Thursday, April 27, 2006

ಬಿಸಿ-ಬಿಸಿ ಬೇಳೆ ಬಾತೊ - JXTA ತಂತ್ರಜ್ಞಾನವೋ

ಎನ್ರೀ, ಗೊಕುಲಾಷ್ಟಮಿಗೂ ಮತ್ತು ಇಮಾಮ್ ಸಾಬಿಗು ಎತ್ತಣದ ಸಂಬಂಧದ ಹಾಗೆ ಇದೆ ನಿಮ್ಮ ಬ್ಲಾಗ್ ಎಂದು ಮೂಗು ಮುರಿಯಬಹುದು. ನಾನು ಮೊದಲು ಹಾಗೆ ಅಂದು ಕೊಂಡೆ ಸ್ವಾಮಿ.

JXTA Java SE 2.3.7 release ಅನ್ನು "ಬಿಸಿಬೇಳೆ ಬಾತ್" ಎಂಬ ನಾಮದಲ್ಲಿ ಕರೆಯುತ್ತಾರೆ,ನಮ್ಮ ಬಾಳೆ ಎಲೆಯಲ್ಲಿ ಇರುವ ತಿಂಡಿ, ಯಾವಾಗ ಸಿಮೋಲ್ಲಂಘನ ಮಾಡಿತು ??.

ಇದು ಬಿಸಿಯಾದ ತಂತ್ರಜ್ಞಾನವಾದ್ದರಿಂದ ಇದಕ್ಕೆ ಬಿಸಿಬೇಳೆಬಾತ್ ಎಂದು ನಾಮಕರಣ ಮಾಡಿರಬಹುದು, ಇಲ್ಲಾ ಇದರ ರುಚಿಗೆ ಮಾರು ಹೋಗಿರುವ ನನ್ನಂತ ಅಭಿಮಾನಿ ಇದಕ್ಕೆ ಹೆಸರು ಸೂಚಿಸರಬಹುದು.

ಮುಂದೆ ಯಾವುದರ ಕೆಲ್ಸ ಮಾಡುತ್ತ ಇದ್ದೀಯಾ ಅಂತ ನಮ್ಮವರು ಕೇಳಿದರೆ "ಬಿಸಿಬೇಳೆ ಬಾತ್" ಅಂತ ಉತ್ತರ ಸಿಕ್ಕುತ್ತದೆ, ನಮ್ಮ ಹಿರಿಯರು ಸಾಫ್ಟವೇರ್‍ನಿಂದ ಯಾವಗ ಬಾಣಸಿಗನಾದ ಎಂಬ ಪ್ರಶ್ನೆಗೆ ಬಂದರೆ ಎನು ಮಾಡುವುದು ಎಂಬುದರ ಬಗ್ಗೆ ಹೆಸರು ಇಟ್ಟವರು ಯೋಚಿಸಿಲ್ಲ !!

buzyಯಾಗಿ ಇರುವ ನಿಮ್ಮ ಸಮಯದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ಬಿಸಿ-ಬಿಸಿಯಾಗು ಬೇಳೆ ಬಾತ್ ತಿಂದು ಬನ್ನಿ, ಹೇಗೆ ಮಾಡುವುದು ಅಂತ ನಿಮ್ಮ ಪ್ರಶ್ನೆಯಾದರೆ, ಇಗೋ ಇಲ್ಲಿದೆ ಲಿಂಕ್.

1 comment:

vani said...

bisi bele bath chennagithu..