Wednesday, April 26, 2006

ಹೋರಾಟವೇ ಹೀಗೆ .....


ಕನ್ನಡಕ್ಕೆ ಹೋರಾಡಿದ ಅನೇಕ ಮಹನೀಯರು ನಮ್ಮ ಮುಂದೆ ಹಾಸು ಹೊಗಿದ್ದಾರೆ, ಆದರೆ ನಮ್ಮ ಕಣ್ಣಿಗೆ ಬೀಳುವುದುಕೇವಲ ಒಂದೆರೆಡು ನವೆಂಬರ್ ನಾಯಕರು ಆಷ್ಟೆ. ಆದರೆ ತೆರೆ-ಮರೆಯಲ್ಲಿ ಹೋರಾಟದಲ್ಲಿ ಪಾಲ್ಗೊಂಡು ಸೆರವಾಸ ಅನುಭವಿಸಿ,ಚಿತ್ರ-ವಿಚಿತ್ರ ಹಿಂಸೆಗಳನ್ನು ಅನುಭವಿಸಿ ಇವತ್ತಿಗೂ ಮತ್ತೆ ಹೋರಾಟಕ್ಕೆ ಅಣಿ ಆಗುವ ಹೋರಾಟಗಾರರಿಂದ ಇಂದು ಕನ್ನಡ ಉಳಿದಿದೆ. ನಮಗೆ ನಮ್ಮ ಕನ್ನಡ ಹೋರಾಟಗಳ ಬಗ್ಗೆ ಅರಿವಿಲ್ಲ, ಎಲ್ಲಾ ಕನ್ನಡ ಹೋರಾಟಗಾರರನ್ನು ನೋಡುವ ರೀತಿ ಇನ್ನು ಬದಲಾಗಿಲ್ಲ, ಇನ್ನು ನಮ್ಮ ಜನರ ದೃಷ್ಟಿಯಲ್ಲಿ ರೌಡಿಗಳು, ಗೂಂಡಾಗಳು ಅನ್ನುವ ಛಾಪು ನಿಂತಿದೆ.

ಇದಕ್ಕೆ ನಾನು ಹೊರತಲ್ಲ ಬಿಡಿ. ಇಲ್ಲಿಯವರೆಗೂ ಕನ್ನಡಿಗರು ಪಟ್ಟ ಕಷ್ಟ, ಇಟ್ಟ ಹೆಜ್ಜೆಯ ಅರಿವಿಲ್ಲದೆ ನಾವು ಒಂದು ತೀರ್ಮಾನಕ್ಕೆ ಬಂದಿರುತ್ತೆವೆ. ಯಾವುದೊ ದೇಶದ ಚರಿತ್ರೆಯನ್ನು ಕಲಿಸುವ ಈ ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯ್ಸದ ಹೊರಾಟ-ಏಕೀಕರಣದ ಬಗ್ಗೆ ಚಕಾರ ಎತ್ತದಿರುವುದು ದುಃಖದ ಸಂಗತಿ. ಈ ವಿಷಯಗಳು ನಮಗೆ ತಿಳಿಯದೆ ನಮಗೆ ಹೋರಾಟದ ಬಗ್ಗೆ ಅರಿವು ಮೂಡುವದಿಲ್ಲ, ಹೋರಾಟಗಾರರ ಬಗ್ಗೆ ಗೌರವ ಬರುವದಿಲ್ಲ. ಹಿಂದೆ ಹೋರಾಡಿದ ಮಾ.ರಾಮಮುರ್ತಿ ಇತರರ ಕುಟುಂಬಗಳು ಇಂದಿಗೂ ಕಷ್ಟದಲ್ಲಿ ಇವೆ. ಮನೆಯಲ್ಲಿ ಮರ್ಯಾದೆ ಇರದೆ ಇವರು ಪಡುವ ಪಾಡು ನಿಜಕ್ಕೂ ಶೋಚನೀಯ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷ ‍ ಅಗುವುದು ಇಂದು ಕನ್ನಡಕ್ಕೆ ಕೈ ಎತ್ತು ನಿನ್ನ ಕೈಗೆ ಕೊಳ ಬೀಳುವುದುಅನ್ನುವ ಸ್ಥಿತಿಗೆ ಬಂದಿದೆ. ಹೀಗೆ ಸಾಲು ಸಾಲು ತೊಂದರೆ ಅನುಭವಿಸುವ ದಿನದ ಕೊನೆಗೆ ನನಗೆ ಎನು ಸಿಕ್ಕಿತು ಅಂತ ಅವಲೋಕನ ಮಾಡಿಕೊಂಡರೆ ಕಾಣುವುದು ಸುಳ್ಳು ಮುಕದ್ದಮೆ,ಜೈಲುವಾಸ ಅಷ್ತ್ಟೆನನ್ನ ಅನುಭವದಲ್ಲಿ ಕಂಡ ಹೋರಾಟಗಾರ ಬವಣೆ ಬಗ್ಗೆ ಬರೆದಿರುವ ಕವನವಿದು.




ಹೋರಾಟವೇ ಹೀಗೆ ...
ಬದುಕಿನ ಕತ್ತಲೆ ಓಡಿಸಿ,
ನ್ಯಾಯದ ಜ್ಯೋತಿಯ ಬೆಳಗಿಸಿ,
ಅನುಭವಿಸುವರು ಸೆರೆವಾಸ.
ಇವರ ಮನೆಯಲ್ಲಿ ಹೆಂಡತಿ ಮಕ್ಕಳಿಗೆ ಉಪವಾಸ೧


ಹೋರಾಟವೇ ಹೀಗೆ ...
ಮನೆ ಮಕ್ಕಳನ್ನು ಮರೆತು,
ದುಃಖ ದುಮ್ಮಾನದಲ್ಲಿ ಬೆರೆತು,
ತುಳಿಯುವರು ಕಲ್ಲುಮುಳ್ಳಿನ ಹಾದಿ.
ಎಲ್ಲಾ ಹೋರಾಟಗಳಿಗೂ ತ್ಯಾಗವೇ ಬುನಾದಿ೨

ಹೋರಾಟವೇ ಹೀಗೆ ...
ತಣ್ಣನೆ ಕೋಣೆಯಲ್ಲಿ ಕುಳಿತು,
ಬುದ್ಧಿಜೀವಿಗಳು ಆಡುವರು ಮಾತು,
ತೋಡಿ ಚುಚ್ಚು ಮಾತಿನ ಗುಂಡಿ,
ತಪ್ಪಿಸುವರು ಹೋರಾಟದ ಬಂಡಿ೩

ಹೋರಾಟವೇ ಹೀಗೆ ...
ಲಾಠಿ ಎಟುಗಳ ಲೆಕ್ಕಿಸದೆ,
ಹರಿಯುವ ನೆತ್ತರಿಗೆ ದೃತಿಗೆಡದೆ,
ಯಾರೊದೊ ಹಿತಕ್ಕೆ ಸವಿಸುತ್ತ ಬಾಳು,
ಅನುಭವಿಸುವರು ದಿನವೂ ಗೋಳು ೪

ಹೋರಾಟವೇ ಹೀಗೆ ...
ಇವರ ನೋವ ಕೇಳುವರಿಲ್ಲ,
ಇವರ ಬೆವರಾ ಒರೆಸುವರಿಲ್ಲ,
ಆದರೂ ಕಟ್ಟುವರು ಕನಸಿನ ಅರಮನೆ,
ಇವರ ನೊವುಗಳಿಗೆ ಇಲ್ಲಾ ಕೊನೆ೫

3 comments:

Anveshi said...

ಪವ್ವಿ ಅವರೆ,
ಕನ್ನಡಕ್ಕಾಗಿ ಕೈಯೆತ್ತಿದರೆ ಯಾವುದೇ ಕಷ್ಟವಿಲ್ಲದೆಯೇ ಕೈಕೋಳ ತೊಡಿಸಿಕೊಂಡು ಜೈಲಿನಲ್ಲಿ ಸುಖವಾಗಿರಬಹುದು ಅಲ್ಲವೆ?
ಆದರೆ ಈ ನವೆಂಬರ್ ನಾಯಕರು ಮಾತ್ರ ಯಾವುದೇ ಕಾರಣವಿಲ್ಲದೆ ಕನ್ನಡಕ್ಕಾಗಿ "ಓರಾಟ" ಮಾಡುತ್ತಲೇ ಇರುತ್ತಾರೆ. ಅಲ್ವಾ?

Sarathy said...

ನಿಮ್ಮಂಥ ಕನ್ನಡ 'ಒರಟು'ಗಾರರನ್ನು ನನ್ನ ಆಂಗ್ಲಾಂದೋಲನಕ್ಕೆ ಸೇರಿಸಿಕೊಳ್ಳಬಯಸುತ್ತೇನೆ. ತಪ್ಪದೆ ನೀವು ಆಂದೋಲನದ ನೇತೃತ್ವ ವಹಿಸಿ ಕನ್ನಡಕ್ಕೆ ಚುಂಬನದ ಬೀಳ್ಕೊಡುಗೆ ನೀಡಬೇಕೆಂದು 'ಶರ'ವಹಿಸಿ ಕೇಳಿಕೊಳ್ಳುತ್ತೇನೆ.

ಪವ್ವಿ said...

ಕನ್ನಡಕ್ಕೆ ಕೊಡುವ ಬೀಳ್ಕೊದುಗೆಯ ಚುಂಬನ ನನ್ನ ಪಾಲಿನ ಮೃತ್ಯು-ಚುಂಬನ. ;)