Sunday, July 19, 2009

ತಮಿಳ್ ಓಟಿಗೆ ಕನ್ನಡಿಗರ ಸ್ವಾಭಿಮಾನ ಹರಾಜು..


ಬೆಂಗಳೂರಿನ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸುಮಾರು ೩೦-೪೦ ಸ್ಥಾನಗಳಲ್ಲಿ ತಮಿಳರ ಪ್ರಾಭಲ್ಯ ಇದೆ, ಯಡಿಯೂರಪ್ಪ ಶತಾಯ-ಗತಾಯ ಅದನ್ನು ಗೆದ್ದು ಹಾಟ್ರಿಕ್ ಹಿರೋ ಆಗಲು
ಬಲಿ ಕೊಟ್ಟಿರುವುದು ಕನ್ನಡಿಗರ ಸ್ವಾಭಿಮಾನವನ್ನು ಮತ್ತು ಕನ್ನಡಿಗರ ಮಾಡಿದ ಹೋರಾಟಗಳನ್ನು.

ಮೊನ್ನೆ ಅದೇನು ಅನಿಸಿತೊ ನಮ್ಮ ಮಾನ್ಯ ಮು.ಮಗಳಿಗೆ, ಎಕಾಎಕಿ ಕರುಣಾ ನಿಧಿಯನ್ನು ಬೇಟಿ ಮಾಡಿ ಬಂದಿದ್ದಾರೆ. ಅವರು ಅಲ್ಲಿಗೆ ಹೋದಾಗ ಕರ್ನಾಟಕದ ಯಾವ ವಿಚಾರವನ್ನು ಮಾತನಾಡಿದ್ದಾರೆ ಗೊತ್ತ ??


ಈ ಸಲದ ಪ್ರಸ್ತುತ ಬಜೆಟನಲ್ಲಿ ತಮಿಳುನಾಡಿನ ೧೮೦೦ ಕೋಟಿ ಪ್ರಾಜೆಕ್ಟ್ ಹೊಗೆನೆಕಲ್ ಯೋಜನೆಗೆ ಕೇಂದ್ರ ಶ್ಯೂರಿಟಿ ನೀಡಿದೆ. ಕರ್ನಾಟಕವನ್ನು ಲೆಕ್ಕಿಸದೆ ಕೆಲಸ ನಡೆಯುತ್ತಿದೆ, ಅದನ್ನು ಪ್ರಶ್ನೆ ಮಾಡಲಿಲ್ಲ.

ಶಾಸ್ತ್ರೀಯ ಭಾಷೆ ನಮ್ಮಿಂದಲೇ ಬಂತು ಅನ್ನುವ ಹಾಗೆ ಬೀಗುವ ಬಿಜೆಪಿ, ಗಾಂಧಿ ಅನ್ನುವ ವಕೀಲ ಹಾಕಿರುವ ರಿಟ್ ವಜಾ ಮಾಡಿಸಿ, ಕನ್ನಡಕ್ಕೆ ೧೫ ಕೋಟಿ ಅನುದಾನ ಬರುವ ಬಗ್ಗೆ ಮಾತನಾಡಿದರೆ
ಅದು ಇಲ್ಲ ...

೧೮ ವರುಷಗಳಿಂದ ನೆನೆಗುದಿಗೆ ಬಿದ್ದಿದ್ದ ತಿರುವಳ್ಳುವವರ್ ಅವರ ಮೂರ್ತಿಯನ್ನು ಕರ್ನಾಟಕದಲ್ಲಿ ಉದ್ಘಾಟನೆ ಮಾಡುತ್ತೆವೆ, ನೀವು ಸರ್ವಜ್ಞನ ಪ್ರತಿಮೆಯನ್ನು ಮದ್ರಾಸಿನಲ್ಲಿ ಹಾಕಲು ಬಿಡಿ ಅಂತ ಅಂಗಲಾಚಿದ್ದಾರೆ.
ಇದರಿಂದ ತಮಿಳರ ವೋಟುಗಳನ್ನು ಗೆಲ್ಲಬಹುದು ಎಂಬುದೇ ಇವರ ದೂರಾಲೋಚನೆ.

ಕರುಣಾನಿಧಿ ಬಹಳ ಒಳ್ಳೆಯ ರಾಜಕಾರಿಣಿ, ಮಹಾನ್ ಚತುರ, ರಾಜಕೀಯದ ಗಂಧಗಾಳಿಯನ್ನು ಅರಿತಿರುವ, ತನ್ನ ಕುಟುಂಬದವರಿಗೆ ಕೇಂದ್ರ ಮಂತ್ರಿಗಳನ್ನು ಹಂಚಿದ , ಅನೇಕ ವಿಷಯಗಳನ್ನು ತಿಳಿದುಕೊಂಡಿರುವ ಪ್ರಚಂಡ. ಸುಮ್ಮನೇ ಬಿಡುತ್ತಾರೆಯೇ, ಸರಿ ಊರ ಆಚೆ ಮಾಡಿಕೊಳ್ಳಿ ಬೆಂಗಳೂರಿನಲ್ಲಿ ಮಾತ್ರ ಅಲಸೂರಿನಲ್ಲೇ ಆಗಬೇಕು ಅಂತ ಹೇಳಿದ್ದಾರೆ. ಅದನ್ನೇ ಯಶಸ್ಸು ಎಂಬತೆ ಮಾಧ್ಯವದವರ ಮ್ಜುಂದೆ ನಮ್ಮ ಮು.ಮ ಹೇಳಿಕೊಂಡಿದ್ದಾರೆ. ಇದಕ್ಕೆ ಅವರು ಕೊಡುವ ಕಾರಣ
ಕನ್ನಡಿಗರ ಮತ್ತು ತಮಿಳರ ಸಾಮರಸ್ಯವನ್ನು ಹೆಚ್ಚು ಮಾಡುವುದು ಎಂದು.

ನಮಗೆ ನೀರು ಬೇಕಾದಾಗ ನೀರು ಕೊಡದೆ, ತಮಗೆ ಸಿಕ್ಕ ಮೇಲೆ ನಮಗೆ ಶಾಸ್ಕ್ರೀಯ ಸ್ಥಾನ ಮಾನ ಕೊಡಿಸುವದಕ್ಕೆ ನಾನ ಅಡೆ-ತಡೆಗಳನ್ನು ತಂದು ಕೊನೆಗೆ ರಿಟ್ ಹಾಕಿರುವ ಆ ಜನರ ಜೊತೆ ನಾವು ಒಂದು ಮೂರ್ತಿ ಅನವರಣ ಮಾಡುವದರಿಂದ ಸಾಮರಸ್ಯ ಬರುತ್ತದೆ ಅಂದರೆ ಹೇಗೆ ಸ್ವಾಮಿ ??

ತಿರುವಳ್ಳುವವರ್ ತಮಿಳರ ಪಾಲಿಗೆ ಸಂತ ದಾರ್ಶನಿಕ ಕವಿ, ಹಾಗೆಂತ ನಮ್ಮ ನಾಡಿನಲ್ಲಿ ಅವರ ಪ್ರತಿಮೆ ಬೇಕಾಗಿರಲಿಲ್ಲ. ಆದರೆ ಹಿಂದೆ ಅವರದೇ ಕಾರುಬಾರು ಇದ್ದ ಮಹಾನಗರ ಪಾಲಿಕೆಯಲ್ಲಿ
ಎಲ್ಲ ಅಧಿನಿಯಮಗಳನ್ನು ಗಾಳಿಗೆ ತೂರಿ, ರಾತ್ರೊರಾತ್ರಿ ಅನವರಣ ಮಾಡಲು ಹೊರಟಿದ್ದರು. ರಣದೀರ ಪಡೆ ಮತ್ತು ಪ್ರಮೀಳಾ ನೇಸರ್ಗಿ ಅವರ ಕಾನೂನು ಹೋರಾಟದಿಂದ ಅದಕ್ಕೆ ತಡೆಯಾಜ್ಞೆ ಬಂತು.ಇದು ನಡೆದಿದ್ದು ೧೭ ವರುಷಗಳ ಹಿಂದೆ, ಅಂದಿನ ಮೊಯಲಿ ಸರಕಾರವಿದ್ದಾಗ. ತದನಂತರ ಅದನ್ನು ಶತಾಯಗತಾಯ ಮಾಡಿಯೇ ತೀರಬೇಕೆಂಬ ಕೆಲಸದಲ್ಲಿ ನಾನ ರೀತಿ ತಂತ್ರಗಾರಿಕೆ ಮಾಡಿದ್ದಾರೆ ಈ ತಮಿಳು ಜನ.
ರಾಜಕುಮಾರ್ ಅಪಹರಣ ಸಮಯದಲ್ಲೂ ಕೂಡ ಈ ಬೇಡಿಕೆಯನ್ನು ವೀರಪ್ಪನ್ ಅನ್ನುವ ದಂತಚೋರನ ಕೈನಲ್ಲಿ ಮುಂದಿಟ್ಟು ತಮ್ಮ ಬೇಳೆ ಕಾಳು ಬೇಯಿಸಲು ನೋಡಿದರು. ಆದರೆ ಅದು ಸಾಧ್ಯವಾಗಲಿಲ್ಲ.
ನಂತರ ನಮ್ಮ ಬುದ್ದೀಜೀವಿಗಳ ಬಾಯಲ್ಲಿ ಇದು ಆಗಬೇಕು, ಇದು ಸಾಮರಸ್ಯ ಆಗುತ್ತದೆ ಎಂದು ಹಿಂಬಾಗಿಲಿನಿಂದ ತಂದರು.ಆದರೆ ಕನ್ನಡ ಸಂಘಟನೆಗಳ ಒಗಟ್ಟಿನ ಫಲ ಅದನ್ನು ನಡೆಸಲಾಗಲಿಲ್ಲ.

ಮಧ್ಯೆ ಸರ್ವಜ್ಞನ ಪ್ರತಿಮೆ ಚನ್ನೈಯಲ್ಲಿ ಮಾಡೊಣ,ಇಲ್ಲಿ ತಿರುವಳ್ಳುವವರ್ ಪ್ರತಿಮೆ ಮಾಡೋಣ ಅನ್ನೊ ಸಂಧಾನ ಆಯಿತು, ಆದ್ರೆ ಅದಕ್ಕೆ ಚನ್ನೈಯಲ್ಲಿ ನಿರ್ಧಿಷ್ಟವಾದ ಜಾಗ ಸಿಕ್ಕಿರಲಿಲ್ಲ. ಈಗ ತರಾತುರಿಯಲ್ಲಿ
ಅಯ್ಯವರಮ್ ನಲ್ಲಿ ಕರ್ನಾಟಕ ಸರ್ಕಾರ ಪ್ರತಿಮೆಯನ್ನು ಅನುಷ್ಥಾನ ಮಾಡಲು ಹೋಗಿದೆ. ನಿಜಕ್ಕು ಇದಕ್ಕೆ ನಮ್ಮ ಸರ್ಕಾರಕ್ಕೆ ಅಭಿನಂದನೆ ಮಾಡಬೇಕು ಯಾಕೆ ಅಂದರೆ ಊರಾಚೆ ಯಾರು ಇಲ್ಲದ ಸ್ಥಳದಲ್ಲಿ ಎಲ್ಲಾ ಕನ್ನಡಿಗರನ್ನು ಕತ್ತಲೆಯಲ್ಲಿ ಇಟ್ಟು ಮಾಡಲು ಹೋಗುತ್ತ ಇರುವುದು ಮೆಚ್ಚಬೇಕಾದ ಅಂಶವೇ ಸರಿ.
ಅಯ್ಯವರಮ್ ಎಲ್ಲಿ ಬರುತ್ತದೆ ಅಂದರೆ ಮದ್ರಾಸಿನ ಊರಾಚೆ, ಬೆಂಗಳೂರಿನ ಭಾಷೆಯಲ್ಲಿ ಹೇಳಬೇಕು ಎಂದರೆ ಸರ್ಜಾಪುರದ ಹತ್ತಿರ ಅನ್ನಬಹುದು. ಅಲ್ಲಿ ಇರುವುದು ಪೆರೆಂಬೂರು ಲೊಕೊ ವರ್ಕ್ಸ ಮತ್ತು ಅವರ ಕ್ವಾಟರ್ಸ. ಅಲ್ಲಿ ಒಂದು ಪಾರ್ಕ ಇದೆ, ಅದನ್ನು LIC ಉಸ್ತುವಾರಿ ನೋಡಿಕೊಳ್ಳುತ್ತಿದೆ. ಆ ಪಾರ್ಕಿನ ಆಚೆ ಒಂದು ತ್ರಿಕೋನದ ಜಾಗದಲ್ಲಿ ನಮ್ಮ ಸರ್ವಜ್ಞ ಮೂರ್ತಿ ಇಡಲು ನಮ್ಮ ರಾಜ್ಯ ಸರಕಾರ ಚಿಂತನೆ ಮಾಡಿದೆ.
ಇಲ್ಲಿ ತಿರುವಳ್ಳುವವರ್ ಪ್ರತಿಮೆ ನೋಡಿಕೊಳ್ಳಲು bbmp ಇದೆ, ಅದನ್ನು ಕಾಯಲು ೧೦೦ ಜನ ಪೋಲಿಸ್ ಇದ್ದಾರೆ, ಆದರೆ ಅಲ್ಲಿ ನಮ್ಮ ಸರ್ವಜ್ಞ ಅನಾಥ.
ಈ ರೀತಿಯ ಅವಸರದ ವ್ಯವಹಾರ ಮಾಡಿಕೊಂಡು ಬಂದಿದೆ ನಮ್ಮ ಸರಕಾರ.

ಪ್ರತಿಮೆ ಬೇಕಾಗಿದ್ದಿದ್ದು ಅವರಿಗೆ, ನಾವು ನಮ್ಮ ಶರತ್ತು ಇಟ್ಟು ಅದನ್ನು ಈಡೇರಿಸುವರೆಗೆ ಮಾಡುವದಿಲ್ಲ ಅಂತ ಪಟ್ಟು ಹಿಡಿದಿದ್ದರೆ ಆಗುತ್ತಿತ್ತು, ಆದರೆ ತಮಿಳ್ ಓಟಿನ ಮುಂದೆ ಕನ್ನಡಿಗರನ್ನು ಕೇವಲ ಮಾಡಿದ್ದಾರೆ

ಈ ನಿಟ್ಟಿನಲ್ಲಿ ಸರಕಾರ ಮಾಡಬೇಕಗಿರುವನ್ನು ನಮ್ಮ ಕನ್ನಡ ಸಂಘಟನೆಗಳ ಒಕ್ಕೂಟ ಕರವೇ ಮಾಡಿದೆ. ಅದು ಇಟ್ಟಿರುವ ಷರತ್ತುಗಳು ತುಂಬಾ ಅರ್ಥಪೂರ್ಣ ಆಗಿದೆ.

೧) ಕನ್ನಡ ಶಾಸ್ತ್ರೀಯ ಭಾಷೆಯ ಬಗ್ಗೆ ರಿಟ್ ತೆಗೆಯಬೇಕು.
೨) ಹೊಗೆನೆಕಲ್ ಜಂಟಿ ಅಧ್ಯಯನ ಸರ್ವೆ ಮಾಡಿದ ನಂತರವೇ ಕಾಮಗಾರಿಕೆ ಮಾಡಬೇಕು.
೩) ಸರ್ವಜ್ಞ ಮೂರ್ತಿಗೆ ಮೌಂಟ್ ರೋಡ್ ಇಲ್ಲ ಸುತ್ತ ಮುತ್ತ ಜಾಗದಲ್ಲಿ ಸ್ಥಳ ಕೋಡಬೇಕು.


ಇಲ್ಲಾ ಇದು ಎನು ಬೇಡ ಅಂದರೆ ಗೌರವ ಆದರಗಳಿಂದ ತಿರುವಳ್ಳುವವರ್ ಮೂರ್ತಿಯನ್ನು ವಾಪಿಸ್ ಕಳಿಸೋಣ, ಅಲ್ಲಿನ ಕನ್ನಡ ಸಂಘದಲ್ಲಿ ಅದನ್ನು ಅನವರಣ ಮಾಡೊಣ, ಹಾಗೆ
ಸರ್ವಜ್ಞ ಮೂರ್ತಿಯನ್ನು ಅಲಸೂರಿನಲ್ಲಿ ಪ್ರತಾಪಿಸೋಣ. ತಮಿಳು ಸಂಘ ನಮ್ಮ ಸರ್ವಜ್ಞ ಮೂರ್ತಿಯನ್ನು ಕೂರಿಸದರೇನೆ ನಿಜವಾದ ಸಾಮರಸ್ಯ ಅಲ್ಲವೇ ?