Thursday, December 29, 2016

ಭಾಯಿಯೋ ಬೆಹನೋ ..

ಸ್ವಾತಂತ್ರ  ಪೂರ್ವದ ಸಮಯ ,  ಎಲ್ಲ ಕಡೆ ಇದ್ದ ಹಾಗೆ ಬೆಂಗಳೂರಿನಲ್ಲೂ ಹೋರಾಟದ ಕಾವು ತೀವ್ರವಾಗಿತ್ತು ,  ಕಾದಿ  ಧಾರಣೆ  , ವಿದೇಶಿ ವಸ್ತುಗಳ ಬಹಿಷ್ಕಾರ , ಸ್ವಾವಲಂಬನೆ ಇವೆಲ್ಲ ಹುಡುಗರನ್ನು ಆಕರ್ಷಿಸಿತು. ಅನೇಕರು ಕಾಂಗ್ರೆಸ್ ಸೇರಿದ್ದರು.  ಇಂದಿನ ಮೆಜಸ್ಟಿಕ್ ಸುತ್ತ ಮುತ್ತ ಅನೇಕ ಸಭೆಗಳು ನಡೆಯುತ್ತಾ ಇದ್ದವು.
ಇದರಲ್ಲಿ ಹೆಚ್ಚಾಗಿ ಉತ್ತರ ಭಾರತದ ಜನರೇ ಭಾಷಣ ಮಾಡುತ್ತಾ ಇದ್ದರು,  ದೇಶಭಕ್ತಿ ಪಾಠ ದಕ್ಷಿಣದವರಿಗೆ ಹೆಚ್ಚು ಬೇಕು , ಇವರು ಸ್ವಾಬಿಮಾನವಿಲ್ಲದ ಬ್ರಿಟಿಷರ ಗುಲಾಮರು ಅನ್ನುವ ಮನಸ್ಥಿತಿ ನಮ್ಮ ಉತ್ತರ ಭಾರತದ ನಾಯಕರಲ್ಲಿ ಅದರಲ್ಲು  ನಮ್ಮ ಕಾಂಗ್ರೆಸ್ ನಾಯಕರಲ್ಲಿ ಹೆಚ್ಚಿತ್ತು.   ಅವರುಗಳ ಜೊತೆ ನಮ್ಮ ನಾಯಕರು ಮಾತನಾಡುತ್ತ ಇದ್ದರು ಅನ್ನೋದು ಬೇರೆ ಮಾತು, ಅದು ಕೊಸರಾಗಿತ್ತು.

ಅಂತಹ ದಿನಗಳಲ್ಲಿ ಒಂದು ಸಾರಿ ಲಾಲಾಲಜಪತ್ ರಾಯರು ಬೆಂಗಳೂರಿಗೆ ಬಂದು ಭಾಷಣ ಮಾಡುವುದಿತ್ತು , ಅಂದಿನ ದಿನಗಳಲ್ಲಿ ಲಾಲಾಜಿ ಹೆಸರು ಬಹಳ ಪ್ರಸಿದ್ಧಿಯಲ್ಲಿ ಇತ್ತು, ಪಂಜಾಬಿನ ಕೇಸರಿ ಎಂಬ ಬಿರುದು ಬೇರೆ ಇತ್ತು.ತುಂಬಾ ಓದಿಕೊಂಡಿದ್ದ ಆವರು ಅನೇಕ ವಿಷಯಗಳ ಬಗ್ಗೆ ಮಾತಾನಾದಬಲ್ಲರಾಗಿದ್ದರು, PNB ( ಪಂಜಾಬ್ ನ್ಯಾಷನಲ್ ಬ್ಯಾಂಕ್) ಸ್ಥಾಪಿಸುತ್ವದರಲ್ಲೂ  ಕೂಡ ಇವರ ಕೊಡುಗೆ ಇದೆ.

ಜನರಿಗೆ ಅವರ ಭಾಷಣ ಕೇಳುವ ತವಕ.  ಕಲಾಸಿಪಾಳ್ಯದ  "ರತ್ನಾವಳಿ ನಾಟಕ ಶಾಲೆ" ಇದಕ್ಕೆ  ವ್ಯವಸ್ಥಿತವಾಗಿತ್ತು.  ಆಗ ಜನರನ್ನು ಇಂದಿನ ಭಾಷಣಗಳಿಗೆ ಬಿರಿಯಾನಿ ಕೊಟ್ಟು ಕರೆ ತರುತ್ತ ಇರಲಿಲ್ಲ .  ಜನ ತಾವಾಗಿಯೇ ಸೇರಿದ್ದರು.  ಇವರಗಿಂತ ಮುಂಚೆ ಕೆಲವು ಹಿಂದಿ ನಾಯಕರು  ಜನರಿಗೆ ಅರ್ಥವಾಗದ ಹಿಂದಿಯಲ್ಲಿ ಮಾತನಾಡಿದರು, ಜನ ಕನ್ನಡ/ಇಂಗ್ಲಿಷ್ ಎಂದು ವಿನಂತಿಸಿಕೊಂಡರು, ನಾಯಕರು ಹಿಂದಿಯಲ್ಲೇ ಮುಂದುವರೆಸಿದರು. ಜನರಿಗೆ ಅರ್ಥ ಆಗದೆ ಶಾಂತಿಯಿಂದ ಲಾಲಾಜಿ ಭಾಷಣಕ್ಕೆ ಕಾದರು. ಲಾಲಾಜಿ ಬಂದು ಸಭೆಯನ್ನು ಉದ್ದೇಶಿಸಿ ಮಾತನಾಡಲು ಆರಂಬಿಸಿದರು , ಮೊದಲಿಗೆ  "ಭಾಯಿಯೋ ಬೆಹನೋ"  ಎಂದಾಗ ಅಲ್ಲಿದ್ದ ಜನ ಒಕ್ಕೊರಲಿನಿಂದ  " ದಯವಿಟ್ಟು ಇಂಗ್ಲೀಷಿನಲ್ಲಿ ಮಾತನಾಡಿ" ಎಂದು ಒತ್ತಾಯ ತಂದರು.  ಇದನ್ನು ಕೆಲ ಹುಡುಗರು ಜೋರಾಗಿಯೇ ಕೂಗಿದರು,  ಆಗ ಲಾಲಾಜಿ ಅಲ್ಲೇ ಸಭೆಯಲ್ಲಿ ಇದ್ದ  ಹಿಂದಿ ನಾಯಕರನ್ನು ನೋಡಿ ಏನು ಮಾಡಲಿ ಎಂದಾಗ ,  ಅಲ್ಲಿದ್ದವರು ಇಂಗ್ಲೀಷಿನಲ್ಲಿ ಮಾತನಾಡಿ ಎಂದು ಸೂಚಿಸಿದರು. ಜನರ ಒತ್ತಾಯಕ್ಕೆ ಸಮಯೋಚಿತವಾಗಿ ಲಾಲಾಜಿ ಇಂಗ್ಲೀಷಿನಲ್ಲಿ ಭಾಷಣ ಮಾಡಿದರು. ನೆರೆದಿದ್ದ ಜನರು ಕರಾಡತನದಲ್ಲಿ ಅದನ್ನು ಸ್ವಾಗತಿಸಿದರು.

ಸ್ವಲ್ಪ ಫಾಸ್ಟ ಫಾರ್ವಡ್ ಮಾಡೋಣ.

ನಮಗೆ ಹೆಸರಿಗೆ ಸ್ವಾತಂತ್ರ ಸಿಕ್ಕಿದೆ, ಭಾರತವಾಗಿದೆ,  ಭಾಷಣಗಳ ತಾಣ ಕಲಾಸಿಪಾಳ್ಯ ಹೋಗಿ ಬಸವನಗುಡಿ , ಪ್ಯಾಲೇಸ್ ಮೈದಾನ ಆಗಿದೆ.  ಆದರೆ ನಮ್ಮನ್ನು ಉದ್ದೇಶಿಸಿ ಇಂದೂ ಕೂಡ ರಾಷ್ಟ್ರೀಯ ನಾಯಕರು ಭಾಷಣ ಮಾಡುತ್ತಾ ಇದ್ದಾರೆ,   ಮೂರು ನಾಲ್ಕು ಪೀಳಿಗೆ ಆಗಿದ್ದರು  ಉತ್ತರ ಭಾರತದ ನಾಯಕರಲ್ಲಿ ಏನು ಬದಲಾವಣೆ ಆಗಿಲ್ಲ , ಇವರಿಗೆ ಏನು ಗೊತ್ತಿಲ್ಲ ನಾವೇ ಹೇಳಿಕೊಡಬೇಕು ಧೋರಣೆ.
ನಮಗೋ ಉತ್ತರದ ನಾಯಕರೆ  ದೇವರುಗಳು , ಆವರು ಹೇಳದೆ ಒಂದು ಹುಲ್ಲು ಅಲಗಾಡುವದಿಲ್ಲ ಅನ್ನೋ ಕೀಳರಿಮೆ ಹಾಗಿಯೇ ಕೂತಿದೆ.
ನಮ್ಮನ್ನು ಉದ್ದೇಶಿಸಿ ಈಗಲೂ ಉತ್ತರದ ನಾಯಕರು  ಮೊದಲಿಗೆ  "ಭಾಯಿಯೋ ಬೆಹನೋ"  ( @ 1:22 ) ಎಂದೆ ಸಂಭೋಧಿಸುತ್ತಾರೆ , ಆದರೆ ಹಿಂದಿ ಹೇರಿಕೆಯನ್ನು ಒಪ್ಪದ , ಕನ್ನಡ/ಇಂಗ್ಲಿಶ್ ಬೇಕು ಎನ್ನುವ ಸ್ವಾಭಿಮಾನದ   ಕನ್ನಡಿಗರು ಮಾತ್ರ ಮಿಸ್ಸಿಂಗ್ ಅಷ್ಟೇ.

ಸಿಕ್ಕರೆ ಹುಡುಕಿಕೊಡಿ.

Saturday, July 23, 2016

ಮಾಯಾಚೌಕದ ಒಂದು ಮಾಯಲೋಕ

ಸಾರ್ವಜನಿಕವಾಗಿ ಗಣಿತದ ಬಗ್ಗೆ ಎಲ್ಲರಲ್ಲೂ ಒಂದು ಭಯ ಇದೆ. ಅನೇಕರಿಗೆ ಇದು ಕಬ್ಬಿಣದ ಕಡಲೆಯೇ.
ಎಷ್ಟೋ ಜನರ ಹಣೆಬರಹವನ್ನೇ ಇದು ಬದಲಾಯಿಸಿದೆ. ಇದರಿಂದ ಅನೇಕರು ತಮ್ಮ ವಿದ್ಯಾಬ್ಯಾಸ ಮೊಟಕು ಮಾಡಿಕೊಂಡಿರುವುದು  ಅಷ್ಟೇ ನಿಜ. 
ನನಗೆ ಗೊತ್ತಿರುವ ಅನೇಕರು ಪಿಯುಸಿನಲ್ಲಿ ಆರ್ಟ್ಸ್ ತೆಗೆದುಕೊಳ್ಳಲು ಕಾರಣವೇ ಈ ವಿಲನ್ ಗಣಿತ. 10 ಸಂಕ್ಯೆ ಇರುವ ಈ ಗಣಿತ ಮಾಡುವ ಕರಾಮತ್ತುಗಳು ಒಂದೆ ಎರಡೇ. 

ಎಸ್‌ಎಸ್‌ಎಲ್‌ಸಿ ನಲ್ಲಿ ಯಾಕೆ ಇಷ್ಟು  ಜನ ಫೇಲ ಆಗುತ್ತಾರೆ ಎಂದು ಒಂದು ಯೋಚನೆ  ಮಾಡುತ್ತಾ , ಅದರಲ್ಲೂ ಸರಕಾರಿ ಶಾಲೆಯ ಮಕ್ಕಳೇ ಹೆಚ್ಚು ಫೇಲ್ ಆಗುವ ಕಾರಣ ಹುಡುಕುತ್ತಾ  ಹೋಗಿದ್ದು ಒಂದು ಸರಕಾರಿ ಶಾಲೆಗೆ , ಪ್ರತಿ ಸರಕಾರಿ ಶಾಲೆಗೆ ಅದರದೇ ಆದ ಸಮಸ್ಯೆಗಳು ಇರುತ್ತದೆ. one size fits all ಮಾದರಿ ಯಾವ ಸಮಾಧಾನವು ಇರುವಧಿಲ್ಲ,  ಸರಕಾರ ಮತ್ತು ಅನೇಕ ಸಂಘ ಸಂಸ್ಥೆಗಳ ಸಹಯೋಗದಿಂದ ಪುಸ್ತಕ, ಬಟ್ಟೆ, ಕಂಪ್ಯೂಟರ್ ಎಲ್ಲ ಬರುತ್ತದೆ. ಮುಟ್ಟಿದರೆ ಇಲ್ಲ ಬಳಸಿದರೆ ಎಲ್ಲಿ ಹಾಳಾಗಿ ಹೋಗುತ್ತದೋ ಎಂಬ ಭಯದಲ್ಲಿ ಕಾಪಾಟಿನಲ್ಲಿ ಭದ್ರವಾಗಿ ಉಳಿಯುತ್ತದೆ,  ಹೇಗೆ ಕೊಟ್ಟಿದ್ದರೋ ಹಾಗೆ ಇರಬೇಕು ಎಂಬ ಅಲಿಕಿತ ನಿಯಮದ ಪರಿಪಾಲನೆ ಆ ಶಾಲೆಯ ಮುಕ್ಯಉಪಾಧ್ಯಾಯರಿಗೆ  ಇರುವಾಗ ,  ಪ್ರತಿ ವರುಷ ಆಡಿಟ್ ನಡೆದಾಗ ಅದನ್ನು ತೋರಿಸುವ , ಹಾಳಗಿದಲ್ಲಿ 108 ಜನರಿಗೆ ಉತ್ತರ ಕೊಟ್ಟು ತಮ್ಮ ಪಗಾರದಿಂದ ಕರ್ಚನ್ನು ತುಂಬಿಸುವ  ವ್ಯವಸ್ತೆಯಿಂದ ಶಾಲೆಗಳು ಮ್ಯೂಸಿಯಂ ಆಗಿ ಕುಳಿತಿವೆ. 

ಕೊಟ್ಟವರು ಕೂಡ ಅನೇಕ ಬಾರಿ ಪಾಪ ಪ್ರಜ್ಞೆ ಇಲ್ಲ ಸಮಾಜ ಸೇವೆ ಮಾಡೂತ್ತ ಇದ್ಧೀವಿ ಅನ್ನೋ ಪ್ರಜ್ಞೆಯಲ್ಲಿ ಕೊಟ್ಟು ಕೈ ತೊಳೆದುಕೊಳ್ಳುತ್ತಾರೆ. ಇನ್ನೂ ಕೆಲವು ಬಾರಿ ನಮಗೆ ಬೇಡವ ಸರಿ ಸರಕಾರಿ ಶಾಲೆಗೆ ಕೊಡಿ ಅನ್ನೋ ಸಂಸ್ತೆಗಳು ಒಂದು ರೀತಿ ಸರಕಾರಿ ಶಾಲೆಗಳನ್ನು ಈ-ಗಾರ್ಬೆಜ್  ಬಿನ್ ಮಾಡಿಕೊಂಡಿವೆ. 

ಗಣಿತದ ವಿಷಯದಿಂದ ಶುರುವಾದ ಹುಡುಕಾಟ ವ್ಯವಸ್ಥೆಯನ್ನು ತೋರಿಸಿತು. ಹತ್ತನೇ ಮಕ್ಕಳು ಯಾಕೆ ಲೆಕ್ಕದಲ್ಲಿ ಹೀಗೆ ಎಂದು ನೋಡಿದಾಗ ಕಂಡು ಬಂದಿದ್ಧು ಅನೇಕರಿಗೆ ಗಣಿತದ ಆ ಆ ಇ ಈ ಗೊತ್ತಿಲ್ಲ , ಸಂಕ್ಯೆ ಬರೆಯಲು ಹೆಣಗುವ ಇಲ್ಲ  ಕೂಡುವಿಕೆ , ಕಳೆಯುವಿಕೆಯಲ್ಲೇ ಕಳೆದು ಹೋಗುತ್ತಾರೆ , ಇನ್ನೂ ಪೈತಗೋರಾಸ್ ದೂರದ ಮಾತು. 

ಪಾಯನೇ ಸರಿ ಇಲ್ಲ ಎಂದು 8ನೇ ತರಗತಿಗೆ ಹೋದರೆ ಅಲ್ಲಿ ಬೇರೆಯದೇ ಸ್ಥಿತಿ. ಓಧಿದರೆ ಅರ್ಥ ಆಗೋಲ್ಲ ಅಂತ ಮಕ್ಕಳ ಕೊರಗು. ಅದಕ್ಕೆ ಗಮನ ಕೊಡಬೇಕು ಹಾಗೆ ಹೀಗೆ ಅಂತ ಪ್ರವಚನ ಕೊಟ್ಟು  ಅಂಕ ಗಣಿತದ ಒಂದು ಪಾಠ ಕೈಗೆತ್ತಿಕೊಂಡು  ಹೇಳಿಕೊಡೋಣ ಎಂದು ಹೊರಟರೆ ನಾನು ಹುಡುಗರ ತರಹವೇ ಆದೆ.  ಆ ಕನ್ನಡ ಮಾಧ್ಯಮದ 8 ತರಗತಿಯ ಪುಸ್ತಕ ತೆಗೆದು ಕೊಂಡರೆ ಬೇಕಾಗುವುದು ಮೊದಲು ಒಂದು ಪದಕೋಶ , ಸಂಸ್ಕೃತ ಓದುತ್ತಾ ಇರುವ ಹಾಗೆ ಫೀಲ್ ಆಗುತ್ತದೆ. 
 ಯಾಕೆಂದರೆ ಅದರಲ್ಲಿ ಬರುವ ಪದಗಳೊ ದೇವರಿಗೆ ಪ್ರಿಯ ( ಅದಕ್ಕೆ ಸಂಸ್ಕೃತವನ್ನು ಗೀರ್ವಾಣ ಬಾಶ  ಅನ್ನೋದು).    

ಅಂಕಗಣಿತ - ಅಂದರೆ ಅಂಕಿಗಳೊಡನೆ ಆಟ ಆಗ ಬೇಕು ಅಲ್ಲವೇ ಅಂಕಿ ಹೋಗಿ ಸಂಕ್ಯೆ ಬಂತು. ಮಾಯಾ ಚೌಕ ಮಾಡುವುದು ಹೇಗೆ ಎಂಬ ಒಂದು ಪಾಠ ಇದೆ, ಅದರಲ್ಲಿ ಹೇಗೆ ಅದನ್ನು ಮಾಡಬೇಕು ಎಂದು ಕನ್ನಡದಲ್ಲೇ ಕೊಟ್ಟಿದ್ದಾರೆ ಆದರೆ ಅದನ್ನು ಹೇಳಿಕೊಡಲು  ಮತ್ತೊಮ್ಮೆ , ಮಗದೊಮ್ಮೆ ಓದಬೇಕು,  
ಓದುತ್ತಾ ಇದ್ದರೆ  ಕರ್ಣ , ದುರ್ಯೋಧನರು ಹಾಸು ಹೋಗುತ್ತಾರೆ.  ಕೆಲವೊಂದು ವಿಷಯ ಹೇಳಿಕೊಡುವಾಗ ಚಿತ್ರದ ರೂಪದಲ್ಲಿ ಹೇಳಿಕೊಟ್ಟರೆ ಮಕ್ಕಳಿಗೆ ಮುಟ್ಟುತ್ತದೆ ,  ಆ ಪ್ರಯತ್ನ ಮಾಡಿದೆ ಆದರೆ ಹೇಳಿಕೊಡುವಾಗ ಚಿತ್ರದಲ್ಲಿ ಯಾವುದು ಚೌಕ, ಕಂಬ , ಕರ್ಣ , ದುರ್ಯೋಧನ ಎಂದು ತೋರಿಸಿದರೆ ಮಕ್ಕಳಿಗೆ ಹೆಚ್ಚು ನಾಟುತ್ತದೆ. 

ಈ ಪಾಠವನ್ನು ಆ ವಿಷಯದವಾರು ಕಂಡಿತ ಮಾಡಿಲ್ಲ ಎಂದು ಪ್ರತಿ ಪುಟದಲ್ಲೂ ಗೊತ್ತಾಗುತ್ತದೆ, ಯಾರೋ  ಇಂಗ್ಲೀಷ್ -ಕನ್ನಡ ಅನುವಾದಕರ ಕೆಲ್ಸ ಎದ್ದು ಕಾಣುತ್ತದೆ. ಬೇರೆ ಭಾಷೆಯ ಪಾಠವನ್ನು ಯಥಾವತ್ತು ಬಟ್ಟಿ ಇಳಿಸಿದ್ದಾರೆ , ಸೆಲ್ ಹೋಗಿ ಕೋಶ ಆಗಿದೆ,  ಹೆಸರಿಗೆ ಮಾಯಾ ಚೌಕ , ಆದರೆ ಅದರಲ್ಲಿ ಇರುವುದೆಲ್ಲ ಬಾರಿ ಕೋಶಗಳೆ.   ಇನ್ನೂ ನಿಯಮಗಳಿಗೆ ಬಂದರೆ 

ನಿಯಮ 1 ) ಕರ್ಣದ  ಎಡ ಭಾಗದಿಂದ ಬಲಭಾಗದ್ವರೆಗೆ  ಒಂದು ಕಾಲಿ ಕೋಶವಿದ್ದಲ್ಲಿ  ಅದನ್ನು ಮುಂದಿನ  ಸಂಕ್ಯೆಯಿಂದ ತುಂಬಿರಿ , ಇಲ್ಲಿ ಕರ್ಣದ ಗುಂಟ 4 ರ ನಂತರ ಒಂದು ಕಾಲಿ ಕೋಶ ಇದೆ , ಅದನ್ನು ತುಂಬಿರಿ . 

ಇದನ್ನು ಓಧಿ  ಏನು ಅರ್ಥವಾಗದೆ ಪಕ್ಕದಲ್ಲಿ ಇದ್ದ ಚಿತ್ರವನ್ನೂ ನೋಡಿ ಒ.. ಹೀಗಾ ಎಂದು ಅರ್ಥ ಮಾಡಿಕೊಂಡೆ. 

ಇನ್ನೂ 2 ನಿಯಮಕ್ಕೆ ಬಂದರೆ ಅದು ಇನ್ನೂ ಗೋಜಲು ಗೋಜಲು ಆಗಿದೆ ..

ಕರ್ಣದಲ್ಲಿ  ಕಾಲಿ ಕೋಷವಿಲ್ಲದಲ್ಲಿ ಮತ್ತು ಮುಂದೆ ಕಂಬಸಾಲುಗಳಲ್ಲಿದ್ದಲ್ಲಿ  ಮೂಂದಿನ ಕಂಬಸಾಲಿನ ಕೆಳಭಾಗದ ಕೋಶವನ್ನು ಮುಂದಿನ ಸಂಕ್ಯೆಯಿಂದ  ತುಂಬಿರಿ . ನಿಯಮ 1 ನ್ನು ಅನುಸರಿಸಿ ( ಇಲ್ಲಿ ಕರ್ಣ ಗುಂಟ  1 ನಂತರ ಯಾವುದೇ ಕೋಶವಿಲ್ಲ , ಆದುದರಿಂದ ಮುಂದಿನ ಕಂಬ ಸಾಲನ್ನು  ಅತ್ಯಂತ ಕೆಳಗಿನ ಕೋಷಕ್ಕೆ ಹೋಗಿ 2 ನ್ನು ತುಂಬುತ್ತೇವೆ) 

 ಮತ್ತೊಮೆ ಏನು ಅರ್ಥವಾಗದೆ ಚಿತ್ರ ನೋಡಿ ಕನ್ನಡ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿಧೆ.  ಮುಂದಿನ ನಿಯಮಯಕ್ಕೆ ಹೋಗುವ ಧೈರ್ಯ ಬರಲಿಲ್ಲ. ಓದಿಕೊಂಡು ಬರುವೆ ಎಂದು ಹೇಳಿ ಜಾಗ ಕಿತ್ತೆ.  

ದಾರಿಯಲ್ಲಿ ಇದನ್ನು ಹೇಗೆ ಸರಳಗೊಳಿಸಬಹುದು ಎಂಬುದೇ ಯೋಚನೆ , ಮಕ್ಕಳಿಗೆ ಇದು ಆಗಲೆ ಪಾಠ ಆಗಿದೆ, ಇದನ್ನು ಹೇಳಿಕೊಟ್ಟಿರುವ ಶಿಕ್ಷಕರು ಪುಸ್ತಕದಲ್ಲಿ ಹೇಗಿದೆಯೋ ಹಾಗೆ ಆದನು ಓದಿರುತ್ತಾರೆ , ಮಕ್ಕಳಿಗೆ ಅರ್ಥ ಆಗಿದೆಯೋ ಇಲ್ವೋ ಅಂತ ತಲೆ ಕೆಡಿಸಿಕೊಳ್ಳುವದಿಲ್ಲ , ಮಕ್ಕಳು ಹಾಗೆ ಅರ್ಥ ಆಗಿಲ್ಲ ಇನ್ನೊಮ್ಮೆ ಹೇಳಿ ಅಂತ ಕೇಳೋಲ್ಲ , ಪಾಠ ಮುಗಿದರೆ ಸಾಕು, ಬೆಲ್ ಹೊಡೆದರೆ ಸಾಕು  ಅನ್ನೋ ಅವಸರ.,

ಮನೆಗೆ ಬಂದ ಮೇಲೆ ಯು-ಟ್ಯೂಬನಲ್ಲಿ ಏನಾದರೂ ಸಿಗಬಹುದಾ ಅಂತ ಹುಡುಕಿದೆ. ಇದು ಸಿಕ್ಕಿತು ,ಆದರೆ ಇದು ಒಂದು ಟ್ರಿಕ್ , 4 x 4ಗೆ 

ನನಗೆ ತೋಚಿದ್ದು , 
* ಚಿತ್ರಗಳನ್ನು ಹೆಚ್ಚು ಬಳಸಬೇಕು 
* ಯಾವ ಚೌಕದ ಬಗ್ಗೆ ಹೇಳುತ್ತಾ ಇದ್ದಾರೆ , ಯಾವ ಕರ್ಣದ ಬಗ್ಗೆ ತಿಳಿಸುತ್ತಾ ಇದ್ದರೆ ಎಂದು ಬಣ್ಣದ ಮೂಲಕ ಹೇಳಬಹುದು.
* ಚೌಕಕ್ಕೆ ಬಣ್ಣಗಳನ್ನು ಬಳಸಿದರೆ ಹೆಚ್ಚು ಅರ್ಥ ಆಗಬಹುದು.
*  ಕರ್ಣ , ಗುಂಟ , ಕಂಬಸಾಲು ಏನು ಎಂದು ವಿವಿದ ಗೆರೆ  ಮೂಲಕ ತೊರಿಸಿದರೆ ಮಕ್ಕಳಿಗೆ ಸತತ ಮನನ ಆಗುತ್ತದೆ.
*  ಬಾಣಗಳ ಮೂಲಕ ತೋರಿಸಿದರೆ ಇನ್ನೂ ಹೆಚ್ಚು ಅನಕೂಲ. 


ಎಲ್ಲಕ್ಕಿಂತ ಆಗಬೇಕಾಗಿರುವುದು ಸರಳಿಕರಣ,  ಮಕ್ಕಳಿಗೆ ಹೆಚ್ಚು ಚಿತ್ರ ಕಮ್ಮಿ ಸಂಸ್ಕೃತ ಕನ್ನಡದ ಅನುವಾದ ಇರಬೇಕು. ಚಿತ್ರವನ್ನೂ ನೋಡಿ ಮಕ್ಕಳು ತಮಗೆ ಬೇಕಾದ ಕನ್ನಡದಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ.   ಎನಂತೀರಾ ?






Sunday, January 03, 2016

ಆ ಸುಂದರ ದೊಡ್ಡ ಕನಸೇ... ತಾಯಿ ಭುವನೇಶ್ವರಿ


ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??

ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.

ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.

ಬ್ಲಾಗೂ, ಕಾಮೆಂಟು ಅದರ ಆಚೆಗೆ

ಕಳೆದ ಎರಡು ವಾರಗಳಿಂದ ಬ್ಲಾಗ್ ಬಗ್ಗೆ ಮತ್ತು ಅದಕ್ಕೆ ಅಂಟಿಕೊಂಡಿರುವ ವೈರಸ್ ಬಗ್ಗೆ ಪುಂಖಾನುಪುಂಖ ಲೇಖನಗಳನ್ನು ನೋಡುತ್ತ ಇದ್ದೇವೆ. ಹೆಚ್ಚಾಗಿ ಇದು ಎಲ್ಲೊ ಅನಾನಿಮಸ್ ಅನ್ನೊ ವೈರಸ್ ಇಂದ ಬಳಲಿದ ಹತಾಶ ಜನರ ಕಥೆ ಇದ್ದ ಹಾಗೆ ಇದೆ. ಬ್ಲಾಗಿಂಗನಲ್ಲಿ ಇದು ಸಾಮನ್ಯ ಅಂಶ, ಆದರೆ ಇದಕ್ಕೆ ಹೆದರಿ ಬ್ಲಾಗ್ ನಿಲ್ಲಿಸುತ್ತ ಇದ್ದೇವೆ ಅಂತ ಹೇಳುವ ವರಾತ ನಿಜಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ.


ನನಗೂ ಅನೇಕರು ಇದನ್ನೇ ಹೇಳಿದ್ದಾರೆ, ಬ್ಲಾಗ್ ಮಾಡುವುದು ದೊಡ್ಡದಲ್ಲ, ಅದಕ್ಕೆ ಬರುವ ಕಾಮೆಂಟಗಳನ್ನು
ಉತ್ತರಿಸುವುದು ಕಷ್ತ. ಇದು ಒಂದು ಹಂತಕ್ಕೆ ನಿಜ, ಕಾಮೆಂಟುಗಳು ಚರ್ಚೆಗೆ ಮತ್ತು ಮಾಡಿದ ಪೋಸ್ತೀಗೆ ಪೂರಕ ಇದ್ದರೆ ಅದು ತಪ್ಪಲ್ಲ, ಆದರೆ ಅನವಶ್ಯವಾಗಿ ಬೇಡದ ವಿಷಯಗಳ ಬಗ್ಗೆ ಬರೆಯುವುದು, ಜಾತಿ ಎಳೆದು ತರುವುದು ಆದರೆ ನಿಜಕ್ಕೂ ಅಸಹ್ಯ.

ಹಾಗಾದರೆ ಕಾಮೆಂಟ್ ಬೇಡವೇ ??

ನನ್ನ ಅನುಭವದಲ್ಲಿ ಎರಡರ ರುಚಿ ಉಂಡಿರುವೆ, ಮುಖ್ಯವಾಗಿ ನಮ್ಮ ಬ್ಲಾಗಿನಲ್ಲಿ ನಮ್ಮ ಲೇಖ್ಝನ ಪ್ರಕಟಗೊಂಡರೆ ನಮ್ಮ ಕೈನಲ್ಲಿ ಸೂತ್ರ ಇರುತ್ತದೆ, ನಮಗೆ ಬೇಕಾದ ಹಾಗೆ ಕಾಮೆಂಟ ಹಾಕುವ ಜನರನ್ನು ನಾವು ನಿಭಾಯಿಸಬಹುದು, ಬೇಕಾದರೆ ಅನಾನಿಮಸ್ ಸಂಪೂರ್ಣ ನಿಲ್ಲಿಸಬಹುದು ಇಲ್ಲ ಖಡ್ಡಾಯವಾಗಿ ಗೂಗಲ್ ಐಡಿ ಕೊಡುವ ಹಾಗೆ ಮಾಡಬಹುದು. ಇದರ ಮೇಲೂ ಮಾಡರೇಶನಗೆ ಅವಕಾಶ ಇರುತ್ತದೆ.

ಅದೇ ಬೇರೆ ತಾಣದಲ್ಲಿ ಪ್ರಕಟಗೊಂಡು ಅಲ್ಲಿ ಬರುವ ಕಾಮೆಂಟುಗಳನ್ನು ನಿಭಾಯಿಸುವದಕ್ಕೆ ದಿನಗಟ್ತಲೇ ಬೇಕು. ಮುಖ್ಯವಾಗಿ ಮಾಡರೇಷನ್ ಇಲ್ಲದಿದ್ದಲ್ಲಿ ಚರ್ಚೆಯನ್ನು ಎಕಬದಿಗೆ ತರುವ ಕೆಲ್ಸ ಬರೆದವರು ಮಾಡುತ್ತ ಇರಬೇಕು. ವಿಷಾಯಂತರ ಮಾಡುವುದು ಅದರಲ್ಲೂ , ಕೊಳಕು ಮಾತುಗಳನ್ನು ತೆಗೆಯುವ ಕೆಲ್ಸ ಇದೆ ಅಲ್ವ, ಆ ಕೆಲ್ಸಕ್ಕೆ ಲೇಖನ ಬರೆದಕ್ಕಿಂತಲೂ ಹೆಚ್ಚು ಸಮಯ ವ್ಯಯ ಮಾಡಬೇಕು, ಒಮ್ಮೆ ಇದಕ್ಕೆ ಇಳಿದರೆ ಚಕ್ರವ್ಯೂಹ ಇದ್ದ ಹಾಗೆ. ಉತ್ತರ ಕೊಡದಿದ್ದರೆ ಅಯ್ಯೋ ಓಡಿಹೋದ ಅನ್ನೊ ಟೀಕೆಗಳು.
ರಾತ್ರಿ ಎಲ್ಲಾ ರಾಮಾಯಣ ಕೇಳಿ ಮತ್ತೆ ರಾಮ ಯಾರು ಅಂತ ಪ್ರಶ್ನೆ ಕೇಳಿ ನಿಮ್ಮ ತಾಳ್ಮೆ ಪರೀಕ್ಷಿಸುವ
ಜನರು ಬೆಂಗಳೂರಿನ ರಸ್ತೆಯಲ್ಲಿ ಸಡನ್ ಆಗಿ ವಾಹನದ ಹಾಗೆ ಬಂದು ಮರೆಯಾಗುತ್ತಾರೆ.


ಅನೇಕ ತಾಣಗಳು ಬೇಕಂತಲೇ ತಮ್ಮ ವೆಬಸೈಟಿಗೆ ಹಿಟ್ ಹೆಚ್ಚಿಸಲು ನಕಲಿ ಕಾಮೆಂಟ್ ಹಾಕುತ್ತವೆ, ಯಾವುದಾದರೂ ಪ್ರಚಲಿತ ಲೇಖನ ಪ್ರಕಟಗೊಂಡ ಹತ್ತು ನಿಮಿಷದಲ್ಲಿ ಅದರ ಪರ,ವಿರುದ್ಧ ಅನೇಕ ಕಾಮೆಂಟ್ ಪ್ರತ್ಯಕ್ಷ ಆಗಿ ಆ ವರ್ಗದ ಜನರನ್ನು ಬೇಡವೆಂದರೂ ಸೆಳೆಯುತ್ತದೆ. ಈ ಪರ-ವಿರುದ್ಧ ಯುದ್ದದಲ್ಲಿ ಲಾಭ ಆಗುವುದು ವೆಬಸೈಟಿಗೆ ಮಾತ್ರ. ಇದೊಂದು ರೀತಿ TRP ಹೆಚ್ಚಿಸುವ ಕ್ರಿಯೆ. ಇದನ್ನು ವಿಷ್ಲೇಶಿಸುವರು ಮುಂದೆ ಇಂತಹ ವಿಷಯಗಳನ್ನೇ ಸುದ್ದಿಯನ್ನಾಗಿ ಮಾಡಿಹಾಕುತ್ತಾರೆ. ಅದರಲ್ಲಿ ಚರ್ಚೆ
ಎಷ್ಟು ಮಟ್ಟಿಗೆ ನಡೆಯತ್ತೊ ಇಲ್ಲವೋ, ಅದರಲ್ಲಿ ಬರೆದಿರುವ ಕಾಮೆಂಟುಗಳು ನಗೆ ತರಿಸುತ್ತವೆ ಇಲ್ಲ ಜನರಲ್ಲಿ ವಿಕೃತ ಸಂತೋಷ ಉಂಟು ಮಾಡುತ್ತವೆ. ಇದನ್ನೆ ಓದುವ ದೊಡ್ಡ ವರ್ಗ ಬೇರೆ ಇರುವುದು ನಿಜಕ್ಕೂ ಬೇಸರದ ಸಂಗತಿ.

ಇದಕ್ಕೆ ಅಪವಾದವಾಗಿ ಚುರುಮುರಿಯಲ್ಲಿ, ಸಂಪದದಲ್ಲಿ ಬರುವ ಕಾಮೆಂಟುಗಳು ಒಳ್ಳೆ ಚರ್ಚೆಯನ್ನು ಹುಟ್ಟುಹಾಕುತ್ತವೆ ಮತ್ತು
ಅನೇಕ ವಿಷಯಗಳನ್ನು ತೆರೆದಿಡುತ್ತವೆ. ಸಂಪದನಲ್ಲಿ ಸದಸ್ಯರೂ ಮಾತ್ರ ಕಾಮೆಂಟ್ ಮಾಡಬಹುದು, ಈ ರೀತಿ ಒಂದು ಹತೋಟಿ ಇರುತ್ತದೆ.

ಬ್ಲಾಗ್ ಒಂದು ಗಾಜಿನ ಮನೆ ಮತ್ತು ಇದು ಮುಕ್ತ

ಇನ್ನು ಅನೇಕ ಲೇಖನಗಳಲ್ಲಿ ಈ ರೀತಿ ಅನಾನಿಮಸ್ ಸಮಸ್ಯೆ ಯಾಕೆ ಬರುತ್ತದೆ ಎಂದರೆ, ಅವರು ಬರೆದಿರುವ ಭಾಷೆ,ಪದ ಬಳಕೆ
ಮಾಡಿರುವ ಅಪವಾದ ಮತ್ತು ಒಂದು ಪಕ್ಷೀಯ ಧೋರಣೆ ಇದು ಅನೇಕ ಸಾರಸತ್ವ ವರ್ಗಕ್ಕೆ ಜಗಳ ತರುತ್ತದೆ. ತಮ್ಮದೇ ಸರಿಯಾದ ಚಿಂತನೆ ಅಂತ ಎಡ-ಬಲ ಮಾಡಿಕೊಂಡು ವಾದಿಸುವ ಅನೇಕ ಚಿಂತನೆಗಳು ಕೊನೆಗೆ ಕೊನೆ ಕಾಣುವುದು personal attack ನಲ್ಲಿ. ಬೇರೆಯವರ ಮೇಲೆ ಹಿಗ್ಗಾಮುಗ್ಗ ಬ್ಲಾಗಿನಲ್ಲಿ ಆರೋಪ ಮಾಡುವ ಜನರು ತಾವು ಗಾಜಿನ ಮನೆಯಲ್ಲಿ ಇದ್ದೀವಿ ಅಂತ
ಮರೆಯಬಾರದು. ಅದ್ದರಿಂದ ಆ ವಿಷಯದಲ್ಲಿ ಚರ್ಚೆ ಬಂದರೆ ನಿಂತು ಉತ್ತರ ಕೊಡಬೇಕು.

ಬ್ಲಾಗ್ ಮಾಡುವುದು ನಿಮ್ಮ ಸಲುವಾಗಿ ಆಗಿದ್ದರೆ ನಿಮ್ಮದೇ ಒಂದು ತಾಣ ಮಾಡಿಕೊಂಡು, ನಿಮ್ಮ ಅಭಿಮಾನಿ ವರ್ಗಕ್ಕೆ ಮಾತ್ರ ಅನುಮತಿ ಕೊಟ್ಟು ಓದಿಸಿ, ಮುಕ್ತ ಇಂಟರನೆಟ್ಟಿನಲ್ಲಿ ಹಾಕಿದರೆ ಅದನ್ನು ಓದುವ ಹಕ್ಕು ಎಲ್ಲರಿಗೂ ಇರುತ್ತದೆ, ಕೇವಲ ಒಂದು ಪೋಸ್ಟ ಹಾಕಿ ನನ್ನ ಕೆಲ್ಸ ಮುಗೀತು ಅಂತ ಕೂರುವದಕ್ಕೆ ಆಗುವದಿಲ್ಲ.


ಇದು ಹಿಂದಿನ ಕಾಲ ಅಲ್ಲ

ಪೇಪರ್ ಇಂದ ಅನೇಕ ಪತ್ರಕರ್ತರು ಬ್ಲಾಗಿಗೆ ಹಾರಿದ್ದಾರೆ, ಈ ಕಾಮೆಂಟಗಳ ತೊಂದರೆಯಲ್ಲಿ ಸಿಕ್ಕಿರುವುದು ಇವರೇ. ಇದಕ್ಕೆ ಉತ್ತರ ಬಹಳ ಸುಲಭ, ಮುಕ್ಕಾಲು ಜನ ಪೇಪರಿನಲ್ಲಿ ಪ್ರಕಟ ಆಗುವ ತಮ್ಮ ಅಂಕಣಗಳನ್ನು ಬ್ಲಾಗಿಗೆ ಹಾಕುತ್ತ ಇದ್ದಾರೆ ಜೊತೆಗೆ ಬೇರೆ ಲೇಖನಗಳನ್ನು ಸೇರಿಸುತ್ತಾರೆ. ಪೇಪರಿನಲ್ಲಿ ಬರೆದ ಲೇಖನಗಳಿಗೆ ಒಬ್ಬ ಸಾಮಾನ್ಯ ಓದುಗ ಉತ್ತರ ಬರೆಯಬೇಕು ಇಲ್ಲ ಅದು ಚರ್ಚೆಗೆ ಒಳಗಾಗಬೇಕು ಅಂತ ಮಾಡಬೇಕಿದ್ದರೆ ಪತ್ರ ಬರೆದು, ಅದನ್ನು ಪೋಸ್ತಿನಲ್ಲಿ ಹಾಕಿ ಮುಂದು ಒಂದು ದಿನ ಅದು ಕಬು ಗೆ ಹೋಗಿಲ್ಲವೆಂದರೆ ಉತ್ತರ ಸಿಗಬಹುದಿತ್ತು. ಆದರೆ ಇಗ ಅದು ೫ ನಿಮಿಷದ ಕೆಲ್ಸ, ಜನ ತಮ್ಮ ಅಭಿಪ್ರಾಯಗಳನ್ನು ಬಹಳ ಸುಲಭವಾಗಿ ವ್ಯಕ್ತ ಪಡಿಸಬಹುದು. ಅವುಗಳಿಗೆ ಉತ್ತರ ಕೊಡುವ ಸಮಯ ಹೊಂದಿಸುವುದೇ ಅನೇಕರ ಸಮಸ್ಯೆ ಅಂತ ನನ್ನ ಅಭಿಪ್ರಾಯ. ಮುಕ್ತ ಇಂಟರಿನೆಟ್ಟಿನಲ್ಲಿ ಜನ ಲೇಖಕರ ವಿಚಾರಧಾರೆಯನ್ನೆ ಪ್ರಶ್ನೆ ಮಾಡಬಹುದು, ಇದು ಅನೇಕರಿಗೆ ಅಪಥ್ಯ. ಅದಕ್ಕೆ
ಅಯ್ಯೊ ಇದರ ಸಹವಾಸವೇ ಬೇಡಪ್ಪ ಅಂತ ದೂರ ಸರಿಯುತ್ತಾರೆ.


ಉಘೇ ಉಘೇ ಕಮ್ಮಿ ಆಗಿ ಚರ್ಚೆಯ ಆಸ್ಪದ ಇರಬೇಕು

ಆದರೆ ಅನೇಕ ಬ್ಲಾಗಿನಲ್ಲಿ ಬರುವ ಲೇಖನಗಳು ತಾವು ಬರೆದಿರುವುದೇ ಸತ್ಯ ಅನ್ನೊ ದೋರಣೆಯಲ್ಲಿ, ಚರ್ಚೆಗೆ ಅವಕಾಶ ಕೊಡದ ರೀತಿಯಲ್ಲಿ ಬರುತ್ತದೆ. ಮುಕ್ಕಾಲು ಭಾಗ ಕಾಮೆಂಟುಗಳನ್ನು ನೋಡಿದರೆ ಅವರದೇ ಒಂದು ಸಿಂಡಿಕೇಟ್ ಉಘೇ ಉಘೇ ಮಾಡುತ್ತ ಇರುತ್ತದೆ, ಎಲ್ಲೊ ಒಂದು ಕಡೆ ನಿನಗೆ ನಾನು ಹೊಗಳುತ್ತೆನೆ ನನಗೆ ನೀನು ಹೊಗಳು ಅನ್ನೊ ಮಾದರಿಯಲ್ಲಿ. ಒಟ್ಟಿನಲ್ಲಿ ಎಕಪಕ್ಷೀಯವಾಗಿ ಅವರ ವಿಚಾರಧಾರೆಗಳನ್ನು ಹರಿಸುತ್ತವೆ. ಅಲ್ಲಿ ಕಾಮೆಂಟನ್ನು ಹೊಗಳಿ ಬರೆದರೆ ಮಾತ್ರ ಪ್ರಕಟಿಸುತ್ತಾರೆ, ಅದೇ ಚರ್ಚಾರೂಪದಲ್ಲಿ ಹಾಕಿದರೆ ತಲೆಯು ಕೆಡಿಸಿಕೊಳ್ಳುವದಿಲ್ಲ
ಉತ್ತಮ ಕಾಮೆಂಟುಗಳಿಂದ ಕಲಿಯಬಹುದು

ಅನೇಕ ನನಗೆ ಬಂದ ಕಾಮೆಂಟುಗಳು ನನ್ನ ವಿರೋಧಿ ಆಗೇ ಇದ್ದವೇ,ಅನೇಕ ಕಡೆ ನನಗೆ ನಾನು ಮಾಡಿದ ತಪ್ಪನ್ನು ಸರಿ ಪಡಿಸಿದ್ದಾರೆ ಅನಾನಿಮಸ್ ಓದುಗರು, ಇನ್ನ ಅನೇಕ ಬಾರಿ we agree to disagree ಅನ್ನೊ ಒಪ್ಪಂದಕ್ಕೆ ಬಂದಿದ್ದೇವೆ. ಇನ್ನು ನಾವು ಬರೆದ ಪೋಸ್ತಿಗೆ ಉತ್ತರವಾಗಿ ಅನೇಕರು ಬ್ಲಾಗ್ ಹಾಕಿ ತಮ್ಮ ಅಭಿಪ್ರಾಯ ಹಾಕಿರುವುದು ನಾವು ನೋಡಿರುತ್ತೆವೆ.ಅದ್ದರಿಂದ ಸರಸಗಾಟಾಗಿ ವ್ಯವಸ್ಥೆಯನ್ನು ತೆಗಳುವದನ್ನು ಬಿಟ್ಟು ಅದನ್ನು ಬಳಸುವ ಬಗ್ಗೆ ನಮ್ಮ ಬ್ಲಾಗಿಗರು ಗಮನ ಹರಿಸಬೇಕು.

ಕಾಣದಂತೆ ಮಾಯವಾದನೋ ನಮ್ಮ ಕನ್ನಡಿಗ

ಅದೊಂದು  ರಾಜ್ಯೋತ್ಸವ ಕನ್ನಡ  ಸ್ಪರ್ಧೆಗಳ ಕಾರ್ಯಕ್ರಮ,  ಅದರಲ್ಲಿ ಕೆಲವು ಆಯೋಜಕರು ಕೆಲವು ಹೊಸ ನಿಯಮಗಳನ್ನು ಪ್ರಸ್ತಾಪಿಸಿದರು
1) ಸ್ಪರ್ಧೆಯಲ್ಲಿ ಕನ್ನಡ ಅಥವಾ ಇಂಗ್ಲಿಷಲ್ಲಿ ಬರೆಯಬಹುದು
2) ಆಶುಭಾಷಣದಲ್ಲಿ ಕೂಡ ಕನ್ನಡ ಅಥವಾ ಇಂಗ್ಲಿಷಲ್ಲಿ ಮಾತನಾಡಬಹುದು.
3) ಕನ್ನಡದಲ್ಲಿ ಬರೆಯುವರಿಗೆ ಕಾಗುಣಿತ ತಪ್ಪು ಹುಡುಕಬಾರದು.
ಏನಪ್ಪಾ ಈ ಸ್ಪರ್ಧೆ ಬೇರೇ ದೇಶದ ಕನ್ನಡ ಕೂಟದಲ್ಲಿ ನಡೆದಿದ್ದಾರೆ ಬೇರೆ ಮಾತು , ನಮ್ಮ ನೆಲದಲ್ಲೇ ಆದ ಗಟನೆ ಆದ್ದರಿಂದ , ಯಾಕೆ ಈ ನಿಯಮ ಬಂದಿವೆ ಇವರ ಮಕ್ಕಳಿಗೆ ಅನಕೂಲ ಮಾಡಿಕೊಡಲು ಹೀಗೆ ಮಾಡೀದ್ದಾರ ಅಂತ ಜಿಜ್ಞಾಸೆ ಮೂಡಿದ್ದು ನಿಜ. ಆದರೆ ವಿಷ್ಯಕ್ಕೆ ಬಂದರೆ ಅನೇಕ ಆಯೋಜಕ , ತೀರ್ಪುಗಾರರಿಗೆ ಕನ್ನಡ ಓದಲು , ಬರೆಯಲು ಬರದೇ ಇರುವುದು ನಿಜ ವಿಷಯವಾಗಿತ್ತು . ಆದ್ದರಿಂದ ತಾವು ಪಾಲ್ಗೊಳ್ಳ ಬೇಕು ಎಂಬ ತುಡಿತದಿಂದ ಇಂಗ್ಲಿಶನ್ನು ಸೇರಿಸಿದ್ದರು, ಇನ್ನೂ ಇವರ ಮಕ್ಕಳಿಗೆ ಸ್ಪೆಷಲ್ ಅಂತ ಹೇಳಬೇಕಾಗಿಲ್ಲ.
ಇದು ಒಂದು ಗಟನೆ ಆದರೂ ಇದಕ್ಕೆ ಮೂಲ ಹೂಡಕುತ್ತಾ ಹೊರಟಾಗ  ಕಂಡು ಬಂದ ಅಂಶವೆಂದರೆ 2000 ಇಸವಿ  ನಂತರ ಕರ್ನಾಟಕದಲ್ಲಿ ಆದ ಮಹತ್ತರ ಬದಲಾವಣೆ. ಅದು  ಎನೆಂದರೆ ಕನ್ನಡ ಓದಲು ಬಾರದಿರುವ, ಕನ್ನಡ ಕಷ್ಟ ಪಟ್ಟು ಓದುವ ಒಂದು ಪೀಳಿಗೆ ಇಂದು ಪೋಷಕರಾಗಿದ್ದಾರೆ.   ಈ ಪೋಷಕರಿಗೆ ಕನ್ನಡ ಎಂದರೆ ಒಂದು ರೀತಿ ಕಬ್ಬಿಣದ ಕಡಲೆ , ಆದ್ದರಿಂದ ಇವರು ಹೆಚ್ಚು ಬಳಸುವ ಬಾಷೆ ಇಂಗ್ಲಿಶ್ ಆಗಿರುತ್ತದೆ. ಮನೆಯ ವಾತವಾರಣ ಕೂಡ ಇದರಿಂದ ಹೊರತಾಗಿರುವದಿಲ್ಲ. ಇವರ ಮನೆಯ ಪುಸ್ತಕ ಬಂಡಾರದಲ್ಲಿ ಒಂದೆ ಒಂದು ಕನ್ನಡ ಪುಸ್ತಕವಿದೆ ಎಂದರೆ ಅದು ಇಂಗ್ಲಿಶ್ ಟು ಕನ್ನಡ  ಪದನೆರಿಕೆ ಆಗಿರುತ್ತದೆ.

ಇದು ಅವರ ವೈಯಕ್ತಿಕ ಜೀವನ ಶೈಲಿ ಆದರೂ ಅದು ಸಾಮಾಜಿಕವಾಗಿ ಪರಿಣಾಮ ಬೀರುತ್ತ ಇದೆ. ಆ ಮನೆಯಲ್ಲಿ ಕನ್ನಡ ಮುಂದಿನ ತಲೆಮಾರಿಗೆ ಕಂಡಿತ ಪಸರಿಸುವದಿಲ್ಲ. ಹೆಸರಿಗೆ, ಸೀಟ್ ಪಡೆಯಲು , ಉದ್ಯೋಗದ ಅನಕೂಲಕ್ಕೆ , ಇಲ್ಲ ಸೈಟ್ ಪಡೆಯಲು ಕನ್ನಡಿಗರೂ ಎಂದು ಗುರುತಿಸಿ ಕೊಳ್ಳುವ ಈ ವರ್ಗದ ಸಂಕ್ಯೆ ಹೆಚ್ಚಾಗುತ್ತ ಇರುವುದು ನಗರ ಪ್ರದೇಶದ ದೊಡ್ಡ ಸಮಸ್ಯೆಯೇ ಸರಿ.  ಇದರಿಂದ ಕನ್ನಡಿಗರ ಸಂಕ್ಯೆ ಕಮ್ಮಿ ಆಗುತ್ತದೆ. ಕಾಲಕ್ರಮೇಣ ಅಲ್ಪಸಂಕ್ಯತ ಬಿರುದು ಪಡೆದರು ಆಶ್ಚರ್ಯವಿಲ್ಲ.

ಒಂದು ಬಾರಿ ಈ ಪರಿಸರದಲ್ಲಿ ಬೆಳೆದ ಮಕ್ಕಳನ್ನು , ವಿದೇಶದಲ್ಲಿ  ಇರುವ ಕನ್ನಡಿಗರ ಮಕ್ಕಳ ಜೊತೆ ತುಲನೆ ಮಾಡಿದರೆ ಅನೇಕ ಸಾಮ್ಯತೆ ಕಾಣುತ್ತದೆ,  ಇನ್ನೂ ವಿದೇಶದಲ್ಲಿ ಬೆಳೆದ ಮಕ್ಕಳು ಹೆಚ್ಚು ಕನ್ನಡಿಗರಾಗಿದ್ದಾರೆ  ಎನ್ನುವ ಅಂಶ ಕಂಡು ಬರುತ್ತದೆ.

ಗುರುತಿಸಿ ಕೊಳ್ಳುವಿಕೆ :-  ಒಂದು ಸಮುದಾಯಕ್ಕೆ ಎದುರಾಗುವ ದೊಡ್ಡ ಸಮಸ್ಯೆ ಏನೆಂದರೆ ಗುರುತಿಸಿಕೊಳ್ಳುವಿಕೆ , ಕನ್ನಡಿಗರಾಗಿ ಗುರುತಿಸಿಕೊಳ್ಳಲು ಭಾಷೆ , ಕೀಳರಿಮೆ ಅಡ್ಡ ಬರುತ್ತದೆ.  ದೊಡ್ಡದಾಗಿ ವಿಶ್ವ ಮಾನವ ಪೊಸು ಕೊಟ್ಟು ನಾವು ಭಾರತೀಯರು , ನೀರು ಇದ್ದ ಹಾಗೆ. ಯಾವ ಭಾಷೆಯ ಜನ ಹೆಚ್ಚು ಇರುತ್ತಾರೋ ಅವರೊಡನೆ ನಾವು ಬೆರೆಯುತ್ತಾರೆ.  ಒಂದು ವೇಳೆ ಕನ್ನಡಿಗರೂ ಹೆಚ್ಚು ಇದ್ದಲ್ಲಿ  ಇವರದು ವಿರೋಧಿ ಬಣ.  ಕನ್ನಡತನ ಅನ್ನುವುದು parochial fringe chauvinism , ಇದು ದೇಶಕ್ಕೆ ದೊಡ್ಡ ಮಾರಕ ಎನ್ನುವ ಬಿಟ್ಟಿ ಉಪದೇಶ ಬೇರೆ.

ಕಾಲಗಟ್ಟದಲ್ಲಿ ಇದನ್ನು ಕನ್ನಡಿಗ ಮತ್ತು ಕರ್ನಾಟಕ ಹೇಗೆ ಎದುರಿಸಬೇಕಾಗುವುದೊ ನೋಡಬೇಕು. 

Sunday, February 23, 2014

ನ್ಯಾನೋ ಕತೆ

ಜಾಗತೀಕರಣ, ಉದಾರೀಕರಣ,  ಕಾಸಗಿಕರಣ  ಇವು ತ್ರಿಶುಲ ಇದ್ದ ಹಾಗೆ, ಬಡವರ, ಶೋಷಿತರನ್ನು ಹಿಂಸಿಸುತ್ತ ಇವೆ.
ಕನ್ನಡಕ್ಕೆ ಡಬ್ಬಿಂಗ ಬರಬೇಕು ಎನ್ನುವ ಜನರು ಬೇರೆ ಯಾರು ಅಲ್ಲ,  ಆ ಮೂರನ್ನು  ತ್ರಿಶುಲದಂತೆ ಇಟ್ಟುಕೊಂಡಿರುವ ಫಾರಿನ್ ಏಜೆಂಟ್  ಎಂದು  ಭಾಷಣ ಮುಗಿಸಿ ಕರಡತನ ಪಡೆದ ಮಹನೀಯರು ಆಚೆ ಬಂದು ೫೫೫ ಹಚ್ಚಿ ಹೋಗೆ  ಉಗುಳುತ್ತ ತಮ್ಮ ಬೆಂಜ್ ಹತ್ತಿ ಇನ್ನೊಂದು ವಿರಾವೇಶ ಬಾಶನಕ್ಕೆ ಹೋದರು.

ಒಡೆದು ಆಳು ..

ಆಫ್ರಿಕಾದ ಕೆಲಭಾಗದಲ್ಲಿ ಒಂದು ದೇಶ ಇತ್ತು,  ಅಲ್ಲಿ ಒಂದೆ ಸಮುದಾಯದ ಜನ ನೆಮ್ಮದಿ ಇಂದ ಇದ್ದರು.
ಆ ಜನರ ಸಂಸ್ಕೃತಿ, ನುಡಿ, ಆಹಾರ ಎಲ್ಲಾ ಒಂದೆ ಆಗಿತ್ತು. ಒಂದೆ ನಂಬುಗೆಯ , ಒಂದೆ ಆಚಾರದ ಜನ
ತಮ್ಮಲ್ಲೇ  ಕೇಂದ್ರಿಕೃತ  ಸರಕಾರವನ್ನು ಮಾಡಿಕೊಂಡು, ಒಂದು ರೀತಿ ಮಂದಿ ಆಳ್ವಿಕೆಯನ್ನು ಮಾಡಿಕೊಂಡು ಹೋಗುತ್ತಾ ಇದ್ದರು. ಇದು ೧೮ನೇ ಶತಮಾನದ ಕತೆ ...

ಆ ದಿನಗಳಲ್ಲಿ  ಅಮೇರಿಕಾದಲ್ಲಿ ಇನ್ನು ಗುಲಾಮಿತನ ಇತ್ತು,  ನಮ್ಮಲ್ಲೂ ಸ್ವಾತಂತ್ರದ ಕೂಗು ಎದ್ದಿತ್ತು , ಹಾಗೆ ಅದು ಮಲಗಿತ್ತು.
ಆಫ್ರಿಕಾ ಯುರೋಪ್ ಜನರ ಕೆಲಸಕ್ಕೆ ಒಂದು ಫ್ಯಾಕ್ಟರಿ ಆಗಿತ್ತು.  ಜನರನ್ನು ನಡೆಸಿಕೊಳ್ಳುತ್ತ  ರೀತಿ ಹೇಳುವುದಕಿಂತ ಹೇಳದಿರುವುದುದೆ ಲೇಸು.

ಮೊದಲಿಗೆ ಆ ದೇಶಕ್ಕೆ ಬಂದವರು ಜರ್ಮನ್ ಜನರು,   ಆಗಿನ  ಜರ್ಮನ್ ಜನರಲ್ಲಿ ತಾವು ಮಾನವರಲ್ಲಿ ಅತಿ ಶ್ರೇಷ್ಟ ಎನ್ನುವ ಭಾವನೆ ಇತ್ತು.   ನಮ್ಮನ್ನು  ಬಿಟ್ಟು ಉಳಿದವರು ಬದುಕಿರುವುದೇ ವ್ಯರ್ಥ ಅನ್ನುವ ಭಾವನೆ ಇತ್ತು. ಆದರೆ ತಮ್ಮ  ಕೆಲಸ ಆಗಬೇಕು ಎಂದರೆ , ತಮ್ಮ ಸೇವೆಗೆ ಜನರು ಬೇಕು ಅವರು ಆರ್ಯನ್ ಸಮುದಾಯದಲ್ಲದವರು ಎನ್ನುವ
ಭಾವನೆ ಅಡಗಿತ್ತು. ಇನ್ನು ಹಿಟ್ಲರ್ ಜರ್ಮನ್ ರಾಜಕೀಯದಲ್ಲಿ ಮಿಂಚಿರಲಿಲ್ಲ , ಆದರು ಅಫ್ರಿಕಾದ ಆ ದೇಶ  ನೋವಿನಲ್ಲೂ  ಒಂದಾಗಿತ್ತು.  ೧೯೦೦-೧೯೪೫  ಇಂದಿನ ಜಗತ್ತಿನಲ್ಲಿ ಅನೇಕ ಗಟನೆಗಳು ನಡೆದವು, ಜರ್ಮನರು  ವಿ.ವಿ-೨ ರಲ್ಲಿ ಹೀನಾಯ ಸೋಲು ಅನುಬವಿಸಿ , ಗಂಡಸರ ಕೊರತೆಯನ್ನು ಎದರಿಸುವ ಸ್ಥಿತಿಗೆ ಹೋಗಿತ್ತು. ಇನ್ನು  ಯುರೋಪನ ಅನೇಕ ನಗರಗಳು ಸ್ಮಶಾನ ಆಗಿದ್ದವು. ಇ ಗಟನೆಗಳು  ದೂರದ ಆಫಿಕ್ರಾದ ದೇಶದ ಮೇಲು ಪ್ರಬಾವ ಬಿರಿದವು. ಜರ್ಮನ್ ಹಿಡಿತ ತಪ್ಪಿ  ಬೆಲ್ಜಿಯಂ ಕೈಗೆ ಬಂತು.

 ಮೊದಲಿಗೆ  ಹಿಡಿತ ತೆಗೆದುಕೊಳ್ಳಲು ಕಷ್ಟ ಪಟ್ಟ ಬೆಲ್ಜಿಯಂ ಜನ  ಕಂಡು ಕೊಂಡ ಅತ್ಯಂತ ಸರಳ ಮತ್ತು ಪ್ರಚಲಿತ ವಿದಾನವೆಂದರೆ..    ಒಡೆದು  ಆಳು ( "DIVIDE n RULE").

ಒಂದಾಗಿದ್ದ ಜನರನ್ನು ೩  ಗುಂಪಾಗಿ  ವಿoಗಡಿಸಿದರು..
ವಿoಗಡನೆಗೆ ಬಳಸಿದ ಮಾಪನಗಳು  ಮೂಗಿನ ಉದ್ದ,  ಕಣ್ಣಿನ  ಬಣ್ಣ , ಕಿವಿ ಉದ್ದ,  ಚರ್ಮದ ಬಣ್ಣ ,  ಶರೀರದ ಉದ್ದ
ಹೀಗೆ ಅನೇಕ ಮಾಪನ ಬಳಸಿ ಒಂದಾಗಿದ್ದ ಜನರನ್ನು ಬೇರ್ಪಡಿಸಿದರು.   ಇ ಗುಂಪಿನಲ್ಲಿ  ಬಿಳಿ ಇರುವ ಜನರೆ ಇಲ್ಲಿನ ನಿಜವಾದ ಹಕ್ಕುದಾರರು , ಇತರರು ಇವರ ಕಲುಷಿತ ಜನರು ಎಂದು ನಂಬುಗೆ ಬರಸಿದರು. ಆ ಜನರಿಗೆ ಮಾತ್ರ ಅಧಿಕಾರವನ್ನು ಕೊಟ್ಟರು.
 ಇವತ್ತಿಗೂ ಬಿಳಿ ಚರ್ಮದವರು ಹೇಳಿದರೆ ಅದು ವೇದ ವಾಕ್ಯ ಎನ್ನುವ ನಂಬುಗೆ ನಮ್ಮಲ್ಲೂ ಇದೆ. ಇನ್ನು ಆಗಿನ ಕಾಲದಲ್ಲಿ ಅದರ ತೀವ್ರತೆ ಇನ್ನು ಹೆಚ್ಚು ಇತ್ತು.   ಇ ವಿಂಗಡನೆಯನ್ನು ಬೇಡ ಎನ್ನುವ , ನಾವೆಲ್ಲರೂ ಒಂದೆ ಎನ್ನುವ ಭಾವನೆ ಮಾಯವಾಗಿ, ನಾವು ಬೇರೆ ಎನ್ನುವ ಯೋಚನೆ  ಆ ಜನರ ಮನಸ್ಸಿನಲ್ಲಿ ಬೇರುರಿತು.

ಅಧಿಕಾರ ಸಿಕ್ಕ ಗುಂಪು, ಇತರ ಗುಂಪನ್ನು ಕೀಳಾಗಿ ಕಾಣುವುದು, ಆ ಗುಂಪುಗಳಿಗೆ  ಹಿಂಸೆ ಮಾಡುವುದು ಶುರು ಮಾಡಿತು. ಇದಕ್ಕೆ ಬೆಲ್ಜಿಯಂ ಜನರ ಪ್ರಚೋದನೆ ಇದ್ದ ಕಾರಣ ಅದರ ಸ್ವರೂಪ ಹೆಚ್ಚಾಗಿತ್ತು.  ೧೦% ಇದ್ದ ಜನರು  ೮೫% ಜನರನ್ನು ಆಳುವ ಸ್ಥಿತಿಗೆ ಬಂದರು.  ಬಹುಮತ ಇದ್ದ ಜನರಿಗೆ  ಯಾವ ಸುಕರ್ಯ ಸಿಗದ ಹಾಗೆ ಮಾಡಿದ್ದರು. ಇದರಿಂದ ಅಲ್ಲಿ  ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ  ಆಗದ ಹಾಗೆ ಮಾಡಿ ಅಲ್ಲಿಂದ ಜಾಗ ಕಿತ್ತರು ಬೆಲ್ಜಿಯಂ ಜನರು.

ಆದರೆ ಮುಂದೆ ಆಗಿದ್ದೆ ಬೇರೆ,  ಜಗತ್ತಿನಲ್ಲಿ  ಅತಿ ದೊಡ್ಡ  ಜನಾಂಗೀಯ ದಂಗೆ ಆಗಿ , ಒಬ್ಬರನ್ನು ಒಬ್ಬರು ಕೊಂದು, ಹೆಣಗಳ ರಾಶಿಯೇ ಬಿದ್ದಿತ್ತು.  ಒಮ್ಮೆ ಒಂದಾಗಿ ಬಾಳಿದ್ದ ಜನರು ಇವತ್ತಿಗೂ ಒಂದಾಗಿಲ್ಲ. ..  ಆ ನಾಡಿನಲ್ಲಿ ನೀರಿಗಿಂತ ಹೆಚ್ಚು ನೆತ್ತರು ಹರಿದಿದೆ.
 ಮೊನ್ನೆ ನಡೆದ  ಆಂದ್ರಪ್ರದೇಶ ಒಡೆದ ರೀತಿಯನ್ನು ನೋಡಿದರೆ ಆಫ್ರಿಕಾ ಗಟನೆ ಜ್ಞಾಪಕ ಬಂತು.

ಚರಿತ್ರೆಯಲ್ಲಿ ಇಂತಹ ಗಟನೆಗಳು  ನಡೆಯುತ್ತಾ ಇವೆ, ದುರಂತವೆಂದರೆ ಹಿಂದೆ ಇ ಒಡೆದು ಆಳುವ ನೀತಿಯನ್ನು ಪರಕೀಯರು ಮಾಡುತ್ತಾ ಇದ್ದರು, ಇಂದು ನಮ್ಮ ದೇಶದವರೇ ಮಾಡುತ್ತಾ ಇದ್ದಾರೆ.

Saturday, September 15, 2012

ಜಾತಿ/ಧರ್ಮ ರಹಿತ ಕನ್ನಡಿಗರ ಸಮಸ್ಯೆಗೆಗಳು ಸಮಸ್ಯೆ ಅಲ್ಲವೇ ?




ಒಂದು ವರುಶದ ತನಕ ಬ್ಲಾಗ್ ಮಾಡುವುದು ಬೇಡ ಎಂದುಕೊಂಡಿದ್ದೆ, ಆದರೆ ನಮ್ಮ ರಾಜ್ಯ ಸರಕಾರದ ಕನ್ನಡಿಗರನ್ನು ನಡೆಸುಕೊಳ್ಳುತ್ತ ಇರುವ ರೀತಿ ಮತ್ತು ಆಡಳಿತ ವೈಫಲ್ಯ ಎಲ್ಲವನ್ನು ಸಹಿಸಿಕೊಂಡಿದ್ದೆ, ಆದರೆ ಮೊನ್ನೆ ಮನ ತಡಿಯಲಿಲ್ಲ. ೨ ದಿನಗಳಿಂದ ಕೆ ಎಸ್ ಆರ್ ಟಿ.ಸಿ ಮತ್ತು ಬಿ.ಎಂ.ಟಿ.ಸಿ ಸಂಸ್ಥೆಗಳ ಮುಶ್ಕರ ನಡೆಯುತ್ತಿದೆ,  ಕೆಲವು ಮಾನವೀಯ ಬೇಡಿಕೆಗಳನ್ನು  ೧೬ ವರುಶಗಳಿಂದ ಕೇಳುತ್ತ ಇರುವ ಸಂಗಟನೆಗಳು ಒಂದೆಡೆಯಾದರೆ ಇನ್ನೊಂದಡೆ ಇದರ ತೊಂದರೆಯನ್ನು ಅನುಭವಿಸುತ್ತ ಇರುವ ಸಾಮಾನ್ಯ ಜನ.

ಇದು ಒಂದು ಆಡಳಿತದಲ್ಲಿ ಸರ್ವೆ ಸಾಮಾನ್ಯ, ಒಂದು ಸಂಸ್ಥೆಯ ನೌಕರರು ೧೬ ವರುಶಗಳ ನಂತರ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದರೆ ಇದು ಒಂದು ರೀತಿ ಸಹನೆಯ ಕಟ್ಟೆ ಒಡೆದು ಜ್ವಾಲಾಮುಖಿ ಸ್ಪೋಟಿಸಿದ ಹಾಗೆ. ಅಲ್ಲಿ ತನಕ ಎಂದರೆ boiling point ತನಕ ಬಿಟ್ಟ್ಟಿರುವುದು ಆಡಳಿತ ಯಂತ್ರದ ದೊಡ್ಡ ವೈಫಲ್ಯ. ಈ ಬೇಡಿಕೆಗಳು ಮಂತ್ರಿಗಳಿಗೆ ಗೊತ್ತಿರಲಿಲ್ಲವೇ, ಇಲ್ಲ ೩೬ ಗಂಟೆಗಳ ಸೇವೆ
ಮಾಡುವುದು ಬೇಡ ಎನ್ನುವ ಬೇಡಿಕೆ ಅಮಾನವೀಯವೇ ?

ಈಶಾನ್ಯ ಭಾರತದ ಜನರು ಗುಳೆ ಹೋದರೆ, ಅವರಕ್ಕಿಂತ ಮುಂಚೆ ನಮ್ಮ ಮಂತ್ರಿ ಮಹೋದಯರು ಹೋಗಿ ಅವರು ಅಂಗಲಾಚಿದ್ದು,
ಸಾಲದಕ್ಕೆ ಅವರ ರಾಜ್ಯಕ್ಕೆ ಬೇಟಿಕೊಟ್ಟು, ದಯವಿಟ್ಟು ಬನ್ನಿಪ್ಪ, ನೀವು ಇಲ್ಲದೆ ನಮ್ಮ ಕರುನಾಡಿನಲ್ಲಿ ಬೆಳ್ಳಿಗ್ಗೆ ಆಗುತ್ತಿಲ್ಲ, ಕೋಳಿ ಕೂಗುತ್ತಿಲ್ಲ ಎಂದು ಬೇಡಿಕೊಂಡಿದ್ದು ನೋಡಿದರೆ, ಆ ಜನರು ಇಲ್ಲದೆ ನಾವು ಬದುಕುವದಕ್ಕೆ ಆಗುವದಿಲ್ಲ ಎನ್ನುವ ಹಾಗೆ ಇದೆ.
ಮೊನ್ನೆ ಯಾರೊ ಒಬ್ಬ  ಕಾವಾಲು ಕಾಯುವವನಿಗೆ ಕನ್ನಡ ಕಲಿ ಎಂದಾಗ,   ಅಲ್ಲಿಯವನು ಹೇಳುತ್ತ ಇದ್ದ,  ನಾವೇಕೆ ಕಲಿಯಬೇಕು ಅಂತ. ಇಲ್ಲಿ ಜೀವನ ಮಾಡುತ್ತ ಇದ್ದೀಯಲ್ಲ ಅದಕ್ಕೆ ಅಂತ ಹೇಳಿದಕ್ಕೆ, ನಾವೇನು ಗತಿ ಇಲ್ಲದೇ ಬಂದಿಲ್ಲ, ನಿಮ್ಮ ಮುಖ್ಯಮಂತ್ರಿ( ಅಶೋಕನನ್ನು ಹಾಗೆ ಸಂಬೋಧಿಸಿದ) ನಮ್ಮ ಊರಿಗೆ ಬಂದು ಕೇಳಿಕೊಂಡಿದಕ್ಕೆ ಬಂದಿದ್ದೀವಿ, ನಾವು ಬಂದು ಸಹಾಯ ಮಾಡುತ್ತ ಇದ್ದೀವಿ ಅಂತ ಒದರಿದ. ಗೊತ್ತು ಗುರಿ ಇಲ್ಲದೆ ನಮ್ಮ ಪ್ರತಿನಿಧಿಗಳು ಮತ್ತು ದೇಶಭಕ್ತರು ಮಾಡುವ ಕೆಲಸಗಳು ಹೇಗೆ ತಿರುಗುಬಾಣ ಆಗುತ್ತದೆ ಎಂದು ಇದರಿಂದ ತಿಳಿಯುತ್ತದೆ.

ಇದೆ ಅಕ್ಕರೆ ಮತ್ತು ಎನು ಬೇಡ ಮಂತ್ರಿಯ ಕೆಲ್ಸವನ್ನು ಬೆಂಗಳೂರಿನಲ್ಲಿ ಕಸ ಸಮಸ್ಯೆ ಆದಾಗ ಇಲ್ಲ ಬಿ.ಎಂ,ಟಿಸಿ ಮುಶ್ಕರದಲ್ಲಿ ತೋರಿಸಿದ್ದರೆ ಕನ್ನಡಿಗರಿಗೆ ಇಂದು ಸಮಸ್ಯೆ ಆಗುತ್ತ ಇರಲಿಲ್ಲ. ಮಂತ್ರಿಯಗಿರಿ ಎನ್ನುವುದು ಆಯಾ ವಿಭಾಗಕ್ಕೆ ರಾಜ ಇದ್ದ ಹಾಗೆ,
ಎಲ್ಲಾ ಚೆನ್ನಾಗಿ ನಡೆದು, ಒಳ್ಳೆ ಹೆಸರು ಬಂದರೆ ಇಲ್ಲ ಪ್ರಶಸ್ತಿ ಬಂದರೆ ದಿಲ್ಲಿಗೆ ಹೋಗಿ ತೆಗೆದುಕೊಳ್ಳುವದಕ್ಕೆ ಆಗುವ ಮಂತ್ರಿಗೆ
ಇದು ನಡೆಯುತ್ತದೆ ಎನ್ನುವ ಚಿಕ್ಕ ಕಲ್ಪನೆ ಇಲ್ಲವೇ. ಇಲಾಖೆಯಲ್ಲಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಗೊತ್ತಿಲ್ಲವೇ ?
ಸಂಧಾನಕ್ಕೆ ತಾವು ಇಳಿಯದೇ ಅಧಿಕಾರಿಗಳನ್ನು ಚೂ ಬಿಟ್ಟು, ಪರಿಸ್ಥಿತಿ ಮಿತಿಮೀರಿ ಹೋಗುವ ಹಾಗೆ ಮಾಡಿದ್ದು ಯಾವ ಪರಿಯ
ಆಡಳಿತ. ದೂರದ ಊರಿಗೆ ಹೋಗಿ ಅಲ್ಲಿ ಬೇಟಿ ಮಾಡಲು ಆಗುತ್ತದೆ ಎಂದರೆ ತಮ್ಮ ಇಲಾಖೆಯವರನ್ನು ಬೇಟಿ ಮಾಡುವುದು
EGO ಪ್ರಶ್ನೆ ಆಗುತ್ತದೆ.

ಕನ್ನಡಿಗರು ಕನ್ನಡ ನೆಲದಲ್ಲೇ ತಬ್ಬಲಿ ಎನ್ನುವುದು ಕೆಲವು ೪ ವರುಶಗಳಿಂದ ಹೆಚ್ಚು ಗೊತ್ತಾಗುತ್ತಿದೆ.

೧. ಕನ್ನಡಿಗರ ಸಮಸ್ಯೆಗಳನ್ನು ಪರಿಹರಿಸುವಕ್ಕಿಂತ ಬೇರೆ ರಾಜ್ಯದ ಜನರ ಸಮಸ್ಯೆಯೆ ಹೆಚ್ಚು.
೨. ಕನ್ನಡಿಗರು ಹಸಿವಿನಿಂದ ಗುಳೆ ಹೋದರೆ ಅದು ಚಟ, ಅದೇ ಬೇರೆ ರಾಜ್ಯದವರು ಅವರ ಮನೆಗೆ ಹೋದರೆ ಅದು ದೇಶದ ಸಮಸ್ಯೆ.
೩. ಕನ್ನಡಿಗರು ಬರ ಹಸಿವಿನಿಂದ ಒದ್ದಾಡುತ್ತ ಇದ್ದರೂ, ಅಧಿಕಾರಕ್ಕೆ ಯಾರು ಬರಬೇಕು ಎನ್ನುವದರಲ್ಲೇ ನಮ್ಮ ಸರಕಾರ ಬಿಜಿ.
೪. ಕನ್ನಡ ಶಾಲೆಗಳ ಮುಚ್ಚುವಿಕೆ ಮತ್ತು ಖಾಸಗಿ ಸಂಸ್ಥೆಗಳಿಗೆ ಅದನ್ನು ವಹಿಸುವ ಪರಿಭಾರಿಕೆ.
೫. ಕನ್ನಡ/ಕರ್ನಾಟಕ/ಕನ್ನಡಿಗರ ಸಮಸ್ಯೆಗಳಿಗೆ ಸಂಸತ್ತಿನಲ್ಲಿ ದನಿ ಎತ್ತದಿರುವುದು.
೬. ಅವ್ಯಹಿತವಾಗಿ ಹಿಂದಿ ಹೇರಿಕೆಗೆ ಪ್ರೋತ್ಸಾಹ ಕೊಡುವುದು.

ಒಟ್ಟಿನಲ್ಲಿ ಮೂಡುವ ಪ್ರಶ್ನೆ ಒಂದೇ, ಕನ್ನಡ ನೆಲದಲ್ಲಿ ಕನ್ನಡಿಗನಾಗಿ ಹುಟ್ಟಿದ್ದೇ ತಪ್ಪಾ ?
WE ARE WITH YOU ಅಂತ ಕನ್ನಡಿಗರಿಗೂ ಹೇಳುವ ದಿನಗಳು ಬರುವುದು ಯಾವಾಗ ??



Sunday, November 06, 2011

ವಲಸಿಗನ ೨ ಗುಣ ..

ಎರಡು ವಿಡಿಯೋ ನೋಡಿ , ವಲಸಿಗರ ಮನಸ್ಥಿತಿ ಎರಡರಲ್ಲಿ ವ್ಯಕ್ತವಾಗಿದೆ.

ಒಂದರಲ್ಲಿ ಮೆಟ್ರೋ ಕಾಯುವ ವಾಚ್ಮಾನ್ ತಾನು ಇಲ್ಲಿಗೆ ಬಂದಿರುವುದು ಸರಿ, ಇಲ್ಲಿನ ಬಾಷೆ ಕಲಿಯಬೇಕಾಗಿಲ್ಲ ಯಾಕೆಂದರೆ ಅದು ಚೆನ್ನಾಗಿಲ್ಲ ಎಂದು ಹೇಳುವ ಕೀಳು ಮನಸ್ಥಿತಿ ಕಾಣುತ್ತದೆ.


ಇನ್ನೊಂದರಲ್ಲಿ



ಇಲ್ಲಿಗೆ ಬಂದು ತನ್ನ ಬಾಳನ್ನು ಕಂಡುಕೊಂಡಿರುವ ವಲಸಿಗ ಹೇಳುವ ಮಾತಿದು.
The outsiders who come to Karnataka should have the sense of belonging to this state. They need to integrate with the state by sincerely making an attempt to learn Kannada.


ಇ ದೇಶ ಕಟ್ಟಿರುವುದೇ ಅನೇಕತೆಯಲ್ಲಿ ಏಕತೆ ಅನ್ನೋ ಮಂತ್ರ ಮೇಲೆ. ಜಗತ್ತಿನಲ್ಲಿ ಎಲ್ಲಿಗೆ ಹೋಗುತ್ತಿವಿ ಅಲ್ಲಿಯವರ ತರ ಬದುಕಬೇಕು ಎಂದು. ಆದರೆ ಇ global phenomena ಗೊತ್ತಿಲ್ಲದ ಬುದ್ದಿಹಿನರು, ಅವಿವೇಕಿಗಳು ಅನೇಕತೆಯನ್ನು ಒಡೆದು ಹಾಕಿ ಇ ದೇಶದ ಬುಡಕ್ಕೆ ಕೊಡಲಿ ಹಾಕುತ್ತ ಇರುವುದನ್ನು ನಾವು ಕಾಣುತ್ತ ಇದ್ದೇವೆ. ಅವರ ಕೆಟ್ಟ ಮನಸ್ಸುಗಳು ಬದಲಾಗಿ ೨ ನೆ ವಿಡಿಯೋದಲ್ಲಿ ತೋರಿಸಿರುವ ಹಾಗೆ ಬದಲಾದರೆ ನಮ್ಮ ದೇಶಕ್ಕೆ ನಿಜಕ್ಕೂ ಒಳಿತು.

Tuesday, November 01, 2011

ನಮ್ಮತನವನ್ನು ಬಿಟ್ಟುಕೊಡುವುದು ದೊಡ್ಡತನವಲ್ಲ ದಡ್ಡತನ



ಮೊನ್ನೆ ಉಡುಪಿ ಕಡೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ತಿಂಡಿ-ಊಟ ಮಾಡುವ ಆಸೆ ಆಯಿತು, ಶ್ರೀ ಕೃಷ್ಣನ ದೇವಾಸ್ಥಾನದಲ್ಲಿ ಪರಿಚಯವಾದ ವಿದೇಶದ ಮೊರೆನಾ-ಸರ್ಜಿಯೋ ದಂಪತಿಗಳ ಜೊತೆ ಕೂಡ ಊಟ, ಇಲ್ಲಿನ ಸಂಸ್ಕೃತಿ , ಇತಿಹಾಸದ ಬಗ್ಗೆ
ಮಾತುಕತೆಯಾಯಿತು. ಕರ್ನಾಟಕ ಮತ್ತು ಭಾರತದ ಬಗ್ಗೆ ಅನೇಕ ತಪ್ಪು ಕಲ್ಪನೆಗಳನ್ನು ಇಟ್ಟುಕೊಂಡ ಆ ದಂಪತಿಗಳಿಗೆ
ನಮ್ಮ ದೇಶ ಯುರೋಪ್ ಮಾದರಿಯಲ್ಲಿ ಇದೆ ಎಂದು ತಿಳಿಸಿದಾಗ ಅವರು ಆಶ್ಚರ್ಯ ಪಟ್ಟಿದ್ದು ಉಂಟು. ದೇವರ ದರ್ಶನ
ಮುಗಿದ ನಂತರ ಒಟ್ಟಿಗೆ ನಾವು ಅಲ್ಲೇ ಹತ್ತಿರ ಇದ್ದ ವುಡಲ್ಯಾಡ್ಸ ಉಪಹಾರ ಗೃಹಕ್ಕೆ ಹೋದೆವು.

ನಾನು ದೋಸೆ ಹುಟ್ಟಿದ್ದು ಇಲ್ಲೇ, ಕರ್ನಾಟಕದ ಎಲ್ಲಾ ಕಡೆ ಉಡುಪಿ ಹೋಟೆಲ್ ಇರುವುದು, ಅದು ಇದು ಅಂತ ಹೇಳಿದ್ದೆ.
ಮ್ಯಾನೆಜರ್ ಬಂದು ಎನು ಬೇಕು ಎಂದಾಗ ಗೋಳಿ ಬಜ್ಜೆ, ಮಂಗಳೂರು ಬನ್ ಮತ್ತು ನೀರು ದೋಸೆ ಎಂದೆ. ಅದಕ್ಕೆ ಅವನು ಇಲ್ಲ ಸರ್ ನಮ್ಮಲ್ಲಿ ಇದು ಯಾವುದು ಸಿಗುವದಿಲ್ಲ, ದಯವಿಟ್ಟು ಮೆನು ನೋಡಿ ಎಂದ. ಅಲ್ಲಿ ನೋಡಿದರೆ ಬರೇ ಉತ್ತರ ಭಾರತದ ಖಾನವಳಿ ಮೆನು ಇದ್ದ ಹಾಗೆ ಇದೆ. ಆ ದಂಪತಿಗಳು ಇಲ್ಲಿ ಎನನ್ನು recommend ಮಾಡುತ್ತೀರಾ ಎಂದು ಕೇಳಿದರೆ ಮತ್ತೆ ಉತ್ತರ ಭಾರತದ ತಿಂಡಿ ತಿನಿಸುಗಳೇ ಕೇಳಿ ಬಂದವು. ನಿಜಕ್ಕೂ ಇದು ಬಹಳ ಆಶ್ಚರ್ಯವಾಯಿತು. ಇದೇ ಕಥೆ ಅದೇ ಊರಿನಲ್ಲಿ ಇರುವ ಡಯಾನದು ಕೂಡ.
ಇವೆರೆಡು ಉತ್ತಮ ಹೋಟೆಲುಗಳು, ಅಲ್ಲಿ ಕುಳಿತುಕೊಳ್ಳಲು ಮತ್ತು ಒಳವಾತವರಣ ಚೆನ್ನಾಗಿದೆ. ಆದರೆ ಉಡುಪಿಯ ಪ್ರಸಿದ್ಧ ಖಾದ್ಯಗಳನ್ನು ಅಲ್ಲಿ ಮಾರುವುದು ಅವರಿಗೆ ಕೀಳರಿಮೆ ಅನಿಸಿದೆ ಯಾಕೋ.

ಆ ಊರಿಗೆ ಬರುವುದು ಹೆಚ್ಚಾಗಿ ಪ್ರವಾಸಿಗರು, ಅವರಿಗೆ ಅವರ ಊರಿನಲ್ಲಿ ಸಿಗದ ನಮ್ಮ ಖಾದ್ಯಗಳನ್ನು ಉಣಬಡಿಸುವುದು ಬಿಟ್ಟು
ನಾನು, ಪಾನು ಎಂದು ಕೊಂಡು ಉತ್ತರ ಭಾರತದ ಖಾದ್ಯಗಳನ್ನೇ ನಮ್ಮ ಖಾದ್ಯಗಳು ಅನ್ನುವ ಹಾಗೆ ಉಣಬಡಿಸಿದರೆ ನಷ್ಟ ಅಲ್ಲಿನ ಜನಕ್ಕೆ. ಇದು ನನಗೆ ಕೀಳರಿಮೆಯ ಪ್ರತೀಕ ಅನಿಸಿತು, ಅಲ್ಲಿನ ಸ್ಪೆಷಲ್ ಖಾದ್ಯಗಳನ್ನು hype ಮಾಡಿ ಗ್ರಾಹಕರಿಗೆ ಕೊಡುವ ಬದಲು ಎಂಜಲನ್ನು ಮಾರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಮುಖ್ಯವಾಗಿ ಅದನ್ನು ತಿನ್ನಬೇಕೆಂಬ ಬಯಕೆಯಲ್ಲಿ ಇದ್ದ ಸರ್ಜಿಯೋ-ಮೊರೆನಾ ದಂಪತಿಗಳಿಗೆ ಆಕಾಶದಷ್ಟು ಆಸೆ ತೋರಿಸಿ ನಿರಾಸೆ ಮೂಡಿಸಿದ್ದು ಪಿಚ್ಚೆನಿಸಿತು.

Monday, October 31, 2011

ಕರ್ನಾಟಕ ರಾಜ್ಯೊತ್ಸವದ ಶುಭಾಶಯಗಳು

ಒಂದು ವರುಷದ ಕೆಲ್ಸಗಳನ್ನು ಮೆಲುಕು ಹಾಕಿದರೆ ಮತ್ತು ಮುಂದಿನ ವರುಶಕ್ಕೆ ಮಾಡಬೇಕಾದ ಕೆಲ್ಸಗಳನ್ನು ನೆನಸಿಕೊಂಡರೆ ಕೆಳಗಂಡ ವಿಶಯಗಳು ಅನಿಸುತ್ತದೆ.

೧. ಗ್ರಾಹಕ ಸೇವೆಯಲ್ಲಿ ಎಲ್ಲೇ ಹೋದರು ಕನ್ನಡ ಕೇಳಬೇಕು. ಕೊಡದಿದ್ದರೆ ಜಾಗೃತ ಗ್ರಾಹಕರಿಗಗೆ ಒಂದು ಮಿಂಚೆ ಕಳಿಸಿ
ಪ್ರಕರಣ ಮತ್ತು ಯಾರಿಗೆ ಹಕ್ಕೊತ್ತಾಯ ಮಾಡಬೇಕೆಂದು ಕೇಳಬೇಕು.

ಇವತ್ತಿನ ರಾಜ್ಯೋತ್ಸವ ಸಂದೇಶದಲ್ಲಿ ಎಲ್ಲಾ ಕನ್ನಡ ಅನ್ನದ ಭಾಶೆ ಅಗಬೇಕು ಎಂದು ಹೇಳುವವರೇ,,, ಅದರೆ ಯಾರು ಗ್ರಾಹಕ ಸೇವೆಯ ಆಯಾಮ ಮತ್ತು ಅದರಿಂದ ಕನ್ನಡ ಅನ್ನದ ಭಾಷೆ ಆಗುವ ಒಂದು ಪರಿ ಬಗ್ಗೆ ಚಕಾರ ಎತ್ತದಿರುವುದು ವಿಪರ್ಯಾಸ. ಕನ್ನಡದಲ್ಲಿ ಸೇವೆ ಕೇಳಿದಾಗ, ಕನ್ನಡ ಬರುವರನ್ನು ಕೆಲ್ಸಕ್ಕೆ ತೆಗೆದುಕೊಳ್ಳುತ್ತಾರೆ , ಉದ್ಯೋಗಕ್ಕೆ ಕನ್ನಡವೂ ಒಂದು ಮಾನದಂಡ ಆಗುತ್ತದೆ. ಬ್ರಿಟಿಷ್ ಎರವೇಸನಲ್ಲಿ ಕನ್ನಡದಲ್ಲಿ ಘೋಷಣೆ ಮಾಡುವ ಗಗನಸಖಿ ಹೇಳಿದ್ದು ನನಗೆ ಕನ್ನಡ ಬರುತ್ತದೆ ಎಂಬುವದಕ್ಕೆ ಈ ಕೆಲಸ ಸಿಕ್ಕಿದೆ ಎಂದು.

೨. ಕನ್ನಡ ವಿಶಯದ ಯಾವುದೇ ಹೊಸ ವಿಷಯಕ್ಕೆ ನಾವು ಮನವನ್ನು ಮುಕ್ತವಾಗಿ ತೆರೆದಿಟ್ಟುಕೊಳ್ಲಬೇಕು. ಹಿಂದಿನ ಕಾಲದ ಮಡಿವಂತಿಕೆ ಮತ್ತು ಹೀಗೆ ಇರಬೇಕೆಂಬ ಒಭಿರಾಯ ಕಾಲದ ನಿಯಮಗಳನ್ನು ಕಾಲಕ್ಕೆ ತಕ್ಕ ಹಾಗೆ ನವೀಕರಣಗೊಳಿಸಬೇಕು.

೩. ಕನ್ನಡಿಗರ ಮನರಂಜನೆ ಕನ್ನಡದಲ್ಲೇ ಆಗಬೇಕು, ಎಲ್ಲಾ ರೀತಿ ಅದು ಮಕ್ಕಳ ಡೋರಾ ಆಗಿರಬಹುದು , ಟಾಪ್ ಶಾಟ್ಸ ಇಲ್ಲಾ ಹೌ ಐ ಮೆಟ್ ಯುವರ್ ಮದರ್ ಸೀರಿಯಲ್ ಇರಬಹುದು, ೨೦೧೨, ಅವತಾರ್ ಚಿತ್ರಗಳು ಇರಬಹುದು. ಇವು ಕನ್ನಡಲ್ಲೇ ಸಿಗಬೇಕು.
ಇದು ಕನ್ನಡ ಗ್ರಾಹಕ ಹಕ್ಕೊತ್ತಾಯ.

೪. ಪರಭಾಷ ಹೇರಿಕೆಯನ್ನು ಹಿಮ್ಮೆಡಬೇಕು. ಅದನ್ನು ಪರಭಾಷ ದ್ವೇಷದಿಂದ ಅಲ್ಲ, ನಮ್ಮ ತನವನ್ನು ಉಳಿಸಿಕೊಳ್ಳುವ ಮನಸ್ಸಿನಿಂದ. ನಮ್ಮ ಭಾಷೆಯನ್ನು ಪ್ರೀತಿಸುತ್ತಿನಿ ಎಂದರೆ ಇತರ ಭಾಷೆಯನ್ನು ದ್ವೇಶಿಸುತ್ತಿನಿ ಎಂದು ಅಲ್ಲ ಅಲ್ವಾ ?.

೫. ಕನ್ನಡ ಎಂದರೆ ಕೇವಲ ಸಾಹಿತ್ಯವಲ್ಲ, ಅದು ಜೀವನಕ್ಕಿಂತ ದೊಡ್ಡದು, ಅನೇಕ ಆಯಮಗಳು ಇರುತ್ತದೆ. ಆದರೆ ಮೊದಲಿಂದ ನಾವು ಕನ್ನಡ ಅಂದರೆ ಸಾಹಿತ್ಯ, ಕನ್ನಡ ಗರಿಮೆ ಎನು ಎಂದರೆ ಇಷ್ಟು ಜ್ಞಾನಪೀಠ, ಇಷ್ತು ಪಂಪ ಪ್ರಶಸ್ತಿ, ಇಷ್ತು ಸರಸ್ವತಿ ಸಮ್ಮಾನ್ ಎಂದು ಒಂದಡೆ ಹೇಳಿಕೊಂಡು , ಕನ್ನಡಿಗರು ಎಂದರೆ ೧೦-೧೫ ಕವಿ ಹೆಸರನ್ನು ಹೇಳಿ ಮುಗಿಸುತ್ತೆವೆ. ಇದನ್ನು ಮೊದಲು ಬಿಡಬೇಕು.

೬. ಹೊಸ ಹೊಸ ಅವಿಶ್ಕಾರದಲ್ಲಿ ಹೊಸ ಹೊಸ ರೀತಿಯಲ್ಲಿ ಅಂತರ್ಜಾಲವನ್ನು ನೊಡುತ್ತ ಇದ್ದೆವೆ ಎಲ್ಲಾಡೆ ಕನ್ನಡ ಭಾಷೆಯಲ್ಲಿ ( ಕನ್ನಡ ಲಿಪಿಯೇ ಆಗಬೇಕಾಗಿಲ್ಲ) ವ್ಯವಹರಿಸುವ ಹಾಗೆ ಆಗಬೇಕು.

೭. ವಿಕ್ಷನರಿ ಇಂತಹ ಕಡೆ ಕನ್ನಡವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವುದು. ಇದಕ್ಕೆ ಬೇಕಾದ ಬಾಟ್ ಮತ್ತು ಅಟೋಮೇಶನ್ ಕಡೆ ಹೆಚ್ಚು ಜನರನ್ನು ಸೆಳೆಯುವ ಹಾಗೆ ಮಾಡವುದು.

೮. ಹೆಚ್ಚು ಹೆಚ್ಚು ಕನ್ನಡ ಪರಿಸರವನ್ನು ಪಸರಿಸುವುದು, ನಮ್ಮ ನಮ್ಮ ಸಂಸ್ಥೆಯಲ್ಲಿ ರಾಜ್ಯೋತ್ಸವ ಮಾಡುವ ಹಾಗೆ, ತಿಂಗಳಲ್ಲಿ
ಒಮ್ಮೆ ಸೇರುವ ಹಾಗೆ ಚಿಕ್ಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.

೯. ಕನ್ನಡಿಗರ ಓಟಬ್ಯಾಂಕ್ ಆಗಬೇಕು, ನಾವು ಜಾತಿ, ಧರ್ಮದಿಂದ ನೋಡದೇ ಕನ್ನಡದಲ್ಲಿ ರಾಜಕೀಯ ಮಾಡದ ಎಲ್ಲಾ ರಾಜಕೀಯ ಪಕ್ಷಗಳನ್ನು ತಿರಸ್ಕರಿಸುವ ಹಾಗೆ ಆಗಬೇಕು.

೧೦. ಕನ್ನಡೇತರರಿಗೆ ಕನ್ನಡ ಕಲಿಸುವ ಕಾರ್ಯಕ್ಕೆ ನಾವು ಮುಂದಾಗಬೇಕು.

ಇಲ್ಲಿವರೆಗೂ ನಾವು ಹೆಕ್ಕಿರುವುದು ಒಂದು ಮುತ್ತಾದರೆ ಮಿಕ್ಕಿದೆ ಸಾಗರ ಎಂಬುದನ್ನು ಮರೆಯುವುದು ಬೇಡ.

Saturday, June 18, 2011

ಜನತೆ ದುಡ್ಡು ಯಡ್ಡಿ ಜಾತ್ರೆ




ನಿಜಕ್ಕೂ ಇದನ್ನು ಯಾವ ಮಾಧ್ಯಮಗಳು ಪ್ರಶ್ನೆ ಮಾಡುವದಿಲ್ಲ, ಯಾಕೆ ಎಂದರೆ ಸುಖಾಸುಮ್ಮನೆ ಜಾಹಿರಾತು ರೂಪದಲ್ಲಿ ಹಣ ಬರುತ್ತ ಇರುವಾಗ ಬೇಡ ಎನ್ನಲೂ ಪತ್ರಿಕೆಗಳು ದಡ್ಡರೇ. ಇದೇ ದೊಡ್ಡ ಫ್ಲೆಕ್ಸ ಆಗಿ ಬಂದಿದ್ದರೆ ಇಲ್ಲ ಇನ್ನೊಂದು ಮಾದರಿಯಲ್ಲಿ ಬಂದಿದ್ದರೆ ಇದೇ ಪತ್ರಿಕೆಗಳೂ ಜನರ ದುಡ್ಡಿನ ದುಂದುವೆಚ್ಚ ಎಂದು ಬೊಬ್ಬೆ ಹೊಡೆಯುತ್ತ ಇದ್ದವು. ಅಲ್ಲಿಗೆ ನಮ್ಮ ಮಾಧ್ಯಮಗಳ ಇಬ್ಬಂದಿತನ ಮತ್ತೊಮ್ಮೆ ಬಯಲಾಯಿತು.

ಸನ್ಮಾನ್ಯ ಮುಖ್ಯಮಂತ್ರಿಗಳಿಗೂ ಮತ್ತು ದೇವೆಗೌಡ ಕುಟುಂಬದವರಿಗೂ ಅದ್ಯಾವ ಪರಿಯ ನಂಟೋ, ಸದಾ ಇಬ್ಬರೂ ಎಲ್ಲೆ ಇರಲಿ ಹೇಗೆ ಇರಲಿ ಒಬ್ಬರ ಬಗ್ಗೆ ಇನ್ನೊಬ್ಬರು ಯೋಚಿಸುತ್ತ ಇರುತ್ತಾರೆ. ಅವರು ಎನು ಮಾಡುತ್ತ ಇರಬಹುದು, ಅವರ ಮಾತಿನ ಒಳಾರ್ಥವೇನು, ಎಲ್ಲಿ ಪೂಜೆ ಮಾಡುತ್ತ ಇದ್ದಾರೆ ಇಂತಹ ಮಾಹಿತಿ ಸಂಗ್ರಹಣೆಯಲ್ಲೇ ತಮ್ಮ ಅಮೂಲ್ಯ ಸಮಯವನ್ನು ಕಳೆಯುತ್ತ
,ರಕ್ಷಣೆಗೆ ದೇವರಿಗೆ, ದೇವತೆಗಳಿಗೆ, ಮಠಗಳಿಗೆ ಮತ್ತು ಮಠಾಧಿಪತಿಗಳಿಗೆ ತಮ್ಮ ಕೈಲಾದ ಸಹಾಯವನ್ನು ಜನರ ದುಡ್ಡಿನಲ್ಲಿ ಕೊಡುತ್ತ ಇರುತ್ತಾರೆ. ಅದರೂ ಅವರ ಕಷ್ತಗಳು , ಸಂಕಷ್ತಗಳೂ ಬಗೆಹರಿದಿಲ್ಲ.

ಮತ್ತೊಂದು ಹೊಸ ಸೇರ್ಪಡೆ ಎಂದರೆ ಇವತ್ತಿನ ಪತ್ರಿಕೆಗಳಲ್ಲಿ ಮಾನ್ಯ ಮುಖ್ಯಮಂತ್ರಿಗಳೂ ಬಹಿರಂಗ ಪತ್ರ ಬರೆದಿರುವುದು, ಸಾಲದಕ್ಕೆ ಅದನ್ನು ಕರ್ನಾಟಕ ವಾರ್ತೆ ಎಂದು ಜನರ ದುಡ್ಡಿನಲ್ಲಿ ಪ್ರಕಟಣೆ ಮಾಡಿಸಿದ್ದು.

* ಮೊದಲಿಗೆ ಇದು ಕುಮಾರ ಸ್ವಾಮಿಗಳ ಮತ್ತು ಯೆಡ್ಡಿಯ ವೈಯಕ್ತಿಕ ವಿಷಯ, ಇದರಲ್ಲಿ ರಾಜ್ಯದ ಜನತೆಗೆ ಯಾವ ಲಾಭ ಇಲ್ಲ.

* ಇದನ್ನು ಕರ್ನಾಟಕ ವಾರ್ತೆ ಎಂದು , ಜನತೆಯ ಹಣವನ್ನು ಪೋಲು ಮಾಡುವುದು ಎಷ್ಟರ ಮಟ್ಟಿಗೆ ಸರಿ ?

* ಸ್ವಂತ ಡುಡ್ಡಿನಲ್ಲಿ ಹಣ ಕೊಡಲು ಯೆಡ್ಡಿಗೆ ಹಣದ ಬರವೇ, ಇಲ್ಲ ಪಕ್ಷಕ್ಕೆ ಹಣದ ಬರವೇ ?

* ಯೆಡ್ಯುರಪ್ಪ ಮುಖ್ಯಮಂತ್ರಿ ಹುದ್ದೆ ಮತ್ತು ತಾವು ಒಂದೇ ನಾಣ್ಯದ ಎರಡು ಮುಖ ಎಂದುಕೊಂಡ ಹಾಗೆ ಇದೆ. ಅಧಿಕಾರ ದುರುಪಯೋಗಕ್ಕೆ ಇದಕ್ಕಿಂತ ಒಳ್ಳೆ ಉಧಾಹರಣೆ ಬೇಕೆ ?

*ಆ ಕಡೆ ಕುಮಾರ ಸ್ವಾಮಿಗೆ ಕೂಡ ಸದಾ ಯಡಿಯೂರಪ್ಪ ಅವರದೇ ಚಿಂತೆ, ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗೆ ಇಳಿಸಬೇಕು. ಒಟ್ಟಿನಲ್ಲಿ ಇಬ್ಬರ ಜಗಳದಲ್ಲಿ ಬಡವಾಗುತ್ತ ಇರುವುದು ನಮ್ಮ ಕರ್ನಾಟಕ ಜನತೆ ಅಷ್ಟೆ.

Friday, June 03, 2011

ಸುರೇಶಣ್ಣ ... ಚರ್ಚೆ ಮಾಡಿ ಆದರೆ ಬ್ರಾಂಡ್ ಮಾಡಬೇಡಿ


ಡಬ್ಬಿಂಗ್ ಬಗ್ಗೆ ಅನೇಕ ಚರ್ಚೆ ನಡೆಯುತ್ತ ಇದೆ, ಸಂಪಾದಕೀಯದಲ್ಲಿ ಇದರ ಬಗ್ಗೆ ಬರೆದಾಗ ಶ್ರೀ ಸುರೇಶ್ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಅನೇಕ ಬಾರಿ ಇ ವಿಷಯದಲ್ಲಿ ನಮಗೂ ಅವರಿಗೂ ಚರ್ಚೆ ಆಗಿದೆ. ಅವರು ಹೇಳಿದ್ದ ಕೆಲವು ವಿಷಯಗಳ ಬಗ್ಗೆ ನನ್ನ ಪ್ರತಿಕ್ರಿಯೆಯನ್ನು ಅದೇ ತಾಣದಲ್ಲಿ ಹಾಕಿದ್ದೆ .. ಅದೇ ಇಲ್ಲಿದೆ ನಿಮ್ಮ ಮುಂದೆ....

ಸುರೇಶ್ ಅವರೇLink

ಮೊದಲಿಗೆ ನೀವು ಚರ್ಚೆ ಆಗಬೇಕು, ಸಿಟ್ಟಿಲ್ಲಿದ್ದ, ಸಾವಧಾನದ ಮಾತು ಆಗಬೇಕು ಆಮೇಲೆ ಒಳ್ಳೆಯ ಅಭಿಪ್ರಾಯವನ್ನು ಒಪ್ಪಿಕೊಳ್ಳೊಣ ಎಂದಿರುವ ಮಾತು ದಿಟವಾಗಿದೆ, ಆದರೆ ನಿಮ್ಮ ಬರಹದಲ್ಲಿ ಅದು ಕಾಣುತ್ತ ಇಲ್ಲ ಅನ್ನುವುದು ಕೂಡ ವಾಸ್ತವ.
ನೀವು ಚರ್ಚೆ ಎಲ್ಲ ಆಗುವ ಮುಂಚೆಯೇ ಡಬ್ಬಿಂಗ್ ಅನ್ನುವುದು ಭೂತ, ಪಿಶಾಚಿ, ಸಂಸ್ಕೄತಿ ಅಪೋಸನ ಮಾಡುತ್ತದೆ ಎಂದು ಮತ್ತು ಡಬ್ಬಿಂಗ್ ಪ್ರೊತ್ಸಾಹಿಸುವವರನ್ನು ಕನ್ನಡ ದ್ರೋಹಿಗಳು , ಸಂಸ್ಕೃತಿ ಕೊಲ್ಲುವವರು ಎಂದು ಬ್ರಾಂಡ್ ಮಾಡಿ ಆಮೇಲೆ ನಿಮ್ಮ ವಾದವನ್ನು ಕನ್ನಡ ದ್ರೋಹಿಗಳ ಮಾತು ಕೇಳಬೇಡಿ, ಭೂತ ನಿಮಗೆ ಬೇಕೆ ಎನ್ನುವ ರೀತಿಯಲ್ಲಿ ವಾದ ಇಟ್ಟಿದ್ದೀರಾ. ಆದರೆ ಅವು ಡಬ್ಬಿಂಗ್ ಯಾಕೆ ಬೇಡ ಎನ್ನುವ ಪ್ರಶ್ನೆಯನ್ನಾಗಲಿ ಇಲ್ಲ ಹೇಗೆ ನಾವು ನಾಡದ್ರೋಹಿಗಳು ಆದೆವು ಎಂದಾಗಲಿ ತಿಳಿಸಿಕೊಡುವದಿಲ್ಲ . ನಾಳೆ ಈ ವಿಷಯದಲ್ಲಿ ಚರ್ಚೆ ಆದರೂ ನೀವು ಈ ವಿಷಯದಲ್ಲಿ ನೀವೇ ಕೊಟ್ಟಿರುವ ಪೂರ್ವಗ್ರಹಪೀಡಿತ ಹೊರತಾಗಿ ನೋಡುತ್ತೀರಾ ಎಂಬುದು ನನ್ನ ಸಂಶಯ.

ನೀವೆ ಒಂದು ಕಡೆ ಮತ ಚಲಾಯಿಸಿ ಎಂದು ಹೇಳಿ, ಅದು ನಿಮ್ಮ ವಿರುದ್ಧ ಬಂದಾಗ ಅದೊಂದೆ ಮಾನದಂಡವಲ್ಲ ಎನ್ನುವುದು ಎಷ್ತರ ಮಟ್ಟಿಗೆ ಸರಿ. ಇದು ಇಂಟರನೆಟ್ ಎಂಬ ವಿಶಾಲ ಪ್ರಪಂಚ, ಇಲ್ಲಿ ಜಗತ್ತಿನ ಎಲ್ಲಾ ಕನ್ನಡಿಗರೂ ಪಾಲ್ಗೊಳ್ಳಬಹುದು ಮತ್ತು ಒಂದು ವರ್ಗದ ಹಿಡಿತದಲ್ಲಿ ಇರದ ಪ್ರಪಂಚ. ಇದು ೨ ಬಾರಿಗೆ ಡಬ್ಬಿಂಗ್ ವಿಷಯದಲ್ಲಿ ಕನ್ನಡ ಗ್ರಾಹಕನು ಒಕ್ಕೊರಿಲಿನಲ್ಲಿ ತನಗೆ ಡಬ್ಬಿಂಗ್ ಬೇಕು ಎಂದು ಹೇಳಿದ್ದಾನೆ. ಇದನ್ನು ನೀವು ಕನ್ನಡಿಗ ಸಮಾಜದ ಬೇಡಿಕೆ ಎಂದು ಪರಿಗಣಿಸೊಲ್ಲ ಎಂದರೆ ನಿಜಕ್ಕೂ ಅಂತರ್ಜಾಲದಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ಇದು ಅವಮಾನ ಮಾಡಿದ ಹಾಗೆ.

ರಾಷ್ಟ್ರಪ್ರಶಸ್ತಿ ಬಂದ ಪುಟ್ಟಕ್ಕನ ಹೈವೆ ಚಿತ್ರವೂ ಉತ್ತಮ ಸಮಾಜಿಕ ಸಂದೇಶ ಹೊಂದಿದೆ ಎಂದು ಬೇರೆ ಭಾಷೆಗೆ ಡಬ್ ಮಾಡಿ ಎಂದಾಗ ನೀವು ಇಲ್ಲ ನನ್ನ ಚಿತ್ರವನ್ನು ಆ ಭ್ಜಾಷೆಯಲ್ಲಿ ಡಬ್ ಮಾಡಿದರೆ ಇಲ್ಲ ಆ ಜನರು ನೋಡಿದರೆ ಸಂಸ್ಕ್ರುತಿ ವಿಭ್ರಮೆ ಅಗುತ್ತಾರೆ
ನೊಡುವದಾದರೆ ಕನ್ನಡವನ್ನು ಕಲಿತು ನೊಡಲಿ, ಇಲ್ಲ ಬಿಡಿ ಎಂದು ಹೇಳುತ್ತಿರಾ ?

ಕನ್ನಡ ಚಿತ್ರವನ್ನು ರಾಷ್ಟ್ರಪ್ರಶಸ್ತಿಗೆ ಆಯ್ಕೆ ಮಾಡುವ ಜನರಿಗೆ ಕನ್ನಡ ಬರಲೇಬೇಕು ಎಂಬ ನಿಯಮವನ್ನು ಮಾಡಿದಾಗ
ಎಷ್ಟು ರಾಷ್ತ್ರಪ್ರಶಸ್ತಿ ಬರಬಹುದು ಎಂಬುದು ನಿಮ್ಮ ಅನಿಸಿಕೆ ?. ರಾಷ್ಟ್ರಪ್ರಶಸ್ತಿ ಅಯ್ಕಾ ಸಮಿತಿಯವರು ಅನೇಕ ಭಾಷೆಗಳ ಚಿತ್ರಗಳನ್ನು ನೋಡುತ್ತಾರೆ, subtitle ಇಲ್ಲಾ ಡಬ್ಬಿಂಗ್ ಮೂಲಕ ತಮಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥ ಮಾಡಿಕೊಳ್ಳುತ್ತಾರೆ ಅಲ್ಲವೇ ?. ಅವರಿಗೆ ಅರ್ಥವಾಗಿ ಮೆಚ್ಚಿದರೆ ಮಾತ್ರ ಪ್ರಶಸ್ತಿ ಪುರಸ್ಕರಿಸುತ್ತಾರೆ .

ಇವತ್ತು ರಾಷ್ತ್ರಪ್ರಶಸ್ತಿಗೆ ಪಡೆಯುತ್ತಿರುವ ಅನೇಕ ಕನ್ನಡ ಚಿತ್ರಗಳಲ್ಲಿ ಸಾಮನ್ಯ ಅಂಶವನ್ನು ಕಾಣಬಹುದು, ಹೆಚ್ಚು ಕಡಿಮೆ ಅದೇ ನಿರ್ಧೇಶಕರು, ಅದೇ ನಿರ್ಮಾಪಕರು , ಅದೇ ನಟ ನಟಿಯರು .. ಡಬ್ಬಿಂಗ್ ಬಂದರೆ ಇದು ರಾತ್ರೋರಾತ್ರಿ ಬದಲಾಗಿ ಕನ್ನಡಕ್ಕೆ ರಾಷ್ಟ್ರಪ್ರಶಸ್ತಿ ಬರದೇ ಹೋಗುತ್ತದೆಯಾ ?. ಅಷ್ಟೊಂದು ದುರ್ಬಲವಾಗಿದೇಯೆ ನಮ್ಮ ಚಿತ್ರರಂಗ. ಬೇರೆಯವರು ಬೇಡ
ರಾಷ್ಟ್ರಪ್ರಶಸ್ತಿ ವಿಜೇತರಾದ ನೀವು,ಶೇಷಾದ್ರಿ,ಕಾಸವರಳ್ಳಿಯವರು ನಾಳೆ ಡಬ್ಬಿಂಗ್ ಬಂದ ಕೂಡಲೆ ನಿಮ್ಮ ಚಿತ್ರ ನಿರ್ಮಾಣ ನಿಲ್ಲಿಸಿ
ಡಬ್ಬಿಂಗ್ ಚಿತ್ರ ಮಾಡುತ್ತೀರಾ ?


"ಆದರೆ ಅಂತಹ ಸಿನಿಮಾಗಳನ್ನು ನೋಡುವ ಅಭ್ಯಾಸವನ್ನೇ ನಮ್ಮ ಜನ ಕಳಕೊಂಡಿದ್ದಾರೆ ಎಂಬುದನ್ನು ತಾವು ಗಮನಿಸಬೇಕು."


ಮೊದಲಿಗೆ ಇತ್ತಿಚಿನ ದಿನಗಳಲ್ಲಿ ರಾಷ್ತ್ರಪ್ರಶಸ್ತಿ ಚಿತ್ರಗಳು ತೆರೆ ಕಾಣುತ್ತ ಇವೆ, ಇಲ್ಲವಾದಲ್ಲಿ ಖಾಸಗಿ ಪ್ರದರ್ಶನ ಇಲ್ಲಾ ಸಂವಾದ ಮಾಡಿ ಜನರಿಗೆ ತೋರಿಸುವ ಪ್ರಯತ್ನ ನಡೆಯುತ್ತ ಇದೆ. ಮುಖ್ಯವಾಗಿ ಜನರಿಗೆ ಸುಲಭ ರೀತಿಯಲ್ಲಿ ನೋಡಲು ಸಿಗುತ್ತಿಲ್ಲ ಎಂಬುದು ಸತ್ಯ. ಅದ್ದರಿಂದ ಜನರ ಮೇಲೆ ಗೂಬೆ ಕೂರಿಸುವುದನ್ನು ನಮ್ಮ ಚಿತ್ರರಂಗ ಬಿಡಬೇಕು. ಚಲನಚಿತ್ರ ಮಂದಿರಕ್ಕೆ ಬಂದ ಪ್ರತಿಯೊಬ್ಬ
ಪ್ರೇಕ್ಷಕನದು ಚಿತ್ರ ನೋಡಲು ಬಂದ ಕಾರಣ ಬೇರೆ ಇರುತ್ತದೆ. ಇಂತಹ ರಾಷ್ತ್ರಪ್ರಶಸ್ತಿ ಚಿತ್ರಗಳನ್ನು ಕನ್ನಡ ಪ್ರೇಕ್ಷಕ ತಿರಸ್ಕರಿಸಿದ ಮಾತ್ರಕ್ಕೆ ಅವನು ಸಂಸ್ಕ್ರುತಿಹೀನ ಆಗುವದಿಲ್ಲ ಎಂಬುದನ್ನು ನಾವು ಮರೆಯಬಾರದು.

.‘ಹೇರಿಕೆ’ಯೊಂದನ್ನು ಅಮಾಯಕ ಪ್ರೇಕ್ಷಕರ ಮೇಲೆ ಅವರಿಗರಿವಿಲ್ಲದೆಯೇ ಇರುವ ಕಾಲಘಟ್ಟದಲ್ಲಿ ‘ಬನವಾಸಿ ಬಳಗ’ದವರೇ ಆಗಲಿ ಮತ್ಯಾರೇ ಆಗಲಿ ತರುವುದಕ್ಕೆ ಮತ ಚಲಾವಣೆ ಎಂಬುದು ಮಾರ್ಗವಲ್ಲ.

ಯಾವುದು ಹೇರಿಕೆ ?

* ಬಹುಭಾಷಾ ವಲ್ಲಬರಲ್ಲದ ಬಹುಸಂಖ್ಯಾತ ಕನ್ನಡಿಗರು ಕನ್ನಡವಲ್ಲದ ಚಿತ್ರಗಳನ್ನು ನೋಡಬಾರದು ಎನ್ನುವುದಾ ?
* ಭಾರತಕ್ಕೆ ಇರದ ಪದ್ಧತಿಯನ್ನು ಕೇವಲ ಕನ್ನಡಿಗರ ಮೇಲೆ ಮಾತ್ರ ತಂದಿರುವುದಾ ?
* ಪ್ರೇಕ್ಶಕನನ್ನು ಅಮಾಯಕ ಎಂದು ಕರೆದು, ನಿನಗೆ ತಿಳಿಯುವದಿಲ್ಲ ನಾವೇ ಬೇರೆ ಭಾಷೆ ಚಿತ್ರಗಳನ್ನು ನೋಡಿ ನಿನಗೆ ಎನು ಬೇಕು ಬೇಡ ಎಂಬುದನ್ನು ನಿಯಂತ್ರಿಸುವ ಕಪಿಮುಷ್ಟಿ ವ್ಯವಸ್ಥೆಯಾ ?.
* ಒಂದು ಕಟ್ಟುಪಾಡು ಹಾಕಿ ಅದರ ಪರಿಧಿಯಲ್ಲಿ ಬಂಧಿಸಿ, ಕಾಲಘಟ್ಟದಲ್ಲಿ ಅದು ಅನ್ವಯಿಸುತ್ತದೆಯಾ ಇಲ್ವಾ ಎಂಬುದಕ್ಕೆ
ಆಸ್ಪದ ಕೊಡದ ಹಿಡಿತವೇ ?

ಪ್ರೇಕ್ಷಕನು ಅಮಾಯಕನಲ್ಲ, ಬುದ್ದಿವಂತ, ಅವನಿಗೆ ಎನು ಬೇಕು ಬೇಡ ಎನ್ನುವುದು ಗೊತ್ತ್ರು ಎಂದು ಹೇಳುವ ದನಿ ಕನ್ನಡ ಗ್ರಾಹಕನ ದನಿಯಾಗಿದೆ. ಇದೆ ಮತ ಚಲಾವಣೆಯಲ್ಲಿ ಸಾಬೀತಾಗಿದೆ.

"ಭಾರತದ ಸಂವಿಧಾನದಲ್ಲಿಯೇ ಪ್ರಾದೇಶಿಕ ಭಾಷೆಗಳ ರಕ್ಷಣೆ ಆಯಾ ರಾಜ್ಯಗಳ ಹೊಣೆ ಎಂಬ ಸಾಲಿದೆ. ಆ ಸಾಲನ್ನು ಹಿಡಿದರೆ ಭಾಷೆಯ ಮೇಲೆ ಆಗುವ ಯಾವ ಆಕ್ರಮಣವನ್ನಾದರೂ ಹೊಡೆದಟ್ಟಬಹುದು. ಮುಂದುವರೆದು ಹೇಳುವುದಾದರೆ, ‘ಡಬ್ಬಿಂಗ್ ತಡೆ’ ಎನ್ನುವುದು ಸಾಮಾಜಿಕ ಕಟ್ಟುಪಾಡು."

ಇದೇ ವಾದವನ್ನು ೭ ವಾರ ಚಲನಚಿತ್ರ ತಡೆಗೆ ತಂದಾಗ ನಮ್ಮ ಸರ್ವೋಚ್ಚ ನ್ಯಾಯಾಲಯ ಸರಸಗಾಟಾಗಿ ತಿರಸ್ಕರಿಸಿತ್ತು. ನಮಗೆ ಅರ್ಥವಾಗುವ ನಮ್ಮ ಪರಿಸರಕ್ಕೆ ಹತ್ತಿರ ಆಗುವ ಸಂವಹನ ಕ್ರಿಯೆಯೇ ನಮ್ಮ ಕನ್ನಡ ಭಾಷೆ. ಭಾರತೀಯ ಪ್ರಜೆಯಾಗಿ ಕನ್ನಡಿಗರಿಗೆ ಕನ್ನಡದಲ್ಲಿ ಮನರಂಜನೆ ಸಿಗಬೇಕು ಎಂಬುದು ನಮ್ಮ ಸಂವಿಧಾನದ ಹಕ್ಕಾಗಿದೆ. ಸಾಲದಕ್ಕೆ ಡಬ್ಬಿಂಗ್ ಕೇಳುತ್ತ ಇರುವುದು ಕನ್ನಡಿಗರು, ಕನ್ನಡಿಗರಿಗಾಗಿ ಮತ್ತು ಕನ್ನಡಗೋಸ್ಕರ ಎಂಬುದು ಗಮನದಲ್ಲಿ ಇಟ್ಟಾಗ ಅದನ್ನು ಕೊಡುವ ಹೊಣೆ ರಾಜ್ಯ ಸರಕಾರಕ್ಕೆ ಇದೆ.

ಕನ್ನಡ ಸಮಾಜ ಇಂದು ಡಬ್ಬಿಂಗ್ ಬೇಕು, ನಮ್ಮ ಭಾಷೆಯಲ್ಲಿ ನಮಗೆ ಮನರಂಜನೆ ಬೇಕು ಎಂದು ಕೇಳುತ್ತ ಇರುವಾಗ
ಇಲ್ಲ ಕೋಡುವದಿಲ್ಲ ಎನ್ನುವುದು ಸಂವಿಧಾನಿಕ DENY OF FUNDAMENTAL RIGHTS ಅಗೊಲ್ವಾ ?. ಖಂಡಿತ ಚರ್ಚೆ ಆಗಲಿ, ಆದರೆ ಅದು ಆಗುವ ಮುಂಚಯೇ ಅವುಗಳನ್ನು ಬ್ರಾಂಡ್ ಮಾಡುವುದು ಬೇಡ ಅಲ್ಲವೇ ?

೧೯೬೫ ರಲ್ಲಿ ಇದ್ದ ರಾಜತಾಂತ್ರಿಕ ಸಂಬಂಧಗಳು ಇವತ್ತು ಬದಲಾಗಿಲ್ವಾ , ಅವತ್ತು ನಮ್ಮ ಅಜ್ಜ ಹಾಗೆ ಮಾಡಿದ್ರು, ಹೀಗೆ ಹೇಳಿದ್ರೂ
ನಮ್ಮ ಚಾಚ ನೆಹರೂ ಅವತ್ತು ಆ ನಿರ್ಣಯ ತೆಗೆದುಕೊಂಡಿದ್ದರೂ ಅದ್ದರಿಂದ ಇವತ್ತು ಅದನ್ನೇ ಮುಂದುವರೆಸೋಣ ಎನ್ನುವ ಮಾತನ್ನು ನಾವು ಒಪ್ಪುತ್ತೆವೆಯೇ ?

ಹಿಂದೆ ಈ ಕಟ್ಟುಪಾಡು ಆದಾಗ ಎಷ್ಟರ ಮಟ್ಟಿಗೆ ಕನ್ನಡ ಗ್ರಾಹಕನ್ನು ಮತ್ತು ಕನ್ನಡ ಸಮಾಜದ ಮಿಡಿತವನ್ನು ಮತ್ತು ಅಭಿಪ್ರಾಯವನ್ನು ಪರಿಗಣಿಸಿತ್ತು ಎಂಬುದು ಪ್ರಶ್ನಾರ್ಹ. ಇವತ್ತಿನ ತಂತ್ರಜ್ಞಾನ ಯುಗದಲ್ಲಿ ಎಲ್ಲ ವರ್ಗದವರು ತಮ್ಮ ಅಭಿಪ್ರಾಯ ಹೇಳಿಕೊಳ್ಳಲು, ಹಂಚಿಕೊಳ್ಳಲು ಸಾಧ್ಯವಾಗಿದೆ. ಅದ್ದರಿಂದ ಮುಕ್ತವಾಗಿ ಚರ್ಚೆ ಮಾಡೊಣ.

ಕೊನೆಯದಾಗಿ, ಅಣ್ಣವರು ಹೇಳಿದ ಹಾಗೆ ಕಾಲಕ್ಕೆ ತಕ್ಕಂತೆ ನಡೆಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು ಅಲ್ಲವೇ ...

Friday, April 08, 2011

ಜನ್ ಲೋಕಪಾಲ್ ಹೋರಾಟ ..ಅವಲೋಕನ


ಜನಸಾಮನ್ಯರ ಹೋರಾಟಗಳು ಹೊಸದಲ್ಲ, ಅನೇಕ ಬಾರಿ ಅನೇಕ ಸಂಘ ಸಂಘಟನೆಗಳು ಮಾಡಿಕೊಂಡು ಬಂದಿವೆ. ಆದರೆ ಜನರು ಅದನ್ನು ಕೇವಲ ಬೂಟಾಟಿಕೆ, ಮಾಧ್ಯಮಗಳ ಮುಂದೆ ಬರಲು, ಪ್ರಚಾರಕ್ಕೆ ಎಂದು, ಇಲ್ಲ ರಾಜಕೀಯವಾಗಿ ತೆಗೆದುಕೊಂಡು
ನಮಗಲ್ಲ ಎಂದು ಅಂದುಕೊಂಡಿರುವುದೇ ಹೆಚ್ಚಿವೆ. ಇದರಿಂದ ಅನೇಕ ಹೋರಾಟಗಳು ನೇಪಥ್ಯಕ್ಕೆ ಸೇರಿವೆ. ಹೋರಾಟ ಮಾಡುವ ಜನರು ಮುಂದೊಂದು ದಿನ ಜನಸಾಮಾನ್ಯರು ನಮ್ಮೊಂದಿಗೆ ಬರುತ್ತಾರೆ ಎನ್ನುವ ವಿಶ್ವಾಸ, ಸರ್ಕಾರಕ್ಕೆ ಜಾಗೃತಿಯಾಗಬಹುದು ಎನ್ನುವ ಉದ್ದೇಶಗಳಿಂದ ಮಾಡಿಕೊಂಡು ಬಂದಿರುತ್ತಾರೆ. ಹಾಗಿದ್ದಲ್ಲಿ ಅಣ್ಣಾ ಹಜಾರೆ ಹೋರಾಟಕ್ಕೆ ಬೆಂಬಲ ಸಿಕ್ಕಿದ್ದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ.


ಜನಸಾಮನ್ಯರ ಜನಪ್ರಿಯ ಭಾವನೆ

ಭ್ರಷ್ಟಚಾರ ಎನ್ನುವುದು ಇವತ್ತು ಪ್ರತಿಯೊಬ್ಬರನ್ನು ಕಾಡುತ್ತ ಇದೆ, ಕೆಳವರ್ಗದಿಂದ ಹಿಡಿದು ಹಣವಂತರನ್ನು ಕಾಡುತ್ತ ಇದೆ. ಒಂದಲ್ಲ ಒಂದು ರೀತಿಯಲ್ಲಿ ನಾವುಗಳು ಲಂಚ ಕೊಟ್ಟಿರುತ್ತೆವೆ, ಕೊಡುವಾಗ ಬೈದುಕೊಂಡು, ಶಾಪ ಹಾಕಿಕೊಂಡೇ ಕೊಟ್ಟಿರುತ್ತೆವೆ. ಆ ಸಿಟ್ಟು, ಹತಾಷೆ ಎಲ್ಲೊ ಒಂದು ಕಡೆ ನಮ್ಮ ಸಮಾಜವೇ ಹೀಗೆ, ಸುಮ್ಮನೆ ನಾವು ಬೇಜಾರು ಮಾಡಿಕೊಳ್ಳುವುದು ಗಾಳಿಗೆ ಗುದ್ದಿದ ಹಾಗೆ ಎಂದು ನಾವು ಅಂದುಕೊಳ್ಳುತ್ತೆವೆ. ಆದರೆ ಮುಂದೊಂದು ದಿನ ಇದು ಕೊನೆಯಾಗಬೇಕು, ಭ್ರಷ್ಟಚಾರವಿಲ್ಲದ ದೇಶ ನಮ್ಮದು ಆಗಬೇಕು ಎನ್ನುವ ಕನಸು ಕಾಣುವದನ್ನು ನಾವು ಮರೆಯುವದಿಲ್ಲ.

ಇತ್ತಿಚಿನ ಬೆಳವಣಿಗೆಗಳು.

ಇವತ್ತು ನಮ್ಮ ದೇಶದ ಸ್ಥಿತಿ ಹೇಗಿದೆ ಎಂದರೆ ಹಗರಣ ಎಂದರೆ ಕನಿಷ್ಠ ೫೦೦ ಕೋಟಿಗಿಂತ ಮೇಲೆ ಇರಬೇಕು, ಅದಕ್ಕಿಂತ ಕಮ್ಮಿ ಇದ್ದರೆ ಮಾಧ್ಯಮಗಳಿಗೂ ಒಂದು ರೀತಿ ಅಸಡ್ಡೆ. ಇದು ಒಂದು ರೀತಿಯಲ್ಲಿ ಅಧಿಕಾರ ಇರುವರಿಗೂ ಇಂಬು ಕೊಟ್ಟಿದೆ. ಅವರು ಕೊಟಿ ತಿನ್ನೋವಾಗ ನಾನು ಸಾವಿರ ತಿಂದರೆ ತಪ್ಪೇನು ಎಂಬ ಧೈರ್ಯ ಮೂಡಿ ಕೊನೆಗೆ ಅವನು ರಾಜರೋಷವಾಗಿ ಲಂಚ ತೆಗೆದುಕೊಳ್ಲಲು ಶುರು ಮಾಡುತ್ತಾನೆ. ೨G, ಕಾಮನ್ ವೆಲ್ತ, ಆದರ್ಶ ಬಿಲ್ಡರ್ಸ, ಯಡ್ಡಿ ಮತ್ತು ಕುಟುಂಬದವರ ಭೂಹಗರಣ, ಕೋಟ್ಯಾಂತರ ರೂಫಾಯಿ ತೆರಿಗೆ ವಂಚನೆ ಹೀಗೆ ಹತ್ತು ಹಲವಾರು ನಮ್ಮ ಮುಂದೆ ಇದೆ. ದಿನ ಬೆಳಗಾದರೆ ನಮ್ಮ ಮುಖ್ಯಮಂತ್ರಿಯ ಹೊಸ ಹಗರಣ ಆಚೆ ಬಂದರೆ, ಅಲ್ಲಿ ಕೇಂದ್ರದಲ್ಲಿ ಅಧಿಕಾರ ಪಕ್ಷಗಳ ಇನ್ನೊಂದು ಹಗರಣ ಆಚೆ ಬರುತ್ತಲೇ ಇದೆ.
ಭ್ರಷ್ಟರು CVC ಅಧ್ಯಕ್ಷರಾಗಿದ್ದ ಈ ಕಾಲದಲ್ಲಿ ಅದರಿಂದ ಎನು ಮಹತ್ತರ ಬೆಳವಣಿಗೆ ಎಣಿಸಬಹುದು ? . ಇಂತಹ ಸುದ್ದೀಗಳೇ ನಮ್ಮ ಮಾಧ್ಯಮಗಳಲ್ಲಿ ಕಾಣುತ್ತ ಜನಸಾಮನ್ಯರ ಸಹನೆಯು ಕಟ್ಟೆ ಒಡೆದಿದೆ.

ಜೊತೆಗೆ ಈಜಿಪ್ಟ, ಲಿಬಿಯಾ, ಅಭುದಾಬಿ ಮುಂತಾದ ದೇಶದಲ್ಲಿ ಆಗುತ್ತಿರುವ ಜನಾಂದೊಲನಗಳು ಜನರಲ್ಲಿ ಹೆಚ್ಚಿನ ಸ್ಥೈರ್ಯವನ್ನು ಕೊಟ್ಟಿವೆ ಮತ್ತು ಇದರಿಂದ ಗೆಲವು ಪಡಿಯಬಹುದು ಎಂಬ ಸಂದೇಶವನ್ನು ಸಾರಿದೆ.

ಕಾಂಗ್ರೆಸ್ ಪಕ್ಷದ ನಿರ್ಲಕ್ಷತನ

ಮೊದಲು ದೇಶವೇ ವಿಶ್ವಕಫ್ ಗೆದ್ದ ಗುಂಗಿನಲ್ಲಿ ಇದ್ದಾಗ , ಅಣ್ಣಾ ಹಜಾರೆಯ ಹೋರಾಟವನ್ನು ಕಾಂಗ್ರೆಸ್ ಗಂಭಿರವಾಗಿ ಪರಿಗಣಿಸಲಿಲ್ಲ. ಇದಕ್ಕೆ ಅನೇಕ ಕಾರಣಗಳು ಇದ್ದವು ಹಿಂದೆ ನಡೆಸಿದ್ದ ಅಣ್ಣಾ ಹಜಾರೆ ಹೋರಾಟಗಳು, ಕೇವಲ ಒಂದು ವರ್ಗದ ಜನರ ಬೆಂಬಲ ಇವುಗಳು ಮೊದಲಿಗೆ ಕಾಂಗ್ರೆಸ್ ಪಾಳಯದ ಲಘು ಹೇಳಿಕೆಗಳು ಬರಲು ಶುರುವಾದವು. ಇದರ ಜೊತೆಗೆ
ಜೊತೆಗೆ ಕೆಲ ಮಾಧ್ಯಮಗಳಲ್ಲೂ ಇದು ಅವಸರದ ಕ್ರಮ , ಇದು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸಿನ್ನ ವಿಚಾರಧಾರೆಯನ್ನು ಬಿಂಬಿಸಲಾಯಿತು.

ಇ ತರಹದ ವಿಷಯಗಳು ಕೇಂದ್ರ ವಲಯದಲ್ಲಿ ಇದ್ದಾಗ ಅದರ ಲಾಭ ಪಡೆಯಲು ಅನೇಕ ಪಕ್ಷಗಳು ಕಾಯುತ್ತ ಇರುತ್ತದೆ, ಅದರಲ್ಲಿ ಬಿಜೆಪಿ ಹಿಂದೆ ಬೀಳಲಿಲ್ಲ, ಆದರೆ ತನ್ನ ತಟ್ಟೆಯಲ್ಲೇ ಹೆಗ್ಗಣ್ಣ ಬಿದ್ದಿರುವುದನ್ನು ಬಿಟ್ಟು ಇನ್ನೊಂದು ತಟ್ಟೆಯಲ್ಲಿ ನೋಣ ಬಿದ್ದಿರುವದನ್ನು
ತೋರಿಸುವ ಕ್ರಮ ನಿಜಕ್ಕೂ ನಗೆಪಾಟಲಿಗೆ ಗುರಿಯಾಗಿ ಅನೇಕ ಪಕ್ಷಗಳು ಬೆಂಬಲ ಕೋರಿ ಸುಮ್ಮನೆ ಆದವು. ಅಲ್ಲಿಗೆ ಇದರಲ್ಲಿ ರಾಜಕೀಯ ಪಕ್ಷಗಳ ಹೈಜಾಕ್ ಇಲ್ಲ ಕೇಂದ್ರ ರಾಜಿನಾಮೆ ಇಂತಹ ರಾಜಕೀಯ ಪ್ರೇರಿತ ಬೇಡಿಕೆಗಳು ಬರದೇ ಜನ್ ಲೋಕಪಾಲ್ ಮಸೂದೆ ಜಾರಿಯಾಗಬೇಕು ಎನ್ನುವ ಒಂದಂಶದ ಕಾರ್ಯಕ್ರಮಕ್ಕೆ ನಿಂತಿತು.

ಕೆಲ ಆಂಗ್ಲ ಮಾಧ್ಯಮಗಳು ಇದು ದೊಡ್ಡ ಹೋರಾಟ ಆಗುತ್ತದೆ, ಈಜ್ಜಿಪ್ಟ ಮಾದರಿ ಎಂದು ಬಿಂಬಿಸುತ್ತ ಇದಕ್ಕೆ ಪ್ರಚಾರ ಕೊಟ್ಟು ಜನ ಸಾಮನ್ಯರಲ್ಲಿ ಸಂಚಲನ ತಂದವು. ದಿನ ಬೆಳಗಾದರೆ ಇದರದೇ ಚರ್ಚೆ, ಅದೇ ಮುಖಪುಟ ಮತ್ತು ದಿನೇ ದಿನೇ ಜನಸಾಮಾನ್ಯರಲ್ಲಿ
ಇದನ್ನು ಬೆಂಬಲಿಸಿ ಬರೆಯುವ ವಾಲ್, ಮಿಂಚೋಲೆ, ಮಿಂಚೆ ಹರಿದಾಡ ತೊಡಗಿತು. ೨ ದಿನಗಳಲ್ಲಿ ಈ ಜ್ವರ ಹೆಚ್ಚುತ್ತ ಹೋಯಿತು.
ಯಾವಗ ಕೇಂದ್ರ ತನ್ನ ವರಸೆ ಬದಲಾಯಿಸುತ್ತ ಬಂತು ಜನರಲ್ಲೂ ಇದು ನಿಲ್ಲುವ ಹೊರಾಟ ಅಲ್ಲ, ಗೆಲ್ಲುವ ಹೋರಾಟ ಮತ್ತು ಇದರಲ್ಲಿ ಇರುವರು ರಾಜಕೀಯ ಪ್ರೇರಿತರು ಅಲ್ಲ ಎಂದೆಣಿಸಿ ಅವರ ಊರಿನಲ್ಲಿ ನಡೆಯುತ್ತ ಇದ್ದ ಉಪವಾಸಕ್ಕೆ ನಿಂತರೂ.

ಅನೇಕರಿಗೆ ಇದು ಸ್ವಾತಂತ್ರ ಹೋರಾಟ ಅನಿಸಿ, ಅಣ್ಣ ಹಜಾರೆಯಲ್ಲಿ ಬಾಪುವನ್ನು ನೋಡಿ ಅವರ ಬೆಂಬಲಕ್ಕೆ ನಿಂತರು. ಬೆಂಗಳೂರಿನ ಸ್ವಾತಂತ್ರ ಮೈದಾನದಲ್ಲಿ ಕಳೆದ ೩ ದಿನಗಳಲ್ಲಿ ಜನರು ಬರುತ್ತ ಇರುವುದು ಗಣನೀಯವಾಗಿ ಎರುತ್ತಲೇ ಇದೆ, ಇದಕ್ಕೆ ಯಾರು ಯಾರನ್ನು ಬನ್ನಿ ಎಂದು ಕೇಳಿಲ್ಲ, ಹೇಳಿಲ್ಲ. ಎಲ್ಲರ ಬಾಯಲ್ಲೂ ಅದೇ ಜೈಕಾರಗಳು. ವಯಸ್ಸು, ವರ್ಣ,ಜಾತಿ, ಧರ್ಮ, ಭಾಷೆ ಎಲ್ಲ ಮರೆತೂ ಒಂದೆಡೆ ನಿಂತು ತಮ್ಮ ಬೆಂಬಲವನ್ನು ತೋರಿಸುತ್ತ ಇದ್ದಾರೆ.

ಬೀಸುವ ದೊಣ್ಣೆ ತಪ್ಪಿದರೆ ಸಾಕು ..

ಅಲ್ಲಿಗೆ ಕಾಂಗ್ರೆಸ್ ಒಂದು ದಿಕ್ಕಿನಲ್ಲಿ ಕಡಿಮೆ ಅಂದಾಜು ಮಾಡಿದ್ದು ಬೂಮರಾಂಗ್ ಆಯಿತು. ಕಾಂಗ್ರೆಸ್ಸಿನ ಹೇಳಿಕೆಗಳು ಸಾರ್ವಜನಿಕ ವಲಯದಲ್ಲಿ ಬಹಳ ಟೀಕೆಗೆ ಗುರಿಯಾದವು. ದಿನೇ ದಿನೇ ಇದು ಬೆಳೆಯುತ್ತ ಹೋದ ಈ ಹೋರಾಟವನ್ನು ತಕ್ಷಣ ಚಿವುಟದೇ ಇದ್ದರೆ ಇದು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸಿಗೆ ದೊಡ್ಡ ತಲೆನೋವು ಆಗಬಹುದು ಎಂದೆಣಿಸಿ, ಬೀಸಿದ ದೊಣ್ಣೆಯನ್ನು ತಪ್ಪಿಸಿಕೊಳ್ಳುವ ಕ್ರಮಕ್ಕೆ ಮುಂದಾಯಿತು. ಬೇಡಿಕೆಗಳನ್ನು ಒಪ್ಪಿತು, ಅದಕ್ಕೂ ಗೊತ್ತು ಸಂಸದಿನಲ್ಲಿ ಇದನ್ನು ಆಟವಾಡಿಸಬಹುದು ಎಂದು, ಸಾಲದಕ್ಕೆ ಎಲ್ಲಾ ಗಾಜಿನ ಮನೆಯಲ್ಲಿ ಇರುವ ಪಕ್ಷಗಳೇ, ಯಾರು ಕಲ್ಲು ಎಸೆಯಲು ಹೋಗುವದಿಲ್ಲ ಎಂದು.
ಜನರ ಗೆಲುವು ಎಂದು ಸಾರಿ, ಜನಾಂದೋಲನಕ್ಕೆ ಸೇರಿದ್ದ ಜನರನ್ನು ಮೊದಲು ಚದರಿದರೆ ಆ ಜನರಿಗೆ ತಾವು ಗೆದ್ದೆವು ಎಂದು ಬೀಗಿ, ಕೆಲವರು ಎಣ್ಣೆ ಹೋಡೆದು ಸಂಭ್ರಮ ಆಚರಿಸಿಕೊಂಡು ಐಪಿಲ್ ಮುಂತಾದ ದಿನದ ಚಟುವಟಿಕೆಯಲ್ಲಿ ಬಾಗಿಯಾಗುತ್ತಾರೆ ಎಂಬ ದೊಡ್ಡ ಆಟಕ್ಕೆ ಕೈ ಹಾಕಿದೆ.


ಭ್ರಷ್ಟಚಾರ ಎನ್ನುವುದು ದೊಡ್ಡ ಶತ್ರು.

ದೇಶದ ವ್ಯವಸ್ಥೆ ಮತ್ತು ಪ್ರಗತಿ ಒಂದು ಮಣ್ಣಿನ ಮಡಿಕೆಯಲ್ಲಿ ಇಟ್ಟ ನೀರಿನ ಹಾಗೆ. ಇದನ್ನು ದುಷ್ಟ ಶಕ್ತಿಗಳಿಂದ ಕಾಪಾಡಬೇಕು. ಇದಕ್ಕೆ ಕಲ್ಲು ಹೊಡೆಯುವ ಜನರನ್ನು ಹತ್ತಿಕ್ಕಬೇಕು ಎನ್ನುವುದು ಎಷ್ಟು ಸರಿಯೋ ಹಾಗೆ ಮಡಿಕೆ ತೂತಾಗಿದ್ದರೆ ಅದನ್ನು ಸರಿ ಪಡಿಸದೇ ಕೇವಲ ಮಡಿಕೆಯನ್ನು ಕಾಯುತ್ತ ಕೂತರೆ ನಷ್ಟೆವೇ ಆಗುವುದು. ಇವತ್ತು ನಮ್ಮ ದೇಶದ ಪರಿಸ್ಥಿತಿ ಕೂಡ ಇದಕ್ಕೆ ಭಿನ್ನವಿಲ್ಲ. ಭ್ರಷ್ಟಚಾರ ಅನ್ನುವುದು ಮಡಿಕೆಯ ತೂತಿನ ಹಾಗೆ , ಇದು ಎಲ್ಲಕ್ಕಿಂತ ದೊಡ್ಡ ಶತ್ರು. ಇದನ್ನು ನಾವು ದಮನ ಮಾಡದೇ ಕೇವಲ ಪಾಕಿಸ್ತಾನ ಜಪ ಮಾಡಿಕೊಂಡರೆ ದೇಶ ಸೊರಿ ಹೋಗುವದರಲ್ಲಿ ಸಂದೇಹವಿಲ್ಲ. ಆದರೆ ಬೆಕ್ಕಿಗೆ ಗಂಟೆ ಕಟ್ಟುವರು ಯಾರು ?

ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಸರ್ಕಾರಗಳು ತೋರುವ ಕಳ್ಳ ಕಾಳಜಿ ಹೇಗಿರುತ್ತದೆ ಎಂದರೆ, ಸುಮ್ಮನೆ ಕಾಟಾಚಾರಕ್ಕೆ ಮಾಡಿದ ಹಾಗೆ ಇರುತ್ತದೆ, ಇಲ್ಲ ಒಬ್ಬರನ್ನು ಬಲಿಪಶು ಮಾಡಿ, ೧೦೦ ಜನ ಬದುಕುವ ಹಾಗೆ ಇರುತ್ತದೆ. ೧೦೦ ಲೋಕಾಯುಕ್ತ ದಾಳಿ ಆದವು, ಕೋಟ್ಯಾಂತರ ರೂಪಾಯಿ ಸಿಕ್ಕಿ ಬಿದ್ದವು, ಆ ಅಧಿಕಾರಿಗಳಿಗೆ ಒಮ್ಮೆಯೂ ಶಿಕ್ಷೆ ಆಗಿಲ್ಲ. ಮತ್ತೆ ವಿಚಾರಣೆ ಅದು ಇದು ಎಂದು ಅವರ ಬಳಿ ಕಿತ್ತು ಅಧಿಕಾರದಲ್ಲಿ ಕೂರಿಸುವ ವ್ಯವಸ್ಥೆಯಲ್ಲಿ ಜನ ಸಾಮಾನ್ಯರು ನಂಬಿಕೆ ಇಡುವುದು ಆದರೂ ಹೇಗೆ.


ಭ್ರಷ್ಟ ಅಧಿಕಾರಿಗೆ ಮಾತ್ರ ಶಿಕ್ಷೆಯಾ ??
ನಾನು ನೋಡಿದ ಹಾಗೆ ಎಲ್ಲೆಡೆ ಅಧಿಕಾರಿಗಳು, ರಾಜಕೀಯ ನಾಯಕರು ಮಾತ್ರ ಭ್ರಷ್ಟರು ನಮ್ಮ ಮಂದಿ ಸಾಚ ಎಂದೆ ನೋಡುತ್ತ ಇದ್ದೇವೆ. ಲಂಚ ತೆಗೆದುಕೊಳ್ಳುವ, ದುಡ್ಡು ಹೋಡೆಯುವ ಜನರಿಗೆ ಶಿಕ್ಷೆಯಾಗಬೇಕು ಎನ್ನುವುದು ಎಷ್ಟು ಸರಿಯೋ, ಒಂದು ಭ್ರಷ್ಟ ಅಧಿಕಾರಿಯ ಹಿಂದೆ ಒಬ್ಬ ಜನಸಾಮನ್ಯ ಇದ್ದೆ ಇರುತ್ತಾನೆ, ಅವನೇ ಅಧಿಕಾರಿಯನ್ನು ಭ್ರಷ್ಟನ್ನಾಗಿ ಮಾಡಿರುತ್ತಾನೆ. ಇನ್ನು ಅನೇಕ ಕಡೆ ಈ ಕಾರ್ಪೊರೆಟ್ ಪ್ರಪಂಚ ಎಲ್ಲವನ್ನು ದುಡ್ಡಿನಿಂದ ಅಳೆಯುತ್ತದೆ, ಬೇಗ ಆಗಬೇಕಾದರೆ ಎಷ್ಟು ಹೆಚ್ಚು ಕೊಡಬೇಕು ಎಂಬ ಹೊಸ ಬೇಡಿಕೆಯನ್ನು ಇಡುತ್ತದೆ. ಅವರಿಗೆ ಸಮಯವೇ ದುಡ್ಡು, ಕಾಯುವ ವ್ಯವಧಾನವಿಲ್ಲ. ಇದರಿಂದ ಅನೇಕ ಅಧಿಕಾರಿಗಳು ಭ್ರಷ್ಟರಾಗುತ್ತಾರೆ. ಮುಂದೊಂದು ದಿನ ಸಿಕ್ಕಿ ಬಿದ್ದರೆ ಆ ಅಧಿಕಾರಿಗೆ ಶಿಕ್ಷೆ ಆಗುತ್ತದೆ ವಿನಹ ಯಾರು ಆ ಕಾರ್ಪೊರೆಟ್ ಅವರನ್ನು ಕೇಳುವದಿಲ್ಲ. ಜನ್ ಲೋಕಪಾಲ್ ನಲ್ಲಿ ಲಂಚ್ ಕೋಡುವ ಮತ್ತು ತೆಗೆದುಕೊಳ್ಳುವ ಇಬ್ಬರಿಗೂ ಶಿಕ್ಷೆ ಎಂದರೆ ಮಾತ್ರ ಅದು ಯಶಸ್ವಿಯಾಗಿ ಮಾಡಲು ಆಗುತ್ತದೆ. ಇಲ್ಲವಾದಲ್ಲಿ ದುಡ್ಡು ಕೊಡುವ ಜನರು ಇದ್ದೆ ಇರುತ್ತಾರೆ, ಅವರಿಗೆ ಎಂದು ಶಿಕ್ಷೆಯ ಭಯ ಇರುವದಿಲ್ಲ.

ಈ ಹೋರಾಟ ನಿಲ್ಲಬಾರದು ಮತ್ತು ಇದು ಸಂಘಟನೆಗಳ ಪ್ರಚಾರಕ್ಕೆ ಬಲಿಯಾಗದರಿಲಿ

ನಿನ್ನೆ ಅನೇಕ ಸಂಘಟನೆಗಳು ಇದಕ್ಕೆ ಬೆಂಬಲ ಸೂಚಿಸಿ ಸ್ವಾತಂತ್ರ ಮೈದಾನಕ್ಕೆ ಬಂದಿದ್ದು ಒಳ್ಲೆಯ ಬೆಳವಣಿಗೆ, ಆದರೆ ತಾವು ಬಂದಿದ್ದೇವೆ ಎನ್ನುವುದೇ ದೊಡ್ಡ ಪ್ರಮಾಣದಲ್ಲಿ ತೋರಿಸುವ ಮಟ್ಟಿಗೆ ಬ್ಯಾನರ್, ಭಿತ್ತಿಪತ್ರ ಹಿಡಿದುಕೊಂಡು, ತಮ್ಮದೇ ಗುಂಪು ಮಾಡಿಕೊಂಡು ಹೋಗುತ್ತ ಇದ್ದಿದ್ದು. ದೇಶ ಭಕ್ತರೂ ಎಂದರೆ ನಾವೇ, ಇದು ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಎಂದೇ
ಮಾಧ್ಯಮಗಳ ಮುಂದೆ ಅದನ್ನು ಎದ್ದು ಕಾಣುವ ಹಾಗೆ ಪ್ರದರ್ಶನ ಮಾಡುತ್ತ ಇದ್ದೀದ್ದು ಸ್ವಲ್ಪ ಅತಿಯಾಯಿತು ಅನಿಸಿತು. ಇದರಲ್ಲಿ ಜನರು ತಮ್ಮ ಸಂಘಟನೆ,ಸಂಘ, ಪಕ್ಷವನ್ನು ಬಿಟ್ಟು ಪಾಲ್ಗೋಳ್ಳಬೇಕು. ಆಗಲೇ ಹೋರಾಟಕ್ಕೆ ಒಂದು ಅರ್ಥ.

ಜನಸಾಮಾನ್ಯರು ಇಲ್ಲಿಗೆ ಬಿಡಬಾರದು, ಇದು ನಮಗೆ ಗೆಲುವು ಮತ್ತು ಒಗ್ಗಟ್ಟಿಗೆ ಸಂದ ಜಯ. ಎಲ್ಲಾ ಜನಸಾಮಾನ್ಯರ ಸಮಸ್ಯೆಗಳಿಗೆ ಇದೇ ರೀತಿ ನಾವು ನಿಂತರೆ ಅಧಿಕಾರದಲ್ಲಿ ಇರುವರು ೨ ಬಾರಿ ಯೋಚನೆ ಮಾಡುತ್ತಾರೆ, ಇಲ್ಲವಾದಲ್ಲಿ ಅವರಿಗೂ ನೀವು ಹೊಡೆದ ಹಾಗೆ ಮಾಡಿ, ನಾವು ಕಿರುಚಿದ ಹಾಗೆ ಮಾಡ್ತಿವಿ ಎನ್ನುವುದು ಆಗುತ್ತದೆ.

ಕೊನೆಯ ಗುಟುಕು
ನಮ್ಮ ರಾಜ್ಯದ ಮುಖ್ಯಮಂತ್ರಿ ಅಣ್ಣಾ ಹಜಾರೆ ಹೋರಾಟಕ್ಕೆಬೆಂಬಲ ಕೊಟ್ಟಿರುವುದು ಮತ್ತು ಆವರು ದಿನ ತಿನ್ನುವ ೪ ಹೊತ್ತಿನ ಊಟದಲ್ಲಿ ಒಂದನ್ನು ಉಪವಾಸ ಮಾಡಿ ಬೆಂಬಲ ಸೂಚಿಸಿರುವುದು ನಿಜಕ್ಕೂ ಹೋರಾಟಕ್ಕೆ ಆನೆ ಬಲ ಬಂದಿದೆ. ಇದು ಬಿಜೆಪಿಯ ಗೆಲುವು ಎಂದು ತಮ್ಮ ೨ ಬೆರಳನ್ನು V ಆಕಾರದಲ್ಲಿ ಅಲ್ಲಾಡಿಸುತ್ತ ಹೇಳಿದರೂ ಆಶ್ಚರ್ಯವಿಲ್ಲ.

Saturday, March 19, 2011

ಹೋಳಿ ಹುಣ್ಣಿಮೆ ..ನಮ್ಮ ಸಂಸ್ಕೃತಿಯಲ್ಲಿ ಇರಲಿಲ್ಲವೇ ?

೧೪ ವರುಷಗಳ ಹಿಂದಿನ ಮಾತು, ಇವತ್ತಿನ ಹಾಗೆ ಹೋಳಿ ಹುಣ್ಣಿಮೆ, ಸೂಪರ್ ಮೂನ್ ಆಗಿರಲಿಲ್ಲ, ಆದರೆ ನಾವುಗಳು ಸೂಪರ್ ಮೂಡಿನಲ್ಲಿ ಇದ್ದೆವು. ಹೋಳಿ ಆಚರಣೆಗೆ ಇಳಿದೆವು, ಅದು ನಡೆದಿದ್ದು ಗೆಳೆಯನ ಹಾಸ್ಟೆಲಿನಲ್ಲಿ . ಹೇಳಿ ಕೇಳಿ ಅದು ಒಂದು ವರ್ಗದ
ಹಾಸ್ಟೆಲ್ , ಅನೇಕ ರೀತಿ-ರಿವಾಜುಗಳು ಇದ್ದವು. ಆದರೆ ಅವತ್ತು ನಾವು ಪ್ರತಿಯೊಬ್ಬರನ್ನು ರೂಮುಗಳಿಂದ ಆಚೆ ಎಳೆದು ಆಡಿದೆವು,
ಕೆಲವರು ಮೊದಲು ಆ ಓ ಎನ್ನುತ್ತ ಇದ್ದರು, ಯಾವಾಗ ನೀರಿಗೆ ಇಳಿದ ಮೇಲೆ ಚಳಿ ಎನು, ಮಳೆ ಎನು ಅನ್ನುವ ಹಾಗೆ ಮುಂದುವರೆಯುತ್ತ ತುಂಬಾ ಜೋಶಿನಲ್ಲಿ ಅವರು ಬಣ್ಣ ಬಳಿಸಿಕೊಂಡ ಹಾಗೆ ಬೇರೆಯವರಿಗೆ ಬಳಿಯುತ್ತ ಇದ್ದರು, ಒಬ್ಬರನ್ನು ಇನ್ನೊಬ್ಬರು ಅಟ್ಟಿಸಿಕೊಂಡು ಹೋಗುವುದು, ತೊಟ್ಟಿಯನ್ನು ವಿವಿಧ ಬಣ್ಣಗಳನ್ನು ಹಾಕಿ ಸಾಕ್ಜಾತ್ ಕೊಚ್ಚೆ ಮಾಡಿದ್ದು, ಅದರಲ್ಲಿ ಹೊಸಬರನ್ನು ಎತ್ತಿ ಅದ್ದುವ ಕಾರ್ಯ ಪಾಂಗಿತವಾಗಿ ಸಾಗಿತ್ತು.

ಆಟದ ರಂಗು ಎರುವುದೇ ಹೊಸ ಹೊಸ ರೀತಿಯಲ್ಲಿ ಬಣ್ನ ಬಳಿಯುವದರಿಂದ, ಮೊಟ್ಟೆ, ಟೊಮ್ಯಾಟೊ ಸಿಲ್ವರ್ ಪೆಂಟ್ ಎಲ್ಲಾ ಆಚೆ ಬಂದು, ಯಾರು ಯಾರು ಎಂದು ಅವರಿಗೆ ಮಾತ್ರ ಗೊತ್ತಿತ್ತು. ಕನ್ನಡಿಯ ಮುಖ ನೋಡಿಕೊಂಡರೆ ಯಾರಪ್ಪ ಇದು ಎಂದು ನಮಗೆ
ಸಂಶಯ ಮೂಡುವ ಹಾಗೆ ನಮ್ಮ ಮುಖ ವಿಕಾರ ಆಗಿತ್ತು.

ನಮ್ಮ ಕೇಕೆ ಆಟಗಳನ್ನು ಯಾರೋ ಆ ಹಾಸ್ತೆಲ್ ನಡೆಸುವ ಒಂದು ಟ್ರಸ್ಟಗೆ ಹೇಳಿದ್ದರು , ತಕ್ಷಣ ನಮಗೆ ಕೂಡಲೆ ನಿಲ್ಲಿಸಿ ಎಲ್ಲಾ ಕಡೆ ತೊಳೆಯಬೇಕು ಎಂದು ಆದೇಶ ಕೊಟ್ಟರು. ಆದರೆ ಅದನ್ನು ಕೇಳುವ ವ್ಯವಧಾನ ನಮಗೂ ಇರಲಿಲ್ಲ. ಸ್ವಲ್ಪ ಹೊತ್ತು ಆಡಿ, ಆಮೇಲೆ ಎಲ್ಲಾ ತೊಳೆಯುತ್ತೆವೆ ಎಂದು ಹುಡುಗರಲ್ಲಿ ಒಬ್ಬನು ಹೇಳಿದ, ಅದಕ್ಕೆ ಎಲ್ಲರೂ ಹೂ..ಎಂದು ಚೀರಿದರು. ಆದರೆ ಅದು ಯಾವ ರೀತಿ
ಟ್ರಸ್ಟ ಜನರಿಗೆ ಹೋಯಿತೋ ನಾ ಕಾಣೆ. ನಮ್ಮ ಮೇಲೆ ಪ್ರತಿಕಾರ ತೆಗೆದುಕೊಳ್ಳಲು, ಎಲ್ಲಾ ನಳ( ನಲ್ಲಿ) ನೀರು ಬರದ ಹಾಗೆ ಮಾಡಿ ಬಿಟ್ಟರು.

ನಮ್ಮ ಸಂಸ್ಕೃತಿ ಅಲ್ಲದ ಹುಚ್ಚಾಟಗಳನ್ನು ಆಡುತ್ತಾರ, ನೀರಿಲ್ಲದೆ ನನ್ನ ಮಕ್ಕಳು ಒದ್ದಾಡಬೇಕು, ಬುದ್ದಿ ಬರೋ ಹಾಗೆ ಮಾಡುತ್ತೆನೆ ಎಂದು ಪೋನಿನಲ್ಲಿ ಆ ಕಡೆಯಿಂದ ಕೇಳಿದ್ದು, ಅದನ್ನು ಆ ಕಡೆಯಿಂದ ಕೇಳಿಸಿಕೊಂಡ ಹುಡುಗನು ಬಂದು ನಮಗೆ ಹೇಳಿದ್ದು, ಒಂದು ನಿಮಿಷ ಎಲ್ಲರಲ್ಲಿ ಸಂತೋಷಕ್ಕೆ ತಣ್ಣಿರು ಎರಚಿದ ಹಾಗೆ ಆಯಿತು. ಆಮೇಲೆ ಗೆಳೆಯರ ಮನೆಗಳಲ್ಲಿ ಸ್ನಾನ ಮಾಡಿದ್ದು ಆಯಿತು.
ಆದರೆ ಮರುದಿನ ಆ ಹಾಸ್ಟೆಲಿನ ನೋಟಿಸ್ ಬೋರ್ಡಿನಲ್ಲಿ ಇದರ ಬಗ್ಗೆ ಉಲ್ಲೇಖ ಆಗಿದ್ದ ಸಾಲುಗಳು ಇವತ್ತು ನನಗೆ ಜ್ಞಾಪಕ ಇವೆ ..

"ಹೋಲಿ ಆಚರಣೆ ನಮ್ಮದಲ್ಲ, ಇದು ಬೇರೆಯವರ ಸಂಸ್ಖೃತಿ. ಬೇರೆಯವರ ಆಚರಣೆಗಳನ್ನು ಮಾಡುತ್ತ, ಚೀರುತ್ತ ಹಾರಾಡುವುದು
ನಿಮ್ಮನ್ನು ಕ್ರೈಸ್ತರನ್ನಾಗಿ ಮಾಡುತ್ತ ಇದೆ ..ಬ್ಲಾ ಬ್ಲಾ ..

ಈ ಮಾತುಗಳನ್ನು ಅನೇಕ ಬಾರಿ ನಮ್ಮ ಅಜ್ಜ-ಅಜ್ಜಿಯದಿಂರು ಹೇಳಿದ್ದರು, ಹೊಸ ಪದ್ದತಿಗಳನ್ನು ತರುತ್ತ ಇದ್ದೀರಾ, ಅದೇನು ಮಧ್ಯಾಹ್ನ ತನಕ ಆಡೋದು, ಹೀಗೆ ಹತ್ತು ಹಲವಾರು ಮಾದರಿಯಲ್ಲಿ ಕೇಳಿದ್ದೆವು, ಒಟ್ಟಾಗಿ ಇದರ ತಾತ್ಪರ್ಯ ಇದೆ.
ಇದು ಕನ್ನಡಿಗರ ಹಬ್ಬ ಅಲ್ಲ, ಇದು ಇತ್ತಿಚಿಗೆ ಬಂದ ಹಬ್ಬ, ಅದರಲ್ಲೂ ನಾರ್ತಿಗಳ ಪ್ರಭಾವದಿಂದ ಬಂದಿದೆ. ಆದರೆ ಚಿಕ್ಕ ವಯಸ್ಸಿನಿಂದ ನಾನು ಉತ್ತರ ಕರ್ನಾಟಕದಲ್ಲಿ ಹಾಗೆ ಆಚರಿಸಿಕೊಳ್ಳುತ್ತ ಇದ್ದೆವಲ್ಲಾ ಎಂದರೆ, ಆ ಜಾಗವು ಮರಾಠಿ ಮತ್ತು ಉತ್ತರ ಭಾರತೀಯರ ಪ್ರಭಾವದಲ್ಲಿ ಇರುವುದೇ ಇದಕ್ಕೆ ಕಾರಣ ಎಂದು ಹೇಳಿ ನಮ್ಮ ಬಾಯಿ ಮುಚ್ಚಿಸುತ್ತ ಇದ್ದರು. ಕಾಲಕ್ರಮೇಣ ಇದು
ನಾರ್ತಿಗಳ ಹಬ್ಬ, ನಾವು ಹಬ್ಬ ಆಚರಿಸುವುದು ನಾರ್ತಿಗಳ ಸಂಸ್ಕ್ರುತಿಯನ್ನು ಅಪ್ಪಿಕೊಂಡ ಹಾಗೆ, ಅವರ ದಾಸ್ಯಕ್ಕೆ ಹೋದ ಹಾಗೆ ಅನ್ನುವ ಹೊಸ ವಾದ ಕೇಳಿಬರತೊಡಗಿತು. ಅದಕ್ಕೆ ಪುಷ್ಟಿ ಕೂಡುವ ಹಾಗೆ ಕಚೇರಿಗಳಲ್ಲಿ ನಾರ್ತಿಗಳು ನಮ್ಮ ಹಬ್ಬ ಎಂದು ಬಿಂಬಿಸುತ್ತ ಇದ್ದಾಗ ಒಂದು ಚೂರು ಬಣ್ಣ ಬಳಿಸಿಕೊಂಡರೆ ಹಿಂಸೆ ಆಗುತ್ತ ಇತ್ತು. ಒಂದು ರೀತಿಯಲ್ಲಿ ೧೫ ವರುಷಗಳ ಹಿಂದೆ ಹೇಳಿದ್ದ ಮಾತುಗಳನ್ನು ನಾನು ಗೊತ್ತೊ ಗೊತ್ತಿಲ್ಲದೇ ಒಪ್ಪಿಕೊಂಡು ಬಿಟ್ಟಿದ್ದೆ.

ಆವತ್ತು ಒಂದು ದಿನ ರಾಜಕುಮಾರ್ ಅವರ ಕಾಮಣ್ನನ ಮಕ್ಕಳು ಹಾಡು ನೋಡುತ್ತ ಇದ್ದಾಗ , ಇದು ನಮ್ಮ ಪೀಳಿಗೆಯ ಅನುಕರಣೆ ಇಂದ ಬಂದಿದ್ದಲ್ಲ, ಹಿಂದೆಯೂ ಇತ್ತು ಅನಿಸಿತು. ಹಾಗಿದ್ದರೆ ಇದು ನಮ್ಮ ಹಬ್ಬ ಅಲ್ಲವೇ, ನಾವು ಅನುಕರಣೀಯ ದಾಸ್ಯದಲ್ಲಿ ಇದ್ದೇವೆ
ಎಂದು ಅನಿಸುತ್ತ ಇತ್ತು.

ಗಮನಿಸಿ ನೋಡಿದರೆ ಜಗತ್ತಿನ ನಾನಾ ಭಾಗಗಳಲ್ಲಿ ಬಣ್ಣ, ನೀರಿನ ಎರಚುವಿಕೆ ಬೇರೆ ಬೇರೆ ಹೆಸರಿನಲ್ಲಿ ಇದೆ. ಅದನ್ನು ಕೇವಲ ಒಬ್ಬರ ಸಂಸ್ಕೃತಿ ಎಂದು ಬ್ರಾಂಡ್ ಮಾಡುವುದು ನಿಜಕ್ಕೂ ತಪ್ಪು. ಭಾರತದಲ್ಲಿ ಹೋಲಿ ಆಚರಣೆ ನೋಡಿದರೆ ಉತ್ತರದಲ್ಲಿ ಹೆಚ್ಚು, ಬಾಂಗ್ ಬಳಕೆ ಇಂದ ಅದರ ಕಿಕ್ ಬೇರೆ ಇರಬಹುದು , ಆದರೆ ಅದು ದಕ್ಷಿಣದಲ್ಲಿ ಇರಲೇ ಇಲ್ಲ, ಸ್ವಾತಂತ್ರ ಬಂದ ಮೇಲೆ ಚಿತ್ರಗಳ ಪ್ರಭಾವದಿಂದ ನಾವು ಕಲಿತೆವು ಎಂಬ ವಾದವನ್ನು ಯಾಕೋ ಮನಸ್ಸು ಯಾವತ್ತು ಒಪ್ಪುತ್ತ ಇರಲಿಲ್ಲ.


ಚರಿತ್ರಯ ಪುಟಗಳನ್ನು ಅರಿಸುತ್ತ.



ಒಮ್ಮೆ ಹಂಪೆ ಬೇಟಿ ಕೊಟ್ಟಾಗ ಅಲ್ಲಿಯ ಜನ ಹೋಲಿ ಹಬ್ಬವನ್ನು ಅರಿಶಿಣ ನೀರಿನಲ್ಲಿ ಆಡುತ್ತ ಇದ್ದರು ಎಂದು ASI ಸಿಬ್ಬಂದಿ ಹೇಳಿದರು. ನಾನು ಅದಕ್ಕೆ ದಾಖಲೆ ಇದೆಯಾ ಎಂದು ಕೇಳಿದಾಗ, ಹಜಾರ ರಾಮನ ದೇವಾಲಯದಲ್ಲಿ ಕೆತ್ತನೆಗೆಳು ಇವೆ, ನೋಡಿಕೊಂಡು ಬನ್ನಿ ಎಂದರು. ಆ ದೇವಸ್ಥಾನಕ್ಕೆ ಬೇಟಿಕೊಟ್ಟಾಗ ಕಂಡಿದ್ದು ಒಂದು ೨ ಸಾಲುಗಳು ಬಣ್ಣದ ಎರಚುವಿಕೆಯನ್ನು ಸಾರುವ ಚಿತ್ರಗಳು. ಒಂದು ಸಾಲಿನಲ್ಲಿ ಪಿಚಕಾರಿ ಮಾದರಿಯಲ್ಲಿ, ಇನ್ನೊಂದರಲ್ಲಿ ಒಂದು ಬಕೆಟ್ ಇಂದ ಬಣ್ಣ ತೆಗೆದುಕೊಳ್ಳುತ್ತ ಇರುವುದು. ಒಬ್ಬರಿಗೆ ಒಬ್ಬರು ಹಚ್ಚುತ್ತ ಇರುವುದು ..ಹೀಗೆ ಅಂದಿನ ದಿನಗಳ ಆಚರಣೆ ನಮಗೆ ಕಾಣುತ್ತದೆ.


ಅಲ್ಲಿಗೆ ಈ ಹಬ್ಬ ಕನ್ನಡ ರಾಜ್ಯದ ವಿಜಯನಗರ ಸಮಯದಲ್ಲೂ ಇತ್ತು ಎನ್ನಬಹುದು. ಕಾಲಕ್ಕೆ ತಕ್ಕಂತೆ ಆಚರಣೆ ಬೇರೆಯಾಗಿದೆ , ಆದರೆ ಹಬ್ಬದಲ್ಲಿ ಬರುವ ಮಜ ಮತ್ತು ಆನಂದ ವಿಜಯನಗರ ಸಮಯದಲ್ಲೂ ಒಂದೆ, ಇವತ್ತಿಗೂ ಒಂದೆ. ಇದಕ್ಕೆ ಸಂಸ್ಕೃತಿ-ಗಡಿ ಬಂಧನದಲ್ಲಿ ಹಾಕಿ ನಮ್ಮ ಮಕ್ಕಳಿಗೆ ಆಚರಿಸ ಬೇಡಿ ಎಂದು ಹೇಳಿದಾಗ ಅದರಿಂದ ಆಗುವ ನಷ್ಟ ತುಂಬಾ. ಮಕ್ಕಳಿಗೆ ಸಂತೋಷ ಕೊಡುವ ಈ ಹಬ್ಬ ನಮ್ಮ ಸಂಸ್ಕೃತಿಯಲ್ಲಿ ಇಲ್ಲ, ಬೇರೆಯವರ ಸಂಸ್ಕ್ರುತಿ ಚೆನ್ನಾಗಿದೆ ಎಂದೆನಿಸಿ, ಕೀಳರಿಮೆ ಬಂದರೆ ಅದಕ್ಕೆ ನಾವೇ ಹೊಣೆಯಾಗುತ್ತೆವೆ.


ಹೋಲಿ ಬಹಳ ಹಿಂದಿನ ಸಂಪ್ರದಾಯ ಎಂದು ಎಲ್ಲರೂ ಒಪ್ಪುವ ವಾದ, ಅದಕ್ಕೆ ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಇನ್ನು ಚಾಲ್ತಿಯಲ್ಲಿ ಇದೆ, ಅದೇ ಮೈಸೂರಿನ ಕಡೆ ಮರೆಯಾಗಿದೆ. ಮೈಸೂರಿನಲ್ಲಿ ಮುಖ್ಯವಾಗಿ ಸ್ವಲ್ಪ ತಮಿಳುನಾಡಿನ ವೈದಿಕ ಸಂಸ್ಕೃತಿ ಸೇರಿರುವುದು ಇದಕ್ಕೆ ಕಾರಣವಿರಬಹುದು ಎಂದೆನಿಸುತ್ತದೆ.

ಇಂದಿನ ಪೀಳಿಗೆಗೆ ...
ಹೋಲಿ ಹಬ್ಬ ಯಾವ ನಾರ್ತಿಗಳ ಪೇಟೆಂಟ್ ಹಬ್ಬ ಅಲ್ಲ, ನಿಮ್ಮ ಅಜ್ಜ ಅಜ್ಜಿ ಹೇಳುವ ಸಂಸ್ಕೃತಿ ಕಥೆಯನ್ನು ಕೇಳದೆ ಅವರಿಗೆ ತಿಳಿ ಹೇಳಿ ಮತ್ತು ಹಬ್ಬ ಆಚರಿಸಿ. ಜಲಕ್ರೀಡೆ, ಬಣ್ನ ಎರಚುವ ಹಬ್ಬ ನಮ್ಮ ಸಂಸ್ಕೃತಿ ಎಂದು ನಂಬಿ ಖುಷಿಯಿಂದ ಆಟವಾಡಿ. ನನ್ನ ಗೆಳೆಯ ಮಹೇಶ್ ಹೇಳುತ್ತ ಇದ್ದ, ಬಾಗಲಕೋಟೆಯಲ್ಲಿ ಇದನ್ನು ೧ ವಾರ ಆಚರಣೆ ಮಾಡುತ್ತಾರೆ. ನೀವು ಒಂದು ದಿನ ಅದರೂ ಮಾಡಬೇಕು ಅಲ್ವಾ ?

Wednesday, March 16, 2011

ಊಟಕ್ಕೆ ಇಲ್ಲದ ಉಪ್ಪಿನಕಾಯಿ ಸಂಸ್ಕೃತವಾಗದಿರಲಿ.

ತಿಂಗಳಿಗೆ ಒಮ್ಮೆ ನನಗೆ ಭಾರತೀಯನಾಗಲು ಹೆಮ್ಮೆ ಪಡು, ಇದನ್ನು ೧೦೦ ಜನರಿಗೆ ಕಳಿಸಿ ನಿನ್ನ ದೇಶಪ್ರೇಮವನ್ನು ಮೆರೆ ಎಂದು ಒಂದು ಮಿಂಚೆ ಬರುತ್ತಲೆ ಇರುತ್ತದೆ. ಅನೇಕ ವರುಷಗಳ ಹಿಂದೆ ಅದನ್ನು ಕಳಿಸಿದವರಿಗೆ ಬೈದು ಉತ್ತರ ಬರೆಯುತ್ತ ಇದ್ದೆ. ಆದರೆ ಇದು ಸಮಯ ಹರಣ ಎಂದೆನಿಸಿ, ದೇಶಪ್ರೇಮವನ್ನು ಮರೆಯುತ್ತ ಮಿಂಚೆಯನ್ನು ಸ್ಪಾಮ್ ಮಾಡುತ್ತ ಬಂದಿರುವೆ. ಆ ಮಿಂಚೆಯಲ್ಲಿ ಒಂದು ಸಾಲು ಇವತ್ತು ನನಗೆ ಮತ್ತೆ ಜ್ಞಾಪಕ ಬಂತು. ಅದೆನೆಂದರೆ ಮೊದಲ ನ್ಯೂಕ್ಲಿಯರ್ ಕಂಡು ಹಿಡಿದಿದ್ದು ಭಾರತೀಯರು, ಅದನ್ನು ಬಳಸಿದವರಲ್ಲಿ ರಾಮನು ಒಬ್ಬನು ..ಇತ್ಯಾದಿ. ಪೊಕ್ರಾನ್ ಆಗಿ ಕಲಾಂ ಗೆ ಹೆಸರು ಬರುತ್ತ ಇದ್ದ ಸಮಯದಲ್ಲಿ ಇ ಮಿಂಚೆ ಹೆಚ್ಚು ಹರಿದಾಡುತ್ತ ಇತ್ತು. ಅದರ ಸಾರಂಶವೆಂದರೆ ನಾವು ಆಗಲೇ ಕಂಡು ಹಿಡಿದಿದ್ದೆವು, ನಮ್ಮ ದೇವಾನು ದೇವತೆಗಳಿಗೆ ಮತ್ತು ಮಾನವರಿಗೆ ಅದು ಆಟದ ವಸ್ತು ಆಗಿತ್ತು.

ಆ ಜ್ಞಾನ ನಮ್ಮಲ್ಲಿ ಎಲ್ಲೊ ಇರಬೇಕು ಅಲ್ಲವೇ, ಅದು ಎಲ್ಲಿದೆ ಎಂದು ತಿಳಿಯುವದಕ್ಕೆ ನಮಗೆ ಸಂಸ್ಕೃತ ಜ್ಞಾನ ಬೇಕು. ಅದಕ್ಕೆ ಕೊಟ್ಯಾಂತರ ರೂಪಾಯಿ ಅನುದಾನ ಬೇಕು, ಪ್ರತಿ ರಾಜ್ಯದಲ್ಲಿ ೧೦೮ ಅಧ್ಯಯನ ಪೀಠ ಮತ್ತು ವಿಶ್ವವಿದ್ಯಾಲಯ ಬೇಕು.
ನಾವುಗಳು ಗಣತಿಯಲ್ಲಿ ಒಂದು ಪದ ಅರ್ಥ ತಿಳಿಯದಿದ್ದರೂ ಸಂಸ್ಕುತ ನನಗೆ ಗೊತ್ತಿರುವ ಭಾಷೆ ಎಂದು ಬರೆಸಬೇಕು.



ಇಷ್ಟೆಲ್ಲಾ ಮಾಡಿ ಸಂಸ್ಕೃತ ಪಂಡಿತರಿಂದ ನೀವು ನ್ಯೂಕ್ಲಿಯರ್ ಬಗ್ಗೆ ಕೇಳಿದರೆ ತಪ್ಪು ಆಗುತ್ತದೆ, ಅಷ್ಟೆಲ್ಲಾ ಓದಿದ ಜನರಿಂದ ಕೊನೆಗೆ ಆಚೆ ಬರುವುದು ಕೇವಲ ಕಾಳಿದಾಸ ಮತ್ತು ಬಾಣ ಅಷ್ಟೇ.


ತಮಾಷೆ ಸಾಕು.. ಇವತ್ತು ದೊಡ್ಡ ಸುನಾಮಿ ಬಡೆದು ಜಪಾನ್ ತತ್ತರ ಆಗಿದೆ, ಅಣು ವಿಕಿರಣ ಎಲ್ಲಡೆ ಹಬ್ಬುತ್ತಿದೆ. ಅಯ್ಯೋ ನಮಗೇನು ಚಿಂತೆ ಇಲ್ಲ ಟಿವಿ೯ ನಲ್ಲಿ ನೋಡಿದೆ ಎಂದು ಸುಮ್ಮನೆ ಆಗದೇ ನಾವು ಇವತ್ತು ಮನುಕುಲದ ಬಗ್ಗೆ ಚಿಂತೆ ಮಾಡಬೇಕಾಗಿದೆ. ಅಣುವಿಕಿರಣವನ್ನು ತಡೆಯುವ ಬಗ್ಗೆ ನಮ್ಮ ಸಂಸ್ಕೃತ ಗ್ರಂಧಗಳಲ್ಲಿ ಇಲ್ಲದೆಯೆ ಇರುತ್ತದೆಯೇ ?, ಅದನ್ನು ಹೆಕ್ಕಿ ಆಚೆ ಹಾಕಿ ಅನೇಕ ಮನುಕುಲವನ್ನು ರಕ್ಷಿಸಿದರೆ, ಜಗತ್ತಿಗೆ ಸಂಸ್ಕ್ರುತ ಬಗ್ಗೆ ಗೌರವ ಬರುತ್ತದೆ ಮತ್ತು ಅನುದಾನ ಸಿಗಲು ಸರ್ಕಸ್ ಮಾಡಬೇಕಾಗಿಲ್ಲ ಇಲ್ಲ ಮನೆ ಮುಂದೆ ಸ್ಟಿಕರ್ ಹಚ್ಚಿಕೊಳ್ಳಬೇಕಾಗಿಲ್ಲ.

ಮೊದಲು ವಾಸ್ತು, ಜ್ಯೋತಿಷ್ಯ, ಬಾಣ-ಕಾಳಿದಾಸ, ಇವರು ಬರೆದ ಪುಸ್ತಕಗಳನ್ನು ಬಂದು ಮಾಡಿ, ವಿಕಿರಣ ಬಗ್ಗೆ ಉಲ್ಲೇಖವಿರುವ ಶಾಸ್ತ್ರಗಳನ್ನು ಅಧ್ಯಯನ ಮಾಡಬೇಕೆಂದು ಸರ್ಕಾರ ಅದೇಶಿಸಬೇಕು. ಮನುಕುಲದ ಅಳಿವು ಉಳಿವು ಇಂದು ಸಂಸ್ಕೃತದ ಮೇಲೆ ನಿಂತಿದೆ, ನಾವಿದ್ದರೆ ಅಲ್ಲವೇ ನಾಳೆ ಸಂಸ್ಕೃತ ಇರುವುದು ?.

Friday, March 11, 2011

ನಾರಾಯಣ ಮೂರ್ತಿಯವರು ಕಂಡಿದ್ದೇನು, ಕಾಣದಿದ್ದು ಎನು ?

ಮೊದಲಿಗೆ ವಿಶ್ವ ಕನ್ನಡ ಸಮ್ಮೇಳನ ಯಶಸ್ವಿಯಾಗಿ ನಡೆಯಿತು, ಬೆಳಗಾವಿ ಮಾಡಿದ್ದೇ ಒಂದು ದೊಡ್ಡ ಸಾಧನೆ ಆಗುತ್ತದೆ. ಇದನ್ನು ಉದ್ಘಾಟನೆ ಮಾಡಿದ ನಾರಾಯಣ ಮೂರ್ತಿ ಅವರ ಬಗ್ಗೆ ಅನೇಕ ಅಪಸ್ವರಗಳು ಕೇಳಿ ಬಂದವು. ಮುಖ್ಯವಾಗಿ ಗೌರಿ ಲಂಕೇಶ್ ಮತ್ತು ಇತರರ ವರ್ಗ ಅದನ್ನು ಸರಿಯಿಲ್ಲ ಅನ್ನು ಭರದಲ್ಲಿ ಮೂರ್ತಿಗಳು ಸರಿಯಿಲ್ಲ ಎಂದು ವೈಯಕ್ತಿಕ ಟೀಕೆ ಮಾಡಿದರು. ಕೊನೆಗೆ ಇದು ಅಂದುಕೊಂಡ ಹಾಗೆ ಅವರ ಜಾತಿಗೂ ಹೋಗಿದ್ದು ವಿಷಾದಕರ. ಅಲ್ಲಿಗೆ ಆ ವರ್ಗ ಕಾಮಲೆ ಕಣ್ಣಿನಿಂದ ಇಷ್ಟೆ ನನಗೆ ನೋಡಲು ಸಾಧ್ಯ ಎಂದು ತೋರಿಸಿಕೊಟ್ಟಿತು.


ಇನ್ನು ಆ ಕಡೆ ಮೂರ್ತಿಗಳು ಮೊದಲ ಬಾರಿಗೆ ಎಲ್ಲಾ ಕನ್ನಡ ದಿನಪತ್ರಿಕೆ ಸೇರಿದಂತೆ ಎಲ್ಲಾ ಪತ್ರಿಕೆಗಳಿಗೂ ( ವಿಶೇಷ) ಸಂದರ್ಶನ ಕೊಟ್ಟರು. ಅದರಲ್ಲಿ ಆ ಟೀಕೆಗಳಿಗೆ ತಮ್ಮನ್ನು ಸಮರ್ಥನೆ ಮಾಡಿಕೊಳ್ಳುವದಕ್ಕೆ ಸೀಮಿತ ಇಟ್ಟಿದ್ದರು. ದೊಡ್ಡವರು ಅನಿಸಿಕೊಂಡವರು ಕೂಡ ಈ ಸಮರ್ಥನೆಗೆ ಇಳಿದಾಗ ಇಲ್ಲ ತಾವೂ ಕನ್ನಡಿಗರು ಎಂದು ತೋರಿಸಲು ಹೋದಾಗ ಆಗುವ ಆವಾಂತರಕ್ಕೆ ಇವರೇನು ಹೊಸತಲ್ಲ ಬಿಡಿ.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದು ಒಂದು ತಿಂಗಳು ಆಗಿಲ್ಲ , ಮುಖ್ಯವಾಗಿ ವಿಶ್ವಕನ್ನಡ ಸಮ್ಮೇಳನ ಯಾಕೆ ಮಾಡುತ್ತ ಇದ್ದೀರಿ, ಇದು ಹೇಗೆ ನಾಡು ಕಟ್ಟಲು ಸಹಾಯ ಮಾಡುತ್ತದೆ ಎಂದು ಮೊದಲು ನನಗೆ ಸರಿಯಾಗಿ ತಿಳಿಸಿಕೊಡಿ ಆಮೇಲೆ ನಾನು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತೆನೆ ಎಂದು ಹೇಳಿದ್ದರೆ ಚೆನ್ನ ಇರುತ್ತಿತ್ತು. ಅದನ್ನು ಅವರು ತಿಳಿದುಕೊಂಡ ಹಾಗೆ ಇಲ್ಲಿ ತನಕ
ನನಗೆ ಅನಿಸಿಲ್ಲ. ಇದು ವಿಶ್ವದ ಎಲ್ಲಾ ಕನ್ನಡಿಗರ get together ಅನ್ನುವುದೇ ಆಗಿದ್ದಲ್ಲಿ ಮೂರು ದಿನ ಅದೇ ಕಮ್ಮಟಗಳು ಬೇಕಿತ್ತ ಎಂದು ಎಲ್ಲರಿಗೂ ಸಹಜವಾಗಿ ಮೂಡುವ ಪ್ರಶ್ನೆ ಐ.ಟಿ ದಿಗ್ಗಜರಿಗೆ ಬರದಿರುವುದು ಆಶ್ಚರ್ಯವೇ ಸರಿ.


ಮೊದಲಿಗೆ ಮೂರ್ತಿಗಳು ನಾನು ಕನ್ನಡಿಗ ಎಂದು ಪದೇ ಪದೇ ಸಾರಲು ಹೋಗಿದ್ದು. ಆ ಪ್ರಶ್ನೆ ಅವರಲ್ಲೇ ಮೂಡಿದ್ದು ಆದರೂ ಯಾಕೆ ?. ಅಷ್ಟಕ್ಕು ಕನ್ನಡಿಗ ಎಂದರೆ ಅದರ ಪರಿಧಿ ಮತ್ತು ಆಳ ಅವರಿಗೆ ಗೊತ್ತಿದೆ ಅನಿಸುತ್ತೆದೆಯಾ ?. ಕರ್ನಾಟಕದಲ್ಲಿ ಹುಟ್ಟಿದರೆಲ್ಲರೂ ಕನ್ನಡಿಗರೇ, ಇದು ನಮ್ಮ ಸಂವಿಧಾನದಿಂದ ಎತ್ತಿಕೊಂಡು ಹೇಳಿದರೆ ಅದು ಸ್ವಾಭಾವಿಕವಾಗಿ ಬಂದ ಹಕ್ಕು ಅದನ್ನು ಪ್ರೂವ್ ಮಾಡುವ ಅವಶ್ಯಕತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ ಅವರು ನಾನು ನನ್ನ ಹೆಂಡತಿ ಜೊತೆ ಕನ್ನಡಲ್ಲಿ ಮಾತನಾಡುತ್ತೆನೆ, ನಮ್ಮ ಮನೆಯ ಆಳುಗಳ ಜೊತೆ ಕನ್ನಡದಲ್ಲಿ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡ ಪುಸ್ತಕ ಪ್ರಕಟಿಸುತ್ತಾರೆ ಹೀಗೆ ಹೇಳುತ್ತ ನಾನು ಕನ್ನಡಿಗ ಎಂದು ಹೇಳಲು ಹೊರಟಿದ್ದು ನಿಜಕ್ಕೂ ಬಾಲಿಶ ಅನಿಸಿದ್ದು ನಿಜ.

ಮುಂದೆ ಅವರು ತಮ್ಮ ಹಿಂದಿನ ಮಾತುಗಳನ್ನು ಸಮರ್ಥಿಸಿಕೊಳ್ಳುತ್ತ ಕೆಲವು ಉತ್ತಮ ವಿಚಾರಗಳನ್ನು ಹೇಳುತ್ತಾರೆ.
೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ. ೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು. ೩. ಬೆಂಗಳೂರಿನಲ್ಲಿ ಕನ್ನಡಿಗರೂ ಯಾವಾಗಲೂ ಬಹುಸಂಖ್ಯಾತರೇ

ಇವು ಬಹಳ ಉತ್ತಮವಾದ ಮತ್ತು ನನ್ನ ಮನಸ್ಸಿನ ಭಾವನೆಗಳು. ಆದರೆ ಸಂದರ್ಶನ ಮುಂದೆ ಓದುತ್ತ ಹೋದ ಹಾಗೆ ಅವರೆ ಅದನ್ನು ಒಡೆಯುತ್ತಾರೆ. ಹೇಗೆ ಎಂದು ನೋಡೊಣ.

೧. ಕನ್ನಡ ಪ್ರಭಲವಾದರೆ, ಕನ್ನಡಿಗರೂ ಪ್ರಭಲವಾಗಲು ಸಾಧ್ಯ. ಅದರಿಂದ ಕರ್ನಾಟಕ ಪ್ರಭಲ ಆಗುತ್ತದೆ.

ಪ್ರಭಲತೆ ಒಂದು ಭಾಷೆಗೆ ಬರುವುದು ಅದಕ್ಕೆ ಇರುವ ಹೊಟ್ಟೆಗೆ ಹಿಟ್ಟು ಕೊಡುವ ಶಕ್ತಿ ಇಂದ. ಕೇವಲ ೧೦೮ ಸಾಹಿತ್ಯ ಪ್ರಕಾರ, ೭ ಜ್ಞಾನಪೀಠಗಳಿಂದ ಅದು ಬರುವದಿಲ್ಲ. ಭಾಷೆಗೆ ಉದ್ಯೋಗ ಕೊಡುವ ಶಕ್ತಿ ಇದ್ದರೆ ಮಾತ್ರ ಸಮಾಜದಲ್ಲಿ ಒಂದು ಬೆಲೆ ಮತ್ತು ನೆಲೆ ಇರುತ್ತದೆ. ಇಲ್ಲದಿದ್ದರೇ ಕೇವಲ ಶ್ರೀಮಂತರ ಮನೆಯ ಶಾಡಿಲ್ಯಗಳ ಹಾಗೆ ಕಾಣುತ್ತದೆ ಅಷ್ತೆ.
ಮೂರ್ತಿಗಳು ಉದ್ಯೋಗ ಸೃಷ್ಟಿ ಮಾಡುದವರಿಂದ ಮಾತ್ರ ಪ್ರಭಲತೆ ಸಾಧ್ಯ ಎಂದು ಹೇಳಿರುವ ಮಾತು ಸರಿ ಇದೆ, ಆದರೆ ಅದರಲ್ಲಿ
ಭಾಷ ಆಯಾಮ ಇಲ್ಲದಿದ್ದರೆ ಅವರೇ ಹೇಳಿರುವ ಹಾಗೆ ಕ-ಕ-ಕ ಯಾವುದು ಪ್ರಭಲ ಆಗುವದಿಲ್ಲ. ಇನ್ನು ಅವರ ಜಗತ್ತೇ ಆಗಿರುವ ಇನ್ಫೊಸಿಸ್ ಆ ಕೆಲಸ ಮಾಡಿದ್ದರೆ ಅವರನ್ನು ಯಾರು ಪ್ರಶ್ನೆ ಮಾಡುತ್ತ ಇರಲಿಲ್ಲ ಮತ್ತು ಅವರು ತಮ್ಮ ಸಮರ್ಥನೆ ಕೋಡುವ ಕೆಲಸಕ್ಕೂ ಕೈ ಹಾಕಬೇಕಾಗಿರಲಿಲ್ಲ. ಅವರೇ ಅನೇಕ ಕಡೆ ಹೇಳಿರುವ ಹಾಗೆ ಮಾತಿಗಿಂತ ಕೃತಿಗಳು ಮಾತಾಡಲಿ ಎಂದು, ಅದೇ ಆಗಿದ್ದರೆ ಮಾತಿಗೆ ಮುಂದೆ ನಮ್ಮ ಇನ್ಫೊಸಿಸ್ ಇದು ಮಾಡಿದೆ, ಅದು ಮಾಡಿದೆ ಎಂದು ಸ್ವಪ್ರಚಾರ ಮಾಡುವ ಗೋಜಿಗೆ ಅವರೇ ಇಳಿಯುತ್ತ ಇರಲಿಲ್ಲ. ಅವರಿಗೂ ಗೊತ್ತು ಕ-ಕ-ಕ ಪ್ರಭಲ ಆಗದೇ ಇರುವದಕ್ಕೆ ನಾವು ೧೦೮ ಸಮ್ಮೇಳನಗಳು, ೧೦೮ ಹೋರಾಟಗಳನ್ನು ಮಾಡುತ್ತ ಇರುತ್ತೆವೆ ಎಂದು. ಆ ಕೆಲ್ಸ ಇನ್ಫೊಸಿಸ್ ಇಂದ ಅವರೇ ಹೇಳಿದ ಹಾಗೆ ಆಗಿದ್ದರೆ ಇಂದು ಇಸ್ರೇಲ್ ಮಾದರಿಯಲ್ಲಿ ಇರುತ್ತಿದ್ದೆವೂ ಎಂದು. ಇನ್ನು ಅವರಿಗೆ ಇನ್ಫೊಸಿಸ್ ಕಟ್ಟಿರುವದಕ್ಕೆ ಹೆಮ್ಮೆ ಇರಬೇಕೆ ವಿನಹ ಕ-ಕ-ಕ ಪ್ರಭಲತೆ
ಇನ್ಫೊಸಿಸ್ ಮಾಡಿದೆ ಅನ್ನು ತಪ್ಪು ಕಲ್ಪನೆ ಬಗ್ಗೆ ಹೆಮ್ಮೆ ಬೇಡ.

೨. ಕನ್ನಡ ಭಾಷೆಯಲ್ಲಿ ಜಾಗತಿಕೆ ಮಟ್ತದ ಅತ್ಯುತ್ತಮ ವಿಜ್ಞಾನ ಮತ್ತು ಗಣಿತ ಪುಸ್ತಕಗಳು ದೊರಕಬೇಕು.

ನಾವು ಹೇಳುತ್ತ ಇರುವುದು ಕೇವಲ ಇಂಜಿನೇರಿಂಗ್ ಮಾಡಿ ಇನ್ಫೋಸಿಸ್ ಸೇರುವರ ಬಗ್ಗೆ ಅಲ್ಲ. ಕೇವಲ ವಿಜ್ಞಾನ ಮತ್ತು ಗಣಿತ ಅಲ್ಲದೇ ಜಗತ್ತಿನ ಆಗುಹೋಗುಗಳು ಮತ್ತು ಹೊಟ್ಟೆಯ ಹಿಟ್ಟಿನ ವಿಷಯಗಳು ಎಲ್ಲಾ ಕನ್ನಡದಲ್ಲಿ ಸಿಗುವ ಹಾಗೆ ಆಗಬೇಕು. ಆಗ ಮಾತ್ರ ಅದು ಪ್ರಭಲಗೊಳ್ಳಲು ಸಾಧ್ಯ. ಆದರೆ ಅವರೇ ಹುಟ್ಟುಹಾಕಿದ ಗುಳ್ಳೆಯನ್ನು ಅವರು ಹೀಗೆ ಒಡೆಯುತ್ತಾರೆ

"ಬೈರಪ್ಪ, ಅನಂತಮೂರ್ತಿ ಕೃತಿಗಳನ್ನು ಓದಿದಾಗ ನನಗೆ ಸಂತಸ ಆಗುತ್ತದೆ, ಅದೇ ವಿಜ್ಞಾನ ಮತ್ತು ಗಣಿತದ ವಿಷಯಕ್ಕೆ ಇಂಗ್ಲೀಶ್ ಸೂಕ್ತ ಮತ್ತು ಆಪ್ತ. ಯಾವ ವಿಷಯವನ್ನು ಯಾವ ಭಾಷೆಯಲ್ಲಿ ವ್ಯವಹರಿಸಿದರೆ ಸೂಕ್ತವೋ ಅದೇ ಮುಖ್ಯ."

ಇದನ್ನು ನೊಡಿದರೆ ಇವರ ಮನಸ್ಸಿನಲ್ಲಿ ಕನ್ನಡ ಯಾವಗಲೂ ಕೇವಲ ಕಥೆ ಕಾದಂಬರಿಗಳಿಗೆ ಮಾತ್ರ ಸರಿ ಮತ್ತು ಸೂಕ್ತ. ಹೊಟ್ಟೆ
ಹಿಟ್ಟಿನ ಎಲ್ಲಾ ವಿಷಯಗಳಿಗೆ ಇಂಗ್ಲೀಶ್ ಆಪ್ತ ಎಂದು ಹೇಳುವ ಪರಿ ನಿಜಕ್ಕೂ ಬೇಸರ ತರಿಸುತ್ತದೆ. ಬಹುಪಾಲು ಜನರು ಅಂದುಕೊಂಡ ಹಾಗೆ ಕನ್ನಡ ಎಂದರೆ ಕಥೆ,ಕವಿತೆಗಳಿಗೆ ಮಾತ್ರ ಸೀಮಿತ. ಇವರ‍ೆ ಹೇಳುವ ಹಾಗೆ ಕಥೆ-ಕಾದಂಬರಿಗಳಿಂದ ಇಲ್ಲಾ
ಅದನ್ನು ಓದಿ ಆಗುವ ಸಂತಸದಿಂದ ನಮಗೆ ಪ್ರಭಲತೆ ಬರುತ್ತೆದೆಯಾ. ಒಂದು ಕಡೆ ಅದು ಬರಬೇಕು, ಇದು ಬರಬೇಕು ನಮ್ಮ ಭಾಷೆಯಲ್ಲಿ ಹೇಳಿ ಇನ್ನೊಂದು ಕಡೆ ಕನ್ನಡ ಅದಕ್ಕೆಲ್ಲಾ ಸೂಕ್ತ ಅಲ್ಲ, ಅದಕ್ಕೆಲ್ಲಾ ಇಂಗ್ಲೀಶ್ ಸರಿ ಮತ್ತು ಆಪ್ತ ಎಂದು ಹೇಳುವುದು
ಅವರ ಎಡಬಿಂಡಗಿತನ ಎತ್ತಿ ತೋರಿಸುತ್ತದೆ. ಮುಂದೆ ಅವರ ಈ ನಿಲುವೇ ಕನ್ನಡ ಮಾಧ್ಯಮ ತೆಗೆದು ಇಂಗ್ಲೀಷ್ ಮಾಧ್ವಮ ಬೇಕು ಎನ್ನುವದಕ್ಕೆ ಹೊಗುತ್ತದೆ.

ಈಗಲೂ ಕಾಲ ಮಿಂಚಿಲ್ಲ, ಯಾರು ಅವರಿಂದ ಹೊಸತಾಗಿ ಶೌಚಾಲಯವನ್ನೊ ಇಲ್ಲ ಕನ್ನಡ ಸಾಫ್ಟವೇರನ್ನು ಬಯಸುತ್ತ ಇಲ್ಲ.
ಅವರು ಅನೇಕ ಕನ್ನಡ ಮನಸ್ಸುಗಳಲ್ಲಿ ಇಂದಿಗೂ ದೊಡ್ಡ ಸ್ಥಾನದಲ್ಲಿ ಇದ್ದಾರೆ. ಅವರ ಕನಸು
ಮತ್ತು ಅನೇಕರ ಕನ್ನಡಿಗರ ಕನಸು ಒಂದೆ. ಆ ನಿಟ್ಟಿನಲ್ಲಿ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಮಾಡಿ, ಅದನ್ನು ಸರಕಾರಕ್ಕೆ
ತಿಳಿಸಿ ಇಲ್ಲ ಅವರೇ ಹೇಳುವ ಅವರ ಹೆಮ್ಮೆಯ ಇನ್ಫೊಸಿಸ್ ಟ್ರಸ್ಟನಿಂದ ಅಲ್ಲೇ ಇರುವ ಅನೇಕ ಕನ್ನಡ ಮನಸ್ಸುಗಳನ್ನು ಇದಕ್ಕೆ ತೊಡಗಿಸಬಹುದು ಮತ್ತು ೧೦ ವರುಷದಲ್ಲಿ ಹೊಟ್ಟೆಗೆ ಹಿಟ್ಟು ಕೊಡುವ ಅತ್ಯುತ್ತಮ ಪುಸ್ತಕಗಳನ್ನು ಕನ್ನಡದಲ್ಲ್ಲಿ ತರಬಹುದು.

ಅವರಲ್ಲಿ ಇರುವ ಹಣದ ಬಳಕೆಯಿಂದ ಅನೇಕ ಕನ್ನಡ ಪ್ರಭಲತೆ ತರುವ ಕೆಲ್ಸಗಳಿಗೆ ಸಹಾಯ ಮಾಡಬಹುದು. ಎನೂ ಇಲ್ಲ ಅಂದರೂ ಒಂದು ಪ್ಲಾಟಫಾರ್ಮ್ ಹಾಕಿಕೊಟ್ಟು ಅಲ್ಲಿ ಕನ್ನಡ ಮನಸ್ಸುಗಳನ್ನು ಸೇರಿಸಿದರೆ, ಇವತ್ತು ಬ್ಲಾಗಿನಲ್ಲಿ ಕವಿತೆ-ಕಥೆಗಳನ್ನು ಬರೆದುಕೊಂಡು ಅದನ್ನೇ ಕನ್ನಡ ಸೇವೆ ಎಂದು ನಂಬಿರುವ ಕನ್ನಡ ಮನಸ್ಸುಗಳು ನಾಳಿನ ದಿನಗಳಿಗೆ ತಮ್ಮ ಸೇವೆ ಕೊಡುತ್ತಾರೆ. ಆದರೆ ದಯವಿಟ್ಟು ಇದನ್ನು ಸಮಾಜ ಸೇವೆ ಎಂದು ಟ್ಯಾಗ್ ಮಾಡದೇ ನಾಳಿನ ಭವಿಷ್ಯತ್ತಿಗೆ ನಮ್ಮ ಕಾಣಿಕೆ ಎಂದು ಮನಗಂಡು ಮಾಡಿದರೆ ಅನಕೂಲ.



ಕೊಸರು;-
1.
ನಾನು ಉತ್ತರ ಕರ್ನಾಟಕ ಅಳಿಯ, ನನ್ನ ಹೆಂಡತಿ ಜೊತೆ ಕನ್ನಡ ಮಾತನಾಡುತ್ತೆನೆ, ನನ್ನ ಹೆಂಡತಿ ಕನ್ನಡದಲ್ಲಿ ಬರೆಯುತ್ತಾರೆ, ಕನ್ನಡ ಧಾರವಾಹಿಯಲ್ಲಿ ನಟಿಸಿದ್ದಾರೆ ..etc ಅದಕ್ಕೆ ನಾನು ಕನ್ನಡಿಗ ಮತ್ತು ಉದ್ಘಾಟನೆಗೆ ಅರ್ಹ.
ಇದೆಲ್ಲಾ ಒಮ್ಮೆ ಓದಿದಾಗ ನಮ್ಮ ಅಜ್ಜಿಗೆ ಹೇಳಿದ್ದು ಎನು ಗೊತ್ತೆ.. ಅಲ್ಲ ಆ ಅಯ್ಯಮ್ಮನೇ ಉದ್ಘಾಟನೆ ಮಾಡಿದ್ದರೆ ಚೆನ್ನಾ ಇರ್ತಿತ್ತು ಅಲ್ವಾ, ಆಕಿ ಅಲ್ಲಿನ ನೆಲದಲ್ಲಿ ಹುಟ್ಟಿದವಳೂ ಬೇರೆ.
ಇದು ನಿಜಕ್ಕೂ ನಿಜ ಅನಿಸಿತು, ವಿಶ್ವ ಮಹಿಳಾದಿನದ ೧೦೦ ನೇ ವರ್ಶಕ್ಕೆ ಅವರನ್ನು ಆಯ್ಕೆ ಮಾಡಿದ್ದರೆ ನಿಜಕ್ಕೂ ಅರ್ಥಪೂರ್ಣ ಆಗಿರುತ್ತ ಇತ್ತು. ಅಷ್ಟಕ್ಕೂ ಕನ್ನಡಿಗ ಕನಸುಗಳಿಗೆ ಚಾಲನೆ ಕೊಡಲು, ಸಂವೇದನೆ ಇರುವ ಆ ತಾಯಿಯೇ ಸೂಕ್ತ ವ್ಯಕ್ತಿ ಎಂದು ನಮ್ಮ
ಅಜ್ಜಿಗೆ ಅನಿಸಿದ್ದೇ ನನಗೂ ಅನಿಸಿತು.

Saturday, January 22, 2011

ಆ ಸುಂದರ ದೊಡ್ಡ ಕನಸೇ ತಾಯಿ ಭುವನೇಶ್ವರಿ








ಒಂದು ದೊಡ್ಡ ಕನಸನ್ನು ಸಕಾರ ಮಾಡಲು ಗುರಿ-ಗುರು ಇರಬೇಕು. ಒಂದೇ ಗುರಿ ಇರಬೇಕು ಎಲ್ಲರಿಗೂ, ಆ ದಿಕ್ಕಿನಲ್ಲಿ
ಕರೆದುಕೊಂಡು ಹೋಗುವ ಕಡೆ ಗುರು ಸಹಾಯ ಮಾಡಬೇಕು ಅಷ್ಟೆ.

Revolution ಹುಟ್ಟುವುದು ಒಬ್ಬ ವ್ಯಕ್ತಿ ಇಂದ, ಅವನು ಇದ್ದರೆ ಅದೇ ಒಂದು ಶಕ್ತಿ. ಅವನಿಗೆ ಆಗಾದ ಕೆಲ್ಸ ಇಲ್ಲ. ಅವನಿಗೆ ತನ್ನದೇ ಆದ ಜನರು ಇರುತ್ತಾರೆ, ಆವರು ಅವನ ಸಲುವಾಗಿ ಎನಾದರೂ ಮಾಡಲು ಸಿದ್ದರಿರುತ್ತಾರೆ. ಆದರೆ ಅವರು ಮಾಡುವುದು ಅವನ ಸಲುವಾಗಿಯೇ ಮಾತ್ರ. ಅವನಿಗೂ ಅವನ ಜನರಿಗೂ ಸಾಮಾನ್ಯ ಗುರಿ ಇಲ್ಲದಿರುವುದೇ ಅದಕ್ಕೆ ಕಾರಣ. ಇವರ ಕಾಲದಲ್ಲಿ ಅನೇಕ
ಗೆಲವು ಸಿಗುತ್ತದೆ, ಅವನ ಆರಾಧ್ಯ ವರ್ಗ ಬೆಳೆಯುತ್ತದೆ. ಕೊನೆಗೆ ವ್ಯಕ್ತಿಪೂಜೆಗೆ ನಿಂತು, ಗುರಿ ಕಳೆದುಹೋಗುತ್ತದೆ. ವ್ಯಕ್ತಿಗೂ ಕೂಡ
ತನ್ನಿಂದಲೇ ಎಲ್ಲಾ ಅನ್ನೋ ಅಹಂ ಬಂದು ಅವನಿಗೂ ಗುರಿ ಮರೆಯುತ್ತದೆ ಇಲ್ಲ ತಾನೂ ಮಾಡಬಲ್ಲೆ ಒಬ್ಬನೇ ಅನ್ನೋ ಅಹಂ ಇರುತ್ತದೆ. ಇದರಿಂದ ವ್ಯಕ್ತಿ ಇರುವ ತನಕ ಗೆಲುವು, ಸಾಮ್ರಾಜ್ಯ ಇರುತ್ತದೆ ಆಮೇಲೆ ಅದು ಅವನ ಜೊತೆ ಮಣ್ಣು ಆಗುತ್ತದೆ.
ಕೊನೆಗೆ ಜನಗಳ ಗುರಿ ಆ ವ್ಯಕ್ತಿಯ ಪರವಾಗಿ ನಿಲ್ಲುವುದೇ ಆಗುತ್ತದೆ, ಅವನು ಮಾಡುವ ತಪ್ಪುಗಳನ್ನು ಪ್ರಶ್ನೆ ಮಾಡುವ ಹಾಗಿಲ್ಲ.

೧೦೦೦ ವರುಶಗಳ ಕಾಲ ಬಾಳುವಂತಹ ಒಂದು ಯೋಜನೆ ಹಾಕುವುದು, ಕೇವಲ ಕಾಲ-ದೇಶದಲ್ಲಿ ಒಗ್ಗಟ್ಟನ್ನು ಕಂಡಾಗ ಮಾತ್ರ.



ಆಗ ಹೇಗಿತ್ತು ??


ಉತ್ತರದಲ್ಲಿ ಎಲ್ಲಾ ಕಡೆ ಕೊಳ್ಲೆ ಹೊಡೆದ ಮೇಲೆ ಗಮನ ಬಿದ್ದಿದ್ದು ದಕ್ಷಿಣದ ಕಡೆಗೆ, ಇಲ್ಲಿ ಪರಿಸ್ಥಿತಿ ಕೂಡ ಚೆನ್ನಾಗಿ ಇರಲಿಲ್ಲ, ಮೇಲೆ ಸೇವಣರು, ಸ್ವಲ್ಪ ರಾಷ್ಟಕೂಟರು, ದಕ್ಷಿಣದಲ್ಲಿ ಹೋಯ್ಸಳರು, ಆ ಕಡೆ ಚಾಲುಕ್ಯರು ಎಲ್ಲರೂ ಇದ್ದರೂ ಎನು ಇಲ್ಲದ ಹಾಗೆ ಆಗಿದ್ದರೂ. ಇನ್ನೂ ಗೋದವರಿ ಕಡೆ ಇದ್ದ ಕಾಕತೇಯರು ಕೂಡ ಮುಸ್ಲಿಂ ರಾಜರನ್ನು ಎದುರಿಸುವ ಧೈರ್ಯ ಇರಲಿಲ್ಲ. ಮುಖ್ಯವಾಗಿ ದಕ್ಷಿಣ ಭಾರತ ಹಂಚಿಹೋಗಿತ್ತು. ಆಗ ಅದರ ಲಾಭ ಪಡೆಯಲು ಮುಸ್ಲಿಂ ರಾಜರು ದಕ್ಷಿಣದ ಕಡೆಗೆ ಬಂದರು, ಬಂದಾಗ ಅವರ ಉದ್ದೇಶ ಒಂದೇ ಇತ್ತು, ಇಲ್ಲಿ ಇರುವ ಅದರಲ್ಲೂ ದೇವಸ್ಥಾನದಲ್ಲಿ ಅಡಗಿ ಇಟ್ಟಿರುವ ಸಂಪತನ್ನು ಲೂಟಿ ಮಾಡುವುದು ಮತ್ತು ಇನ್ನೊಂದು ಧರ್ಮದ ಅಳಿಸುವುದು. ಆ ಸಮಯದಲ್ಲಿ ವಿದ್ಯಾರಣ್ಯರು ಕಂಡ ಕನಸೇ ಒಗ್ಗಟ್ಟಿನ ಸಾಮ್ರಾಜ್ಯ. ಅದಕ್ಕೆ ಇನ್ನೊಂದು ಕಾರಣ ಇದೆ, ಹಿಂದೆ ಅನೇಕ ಮಹರಾಜರು ಆಳಿದಾಗ, ತಮ್ಮ ಸಮ್ರಾಜ್ಯವನ್ನು ಗುಜರಾತ್ ಇಂದ ತಮಿಳುನಾಡಿನವರೆಗೆ ವಿಸ್ತರಿಸಿದ್ದಾಗ ಇದ್ದ ಕಾಲ ಮತ್ತೆ ಅವು ಹಂಚಿ ಹೋದಾಗ ಬರಲಿಲ್ಲ. ಹಂಚಿ ಹೋದಲ್ಲಿ ಒಡೆದು ಆಳುವರಿಗೆ ಲಾಭ ಆಗುತ್ತದೆ ಎನ್ನುವ ಚರಿತ್ರೆಯ ಪಾಠವನ್ನು ಬಹಳ ಚೆನ್ನಾಗಿ ಮನಗಂಡಿದ್ದ ವಿದ್ಯಾರಣ್ಯರು ಆ ದಿಕ್ಕಿನಲ್ಲಿ ಯೊಚಿಸಿ ಮಾಡಿದ ಮಾಸ್ಟರ್ ಪ್ಲಾನ್ ವಿಜಯನಗರ ಸಾಮ್ರಾಜ್ಯ.

ಹಕ್ಕ-ಬುಕ್ಕರನ್ನು ಕಂಡು ಅವರಿಗೆ ತಮ್ಮ ಕನಸನ್ನು ಹೇಳಿಕೊಂಡಾಗ ಖಂಡಿತ ಅವರಿಗೆ ಅನಿಸಿರುತ್ತದೆ, ಅಲ್ಲ ಸ್ವಾಮಿ ನಾವು ಕೇವಲ ಮಂಡಲಾಧೀಶ್ವರು, ಚಾಲುಕ್ಯ, ಹೊಯ್ಸಳ, ಸೇಣವರು, ಪಾಂಡ್ಯರು , ಕಾಕತೇಯರು ಮಾಡಲಿಕ್ಕೆ ಆಗದನ್ನು ನಾವು ಮಾಡಲು ಸಾಧ್ಯವೇ. ಹಿಂದೆ ಎಲ್ಲರನ್ನು ಒಟ್ಟುಗೂಡಿಸಿದ ನೃಪತುಂಗ, ಪುಲಕೇಶಿ, ಕೃಷ್ಣ, ವಿಷ್ಣುವರ್ಧನ, ಮಯೂರವರ್ಮ ಅವರಿಗೆ ನಾವು ಸಮವೇ . ವಿದ್ಯಾರಣ್ಯರ ಕನಸು ಅವರಿಗೆ ಪೂರ್ತಿ ಅರ್ಥವಾಗದಿದ್ದರೂ ಸರಿ ನಿಮಗೆ ನಮ್ಮ ಸಹಾಯ ಇರುತ್ತದೆ, ನೀವು ನಡೆಸಿದ ಹಾಗೆ ನಡೆಯುತ್ತೆವೆ ಎಂದು ಅವರನ್ನು ಗುರು ಸ್ಥಾನದಲ್ಲಿ ನಿಲ್ಲಿಸಿದರು.

ಆ ದೊಡ್ಡ ಕನಸೇ ತಾಯಿ ಭುವನೇಶ್ವರಿ



ವಿಧ್ಯಾರಣ್ಯರು ಕಂಡ ಕನಸು ಆದರೂ ಹೇಗಿತ್ತು ??

ಮನುಷ್ಯನ ಬೇಕು ಬೇಡಗಳು ಎಲ್ಲಾ ಸಿಗುವಂತ ರಾಜ್ಯವಿರಬೇಕು. ಜಗತ್ತಿನ ಎಲ್ಲಾ ಜನರು ಇಲ್ಲಿ ಬಂದು ಕೊಟ್ಟು ತೆಗೆದುಕೊಂಡು ಹೋಗುವ ಹಾಗೆ. ಇದ್ದರೆ ಇಲ್ಲೇ ಇರಬೇಕು ಎಂಬ ಕನಸನ್ನು ಕಾಣುವ ಹಾಗೆ. ಇವತ್ತು ಬಿಟ್ತರೆ ಮತ್ತೆ ಸಿಗುವದಿಲ್ಲ ಅನ್ನೊ ಆಸೆಬುರಕತನದಲ್ಲಿ ಕಳೆಯದಿರುವ ಹಾಗೆ . ಜನಗಳಿಗೆ ಅಧಿಕಾರ ಇದ್ದು, ರಾಜರು ಕೇವಲ ಅದಕ್ಕೆ fecitilate ಮಾಡುವ ಹಾಗೆ.
ಭಾಷೆ-ಧರ್ಮ-ಜಾತಿ ಎಲ್ಲವನ್ನು ಮೀರಿ ಮಾನವರಿಗೆ ಉದ್ದೇಶಿಸಿ ಮಾಡಿದ ಒಂದು ರಾಜ್ಯದ ಕಲ್ಪನೆ ಅದು.

ಆ ದಿಕ್ಕಿನಲ್ಲಿ ೧೦೦೦ ಸಾವಿರ ವರುಷಗಳ ಕಾಲದೇಶ ಒಗ್ಗಟ್ಟನ್ನು ತರಿಸುವ, ಅಂದರೆ ಎಲ್ಲಾ ಭಾಗದ ಜನ ಮತ್ತು ಇಂದಿನ ಮುಂದಿನ ಪೀಳಿಗೆ ಜನ ಒಂದುಗೂಡಿ ಮಾಡುವ ಕೆಲ್ಸವೇ ಅದು. ಎಲ್ಲಾ ಜನರು ಆ ದೃಷ್ತಿಯಲ್ಲಿ ಇದ್ದರೆ, ಪೀಳಿಗೆಗಳು ಆ ದಿಕ್ಕಿನಲ್ಲಿ ಕೆಲ್ಸ ಮಾಡುತ್ತ ಬಂದರೆ ಕಾಲಕ್ರಮೇಣ ಕನಸು ನನಸು ಆಗುತ್ತದೆ ಎನ್ನುವ ದೊಡ್ಡ ಚಿಂತನೆ ವಿದ್ಯಾರಣ್ಯರದು ಆಗಿತ್ತು.
ಆ ಕನಸನ್ನು end to end ಯಾರೂ ಅರ್ಥ ಮಾಡಿಕೊಂಡಿರಲಿಲ್ಲ, ಆದರೆ ತಮ್ಮ ಪಾತ್ರ ಎನು ಅನ್ನುವ ಜವಬ್ದಾರಿ ಆಗಿನ ಜನರಿಗೆ ಇತ್ತು. ಅದಕ್ಕೆ ಮುಖ್ಯ ಕಾರಣ ಆ ಕನಸಿಗೆ ದೇವರ ಸ್ವರೂಪ ಕೊಟ್ಟು ನೀವು ಮಾಡುವ ಕೆಲ್ಸವೇ ಆ ದೇವರಿಗೆ ಮಾಡುವ ಪೂಜೆ ಎನ್ನುವ ಕಲ್ಪನೆ ಇದ್ದಿರಬಹುದು. ಅಂತಹ ದೊಡ್ಡ ಕನಸನ್ನು ಸಾಮನ್ಯ ಜನರಿಗೆ ತೋರಿಸುವುದು ಹೇಗೆ ಎಂದು ಅನಿಸುತ್ತ ಇದ್ದಾಗಲೇ
ಅವರಿಗೆ ಭುವನೇಶ್ವರಿ concept ಹೊಳೆದಿದ್ದು. ನಮ್ಮ ಧರ್ಮದಲ್ಲಿ ತಾಯಿ ಸ್ಥಾನಕ್ಕೆ ಅದರದೇ ಆದ ಮರ್ಯಾದೆ ಇದೆ, ಆ ಕನಸನ್ನು ದೇವರ ರೂಪದಲ್ಲಿ ತಂದು, ನೀವು ಹೀಗೆ ಹೀಗೆ ಮಾಡಿದರೆ ತಾಯಿ ನಿಮಗೆ ಇದನ್ನು ಕೊಡುತ್ತಾಳೆ ಎನ್ನುವ ರೀತಿಯಲ್ಲಿ ವ್ಯಕ್ತವಾದ ಭಾವನೆ ಅನೇಕ ಕಾಲಗಳ ಮಟ್ಟಿಗೆ ಹೋಯಿತು. ನನ್ನ ಪ್ರಯತ್ನವಿಲ್ಲದೇ ಕೇವಲ ಬೇಡಿಕೊಂಡರೆ ಕೊಡುವದಿಲ್ಲ ಅನ್ನುವ ಸತ್ಯ ಆಗಿನ ಜನರಿಗೆ ತಿಳಿದಿತ್ತು. ಅದಕ್ಕೂ ಮುಖ್ಯವಾಗಿ ಜನರಿಗೆ ಹಾಗೆ ಆಗಲು ಆಗಿನ ನಾಯಕರಲ್ಲಿ ಆ ಭಾವನೆ ಇತ್ತು.
ಎಲ್ಲಿ ತನಕ ಆ ದಿಕ್ಕಿನಲ್ಲಿ ನಾಯಕರು ಯೋಚಿಸಿದರು ಅಲ್ಲಿ ತನಕ ಅದು ಕಾಣುತ್ತ ಇತ್ತು, ಅದರಲ್ಲೂ ಆ ಕನಸನ್ನು ಸರಿಯಾಗಿ ಅರ್ಥ ಮಾಡಿಕೊಂಡವನು ಕೃಷ್ನದೇವರಾಯ. ಅವನು ಆ ಕನಸನ್ನು ಅವನ ಕಾಲದಲ್ಲಿ ಒಂದು ಮಟ್ಟಿಗೆ ನೆರವೇರಿಸಿದ ಎಂದು ಹೇಳಬಹುದು.


ಕನ್ನಡ ನಾಡದೇವಿ ಭುವನೇಶ್ವರಿ ಎಂದು ನಾವು ಹೇಳುವಾಗ, ಪ್ರತಿ ವರುಷ ರಾಜ್ಯೋತ್ಸವದ ಸಂಧರ್ಬದಲ್ಲಿ ಆ ದೇವಿಯನ್ನು ಪೂಜಿಸುವಾಗ ನಾವು ಆ ದಿನದಲ್ಲಿ ವಿದ್ಯಾರಣ್ಯರು ಕಂಡಿದ್ದ ಕನಸನ್ನು ಮರೆಯಬಾರದು. ಆ ದಿಕ್ಕಿನಲ್ಲಿ ಇವತ್ತು ಕೆಲ್ಸ ಮಾಡಲು ಶುರು ಮಾಡಿದರೆ -೧೦೦ ವರುಷಗಳಲ್ಲಿ ನಾವು ಅದನ್ನು ಕಾಣಬಹುದು. ಇವತ್ತು ಹಂಪೆ ಹಾಳಾಗಿದೆ, ಆದ್ರೆ ಅಲ್ಲಿ ಎನು ಇತ್ತು ಎಂಬುದನ್ನು ಮೂಕವಾಗಿ ಹೇಳುತ್ತದೆ. ಹಕ್ಕ-ಬುಕ್ಕರು ಕೂಡ ನೋಡಿದರ-ಕಂಡಿರದ ಹಂಪೆಯನ್ನು ನಾವು ನೋಡಿದ್ದೇವೆ,ಓಡಾಡಿದ್ದೇವೆ. ಆ ರೂಪ ಪಡೆಯುಲು ವರುಷಗಳು ಬೇಕಾಯಿತು, ವಿದ್ಯಾರಣ್ಯರು ಮನಸ್ಸಲ್ಲಿ ಕಂಡಿದ್ದನ್ನು ನಾವು ಹಾಳು ಹಂಪೆಯಲ್ಲಿ ಇವತ್ತು ಕಾಣಬಹುದು.

Tuesday, December 28, 2010

ಹಂಪಿ ಪ್ರವಾಸ - ೧

ಮುನ್ನುಡಿ

ಅದೇನೋ ಗೊತ್ತಿಲ್ಲ ಹಂಪಿ ಎಂದರೆ ಒಂದು ಬಗೆಯ ಆಕರ್ಷಣೆ, ಇನ್ನೂ ಹೋಗಿಲ್ಲವಲ್ಲ ಅನ್ನೋ ಬೇಸರ. ಅಲ್ಲಿಗೆ ಹೋಗೋ ಪ್ರವಾಸದ ಅವಕಾಶ ಸಿಕ್ಕಾಗೆಲ್ಲಾ ಎನೋ ಅಡ್ಡ ಬಂದು ತಪ್ಪಿಹೋದ ಹಿಂದಿನ ಅನೇಕ ಅನುಭವಗಳು. ಒಟ್ಟಿನಲ್ಲಿ ಹಂಪಿ ನನಗೆ ಹತ್ತಿರವಿದ್ದು ದೂರವಿದ್ದ ಸುಂದರಿಯೇ. ಈ ಸುಂದರಿ ಬಗ್ಗೆ ಆಲೂರು ವೆಂಕಟರಾಯರ ಪುಸ್ತಕ ಓದಿದಾಗ ಅವರಿಗೆ ಆದ ರೋಮಾಂಚನ, ಅವರು ಅನುಭವಿಸಿದ ಆ ಭೂಮಿಯ ಪ್ರೇರಪಣಾ ಶಕ್ತಿ ಇವೆಲ್ಲವೂ ಅಲ್ಲಿಗೆ ಸೆಳೆಯುತ್ತಲೇ ಇದ್ದವೂ. ಆದರೆ ನನಗೆ ಅಲ್ಲಿ ಹೋಗಿ ಸುಮ್ಮನೆ ಗೋಡೆ ಮುಟ್ಟಿಬರುವ ಆಸೆಗಿಂತ, ಆಗಿನ ಕಾಲ ಹೇಗೆ ಇತ್ತು, ನಮ್ಮ ಕನ್ನಡ ಸಾಮ್ರಾಜ್ಯ ಹೇಗೆ ಬಾಳಿತ್ತು, ಇಂದು ಹಾಳು ಹಂಪೆ ಎಂದು ಕರೆಯುತ್ತರಲ್ಲ ಅದು ಕಟ್ಟಡಗಳ ಸ್ಥಿತಿಯೋ ಇಲ್ಲ ನಮ್ಮ ಕನ್ನಡಿಗರ ಮನಸ್ಸಿನ ಸ್ಥಿತಿಯೋ ಎಂದು ತಿಳಿಯುವ ಭಾವನೆ. ಅಲ್ಲಿ ಹೋಗಿ ಒಬ್ಬ ಸಾಮನ್ಯ ಇತಿಹಾಸ ವಿಧ್ಯಾರ್ಥಿಯ ಹಾಗೆ ಅಲ್ಲಿ ಅಲೆಯಬೇಕು, ಬಂಡೆ, ಗುಡ್ಡ ಹತ್ತಬೇಕು, ಅವರು ಓಡಾಡಿದ ಜಾಗದಲ್ಲಿ ಓಡಾಡಿ ನಾವು ಪುಳಕಿತರಾಗಬೇಕು ಎಂದು ನಿಶ್ಚಯಿಸಿ ಕೇವಲ ೩ ದಿನದಲ್ಲಿ ಇದೇ ಕೆಲ್ಸ ಮಾಡಲು ಹೊರಟಿದ್ದ ತಂಡವನ್ನು ಸೇರಿಕೊಂಡೆ.


ಹಂಪಿ ಹಿನ್ನಲೆ

ತುಂಗಾ-ಭ್ರದ್ರ ತೀರದಲ್ಲಿ ಇರುವ ಪಂಪಾದೇವಿಯ ಕ್ಷೇತ್ರಕ್ಕೆ ಹಂಪಿ,ಹಂಪೆ ಎಂದು ಹೆಸರು ಬಂದಿದೆ. ಹೆಸರನ್ನು ಗಮನಿಸಿದರೆ ನಮಗೆ ಇಲ್ಲಿ ಪ್ರಕೃತ ಶಬ್ಧಗಳು ಹೆಚ್ಚಾಗಿ ಪ-ಕಾರದಿಂದ ಆಗುತ್ತದೆ,ಉದಾ:- ಪೂಚಯ್(ಪೂಜೆ),ಪೂ(ಹೂ),ಪಾಲು(ಹಾಲು).. ಗಮನಿಸಿ ನೋಡಿ ಒಂದು ಚಿಕ್ಕ ಮಗು ಕೂಡ ಭಾಷೆಯನ್ನು ಕಲಿಯುವ ಹೋಸ್ತಿಲಲ್ಲಿ "ಹ" ಕಾರ ಬದಲು "ಅ"ಕಾರವನ್ನು ಇಲ್ಲ "ಪ" ಕಾರವನ್ನು ಬಳಸುತ್ತವೆ. ಯಾಕೆ ಅಂದರೆ ಮಕ್ಕಳಿಗೆ ಅದು ಸ್ವಾಭಾವಿಕ ಮತ್ತು ಬೇಗ ಉಚ್ಚರಿಸಲು ಬರುವ ಶಬ್ಧ. ನಮ್ಮ ಭಾಷೆಯಲ್ಲಿ "ಪ್‍ವು" "ಹ್" ಆಗಿ ಅನೇಕ ಕಡೆ ಮಾರ್ಪಾಡಾಗಿದೆ. ಪಾಲು ಹೋಗಿ ಹಾಲು, ಪಲ್ಲ್ ಹೋಗಿ ಹಲ್ಲು. ಇಲ್ಲಿ ಇನ್ನೊಂದು ಅಂಶ ಕಂಡುಬರುತ್ತದೆ, ಮೂಲ ರೂಪಗಳು ಇನ್ನು ನಮಗೆ ತಮಿಳ್ ಮತ್ತು ತೆಲಗು ಭಾಷೆಯಲ್ಲಿ ಕಾಣಸಿಗುತ್ತದೆ. ಇವುಗಳನ್ನು ಉಚ್ಚರಿಸುವಾಗ ಧ್ವನಿ ವ್ಯತ್ಯಾಸದಿಂದ ಬದಲಾವಣೆಯಾಗಿರುವ ಸಾಧ್ಯತೆ ಇದೆ. ಹಾಗೇಯೆ ಪಂಪೆ, ಪಂಪಿ ಹೋಗಿ ಹಂಪೆ, ಹಂಪಿ ಆಗಿರಬಹುದು ಎಂದು ನನ್ನ ಅನಿಸಿಕೆ.




ಬೆಂಗಳೂರಿನಿಂದ -ಹಂಪಿಗೆ

ಇದು ಬೆಂಗಳೂರಿನಿಂದ ೩೪೩ ಕಿ.ಮೀ ದೂರದಲ್ಲಿದೆ, ಬೆಂಗಳೂರಿನಿಂದ ದಿನವೂ ರಾಜಹಂ(ಹಿಂ)ಸಾ ಬಸ್ ಸೇವೆ ಇದೆ. ಇದು ಕ.ರಾ.ರ.ಸಾ.ಸಂ ಅವರ ಸೇವೆ, ರಾತ್ರಿ ೧೧.೦೦-೧೧.೩೦ ಒಳಗೆ ಹೋರಟು ಅಲ್ಲಿ ಬೆಳಿಗ್ಗೆ ಸೇರುತ್ತದೆ. ಮೇಲೆ ಹೇಳಿದ ಹಾಗೆ ಆ ದಿನಗಳಲ್ಲಿ ಇದ್ದ ರಸ್ತೆಯ ಅನುಭವ ಮಾಡಿಸಿದ್ದು ಚಿತ್ರದುರ್ಗ ಮತ್ತು ಹೊಸಪೇಟೆ ಮಾರ್ಗ. ಈ ದಾರಿಯಲ್ಲಿ ರಸ್ತೆ ಅನ್ನುವುದೇ ಇಲ್ಲ. ಬಸ್ ನಿಮ್ಮನ್ನು ಎತ್ತಿ, ಕುಲುಕಿ, ಲಾಲಿ ಹಾಡೊತ್ತೆ. ಆ ರಸ್ತೆಯಲ್ಲೂ ಕೂಡ ಅಭಿವೃದ್ಧಿಯೇ ನಮ್ಮ ಮಂತ್ರ ಅನ್ನುವ ರಾಜ್ಯ ಸರ್ಕಾರದ ಬೋರ್ಡುಗಳು ಅಣಕಿಸಿದರೆ ಅದು ನಿಮ್ಮ ವಕ್ರದೃಷ್ಟಿ ಅಷ್ಟೆ.

ಆ ದುರ್ಗಮ ದಾರಿಯಲ್ಲಿ ಸಂಚರಿಸುವಾಗ. ಬಸ್ಸಿನಲ್ಲಿ ನನ್ನ ಜೊತೆ ಇದ್ದವರಿಗೆ ನನ್ನ ತರಹ ಎನ್ ಕಚಡಾ ರಸ್ತೆಯಪ್ಪ ಎಂದು ಬೈದುಕೊಳ್ಳುವುದೇ ಆಗಿತ್ತು. ನಮ್ಮದು ಈ ಕಥೆ ಆದರೆ ಹಿಂದಿನ ಕಾಲದಲ್ಲಿ ಇದಕ್ಕಿಂತ ದುರ್ಗಮ ದಾದಿಯಲ್ಲಿ ಬಂದು ಯುದ್ದ ಮಾಡುತ್ತ ಇದ್ದ ಬೇರೆ ರಾಜ್ಯದ ಜನರ ಕಿಚ್ಚನ್ನು ಮೆಚ್ಚ್ದಬೇಕಲ್ಲವೇ ?? . ನಮಗೆ ೨ ತಾಸು ಪ್ರಯಾಣ ಸಾಕಪ್ಪ ಅನಿಸಿದರೆ ಅವರಿಗೆ ವರ್ಷಗಟ್ಟಲೇ ಪ್ರಯಾಣ ಯಾವ ಮಟ್ಟಿಗೆ ತ್ರಾಸು ಕೊಟ್ಟಿರಬಹುದು ಅಲ್ಲವೇ ?. ಆ ದಿನಗಳಿಗೆ ಕರೆದುಕೊಂಡು ಹೋದ ಆ ರಸ್ತೆಗೆ ಧನ್ಯವಾದ ಸಲ್ಲಿಸುತ್ತ.. ಮುಂದುವರೆಯೋಣ.

ಹಂಪಿಗೆ ಬಸ್ ಬೇಡ ಎಂದರೂ ೨ -೨.೩೦ ಗಂಟೆ ತಡವಾಗಿ ತಲಪುತ್ತಾನೆ. ಅದಕ್ಕಿಂತ ಉತ್ತಮ ಆಯ್ಕೆ ಎಂದರೆ ರೈಲಿನಲ್ಲಿ ಹೋಗುವುದು. ಅದೇ ಹಂಪಿ ಎಕ್ಸಪ್ರೆಸ್ ನಲ್ಲಿ ಹೊಸಪೇಟೆ ತನಕ ಬಂದು ಅಲ್ಲಿಂದ ಆಟೋ-ಬಸ್ ನಲ್ಲಿ ಹಂಪಿಯನ್ನು ತಲುಪಬಹುದು. ಇದು ಎಲ್ಲಾ ರೀತಿಯಲ್ಲಿ ಉತ್ತಮವಾದ ಆಯ್ಕೆ. ಹಾಯಾಗಿ ನಿದ್ದೆ ಮಾಡಿಕೊಂಡು, ಕೈಕಾಲಿಗೆ ಶ್ರಮ ಕೊಡದೇ ಸಾಗಬಹುದು. ಹೊಸಪೇಟೆಯಿಂದ ಹಂಪಿ ಸರಿ ಸುಮಾರು ೧೫-೧೬ ಕಿ.ಮಿ ಪ್ರಯಾಣ. ದಾರಿ ಮಧ್ಯ ಹಳೆ ಕಟ್ಟಡಗಳು ಕಂಡರೆ ಅದಕ್ಕಿಂತ ಹೆಚ್ಚು ಅಲ್ಲಿನ MLA ಆನಂದ್ ಸಿಂಗನ ಹೆಸರು ಕೃಷ್ಣದೇವರಾಯಕ್ಕಿಂತ ಹೆಚ್ಚು ಕಾಣಿಸುತ್ತದೆ ಮತ್ತು ಬೇಡವೆಂದರೂ ನೋಡ ಸಿಗುತ್ತದೆ.

ವಾಸ



ಹಂಪಿಯು ಮೊದಲಿಂದ ಅನೇಕ ದೇಶದವರನ್ನು ಆಕರ್ಷಣೆ ಮಾಡುತ್ತಲೆ ಇತ್ತು, ಇವತ್ತು ಹೇಗೆ ಮುಂಬಾಯಿ ವಾಣಿಜ್ಯ ನಗರ ಆಗಿದೆಯೋ ಹಾಗೆ ಅಂದಿನ ದಿನಗಳಲ್ಲಿ ಹಂಪಿ ದೊಡ್ಡ ವಾಣಿಜ್ಯ ಮತ್ತು ಆಡಳಿತ ಕೇಂದ್ರವಾಗಿತ್ತು. ಆಮದು -ರಫ್ತು ಎರಡೂ ಎಗ್ಗಿಲ್ಲದೇ ಸಾಗಿತ್ತು, ಅಲ್ಲಿನ ಜನರಿಗೆ ಬೇರೆ ದೇಶದವರು ಹೊಸರಲ್ಲ ಮತ್ತು ಅವತ್ತು ಹೇಗೆ ಮರ್ಯಾದೆ ಕೊಡುತ್ತಾರೋ ಇವತ್ತಿಗೂ ಕೊಡುತ್ತಾರೆ, ಕಾರಣಗಳು ಬೇರೆ ಇರಬಹುದು ಆದರೆ ಆ ಜನರ ಬಗ್ಗೆ ಇರುವ ಮೋಹ ಮತ್ತು ಆಕರ್ಷಣೆ ಕಮ್ಮಿ ಆಗಿಲ್ಲ. ಇವತ್ತು ಹಂಪಿ ಗಲ್ಲಿ ಗಲ್ಲಿಯಲ್ಲಿ ಮನೆಗಳೂ LODGING ರೂಮುಗಳಾಗಿ ಪರಿವರ್ತನೆ ಆಗಿದೆ. ಸರಿ ಸುಮಾರು ೩೦೦೦ ರೂಮುಗಳು ಇದೆ. ಪ್ರತಿ ರೂಮಿನಲ್ಲಿ ಎಸಿ, attached bathroom, double cot ಹೀಗೆ ಅನೇಕ ವ್ಯವಸ್ಥೆಗಳು ವಿದೇಶಿಯರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಲಾಗಿದೆ. ಸೀಸನ್ ನಲ್ಲಿ ಪ್ರತಿ ರೂಮಿನ ಬೆಲೆ
೧೦೦೦-೨೦೦೦ ತನಕ ಹೋಗುತ್ತದೆ. ಸೀಜನ್ ಅಂದರೆ ಅಕ್ಟೋಬರ್ ಇಂದ ಫೆಬ್ರವರಿ ತನಕ , ಆಮೇಲೆ ಬಿಸಿಲು ಕಾಲದಲ್ಲಿ ಸೂರ್ಯನ ಶಾಖಕ್ಕೆ ಕಲ್ಲುಗಳು tan ಆಗಿ ಊರು ಬಿಕೋ ಅನ್ನುತ್ತ ಇರುತ್ತದೆ, ಹಾಗೇಯೆ ಮಳೆಗಾಲದಲ್ಲಿ ಕೂಡ ಹೆಚ್ಚು ಜನರು ಕಾಣ ಬರುವದಿಲ್ಲ.

ಊಟ-ಊಪಚಾರ



ವಿರುಪಾಕ್ಷ ಸ್ವಾಮಿ ದೇವಸ್ಥಾನದ ಹತ್ತಿರ ಅನೇಕ ಹೋಟೆಲ್ ತಲೆ ಎತ್ತಿವೆ, ಮುಖ್ಯವಾಗಿ ತುಂಗಾ ಸಂಗಮದಲ್ಲಿ ತಿಥಿ ಇತರೆ ಪಿತೃಕಾರ್ಯಗಳು ನಡೆಯುವ ಕಾರಣ ಅನೇಕ ಪೂಜಾರಿ ಮನೆಗಳಲ್ಲಿ ಊಟ ಸಿಗುತ್ತದೆ. ಇನ್ನು ವಿದೇಶಿಯರನ್ನೇ ಗಮನದಲ್ಲಿ ಇಟ್ಟುಕೊಂಡು ಅನೇಕ
ರೆಸ್ತೋರೆಂಟ್ ತಲೆ ಎತ್ತಿವೆ. ಅಲ್ಲಿನ ಮಂಡಕ್ಕಿ, ಮಿರ್ಚಿ, ಪಡ್, ಇಡ್ಲಿ-ವಡೆ ತಿಂಡಿಗೆ ಆದರೆ, ಒಳ್ಳೆ ಸಾರು,ಸಾಂಬಾರು,ಮಜ್ಜಿಗೆ ಹುಳಿ, ಚಟ್ನಿ ಊಟ ಮಧ್ಯಾಹ್ನ ಮತ್ತು ರಾತ್ರಿಗೆ ಸಿಗುತ್ತದೆ.ಅದನ್ನು ಬಿಟ್ಟರೆ ದಾರಿ ಮಧ್ಯೆ ಎಳೆನೀರು ಸಿಗುತ್ತದೆ, ಆದರೆ ಆ ಭೂಮಿಯ ಗುಣವೋ ಎನೋ
ನೀರು ತುಂಬಾ ಉಪ್ಪಾಗಿ ಇರುತ್ತದೆ. ಸಾಲದಕ್ಕೆ ಬಿಸಿಲಿನ ಝಳಪು ತುಂಬ ಇರುವದರಿಂದ ಎಲ್ಲಿಗೆ ಹೋದರು ಕುಡಿಯಲು ಚೆನ್ನಾಗಿ ನೀರು ತೆಗೆದುಕೊಂಡು ಹೋಗುವುದು ಉತ್ತಮ.

Monday, November 01, 2010

ಡಬ್ಬಿಂಗ್ ಬೇಕೇ ಬೇಡವೇ

ವಿಜಯ ಕರ್ನಾಟಕದ ನವೆಂಬರ್ ೧ ರ ವಿಶೇಶ ಲೇಖನ ಡಬ್ಬಿಂಗ್ ಕನ್ನಡವನ್ನು ಚಿರನಿದ್ರೆಗೆ ದೂಡಲಿದೆ ಹುಷಾರ್
ಲೇಖನವನ್ನು ಮೊದಲಿಗೆ ಓದಿದಾಗ ನನಗೆ ನಿಜಕ್ಕೂ ಭಯ ಆಯಿತು, ಅಯ್ಯೊ ನನ್ನ ಕನ್ನಡ , ೨೦೦೦ ಸಾವಿರ ವರುಷ ಹಳೆಯ ಇತಿಹಾಸ ಇರುವ ಕನ್ನಡ, ವಿಶ್ವ ಲಿಪಿಗಳ ರಾಣಿ ಎಂದು ಹೆಸರು ಪಡೆದಿರುವ ಕನ್ನಡ, ಜ್ಞಾನಪೀಠ ಪ್ರಶಸ್ತಿಗಳನ್ನು ಹೆಚ್ಚು ಪಡೆದಿರುವ ಕನ್ನಡ ..ಕೇವಲ ಡಬ್ಬಿಂಗ್ ಮಾಡಿದರೆ ಚಿರನಿದ್ರೆಗೆ ಜಾರುವ ಮಟ್ಟಿಗೆ ಬಂದಿದೆಯಾ ?. ಇವತ್ತು ಕನ್ನಡ ಚಿತ್ರಗಳ ಮೇಲೆ ನಮ್ಮ ಭಾಷೆ ನಿಂತಿದೆಯಾ ಅನ್ನೋ ಗೊಂದಲವನ್ನು ಮೊದಲಿಗೆ ಈಡು ಮಾಡಿತು.


ಇದು ಶೀರ್ಶಿಕೆಯಾಗಿ ಇದಕ್ಕೆ ತಕ್ಕ ಉತ್ತರ ಮತ್ತ್ತು ಯಾಕೆ ವಿರೋಧಿಸಬೇಕು ಎನ್ನುವ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ಇಡಿ ಲೇಖನದಲ್ಲಿ ದುರ್ಬಿನ್ ಹಾಕಿಕೊಂಡು ಹುಡುಕಿದರೂ ಬೇಕಾದ ವಿಷಯ ಸಿಗುವುದು ಕಮ್ಮಿಯೇ ಅಥಾವ ಇಲ್ಲವೇ ಇಲ್ಲ ಎನ್ನಬಹುದು.
ಲೇಖಕರು ಮೊದಲಿಗೆ ಕನ್ನಡ ಸಾಯುತ್ತ ಇದೆ ಎಂದು ತಿರ್ಮಾನಿಸಿ ಬಿಟ್ಟಿದ್ದಾರೆ, ಇನ್ನು ಅವರು ಯಾರಿಗೆ ಹುಷಾರ್ ಹೇಳುತ್ತ ಇದ್ದಾರೋ ಗೊತ್ತಿಲ್ಲ. ಲೇಕನ ಶುರುವಾಗುವುದೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಕೈಲಾಗತನ ಮತ್ತು ಅದರಲ್ಲಿ ಕುಳಿತಿರುವ ಅಧಿಕಾರಶಾಹಿಗಳ ಇಬ್ಬಂದಿತನ ಮತ್ತು ಇದರಿಂದ ಆಗಿರುವ ದುಷ್ಪರಿಣಾಮಗಳ ಬಗ್ಗೆ. ಅದರೆ ಲೇಖಕರು ಒಂದು ಕಡೆ ಇ ವರ್ಗವೇ ಇವತ್ತಿನ ಅವಸಾನಕ್ಕೆ ಕಾರಣ ಎಂದು ಬೈದು, ಅದೇ ಅವಸರದಲ್ಲಿ ಮುಂದೆ ಆ ಜನರೇ ಬಡಬಡಿಸುವ ಸವಕಲು ವಿಷಯವನ್ನೇ ಹೇಳುತ್ತ ಇದ್ದಾರೆ.

ಮೊದಲ ಅರ್ಧ ಭಾಗ , ಶೀರ್ಶಿಕೆ ಕನ್ನಡ ಚಲನಚಿತ್ರೋದ್ಯಮ ಬೆಳೆಯದಿರಲು ಕಾರಣಗಳೇನು ಎಂದು ಆಗಿದ್ದರೆ ಲೇಖನಕ್ಕೆ ಸ್ವಲ್ಪ ಅರ್ಥ ಬರುತ್ತ ಇತ್ತು, ಇದು ಸರಿ ಇಲ್ಲ, ಅಯ್ಯೊ ಆ ಕಡೆ ಜನ ಹೀಗೆ , ನಮ್ಮ ಅನೇಕ ಜಿಲ್ಲೆ ನಮ್ಮ ಕೈ ತಪ್ಪಿ ಹೋಗಿವೆ. ನಮ್ಮ ಸ್ವಾಭಿಮಾನದ ಕೊರತೆ, ಇದಕ್ಕೆಲ್ಲಾ ನೀವು ಕನ್ನಡಿಗರೇ ಕಾರಣ ಎಂದು ಬೈದು, ಆ ಸಮಸ್ಯೆಗಳ ಮೂಲಕ್ಕೆ ಇಳಿಯದೇ ದೂರುವ ಪ್ರವೃತ್ತಿಯನ್ನೇ ಮುಂದುವರೆಸುತ್ತಾರೆ.

ತದನಂತರ ಡಬ್ಬಿಂಗ್ ಸಮರ್ಥಿಸುವ ಜನರ ಮೇಲೆ ಇವರ ಕೋಪ ತಿರುಗಿ ಅವರನ್ನು ಆಡಿಕೊಂಡು, ಅವರಿಗೆ ಕೆಲವು ಅಡ್ಡ ಹೆಸರಿಟ್ಟು
ಅವರನ್ನು ಎಲ್ಲಾ ಸಮಸ್ಯೆಗಳಿಗೆ ದೂರುವುದು ಮತ್ತೊಮ್ಮೆ ಲೇಖಕರ ಬ್ರಾಂಡಿಂಗ್ ಸಂಸ್ಕ್ರುತಿ ತೋರಿಸುತ್ತದೆ. ಡಬ್ಬಿಂಗ್ ಬೇಕು ಅನ್ನುವ ಕನ್ನಡದ ಕಂದಮ್ಮಗಳು , ಯಾಕೆ ಬೇಕು ಎನ್ನುತ್ತಿವೆ ಎಂಬ ಮಾತನ್ನು ಕೇಳಿಸಿಕೊಳ್ಲದೇ, ಅದಕ್ಕೆ ಸರಿಯಾದ ಉತ್ತರ ಕೊಡದಿರುವ ಲೇಖಕರ ಸೂಕ್ಷ್ಮ ಮತ್ತು ಸಂವೇದನೆ ಬಗ್ಗೆ ಮಾತನಾಡುತ್ತಾರೆ ಮತ್ತು ತಾವೇ ಕನ್ನಡ ವೀರಪುತ್ರರೂ, ತಮ್ಮ ವಿಚಾರವನ್ನು ವಿರೋಧಿಸುವರು ಖನ್ನಡ ವೀರಪುತ್ರರು ಎಂಬ ಫರ್ಮಾನು ಹೊರೆಡಿಸುತ್ತಾರೆ.

ಮುಂದೆ ಯಾರಿಗೂ ಗೊತ್ತಿಲ್ಲದ ಇನ್ನೊಂದು ವಿಸ್ಮಯ ಕೂತೂಹಲಕಾರಿ ವಿಷಯವನ್ನು ನಮಗೆ ಹೊರಗೆಡುವುತ್ತಾರೆ.ಅದೆನೆಂದರೆ
ಅಸ್ಸಾಮಿ, ಬೆಂಗಾಳಿ, ಚೈನೀಸ್. ಭೋಜಪುರಿ, ಮರಾಠಿ ಚಿತ್ರಗಳು ಬೆಂಗಳೂರಿನ ಮಲ್ಟಿಪ್ಲೆಕ್ಸನಲ್ಲಿ ರಾಜರೋಷವಾಗಿ ಪ್ರದರ್ಶನಗೊಳ್ಳುತ್ತ ಇದೆ ಎನ್ನುತ್ತಾರೆ. ಆ ಭಾಷೆಗಳ ಚಿತ್ರಗಳು ಬೆಂಗಳೂರಿನ ಯಾವ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನಗೊಳ್ಳುತ್ತ ಇದೆ ಎಂದು ಹೇಳಿದರೆ, ಅಲ್ಲಿನ ಜನಕ್ಕೆ ಈ ಮಾಹಿತಿಯನ್ನು ಕೊಡೋಣ, ಯಾಕೆಂದರೆ ಅಲ್ಲಿಯ ಚಿತ್ರಗಳು ಅಲ್ಲಿಯೇ ಓಡುತ್ತ ಇಲ್ಲ, ಅವಸಾನವಾಗಿದೆ ಎಂದು ಅಲ್ಲಿ ಜನ ನಂಬಿದ್ದಾರೆ. ಲೇಖಕರ ಡಿಸ್ಕವರಿಯನ್ನು ಅವರಿಗೆ ತಿಳಿಸಿದರೆ
ನಿಜಕ್ಕೂ ಅಲ್ಲಿಯ ಜನ ತುಂಬ ಸಂತೋಶ ಪಡುತ್ತಾರೆ.


ಒಟ್ಟಿನಲ್ಲಿ ಡಬ್ಬಿಂಗ್ ಬೇಡ ಅನ್ನುವದಕ್ಕೆ ಲೇಖಕರು ಅದೇ ಹಳಸಲು, ಸವಕಲು ಕಾರಣಗಳನ್ನು ಕೊಟ್ಟಿದ್ದಾರೆ .

A) ಕನ್ನಡ ಸಂಸ್ಕ್ರುತಿ- ನೆಲೆಗಟ್ಟು ನಾಶ ಆಗುತ್ತದೆ ಎಂದು.

ಏನು ಹಾಗೆಂದರೆ? ಯಾವ ಕನ್ನಡ ಸಂಸ್ಕೃತಿ ಸಿನಿಮಾ ನೋಡುವುದರಿಂದ ಉಳಿದಿದೆ ಅಥವಾ ಅಳಿದಿದೆ ತಿಳಿಸಿ. ನೀವು ಸಂಸ್ಕೃತಿ ಉಳಿಯಲು ಡಬ್ಬಿಂಗ್ ಬರಬಾರದು ಅನ್ನುವುದು ಗಟ್ಟಿಯಾದ ವಾದವಲ್ಲ. ಡಬ್ಬಿಂಗ್ ಮಾಡಿದರೆ ಸಂಸ್ಕೃತಿ ಹಾಳಾಗುತ್ತೆ ಅನ್ನುವವರು ನೇರವಾಗಿ ಆಯಾ ಭಾಷೆಗಳಲ್ಲೇ ಸಿನಿಮಾ ಬಂದಲ್ಲಿ ಸಂಸ್ಕೃತಿ ಜೊತೆಗೆ ಭಾಷೇನೂ ಹೋಗುತ್ತೆ ಅನ್ನೋದನ್ನು ಯಾಕೆ ಒಪ್ಪಲ್ಲ. ಭಾಷೆ ವಿಷಯಕ್ಕೆ ಬಂದರೆ ಸಿನಿಮಾದಿಂದಾನೆ ಭಾಷೆ ಉಳಿಯಲ್ಲ, ಅನ್ನುವರ್ಥದಲ್ಲಿ ಭಾಷೆ ಉಳಿಸೋದು ಭ್ರಮೆ ಅನ್ನೋ ಮಾತಾಡ್ತೀರಿ. ಆದ್ರೆ ಸಂಸ್ಕೃತಿ ಅಂದ ಕೂಡ್ಲೆ ಡಬ್ ಮಾಡುದ್ರೆ ಸಂಸ್ಕೃತಿ ಹಾಳಾಗುತ್ತೆ ಅಂತೀರಿ. ಯಾಕೀ ದ್ವಂದ್ವ ನಿಲುವು?

ಸಿನಿಮಾ ಅನ್ನುವುದು ಹುಟ್ಟುವ ಮುಂಚೆ ನಾಟಕ ಯಕ್ಷಗಾನ ಹರಿಕಥೆ ಇತ್ಯಾದಿ ದೇಸಿ ಕಲೆಗಳಿದ್ದವಲ್ಲಾ, ಅವೆಲ್ಲಾ ಸಿನಿಮಾ ಬಂದಿದ್ದರಿಂದ ಅಳಿದು ಹೋದವೇ? ಅಳಿದಿಲ್ಲಾ ಅನ್ನುವುದು ನಿಮ್ಮ ಉತ್ತರವಾದರೆ ಕನ್ನಡ ಚಿತ್ರರಂಗವೂ ಡಬ್ಬಿಂಗ್‍ ಸಿನಿಮಾಗಳ ನಡುವೆ ಉಳಿಯುವುದಿಲ್ಲ ಅನ್ನುವ ಆತಂಕ ಇಲ್ಲ. ಅಕಸ್ಮಾತ್ ನಿಮ್ಮ ಉತ್ತರ ಅಳಿದಿವೆ ಅನ್ನುವುದಾದರೆ ಸಾವಿರಾರು ವರ್ಷದ ಇತಿಹಾಸ ಇರುವ ಇಂತಹ ಕಲೆಗಳನ್ನು ಸಿನಿಮಾ ನಾಶ ಮಾಡುತ್ತಿರುವುದರಿಂದ ಚಿತ್ರರಂಗಕ್ಕೆ ಬೀಗ ಜಡಿಯಬೇಕು ಅನ್ನುವ ವಾದ ಒಪ್ಪಬೇಕಾಗುತ್ತದೆ.

ಮಚ್ಚು ಲಾಂಗು ಸೆಕ್ಸು ಕ್ರೈಮು ಇಲ್ಲದ ಕನ್ನಡ ಚಿತ್ರಗಳು ಎಲ್ಲಿವೆ ಹೇಳಿ? ಕನ್ನಡ ಜನತೆ ಸಿನಿಮಾ ನೋಡಿ ಸಂಸ್ಕೃತಿ ಉಳಿಸಿಕೊಳ್ಳೋ ಅಗತ್ಯ ಇದೆಯಾ ಸಾರ್? ಸಂಸ್ಕೃತಿಯ ನಾಶ ಅನ್ನುವುದು ಸರಿಯಾದ ಬಳಕೆಯಲ್ಲ, ಅದು ಸಂಸ್ಕೃತಿಯ ಬದಲಾವಣೆ ಅಷ್ಟೆ. ಚಿತ್ರಮಂದಿರದಲ್ಲಿ ಬಿಡುಗಡೆಯ ಭಾಗ್ಯವನ್ನೇ ಕಾಣದ, ಕಂಡರೂ ವಾರದಲ್ಲಿ ಎತ್ತಂಗಡಿಯಾಗುವ ಕಲಾತ್ಮಕ ಚಿತ್ರದ ಹಣೆಪಟ್ಟಿಯ “ಗುಬ್ಬಚ್ಚಿಗಳು” ಥರದ ಸಿನಿಮಾ ತೆಕ್ಕೊಂಡು ಕೂತರೆ ಜನಾ ನೋಡಬೇಕಲ್ಲಾ ಸ್ವಾಮಿ?


ಇದನ್ನು ಹಿಂದೆ ತುಂಡು ಲಂಗದಲ್ಲಿ ನೃತ್ಯ ಮಾಡುತ್ತ, ಅಂಗ ಪ್ರದರ್ಶನ ಮಾಡುತ್ತ ಇರುವ ಅಂದಿನ ನಟಿಯರೂ ಕೂಡ ಹೇಳುತ್ತಾ ಬಂದಿದ್ದಾರೆ. ಇಲ್ಲ, ಕೈನಲ್ಲಿ ಮಚ್ಚು ಲಾಂಗ್ ಹಿಡಿದುಕೊಂಡು ಮಾರುದ್ದ ಡೈಲಾಗ್ ಹೊಡೆಯುವ ನಮ್ಮ ನಟರು ಪುನರ್ ಉಚ್ಚಾರ ಮಾಡಿದ್ದಾರೆ, ಅವರ ಭಕ್ತರ ಹಾಗೆ ಲೇಖಕರು ಅದನ್ನೆ ಉಚ್ಚರಿಸಿರುವುದು

ಮಚ್ಚು-ಲಾಂಗ್ - ಹೊಡೆತ- ಬಡೆತ ಚಿತ್ರಗಳು ನಮ್ಮ ಕನ್ನಡದಲ್ಲಿ ೧೦.ಕ್ಕೆ ೭ ರ ಹಾಗೆ ಬರುತ್ತಾ ಇದೆ. ಇದೇನಾ
ನಮ್ಮ ನೆಲೆಗಟ್ಟು ?

ಬೇರೆ ಭಾಶೆಯ ಚಿತ್ರವನ್ನು ಮಕ್ಕಿ-ಕಾಮಕ್ಕಿ ಇಳಿಸುವಾಗ ಆ ಭಾಷೆಯ ಗಿರಿಜಾ ಮೀಸೆ, ಬಟ್ತೆ, ಗೌಂಡರ್ ಉಡುಗೆ ( ಪುಟ್ನಂಜ , ಯಜಮಾನ ನೆನಪಿಸಿಕೊಳ್ಳಿ) ನಮ್ಮ ಸಂಸ್ಕ್ರುತಿಯನ್ನು ತೋರಿಸುತ್ತ ಇದೆಯಾ.

ವರ್ಶಕ್ಕೆ ೧೨೦+ ಚಿತ್ರಗಳು ತೆರೆಕಾಣುತ್ತವೆ, ಇವುಗಳಲ್ಲಿ ಕನ್ನಡ ಸಂಸ್ಕ್ರುತಿಯನ್ನು ತೋರಿಸುವ, ನಮ್ಮ ನೆಲೆಗಟ್ಟನ್ನು ಸಾರುವ
ಯಾವ ಚಿತ್ರ ಬಂದಿದೆ ?... ಅಲ್ಲ ಪ್ರೇಕ್ಷಕ ಕನ್ನಡಿಗರು ಸಂಸ್ಕ್ರುತಿ, ಆಚಾರ ಹೀನರೇ ??. ಕನ್ನಡ ಚಿತ್ರಗಳಿಂದ ನಾವು ನಮ್ಮ ಸಂಸ್ಕ್ರುತಿ, ಆಚಾರ ಕಲಿಯುವ ಕರ್ಮ ಬಂದಿದೆಯಾ ?. ಅಷ್ತಕ್ಕೂ ಕನ್ನಡದ ಸಂಸ್ಕ್ರುತಿಯನ್ನು ಕಲಿಸುವ ಮೇಷ್ಟ್ರ ಸ್ಥಾನವನ್ನು
ಚಿತ್ರರಂಗದ ಮಂದಿ ಹೊಂದಿದ್ದಾರಾ ?. ಚಿತ್ರರಂಗ ಇಲ್ಲದೇ ಇದ್ದಾಗ ಕನ್ನಡಿಗರು ಅನಾಗಾಗರಿಕರು ಆಗಿದ್ದರಾ ಇಲ್ಲ ಶಿಲಾಯುಗದಲ್ಲಿ ಇದ್ದರಾ ?. ಹೊಸದಾಗಿ ನಮ್ಮ ಸಂಸ್ಕ್ರುತಿಯನ್ನು ಕಲಿಯಲು ಇಲ್ಲ ಉಳಿಸಲು.

ನಮ್ಮ ಮನರಂಜನೆ ನಮ್ಮ ನುಡಿಯಲ್ಲಿರಬೇಕು ಅನ್ನುವುದು ಕನ್ನಡಿಗರ ಮೂಲಭೂತ ಹಕ್ಕು. ಅದನ್ನು ಬೇಡ ಅನ್ನೋದು ವ್ಯಕ್ತಿ ಸ್ವಾತಂತ್ರ ಹರಣ ಮಾಡಿದಂತೆ ಅಲ್ಲವೇನು?

B) ಲಕ್ಷಾಂತರ ಜನ ಬೀದಿಗೆ ಬೀಳುತ್ತಾರೆ.

ಅಲ್ಲ ಸ್ವಾಮಿ ಲೇಖನದಲ್ಲಿ ಭಾಷೆ ಭಾಷೆ ಎಂದು ಹೇಳಿ ಕೊನೆಗೆ ಬಂದು ನಿಂತಿದ್ದು ೨೫ ಸಾವಿರ ಕಾರ್ಮಿಕ ವರ್ಗಕ್ಕೆ. ಸ್ವಾಮಿ ಪ್ರೇಕ್ಷಕ ಜನ ಇದಕ್ಕಿಂತ ಹೆಚ್ಚಿಗೆ ಇದೆ, ಅದರಲ್ಲೂ ಕೋಟಿಯಲ್ಲಿ ಇದೆ. ಮೊನ್ನೆ ಒಬ್ಬರು ಕನ್ನಡ ನಿರ್ಧೇಶಕರು ಹೇಳಿದ ಹಾಗೆ ಕನ್ನಡ ಚಿತ್ರರಂಗ ಕಾರ್ಮಿಕ ವರ್ಗದಲ್ಲಿ ಮೂಲತ ಕನ್ನಡಿಗರು ಎಷ್ತು ಜನ ಇದ್ದಾರೆ, ಮುಕ್ಕಾಲು ಭಾಗ ವಲಸೆ ಬಂದವರೇ ಎಂದು. ಸುಮ್ಮನೆ ಉದಯ ಟಿವಿಯ ಸಿಬ್ಬಂದಿ ವರ್ಗ ಇಲ್ಲ ವಾಹಿನಿಗಳ ತಂತ್ರಜ್ಹರ ವರ್ಗದ ಹೆಸರನ್ನು ನೋಡಿ, ನಿಮಗೆ ತಿಳಿಯತ್ತದೆ. ಕನ್ನಡ ಚಿತ್ರವೂ ಇಲ್ಲದಿದ್ದಾಗ ಕೂಡ ಕೆಲಸ ಇಲ್ಲದೇ ನಿರುದ್ಯೋಗವಿರಲಿಲ್ಲ. ೫ ಲಕ್ಷ ಜನ ನಂಬಿಕೊಂಡಿದ್ದ ಲಾಟರಿ ಮುಚ್ಚಿದಾಗ ಇರದ ಅಕ್ಕರೆ
ಈಗ ನಮ್ಮ ಜನರಿಗೆ ಬಂದಿರುವುದು ವಿಪರ್ಯಾಸ. ೬ ಕೋಟಿ ಜನಕ್ಕೆ ಸಹಾಯ ಆಗುತ್ತದೆ ಎಂದರೆ ೨೫ ಸಾವಿರ ಯಾವ ಮಹಾ ?
ಅಷ್ತಕ್ಕೂ ಭಾಷೆಗಿಂತ ದೊಡ್ಡದು ಯಾವುದು ಇದೆ ?


ಯಾಕೆ? ಡಬ್ಬಿಂಗ್ ಶುರುವಾದರೆ ಕನ್ನಡದಲ್ಲಿ ಚಿತ್ರಗಳನ್ನು ತೆಗೆಯೋದು ನಿಂತುಹೋಗುತ್ತಾ? ವರ್ಷಕ್ಕೆ 125 ಸಿನಿಮಾ ತೆಗೆಯೋ ಉದ್ಯಮ ಯಾಕೆ ಬೀದಿಗೆ ಬೀಳುತ್ತೆ ಹೇಳಿ. ರಿಮೇಕು ರಾಜರು ಮನೆ ಸೇರ್ಕೋತಾರೆ ಅಷ್ಟೆ. ಈ ನೆಲದ ಸೊಗಡಿನ ಸಂಸ್ಕೃತಿಯ ಚಿತ್ರಣವನ್ನು ಯಾವ ಡಬ್ಡ್ ಸಿನಿಮಾನೂ ಕೊಡಕ್ಕಾಗಲ್ಲ. ಡಬ್ಬಿಂಗ್ ನಿಷೇಧ 60ರ ದಶಕದಲ್ಲಿ ಶುರುವಾಗಿದ್ದು. ಆದರೆ ಅದಕ್ಕೂ ಮುನ್ನ ಡಬ್ಬಿಂಗ್ ಇದ್ದ ಕಾಲದಲ್ಲಿ ಮಾಯಾಬಜಾರ್ ಥರದ ಚಿತ್ರಗಳು ಡಬ್ ಆಗಿ ಬರುತ್ತಿದ್ದ ಕಾಲದಲ್ಲಿ ಕನ್ನಡದಲ್ಲಿ ಡಾ.ರಾಜ್‍ಕುಮಾರ್ ಎನ್ನುವ ಪ್ರತಿಭೆ ಹೊರಬಂದಿದ್ದು, ರಣಧೀರ ಕಂಠೀರವ ಥರದ ಸಿನಿಮಾ ಬಂದಿದ್ದು. ಇಷ್ಟಕ್ಕೂ ಆಗ ಡಬ್ಬಿಂಗ್ ಇತ್ತು, ಇಲ್ಲಿ ಸಿನಿಮಾ ತೆಗೆಯೋ ಅನುಕೂಲಗಳೇ ಇರಲಿಲ್ಲ. ನಿರ್ಮಾಪಕರು, ನಿರ್ದೇಶಕರು, ಸ್ಟೂಡಿಯೊ, ಸಂಗೀತ, ಕ್ಲಾಪ್ ಬಾಯ್, ಲೈಟ್ ಬಾಯ್ ಎಲ್ಲಕ್ಕೂ ಚನ್ನೈಯನ್ನೇ ಅವಲಂಬಿಸುವಂತಹ ಪರಿಸ್ಥಿತಿ ಇದ್ದಾಗಲೂ ಕನ್ನಡ ಚಿತ್ರಗಳು ಬರುತ್ತಿದ್ದವಲ್ಲ ಸ್ವಾಮಿ? ಯಾಕೆಂದರೆ ನಮ್ಮತನ ಅನ್ನೋದನ್ನು ಡಬ್ ಚಿತ್ರಗಳು ಬಿಂಬಿಸಲು ಸಾಧ್ಯವೇ ಇಲ್ಲ. ಹಾಗಾಗಿ ಕನ್ನಡ ಚಿತ್ರಗಳು ಆಗಲೂ ಬರುತ್ತಿದ್ದವು.
ಮುಂದೂ ಬರುತ್ತಿರುತ್ತವೆ

೬೦ ದಶಕದಲ್ಲಿ ಇದ್ದ ಸ್ಥಿತಿಯೇ ಇನ್ನು ಇದೆಯಾ , ನಾವು ೫೦ ವರುಷದಲ್ಲಿ ಎನು ಉದ್ದಾರ ಆಗಿಲ್ವ್ವ, ಹಾಗಿದ್ದಲ್ಲಿ ಇನ್ನು ಮುಂದೆ ಆಗುತ್ತಿವಿ ಅನ್ನೋದು ಎಷ್ಟರ ಮಟ್ಟಿಗೆ ಸತ್ಯ ?. ಆಗಿದ್ದ ನಿಜಾವಾದ ಸಮಸ್ಯೆಯನ್ನು ಇನ್ನೂ ಸುಮ್ಮನೆ ಗುಮ್ಮ ತೋರಿಸುವುದು ಹೇಗಪ್ಪ ಇದೆ ಎಂದರೆ

ಹಿಂದೆಲ್ಲಾ STD ಬೂತ್ ಅಂದ್ರೆ ಸಕ್ಕತ್ ದುಡ್ಡು ಹುಟ್ತಿತ್ತು, ಪರಊರಿಗೆ ಕರ ಮಾಡಬೇಕು ಎಂದರೆ
ಬೂತ್ ಮುಂದೆ ಸಾಲು ಸಾಲು ನಿಲ್ಲಬೇಕಿತ್ತು, ಅನೇಕರಿಗೆ ಅದು ಉದ್ಯೋಗ ಕೊಟ್ಟಿತ್ತು, ಅದರಲ್ಲೂ ಹೆಚ್ಚಾಗಿ ಅಂಗವಿಕಲರಿಗೆ.

ಮೊಬೈಲ್ ಬಂತು, ಆಗ ಆ ಜನ ನಮ್ಮ ಕೆಲ್ಸ ಹೋಗೊತ್ತೆ, ಬೀದಿಗೆ ಬೀಳ್ತಿವಿ ಯಾರು ಕರ್ನಾಟಕದಲ್ಲಿ ಮೊಬೈಲ್ ಬಳಸಬಾರದು, ಎಲ್ಲಾ ನಮ್ಮ ಬೂತ್ ಬಳಸಬೇಕು ಅಂತ ಹಠ ಮಾಡಿದ್ದರೆ ನೀವೆಲ್ಲಾ ಒಪ್ಪಿಕೊಂಡು ಸುಮ್ಮನೆ ಇರುತ್ತಿದ್ದರಾ, ಅಲ್ಲ ಈಗ ಮೋಬೈಲ್ ಬಳಸುವಾಗ ಆ ಕುಟುಂಬಗಳ ಬಗ್ಗೆ ಯೊಚನೆ ಮಾಡಿದ್ರಾ ಯಾವಗಾಲಾದರೂ ??
ಹೀಗೆ ಹೊಸತನ, ತಂತ್ರಜ್ಞಾನ ಬೇಡ ಅಂತ ಹೇಳುವುದು ಬರಿ ಕಲಾವಿದರಲ್ಲ ಇಡಿ ಕನ್ನಡಿಗರೇ ಎಲ್ಲರ ಮುಂದೆ ಬೀದಿಗೆ ಬೀಳುವ ಹಾಗೆ ಮಾಡುತ್ತದೆ


C) ಇವಾಗಿನ ಕನ್ನಡ ಚಿತ್ರಗಳಿಂದ ಕನ್ನಡಿಗರಿಗೆ ಸಂಪೂರ್ಣ ನ್ಯಾಯ ಮತ್ತು ಕೆಲ್ಸ ಸಿಗುತ್ತ ಇದೆಯಾ ?

೧) ಪರಭಾಷೆಯ ಹಿರೋಯಿನ್ ಯಾಕೆ ಬೇಕು ??, ಹಾಗೆ ಮಾಡಿದಾಗ ನಮ್ಮ ಕನ್ನಡ ನಟಿಯರಿಗೆ ಕೆಲ್ಸ ಹೋಗೊಲ್ವಾ

೨) ಪರಭಾಷೆಯ ಸವೆದ ಸಂಗೀತ ಯಾಕೆ ಬೇಕು, ಅದನ್ನು ಕೇಳಿದವರಿಗೆ ನೇಟಿವಿಟಿ ಅನಿಸುತ್ತದೆಯಾ , ಇಲ್ಲ ಸ್ವಂತಿಕೆ ಇದೆ ಅನಿಸುತ್ತೆದಾ. ಅಷ್ಟಕ್ಕೂ ಸಂಗೀತ ನಿರ್ಧೇಶಕರ ಕೆಳಗಡೆ ಅನೇಕ ಕೆಲ್ಸ ಮಾಡುವರಿಗೆ ಕೆಲಸ ಹೋಗುವದಿಲ್ಲವಾ ?

೩) ಕನ್ನಡ ಗಾಯಕರು ಬೇಡ, ಎಲ್ಲರಿಗೂ ಕುಮಾರ್ ಸಾನು, ಸೋನು ನಿಗಮ್, ಚಿತ್ರಾನೇ ಬೇಕು. ಯಾಕೆ ಕನ್ನಡದ ಗಾಯಕರಿಗೆ ಇದರಿಂದ ಅವಕಾಶ ತಪ್ಪಿ ಹೋಗೋಲ್ವಾ

೪) ಕ್ಯಾಮೆರಾಮೆನ್ ಕೂಡ ಬೇರೆ ಭಾಶೆಯವರೆ ಬೇಕು, ಆಗ ಯಾಕೆ ಯಾರೂ ಚಕಾರ ಎತ್ತೊಲ್ಲ ?

೫) ಶೂಟಿಂಗ್ ಮಾಡೊಕ್ಕೆ ಪರದೇಶವೇ ಬೇಕಾ, ನಮ್ಮ ಕನ್ನಡದ ನೆಲದಲ್ಲಿ ತೆಗೆದರೆ ಎಷ್ಟೋಂದು ಪ್ರವಾಸೋದ್ಯಮಕ್ಕೆ ನೆರವಾಗಿ ಕನ್ನಡಿಗರಿಗೆ ಸಹಾಯ ಆಗೊಲ್ವಾ, ಇದರಿಂದ ಅನೇಕ ಕನ್ನಡ ಕುಟುಂಬಗಳಿಗೆ ಅನ್ಯಾಯ ಆಗೊಲ್ವಾ

೫) ಹಾಡಿನಲ್ಲಿ ಕುಣಿಯುವದಕ್ಕೆ ವಿದೇಶಿ ಕಲಾವಿದರೇ ಬೇಕಾ , ನಮ್ಮ ನೆಲದ ಮಕ್ಕಳು ಗೆಜ್ಜೆ ಹಾಕೊಂಡು ಇದ್ದಾರ ಕುಣಿಯದೇ ಇರೊಕ್ಕೆ ?, ಅವರಿಗೆ ಕೆಲ್ಸ ಹೋಗೊಲ್ವಾ

೬) ಮಚ್ಚು,ಲಾಂಗುಗಳ ಸಾಲು ಸಾಲು ಚಿತ್ರ ಬರುತ್ತಿದೆಯೆಲ್ಲಾ, ಅದೇನು ಈ ಕನ್ನಡ ಮಣ್ಣಿನ ಸಂಸ್ಕೃತಿ ತೋರಿಸುತ್ತದಾ ಇಲ್ಲಾ ನಮ್ಮ ನೇಟಿವಿಟಿ, ಕ್ರಿಯೇಟಿವಿಟಿ ತೋರಿಸುತ್ತದೆಯಾ ?

೭) ಪರಭಾಶೆಯ ಚಿತ್ರವೂ ಬೆಂಗಳೂರಿನಲ್ಲಿ ಆ ಭಾಶೆಯಲ್ಲಿ ತೆರೆಕಂಡು ೧-೨ ವರುಶ ಆದಮೇಲೆ ಕನ್ನಡಕ್ಕೆ ಡಿಫೆರೆಂಟ್ ಅಂತ ಹಳಸು ಕೊಟ್ಟು, ಆ ಚಿತ್ರಕ್ಕೆ ಸರ್ಕಾರದ ಸಬ್ಸಿಡಿ, ತೆರಿಗೆ ವಿನಾಯತಿ ಕೇಳುವ ಬದಲು ಅದನ್ನೇ ಮೊದಲೆ ಕನ್ನಡದಲ್ಲಿ ತಂದರೆ ತಪ್ಪೇನು ?

ಹೀಗೆ ಸಾಲು ಸಾಲು ಕೊಡಬಹುದು, ಎಷ್ಟೊಂದು ಜನರಿಗೆ ಅನ್ಯಾಯ ಆಗುತ್ತಿದೆ ಎಂದು, ಇದೆಲ್ಲಾ ಇದ್ದರೂ ನಾವು ಅದನ್ನು ಕನ್ನಡ ಸಿನೆಮಾ ಅನ್ನುವುದು ಆದರೆ ಡಬ್ಬಿಂಗ್ ಮಾಡಿದ ಚಿತ್ರ ಯಾಕೆ ಕನ್ನಡ ಚಿತ್ರ ಆಗುವದಿಲ್ಲ ??

ಡಬ್ಬಿಂಗ್ ಬೇಡ ಅನ್ನುವವರು ಮೊದಲು ಅಪ್ಪಟ್ತ ಕನ್ನಡ ಚಿತ್ರ ಮಾಡಲಿ ಆಮೇಲೆ ಪರ-ವಿರೋಧ ಮಾತಾಡೊಣ ಅಲ್ವಾ


D) ಪ್ರೇಕ್ಷಕ ಚಲನಚಿತ್ರ ನೋಡುವುದು ಸಂಸ್ಕ್ರುತಿ ಕಲಿಯುವದಕ್ಕೆ

ಕನ್ನಡಿಗರೇ ಅಲ್ಲ ಜಗತ್ತಿನಲ್ಲಿ ಯಾವುದೇ ಪ್ರೇಕ್ಷಕ ಚಲನಚಿತ್ರ ಮಂದಿರಕ್ಕೆ ಹೋಗುವುದು ಮನರಂಜನೆಗೆ. ತನ್ನ ಮನಸ್ಸಿನಲ್ಲಿ ೧೦೮ ಅಡ್ಡಿ,ಚಿಂತೆಗೆಳಿದ್ದರೂ ದುಡ್ಡು ಕೊಟ್ಟು ೩ ಗಂಟೆ ಅವುಗಳನು ಮರೆಯಲು ಪ್ರಯತ್ನ ಮಾಡುತ್ತಾನೆ. ಅವನಿಗೆ ನಾವು ಕೊಟ್ಟಿದ್ದು ನೀನು ನೋಡಬೇಕು, ಹೆಚ್ಚಿನದು ಕೇಳಬಾರದು ಎಂದರೆ ಅವನು ತನ್ನ ಮನರಂಜನೆಗೆ ಬೇಕಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ.
ಆ ಸೂಕ್ಷತೆಯನ್ನು ಅರ್ಥ ಮಾಡಿಕೊಳ್ಳದೇ ಅಯ್ಯೊ .. ನಮ್ಮ ಕನ್ನಡಿಗರಿಗೆ ಸ್ಬಾಭಿಮಾನವಿಲ್ಲ , ನಮ್ಮ ಕೈ ತಪ್ಪಿ ಹೋಗಿವೆ ಆ ಜಿಲ್ಲೆಗಳೂ ಎಂದು ಬಾಯಿ ಬಡಿದುಕೊಂಡರೆ ವಾಸ್ತ್ವವ ಅರ್ಥ ಮಾಡಿಕೊಳ್ಳದ ಲೂಸ್ ಟಾಕ್ ಆಗುತ್ತದೆ. ಬಡವ ನೀ ಮಡಗಿದಂಗೆ ಇರು ಎಂದು ಕನ್ನಡ ಪ್ರೇಕ್ಷಕರನ್ನು ಕಾಣುವ ತಾತ್ಸರವೇ ಕನ್ನಡ ಚಿತ್ರರಂಗವನ್ನು ಈ ಪರಿಗೆ ನಿಲ್ಲಿಸಿದೆ.

ಅಷ್ತಕ್ಕೂ ಸ್ವಂತ ಕಥೆಯನ್ನು ಕೊಟ್ಟ ಚಿತ್ರಗಳನ್ನು ಕನ್ನಡಿಗ ಅಪ್ಪಿಕೊಂಡಿಲ್ಲವೇ ??


E) ಕನ್ನಡ ಚಿತ್ರರಂಗ ಮಸಣದ ಕಡೆ ಮುಖ ಮಾಡಿದೆ.

ಇದಕ್ಕೆ ಪ್ರೇಕ್ಷಕ ಕಾರಣರಲ್ಲ, ಇದು ಸ್ವಂಕೃತ ಅಪರಾಧ, ಅದಕ್ಕೆ ಡಬ್ಬಿಂಗ್ ಬೇಡ ಅನ್ನುವುದು ನಿಜವಾದ ಸಮಸ್ಯೆಯಿಂದ ದೂರ ಹೋದ ಹಾಗೆ. ಅಷ್ತಕ್ಕೂ ಮಾತಿಗೆ ಮುಂಚೆ ತಮಿಳ್-ತೆಲುಗು ಕಡೆ ನೋಡಿ ಅನ್ನುವ ಜನರಿಗೆ ಅಲ್ಲಿರುವ ಡಬ್ಬಿಂಗ್ ಕಾಣುವದಿಲ್ಲವೇ ?

ಕಾರಣಗಳನ್ನು ಹುಡುಕುತ್ತ ಹೋದರೆ ..ನಮಗೆ ಕಾಣುವುದು

೧) ಸರಿಯಾದ ವರ್ಗ ಅಧಿಕಾರದಲ್ಲಿ ಇಲ್ಲದೇ ಇರುವುದು.
೨) ಕನ್ನಡ ಚಲನಚಿತ್ರೋದ್ಯಮವನ್ನು ನಡೆಸುತ್ತ ಇರುವವರು ಭಟ್ಟಂಗಿತನ
೩) ಚಲನಚಿತ್ರ ಮಂದಿರದ ಕೊರತೆ
೪) ಸವಕಲು ರಿಮೇಕ್ ಚಿತ್ರಗಳು.
೫) ಮಾರುಕಟ್ಟೆ ವಿಸ್ತರಣೆ ಮಾಡದೇ ಇರುವುದು
೬) ಸಮರ್ಥ ನಾಯಕತ್ವದ ಕೊರತೆ.
೭) ಮುಖ್ಯವಾಗಿ ಕನ್ನಡ ಪ್ರೇಕ್ಷಕರನ್ನು ಕಡೆಗಣಿಸಿ, ಇವರು ನೋಡಿ ಇಷ್ಟ ಪಟ್ಟು ತೆಗೆದರೆ ನೋಡಬೇಕು ಇಲ್ಲವಾದರೆ ಇಲ್ಲ ಅನ್ನೊ ದೋರಣೆ.

ಪರಭಾಷೆಯನ್ನು ಕಲಿತು ಆಯಾ ಭಾಷೆಯನ್ನು ನೋಡಿದರು ತಪ್ಪಿಲ್ಲ, ಆದರೆ ಅದು ಕನ್ನಡದಲ್ಲಿ ಬರುವುದು ಬೇಡ ಅನ್ನುವ ದೋರಣೆಯಿಂದ ಅನುಭವಿಸುವುದು ಬರೀ ಭಾಷೆ ಅಷ್ಟೆ. ಕನ್ನಡಿಗನಿಗೆ ತನ್ನ ಮನರಂಜನೆ ತನ್ನ ಭಾಷೆಯಲ್ಲೇ ಸಿಕ್ಕರೆ ಮಾತ್ರ ಕನ್ನಡ ಉಳಿಯುವುದು ಇಲ್ಲ ಅದು ಚಿರನಿದ್ರೆಗೆ ಜಾರುವುದು.