Tuesday, December 29, 2009

ರಾಯರು ಹೋದರು ದೇವರ ಮನೆಗೆ



೨೦೦೯ ಇಸ್ವಿ ತಾನು ಹೋಗುವ ಜೊತೆ ನಮ್ಮ ಮೆಚ್ಚಿನ ಅಶ್ವತ್ ಮತ್ತು ಡಾ.ವಿಷ್ಣುವರ್ಧನ್ ಅವರನ್ನು ತನ್ನೊಡನೆ ಸೆಳೆದುಕೊಂಡಿದೆ.
ಇಬ್ಬರೂ ಕನ್ನಡದಲ್ಲಿ ಬಹಳ ಹೆಸರು ಮಾಡಿದವರು. ಅವರಿಗೆ ನಮ್ಮ ಹೃದಯ ಪೂರ್ವಕ ಶೃದ್ದಾಂಜಲಿ.

ಡಾ.ವಿಷ್ಣುವರ್ಧನ್ ಅವರ ಸಾವು ನಿಜಕ್ಕೂ ಬಹಳ ದೊಡ್ಡ ಶಾಕ್, ಅವರ ಸಾವನ್ನು ಅವರ ಚಿತ್ರದ ಮೂಲಕ ಹೀಗೆ ಹೇಳಬಹುದು ಅಲ್ವೇ??

ಮರೆಯಾದ ಕನ್ನಡದ ಯಜಮಾನ
ಮರೆಯಾದ ಮಾಣಿಕ್ಯ
ಇನ್ನೂ ವಿಷ್ನು ನೆನಪೇ ನಮಗೆ ಮುತ್ತಿನಹಾರ
ಜೀವನ ಬಂಧನದಿಂದ ಮುಕ್ತಿ
ಘರ್ಜನೆ ನಿಲ್ಲಿಸಿದ ಸಿಂಹ
ಅಗಲಿದ ಆಪ್ತಮಿತ್ರ
ಸೇರಿದರು ದೇವರ ಗುಡಿ
ರಾಯರು ಹೋದರು ದೇವರ ಮನೆಗೆ
ಇನ್ನಿಲ್ಲ ಅಪ್ಪಾಜಿ
ಕಥನಾಯಕ ಅಸ್ತಂಗತ
ಮತ್ತೆ ಹಾಡದು ಕೋಗಿಲೆ
ಆರಿದ ಜೀವನ ಜ್ಯೋತಿ

ಇಬ್ಬರೂ ನಮ್ಮೊಂದಿಗೆ ತಮ್ಮ ಚಿತ್ರ ಮತ್ತು ಗಾಯನ ಮೂಲಕ ಸದಾ ಬದುಕಿದ್ದಾರೆ.

Saturday, October 24, 2009

ಲೋಕದಲ್ಲಿ ಯಾರು ಸಾಯುವದಿಲ್ಲ

ನೆನಪುಗಳು ಎಂದೂ ಸಾಯುವದಿಲ್ಲ, ನಮ್ಮ ಹಿರಿಯರ ನೆನಪು, ಕಂಡ ವ್ಯಕ್ತಿಗಳ ಮಾತು, ನಡುವಳಿಕೆ ಎಲ್ಲವೂ ಹೀಗೆ. ಅವು ಸಾಯುವದಿಲ್ಲ. ನೋಡಿ ಆ ಬಾವಲಿಯಂತೆ ನೇತಾಡಿಕೊಂಡಿರುತ್ತದೆ. ಸಂಧರ್ಬ ನೋಡಿ ನಮ್ಮ ಮನಸ್ಸಿಗೆ ಕೊಂಬೆಗೆ ಹಾರಿಕೊಳ್ಳುತ್ತವೆ. ಲೋಕದಲ್ಲಿ ಯಾವುದಕ್ಕೂ ಸಾವಿಲ್ಲ. ರಾಲೋ,ಎಂ ಹಿರಿಯಣ್ಣ, ಡಾ.ರಾಧಾಕೃಷ್ನನ್, ಗೌರಜ್ಜಿ ಎಲ್ಲಾ ಹೀಗೆ ನನಗೆ ಅಂಟಿಕೊಂಡಿರುತ್ತಾರೆ. ಅರಿಸ್ಟಾಟಲ್, ವೃದ್ಧ ಲಿಯರ್ ಮಹರಾಜ ಇಂತ ಹಳಬರು ಕೂಡ ಹೀಗೆ ನಿರ್ಧಯಿಗಳಾಗಿ ನಮಗೆ ಅಂಟಿಕೊಳ್ಳುತ್ತಾರೆ. ಅದ್ದರಿಂದ ನನಗೆ ಅನಿಸೊತ್ತೆ ಲೋಕದಲ್ಲಿ ಯಾರು ಸಾಯುವದಿಲ್ಲ, ಇಲ್ಲೆ ನೇತಾಡುತ್ತಿತ್ತು ಯಾರಿಗಾದರೂ ಅಂಟಿಕೊಳ್ಳುತ್ತಾರೆ.


ಇದು ಶತಮಾನದ ಕನ್ನಡಿಗ ಎ ಎನ್ ಮೂರ್ತಿರಾಪ್ ಆರ ಮಿತ್ರರಿಗೆ ಹೇಳಿದ ಮಾತುಗಳು ಇವತ್ತು ನೇತಾಡುತ್ತಿತ್ತ ಬಾವಲಿ ತರ ಜ್ಞಾಪಕ ಬಂತು. ಎಷ್ಟು ನಿಜವಾದ ಮಾತುಗಳು ಇವು ,ಲೋಕದಲ್ಲಿ ಯಾರಿಗೂ ಸಾವಿಲ್ಲ ಎಲ್ಲೋ ಒಂದು ವಸ್ತು, ಅಣುವಿನಲ್ಲಿ ಅವರ ಛಾಯೆ ಇದ್ದೆ ಇರುತ್ತದೆ. ಆ ವಸ್ತು ನೋಡಿದಾಗ ಅವರ ಜ್ಞಾಪಕ ಚಕ್ಕನೆ ಆವರಿಸುತ್ತದೆ.

ನಾನು ಎಷ್ಟೋ ಸಾರಿ ಇದನ್ನು ಅಂದುಕೊಂಡಿದ್ದೇನೆ, ಎಷ್ಟೊ ಬಾರಿ ಕೆಲವರನ್ನು ಮರೆತಿದ್ದೇನೆ ಅಂತ ಭಾವಿಸಿದ್ದೇನೆ, ಅವರನ್ನು ನನ್ನ ಜೀವನದಲ್ಲಿ ಬಂದಿದ್ದರ ಅಂತ ಯೋಚಿಸಿದ್ದೇನೆ. ಯಾವುದು ಒಂದು ದಿನ, ಆ ಕ್ಷಣ ಅವರು ಜ್ಞಾಪಕಕ್ಕೆ ಬಂದೂ ಅಣಿಕಿಸುತ್ತ ಇರುತ್ತಾರೆ.
ಇನ್ನು ನಮ್ಮ ಜೀವನದಲ್ಲಿ ಆಪ್ತರ ಬಗ್ಗೆ ಎನು ಹೇಳೋದು ??. ಮೂರ್ತಿ ರಾಯರ ಮಾತು ಸರಿ ಅನಿಸುತ್ತಲೆ ಇರುತ್ತದೆ.

Sunday, October 11, 2009

ಬ್ಲಾಗ್ ಪದಗಳು ..

ಕನ್ನಡದಲ್ಲಿ ಅದೇನು,ಇದೇನು ಅಂತ ಅನೇಕ ಜನರ ಪ್ರಶ್ನೆಗಳು ಬರುತ್ತವೆ, ಬ್ಲಾಗ ಅನ್ನೊ ಪದವನ್ನು ಕನ್ನಡೀಕರಣ ಮಾಡಿದರೆ ಅದಕ್ಕೆ ಒಂದು ಸಂಸ್ಕ್ರುತ ಭಯಂಕರ ಪದಗಳನ್ನು ಸೃಷ್ಟಿ ಮಾಡಿ ಅದೇ ಕನ್ನಡ ಪದ ಎಂದು ವಾದಿಸುವ ಪರಿಷತ್ತು ಸಿಗುತ್ತದೆ. ಅವುಗಳ ಗೋಜಿಲ್ಲದೆ, ಯಾರ ಮುಲಾಜಿಲ್ಲದೆ ನನಗೆ ತೋಚಿದ ಪದಗಳನ್ನು ಇಲ್ಲಿ ಹಾಕಿದ್ದೇನೆ, ಸುಲಭ ಅನಿಸಿದರೆ ಬಳಸಿ ಇಲ್ಲ ನೀವು ಹೊಸ ಶಬ್ಧಗಳನ್ನು ಹುಟ್ಟು ಹಾಕಿ ..

Blog – ಬ್ಲಾಗ್

Blog Post – ಬ್ಲಾಗ್ ಸುದ್ದಿ

Blogroll – ಬ್ಲಾಗ್ ಸುಳಿ

Blogsite – ಬ್ಲಾಗ್ತಣ

Category: - ಬಗೆ

Hits – ನೊಡ್ಬಂದವರ ಸಂಖ್ಯೆ

Permalink – ಬ್ಲಾಗಚ್ಚೆ

Template – ಮಾದರಿ

Feeds – ಬ್ಲಾಗಮೇವು

Subscribe – ನೊಂದಾಯ್ಸು