು ಒಂದು ದಿನವನ್ನು ವ್ಯಯ ಮಾಡಬೇಕು.
ಬೆಳಿಗ್ಗೆ ಕೊಟ್ಟರೆ ಸಾಯಂಕಾಲ ಆಗುವ ಕೆಲಸ , ಇದಕ್ಕೆ DEGREE MARKS card ಇದ್ದರೆ ಸಾಕು. ಇದಕ್ಕೆ ತಗಲುವ ವೆಚ್ಚ ರೂ ೩೦೦/- .
ಹೊಸದಾಗಿ ರಹದಾರಿ ಪತ್ರವನ್ನು ಪಡೆದವರು ಇದನ್ನು ಮಾಡಿಸುವ ಆಗತ್ಯವಿಲ್ಲ.

* ಹೋಗುವ ಪ್ರದೇಶಕ್ಕೆ ತಕ್ಕ ಹಾಗೆ ಬಟ್ಟೆ ಬರೆಗಳನ್ನು ಜೋಡಿಸಿಕೊಳ್ಳಿ, ಉದಾ:- ಬೀಚ್ ಅಥಾವ ಬಿಸಿಲು ಇರುವ ಸ್ಥಳಗಳಲ್ಲಿ ಬೇಟಿ ಕೊಡುವದಾದರೆ
SUNGLASSES,CREAM and CAP etc ಇಟ್ಟು ಕೊಳ್ಳುವುದು ಸರಿ.
ಎನು ಬೇಕು ಬೇಡ ಎಂದು ಒಂದು checklist ಮಾಡಿಕೊಳ್ಳಿ,ಅದರ ಮೇಲೆ ನಿಮ್ಮ ಸರಂಜಾಮು ಸಿದ್ಧ ಪಡಿಸಿಕೊಳ್ಳಿ.

* ವಿದೇಶಕ್ಕೆ ಹೋಗುವವರು Med Insurance ಮಾಡಿಸಿಕೊಳ್ಳಿ, ಹಾಗೆಯೇ ಒಂದು Medical Kit ಮಾಡಿಕೊಳ್ಲಿ. ಅದರಲ್ಲಿ
ಸಾಮನ್ಯವಾಗಿ ಬರುವ ಕಾಯಿಲೆಗೆ ಮಾತ್ರೆಗಳನ್ನು ಇಟ್ಟುಕೊಳ್ಳಿ ಜೊತೆಗೆ ನೀವು ಕೆಲವು ಮಾತ್ರಗಳನ್ನು ತೆಗೆದುಕೊಳ್ಳುತಿದ್ದರೆ ಅದರ
Dr Prescription ಇಟ್ಟು ಕೊಳ್ಳಿ.
ಗಮನಿಸಿ:- ಪರಸ್ಥಳಗಳ್ಳಿ ಕಾಯಿಲೆ ತಪ್ಪಿದರೆ ಮತ್ತು ಮಾತ್ರೆಗಳಿಂದ ಗುಣವಾಗದಿದ್ದರೆ, ಅಲ್ಲಿ ವೈದ್ಯರನು ಕಾಣಿ. ಹದ್ದುಮೀರಿದರೆ
ಮನೆಗೆ ಹಿಂದಿರುಗುವು ಒಳಿತು.

* Important Phone numbers ಒಂದು ಚೀಟಿಯಲ್ಲಿ ಬರೆದಿಟ್ಟುಕೊಂಡು ಅದರ ಒಂದೊಂದು ಪ್ರತಿಗಳನ್ನು ಗಂಡ ಹೆಂಡತಿ ಬಳಿ ಇದ್ದರೆ , ತುರ್ತು ಸಮಯದಲ್ಲಿ
ಬಹಳ ಸಹಾಯ ಮಾಡುತ್ತದೆ.


* ಪ್ರಯಾಣವನ್ನು ಒಳ್ಳೆಯ Travel Agent ಮುಂಖಾತರ ಮಾಡಿ. ನೀವೆ bagpacker ಆಗಿ ಹೋಗಿ ಅಲ್ಲಿ ಹುಡುಕುತ್ತಿನಿ ಅನ್ನುವ್ದುದು ಮೂರ್ಖತನ.
ಮನೆಯಿಂದ ಹೋರಡುವದರಿಂದ ಹಿಡಿದು ವಾಪಸ್ ಬರುವ ತನಕ ಎಲ್ಲಾ ನಿರ್ಧಾರ ಆಗಿರಬೇಕು.

* Travel Iternary, ತಂಗುವ ಹೋಟೆಲ್ ಅದರ ವಿಳಾಸ ಮತ್ತು ದೂರವಾಣಿ ಸಂಖ್ಯಯನ್ನು ಮನೆಯವರಿಗೆ ಕೊಟ್ಟು ಹೋಗಿ.

* Itenary ಒಮ್ಮೆ ಅವಲೋಕನ ಮಾಡಿ, ಇದಕ್ಕೆ www.goadvisor.com" ಗೆ ಹೋಗಿ ಅದರಲ್ಲಿ ಎಲ್ಲಾ
ಸ್ಥಳಗಳ ಬಗ್ಗೆ ಮಾಹಿತಿ ಪಡೆಯಿರಿ.

* ನಿಮ್ಮ ಪ್ಲಾನ್ ಸ್ವಲ್ಪ್ ಡೈನಮಿಕ್ ಆಗಿ ಇರಲಿ, ಒಂದು ಸ್ಥಳ ಇಷ್ಟವಾದಲ್ಲಿ/ವಾಗದಿದ್ದಲ್ಲಿ ಅನುಗುಣವಾಗಿ ಬದಲಾಯಿಸಿಕೊಳ್ಳುವ ಸ್ವಾತಂತ್ರ್ಯವಿರಬೇಕು.

* ಪರದೇಶಕ್ಕೆ ಹೋಗುವವರು ಅದರಲ್ಲೂ ಸಸ್ಯಹಾರಿಗಳು ತಮ್ಮ ಜೊತೆ ತಿಂಡಿ ಮತ್ತು ready to eat, ತೆಗೆದುಕೊಂಡು ಹೋಗುವುದು ಒಳಿತು.
ಹಾಗೆಯೇ ಹೋಗುವ ಪ್ರದೇಶದಲ್ಲಿ "Indian Restaurent" ಉಂಟಾ ಅಂತ ಮೊದಲೇ ತಿಳಿದುಕೊಳ್ಲಿ.

* ನಿಮ್ಮನ್ನು ಕರೆದುಕೊಂಡು ಹೋಗುವ driver/guide ದೂರವಾಣಿ ಸಂಖ್ಯೆ ಸಿಗುವ ಹಾಗೆ ಇಟ್ಟುಕೊಳ್ಳಿ, ಸಾಮನ್ಯವಾಗಿ ಇದು ಬೇಕಾದಿತು.

* ಮಧುರ ನೆನಪುಗಳನ್ನು ಮೆಲಕು ಹಾಕಲು, ಜೊತೆಗೆ digi cam/cam corder ತೆಗೆದುಕೊಂಡು ಹೋಗುವುದು ಸರ್ವೇ ಸಾಮನ್ಯ, ಜೊತೆಗೆ
ಅದರ charger/duracell batteries ಮರೆಯದೇ ತೆಗೆದುಕೊಂಡು ಹೋಗಿ.

* ಹೋಗುವ ಮುಂಚೆ ಹಳೆಯ ಫೋಟೊ ತೆಗೆದುಬಿಡಿ, ಇಲ್ಲವಾದಲ್ಲಿ ಸರಿಯಾದ ಸಮಯಕ್ಕೆ ಕೈ ಕೋಡುತ್ತದೆ.

* ಪರದೇಶಕ್ಕೆ ಹೋಗುವವರು FOREX ಮಾಡಿಸಿಕೊಂಡು ಹೋಗಿ. $$(ಡಾಲರ್) ಅಥಾವ ಯೂರೋ ಎಲ್ಲಾ ಕಡೆ ತೆಗೆದುಕೊಳ್ಳುತ್ತಾರೆ ಅದ್ದರಿಂದ
ಅವುಗಳನ್ನು ತೆಗೆದುಕೊಂಡು ಹೋಗುವುದು ಒಳಿತು.

* Adventure ಆಟ ಆದುವಾಗ ಮತ್ತು ನೀರಿಗೆ ಇಳಿಯುವಾಗ ಸುರಕ್ಷತೆ ಮುಖ್ಯ, ಸಂಗಾತಿಯನ್ನು impress ಮಾಡುವದಕ್ಕೆ
ಹುಚ್ಚು ಸಾಹಸ ಮಾಡಬೇಡಿ.

* ಪರಸ್ಥಳಗಳಲ್ಲಿ ಸರಸ ಸಲ್ಲಾಪ ಹದ್ದು ಮೀರದಿರಲಿ, ನಿಮ್ಮ ಸರಸ ಸಲ್ಲ್ಲಾಪ ಇನ್ನೊಬ್ಬರಿಗೆ ಇರುಸು-ಮುರುಸು ಆಗದಿರಲಿ.

ಒಟ್ಟಿನಲ್ಲಿ ಮಧುಚಂದ್ರ ಒಂದು ಸುಂದರ ಅನುಭೂತಿ, ಸಂಗಾತಿಯನ್ನು ಅರಿಯಲು, ಅರಿತುಕೊಂಡು ಮುಂದೆ ನಡೆಯಲು ಒಂದು ಸುಂದರ ಕಲ್ಪನೆ.
ಅದರ ಫಲಾನುಭವ ಪಡೆಯಲಿ.