Sunday, October 12, 2008

ಹೇಳೆ ಕನ್ನಡತಿ ಯಾಕೆ ನೀ ಹಿಂಗಾಡ್ತಿ ??

ಕನ್ನಡ ಮಾತನಾಡಲು ಬರುವದಿಲ್ಲ, ಕನ್ನಡಿಗರು ನನ್ನ ಆದರ್ಶರಲ್ಲ, ನನ್ನ ಗುರಿ ಕರ್ನಾಟಕವಲ್ಲ ಆದರೂ ನಾನು "ಕನ್ನಡದ ಮಗಳು", ಕರ್ನಾಟಕದ ರಾಯಭಾರಿ.
ಕನ್ನಡಿಗರ ಮಾನ ಒಂದು ಸ್ಪರ್ಧೆಯಲ್ಲಿ ಉಳಿಸಲು ನೀವು ನನ್ನ ಕೈ ಹಿಡಿಬೇಕು, ಒಂದು sms ಗೆ ರೂ ೩ ಖರ್ಚು ಮಾಡಿ ನನ್ನ ಗೆಲ್ಲಿಸಬೇಕು ಅನ್ನೋದು
ನಮ್ಮ ಕನ್ನಡತಿಯ ಅಂಬೋಣ.

ಯಾರಪ್ಪ ಈ ಕನ್ನಡತಿ ಎಂದರೆ, ದಿ ಗ್ರೇಟ್ ರಿತೀಷಾ ಪದ್ಮನಾಭ. ಸ್ಟಾರಪ್ಲಸ್ ನಲ್ಲಿ ನಡೆಯುವ ಅಮುಲ್ ವಾಯ್ಸ್ ಆಫ್ ಇಂಡಿಯಾದಲ್ಲಿ ಕರ್ನಾಟಕವನ್ನು
ಪ್ರತಿನಿಧಿಸುತ್ತ ಇರುವ ಹುಡುಗಿ. ಇವಳ ಅರ್ಕುಟ್ ಪ್ರೊಫೈಲ್ ಇಲ್ಲಾ ಇವಳ ವಾಯ್ಸ ಆಫ್ ಇಂಡಿಯಾ ಪ್ರೊಫೈಲ್ ನೋಡಿದರೆ ನಿಮಗೆ ಬೆಚ್ಚ ಬೆರಗಾಗುತ್ತದೆ, ಈ ಹುಡುಗಿಯಲ್ಲಿ
ಕನ್ನಡದ ಬಗ್ಗೆ ಕೀಳರಿಮೆ ಇರುವುದು ಸ್ಪಷ್ತ ಆಗುತ್ತದೆ. ಇದನ್ನು ಸಮರ್ಥಿಸಿಕೊಳ್ಳುವ ಜನರಿದ್ದಾರೆ ಬಿಡಿ, ಇದು ನ್ಯಾಷನಲ್ ಕಾರ್ಯಕ್ರಮ ಅಲ್ಲವಾ, ಕನ್ನಡ ಹಾಕಿದರೆ ಓಟ್ ಕಮ್ಮಿ ಬರಬಹುದೇನೊ
ಅಂತ ಹಾಕಿಲ್ಲ. ನಾಳೆ ಹೆಚ್ಚು ಓಟ್ ಸಿಗುತ್ತದೆ ಅಂದರೆ ಇವರು ಇನ್ನೊಬ್ಬರನ್ನು ಅಮ್ಮ ಅಂತ ಕರೆಯುತ್ತಾರಾ ?..

ಜನಾ ಹೈ ಬಾಲಿವುಡ್

ಗಮನಿಸಿ ನೋಡಿ, ಈ ಕನ್ನಡಿತಿಯ ಗುರಿ ಕರ್ನಾಟಕವಲ್ಲ, ಕನ್ನಡ ಹಾಡು ಹಾಡುತ್ತೆನೆ ಎಂದು ಎಲ್ಲೂ ಹೇಳಿಲ್ಲ, ಪ್ರಚಾರ ತಂತ್ರಕ್ಕೆ ಒಂದೆರೆಡು ಕನ್ನಡ ಹಾಡು ಹಾಡಿ ಅದನ್ನು ಯೂ-ಟ್ಯೂಬ್ ಮತ್ತು ಟಿ.ವಿಯಲ್ಲಿ
ಹಾಕಿಸಿದ್ದು ಬಿಟ್ಟರೆ, ಕಾರ್ಯಕ್ರಮ ಗೆದ್ದು ಇವಳು ಹಾಡಬೇಕೆಂದು ಬಯಸುವುದು ಬಾಲಿವುಡನಲ್ಲಿ, ಹಿಂದಿ ಹಾಡು ಹಾಡುವದಕ್ಕೆ ಇನ್ನೊಂದು ಸೇರ್ಪಡೆಯಾಗಬೇಕೆಂಬುದೆ ಇವಳ ಮಹದಾಸೆ.
ಒಂದು ರೀತಿಯಲ್ಲಿ ಕನ್ನಡಿಗ ಬೆಳೆಯಬೇಕು ಎಂದರೆ ನಮ್ಮ ನೆಲದಲ್ಲಿ ಜಾಗ ಇಲ್ಲ ಅನ್ನುವ ಇರಾದೆ ಇದೆ. ನಮ್ಮ ನೆಲದಲ್ಲಿ ಒಂದು ವೃತ್ತಿಯಲ್ಲಿ ಪ್ರಾವಿಣ್ಯತೆ ಪಡೆದರೆ ಬೇರೆ ಕಡೆಯಿಂದಲೂ ಜನ ಬಂದು ಅವಕಾಶ ಕೊಡುತ್ತಾರೆ
ಅನ್ನುವ ಸತ್ಯ ಯಾವಗ ತಿಳಿಯಬೇಕು?


ಕನ್ನಡಿಗ ಎಂದು ಹೇಳಿಕೊಳ್ಳಲು ಕೀಳರಿಮೆ ಯಾಕೆ ?

ಕನ್ನಡಿಗ ನನ್ನ ಆದರ್ಶರಲ್ಲ, ನನಗೆ ಕನ್ನಡ ಮಾತನಾಡಲು ಬರುವದಿಲ್ಲ, ಅಕಸ್ಮಾತ್ ಹಾಕಿದರೆ ಎಲ್ಲಿ ತಮಿಳರ ಓಟು ಸಿಗುವದಿಲ್ಲವೋ ಇಲ್ಲ ಜನ ಬಾಯಸಡ್ ಆಗುತ್ತಾರೆ ಅನ್ನೊ ಭಯವೋ ತಿಳಿಯದು. ಒಂದು ಸ್ಪರ್ಧೆ ಗೆಲ್ಲಬೇಕು ಎಂದರೆ
ಇಷ್ಟೆಲ್ಲಾ ನಾಟಕವಾಡಬೇಕೆ ?. ಕನ್ನಡಿಗರ ಮುಂದೆ ನಾನು ವೀರ ಕನ್ನಡತಿ ಎಂದು ಪೋಸ್ ಕೊಡುವುದು, ಅದೇ ಬೇರೆ ಭಾಷಿಕರ ಮುಂದೆ ನನ್ನ ಐಡೆಂಡಿಟಿ ಹಿಂದಿ, ಇಲ್ಲ ನಿಮ್ಮವಳು ಎಂದು ತೋರಿಸುವುದು ಒಂದು ತಂತ್ರ ಆಗಿದ್ದರೆ ಕನ್ನಡಿಗರು ಇವಳಿಗೆ ಪ್ರೊತ್ಸಾಹ ಕೊಟ್ಟು ಗೆಲ್ಲಿಸಬೇಕೆ ??

ಒಗ್ಗರಣೆ

ಇವಳ ಮೈಲ್ ಸಾಲುಗಳ ಮದ್ಯ ಓದಿದರೆ

I am extremely grateful to all of you, especially Kannadigas, for showering your love and support on me, and taking me to the top 7 in Amul Star Voice of India.
ನಾನು ನಿಮಗೆ ಅಭಾರಿ, ಅದರಲ್ಲೂ ಮೂರ್ಖ ಕನ್ನಡಿಗರೂ. ನಾನು ಸುಮ್ಮನೆ ಕನ್ನಡತಿ ಅಂತ ಹೇಳಿದಕ್ಕೆ ನನಗೆ ಪ್ರೀತಿ,ಪ್ರೊತ್ಸಾಹ ಕೊಟ್ಟು ನನ್ನ ಟಾಪ್ ೭ಕ್ಕೆ ತಂದಿದ್ದೀರಾ.

[quote] From here, the competition gets even tougher. I have the responsibility of keeping the honor of my state, Karnataka, on my shoulders. Karnataka has always been one of the pioneers in the field of music all through history of this country. I therefore request all of you to continue to support me with your votes, so that we can take Karnataka to the top, and make Karnataka the “Voice of India”.[/quote]

ಆದರೆ ಇಷ್ಟೆ ಸಾಲದು, ಇದು ಇನ್ನ ಕಷ್ಟ ಆಗುತ್ತದೆ, ನೀವು ಇನ್ನಾ ಮೂರ್ಖರಾಗಬೇಕು. ನಿಮಗೆ ಗೊತ್ತಿಲ್ವಾ ಕರ್ನಾಟಕದ ಗೌರವ ನನ್ನ ಹೆಗಲ ಮೇಲೆ ಇದೆ ( : )) lol ). ಕರ್ನಾಟಕ ಯಾವಗಲೂ ಸಾಧಕರ ತವರೂರು ಅನಿಸಿದೆ, ವಿವಿಧ ಸಂಗೀತದಲ್ಲಿ ಕರ್ನಾಟಕದವ್ರು ಚರಿತ್ರೆ ಬರೆದಿದ್ದಾರೆ( ಆದರೆ ನನಗೆ ಯಾರು ಅಂತ ಗೊತ್ತಿಲ್ಲ,ಇಲ್ಲಾ ನನ್ನ ಆದರ್ಶ ಅವರಲ್ಲ ಬಿಡಿ). ನಾಳೆ ನಾನು ಬಾಲಿವುಡ್ ನಲ್ಲಿ ದುಡ್ಡು ಮಾಡಬೇಕು ಎಂದರೆ ನನಗೆ ಇವತ್ತು ನೀವು ದುಡ್ಡು ಖರ್ಚು ಮಾಡಿ sms ಕಳುಹಿಸಬೇಕು. ಆಮೇಲೆ ನೀವ್ಯಾರೋ ನಾನ್ಯಾರೊ .. ಇಂತಿ ನಿಮ್ಮ ಕನ್ನಡತಿ.