Thursday, August 06, 2009

ಭಾಷ ಅಲ್ಪ ಸಂಖ್ಯಾತರ ಒಲೈಕೆ- ಹೊಸ ಮಂತ್ರ

ಇತ್ತಿಚಿಗೆ ನಡೆಯುತ್ತಿರುವ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ,ಅದರಲ್ಲೂ ಬೇರೆ ಭಾಷಿಕರನ್ನು ಮುಖ್ಯವಾಹಿನಿಗೆ ಸೇರಲು ಬಿಡದೆ ಅವರನ್ನು ಹಾಗೆ ಇರುವ ಹಾಗೆ ಮಾಡಿ, ಅವರನ್ನು ವೋಟಬ್ಯಾಂಕಾಗಿ ಪರಿವರ್ತಿಸುವ ಕೆಲ್ಸ ಬಹಳ ವ್ಯವಸ್ಥಿತವಾಗಿ ನಡೆಯುತ್ತಿದೆ.ಇದು ಒಂದು ಕಡೆ ಮತ ರಾಜಕಾರಣ ಅನಿಸಿದರೆ ಇನ್ನೊಂದು ಕಡೆ ಕನ್ನಡ ಸಂಘಟನೆಗಳನ್ನು ಮಟ್ಟ ಹಾಕುವ ಪ್ರಕ್ರಿಯೆ.


ತಮಿಳು ಸಮಾವೇಶ

ಮಾರ್ಚ್ 29ರಂದು ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ತಮಿಳು ಸಮಾವೇಶದಲ್ಲಿ ಕೂಡ ನಡೆದಿದ್ದು ಅದೇ,
ಸುಮಾರು ೨೫ ಲಕ್ಷ ಕೊಟ್ಟಿದ್ದಾರೆ ತಮಿಳು ಸಂಘಕ್ಕೆ ಅಂತ. ಇದರಲ್ಲಿ ಕೇವಲ ಬಿಜೆಪಿಗೆ ಮಾತ್ರ ಆಹ್ವಾನವಿತ್ತು, ಕಾರಣ ಆಡಳಿತ ಸರಕರವನ್ನು ಕರೆದಿದ್ದೆವು ಅಂತ. ಶಂಕರ ಮೂರ್ತಿ, ಜೂ.ಯಡಿಯೂರಪ್ಪ, ಹಾಲಪ್ಪ, ಕುಮಾರಸ್ವಾಮಿ ಆಗಿ ಎಲ್ಲರು ಪಾಲ್ಗೋಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು. ಈ ತಮಿಳು ಸಂಘ ೭೦ ಲಕ್ಷ ವೆಚ್ಚದಲ್ಲಿ ತಮಿಳು ಭವನ ಕಟ್ಟಿಸುತ್ತ ಇದೆ, ಇದಕ್ಕೂ ಕೂಡ ನಮ್ಮ ಕನ್ನಡ ಸರಕಾರವೆ ಹಣ ಕೊಟ್ಟಿರುತ್ತದೆ. ಇದನ್ನು ಕಾರ್ಯಕ್ರಮದ ವ್ಯವಸ್ಥಾಪಕರೇ ಹೇಳುವ ಹಾಗೆ ಸಮಾಜದ ಸಂಘಟನೆ ಅಂತ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಹೊಂದಿರುವ ತಮಿಳು ಜನರನ್ನು ತಮ್ಮಡೆ ಸೆಳೆದುಕೊಳ್ಳಲು ಚಿಕ್ಕ ಕಾಣಿಕೆ ಕೊಟ್ಟಿದ್ದಾರೆ ಅಂತ ಬಂಗಾರಪ್ಪ ಆದಿ ಎಲ್ಲರೂ ಹೇಳಿದ್ದು.

ಮರಾಠಿ ಮೇಳ

ಅದೇ ಸಮಯದಲ್ಲಿ ಬೆಳಗಾವಿಯಲ್ಲಿ ಭಾರತೀಯ ಜನತಾ ಪಕ್ಷದ ಬೆಳಗಾವಿ ಸಂಸದ ಸುರೇಶ ಅಂಗಡಿ ಅವರು ಕನ್ನಡಗರಿಗೆ ಭಾರಿ ಅಘಾತ ನೀಡಿದ್ದರು.ಕನ್ನಡಿಗರು ವಿರೊಧಿಸುತ್ತ ಇದ್ದ ವಿಷಯವನ್ನು ಸಂಸದ ಅಂಗಡಿ ಹಾಗೂ ಶಾಸಕ ಸಂಜಯ ಪಾಟೀಲ್ ಕೈಗೆತ್ತಿ ಕೊಂಡು, ಭಗವಾಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಸೋಮವಾರ ಮಹಾರಾಷ್ಟ್ರ ಏಕೀಕರಣ ಸಮಿತಿಗೆ ಬಹಿರಂಗವಾಗಿಯೇ ಬೆಂಬಲ ನೀಡಿದ್ದರು. ಇದು ಕೂಡ ಅಲ್ಲಿ ನೆಲಸಿರುವ ಮರಾಠಿ ಜನರನ್ನು ಸೆಳೆಯಲು ಅಂತ ಹೇಳಬೇಕಾಗಿಲ್ಲ. ಮರಾಠಿ ಮತಗಳು ಬೇಕು ಎಂದರೆ, ಕನ್ನಡಿಗರೇ ನಮ್ಮ ಕಾಲಿಗೆ ಬೀಳುತ್ತಾರೆ, ನಮ್ಮನ್ನು ಬೆಂಬಲಿಸುತ್ತಾರೆ ಅಂತ ಮನವರಿಕೆ ಮಾಡಿಕೊಂಡ
ಆಟಕ್ಕುಂಟು ಲೆಕ್ಕಕಿಲ್ಲ ಅನ್ನೊ ಹಾಗೆ ಆಗಿದ್ದ ಎಂ.ಇ.ಎಸ್ ಇದರಿಂದ ಚೇತರಿಕೆ ಕಂಡಿತು.

ಪಾಡುತ ತೀಯಗ

ಮತ್ತೆ ಎಪ್ರಿಲ್ ಮೊದಲ ವಾರದಲ್ಲಿ ಇದೇ ಬಿಜೆಪಿ ಪಕ್ಷ ತೆಲುಗು ಭಾಷಿಕರ ಸಮಾವೇಶವನ್ನು ಮಾಡಿ ತೆಲುಗು ಮತಗಳನ್ನು ತನ್ನಡೆ ಸೆಳೆಯಲು ಪ್ರಯತ್ನಿಸಿತು. ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸ್ನೇಹ ಮಿಲನ ಅಂತ ಮಾಡಿತ್ತು. ಕಟ್ಟಾ, ವೆಂಕಯ್ಯ ನಾಯ್ಡು ಎಲ್ಲರೂ ಪಾಲ್ಗೊಂಡಿದ್ದರು ಇದರಲ್ಲಿ. ಕಾರ್ಯಕ್ರಮ ಸಂಪೂರ್ಣ ತೆಲುಗುನಲ್ಲಿ ನಡೆಯಿತು.

ūṭaluvakai

ತಮಿಳುನಾಡು ಶಾಸ್ತ್ರೀಯ ಭಾಷೆ ವಿಚಾರದಲ್ಲಿಯಾಗಲಿ, ಕಾವೇರಿ ವಿಚಾರದಲ್ಲಿಯಾಗಲಿ, ಹೊಗೇನಕಲ್ ವಿಚಾರದಲ್ಲಿಯಾಗಲಿ ಕರ್ನಾಟಕಕ್ಕೆ ಪದೇ ಪದೇ ಅನ್ಯಾಯ ಎಸಗಿದರೂ ಸಹ ನಮ್ಮ ಬಿಜೆಪಿ ರಾಜ್ಯ ಸರಕಾರ ಇವನ್ನೆಲ್ಲ ಗಣನೆಗೆ ತೆಗೆದುಕೊಳ್ಳದೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಮುಂದಾಗಿದೆ. ಮತ್ತದೇ ಬೆಂಗಳೂರಿನಲ್ಲಿ ತಮಿಳರನ್ನು ಒಲೈಸಲು ಮಾಡಿರುವ ಕೆಲ್ಸ ಇದು.

ಕಳೆದ ೬ ತಿಂಗಳಲ್ಲಿ ಇವೆಲ್ಲಾ ವಿದ್ಯಾಮಾನಗಳನ್ನು ನೊಡುತ್ತ ಇದ್ದರೆ ನನಗೆ ಅನಿಸುವುದು ಒಂದೇ

೧) ಪರ ಭಾಷಿಕರನ್ನು ಒಲೈಸುವಿಕೆ

೨) ಇವೆಲ್ಲಾ ಕಾರ್ಯಕ್ರಮಗಳ ಮುಂದೆ ಒಂದು ಚುನಾವಣೆ ಇರುತ್ತದೆ.

೩) ಕನ್ನಡಿಗರ ಪ್ರತಿರೋಧವನ್ನು ಲೆಕ್ಕಿಸದೇ, ಕನ್ನಡ ವಿರೋಧಿ ಕೆಲ್ಸ ಮಾಡುವುದು.

೪) ತಮ್ಮ ಈ ಕ್ರಮಗಳನ್ನು ಸಮರ್ಥಿಸಿಕೊಳ್ಳಲು ಪತ್ರಿಕೆಗಳಲ್ಲಿ ಪ್ರಾಯೋಜಿತ ಲೇಖನಗಳನ್ನು ಬರೆಸುವುದು.
ಕನ್ನಡದ ಚಿಂತಕರು, ಸಾಹಿತಿಗಳು, ರಾಷ್ಟ್ರಕವಿಗಳು, ಯಿಗದ ಕವಿಗಳು ಇದನ್ನು ಸಮರ್ಥಿಸಿಕೊಳ್ಳುತ್ತ ಕನ್ನಡಿಗರಿಗೆ ಅನ್ಯಾಯ ಮಾಡುವುದು.

೫) ಕನ್ನಡ ಸಂಘಟನೆಗಳ ವಿರುದ್ಧ ಪರಭಾಷಿಕರನ್ನು ಸಂಘಟಿಸಿ ಅವರ ಬೆಂಬಲಕ್ಕೆ ನಿಂತಿರುವುದು.

ದೇಶ ಮೊದಲು, ಭಾಷೆ ಅಂತ ಹೇಳುವುದು ರಾಷ್ಟೀಯತೆ ವಿರುದ್ಧ ಅಂತ ನಂಬಿರುವ ಪಕ್ಷದಿಂದ
ಮುಂದಿನ ದಿನಗಳಲ್ಲಿ ಇನ್ನೇನು ಕನ್ನಡಿಗ ನೋಡಬೇಕೋ ನಾ ಕಾಣೆ.ಅದಕ್ಕಿಂತ ಭಯ ಆಗುವುದು ನಮ್ಮ ಕನ್ನಡ ಚಿಂತಕರ, ಪತ್ರಕರ್ತರ,ಅವತಾರ ಪುರುಷಗಳ ಸಮರ್ಥನೆ.

Monday, August 03, 2009

ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ!!


ಇದು ನನಗೆ ಬಂದ ಮಿಂಚೆ, ಇದನ್ನು ನಾವು ಕನ್ನಡ ಮಾಧ್ಯಮಗಳlli ನೋಡಲು ಆಗುವದಿಲ್ಲ. ಯಾಕೆಂದರೆ ಪ್ರಾಯೋಜಿತ ಲೇಕನಗಳನ್ನು ಬರೆಸಿ ಹಾಕುವ ಆ ಮಂದಿಗೆ ಇ ತರಹದ ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿ , ಜನರನ್ನು ತಪ್ಪು ದಾರಿಗೆ ತಳ್ಳುತ್ತಿದ್ದಾರೆ, ಆದ್ದರಿಂದ ಇದನ್ನು ಪ್ರತಿಯೊಬ್ಬ ಕನ್ನಡ ಬ್ಲಾಗಿಗ ಪ್ರಕಟಿಸಬೇಕು.

೨೦೦೯ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವನ್ನಾಗಿ ಘೋಷಿಸಿ! ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತೆಮೆ ಅನಾವರಣಕ್ಕೆ ಯಡಿಯೂರಪ್ಪ ನೇತೃತ್ವದ ಕರ್ನಾಟಕ ಸರ್ಕಾರ ಪಣ ತೊಟ್ಟು ನಿಂತಿದೆ. ಕಳೆದೆರಡು ವಾರಗಳಿಂದ ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು, ನಮ್ಮ ಸಾಹಿತಿ ಬುದ್ದಿ ಜೀವಿಗಳು! ಕನ್ನಡ ಪರ ಚಿಂತಕರು! ಕರ್ನಾಟಕದ ಬಹುತೇಕ ಎಲ್ಲಾ ಕನ್ನಡ ಪತ್ರಿಕೆಗಳವರು ಸರ್ಕಾರದ ಈ ಯೋಚನೆಗೆ ಬೆಂಬಲ ಸೂಚಿಸಿ ಹೇಳಿಕೆಗಳನ್ನು ನೀಡುತ್ತ, ಸಮಸ್ತ ಕನ್ನಡಿಗರು ತಮ್ಮ ಸಣ್ಣತನ, ಅಸಹನೆ, ಸಂಕುಚಿತತೆ, ವಿರೋಧ, ವೈಮನಸ್ಯ ತೊರೆದು ಸರಕಾರದ ಈ ನಿಲುವಿಗೆ ಬೆಂಬಲ ತೋರಬೇಕೆಂದು ಕರೆ ನೀಡುತ್ತಿದ್ದಾರೆ.

ಈ ನಿಟ್ಟಿನಲ್ಲಿ ನಾವೆಲ್ಲ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣವನ್ನು ಏಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡಬೇಕಿದೆ:


೧೯೯೧ರಲ್ಲಿ ಬೆಂಗಳೂರಿನ ಹಲಸೂರು ಕೆರೆ ಅಂಗಳದಲ್ಲಿ ತಿರುವಳ್ಳುವರ್ ಪ್ರತಿಮೆ ಅನಾವರಣಕ್ಕೆ ಕೆಲವು ತಮಿಳು ಹಿತಾಸಕ್ತಿದಾರರು ಮುಂದಾಗಿದ್ದಾಗ, ಕನ್ನಡಪರ ಸಂಘಟನೆಗಳ ಒಗ್ಗೂಡಿದ ಪ್ರತಿಭಟನೆಯಿಂದಾಗಿ ಅನಾವರಣ ಸ್ಥಗಿತಗೊಂಡಿತ್ತು.
ಈ ೧೮ ವರ್ಷಗಳಲ್ಲಿ ತಮಿಳರ ಪರವಾದ (ಸಂಕೇತವಾದ!) ಈ ಪ್ರತಿಮೆ ಅನಾವರಣದ ವಿರೋಧಕ್ಕೆ ಕಾಲಾನುಕಾಲವಾಗಿ ಪಟ್ಟಿ ಮಾಡಬಹುದಾದ ಕಾರಣಗಳು:
ತಮಿಳರು ನಾವು ಬೆಂಗಳೂರಿನವರು ಆದರೆ ಕರ್ನಾಟಕಕ್ಕೆ ಸೇರಿದವರಲ್ಲ ಎಂಬ ಭಾವನೆ ಇಟ್ಟುಕೊಂಡಿರುವುದು, ಇಲ್ಲಿ ನೆಲೆಸಿರುವ ತಮಿಳರ ಉದ್ದೇಶ ಬೆಂಗಳೂರನ್ನು ಕೇಂದ್ರಾಡಳಿತಕ್ಕೆ ಒಳಪಡಿಸುವುದಾಗಿರುವುದು , ತಿರುವಳ್ಳುವರ್ "ರಾಷ್ಟ್ರ ಕವಿ" ಅವರ ಪ್ರತಿಮೆ ಸ್ಥಾಪನೆ ಬೇಡ ಎನ್ನುವ ಕನ್ನಡಿಗರು ಎಂತಹ ದೇಶ ಭಕ್ತರು ಎಂದು ಸಹೃದಯಿಗಳಾದ ಕನ್ನಡಿಗರನ್ನೇ ಪ್ರಶ್ನಿಸಿದ್ದು,

ಅಂದು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಿ ಎಂದು ಬರಹಗಳನ್ನು ಬರೆಸಿ, ಸರ್ಕಾರವನ್ನು ಆಗ್ರಹಿಸಿ, ತಿರುವಳ್ಳುವರ್ ಪ್ರತಿಮೆ ಸ್ಥಾಪಿಸಲು ಭರವಸೆ ನೀಡುವ, ಅದಕ್ಕೆ ಪ್ರಯತ್ನಿಸುವ ಸದಸ್ಯನಿಗೆ ಮಾತ್ರ ಚುನಾವಣೆಗಳಲ್ಲಿ ಮತ ಹಾಕಿ ಎಂದು ಇಲ್ಲಿನ ತಮಿಳು ಸಮುದಾಯಕ್ಕೆ ಆದೇಶ ಹೊರಡಿಸಿದ್ದು,

ವೀರಪ್ಪನ್ ಒತ್ತಾಸೆಯಿಂದ ರಾಜಕುಮಾರ್ ಬಿಡುಗಡೆ ಆಗಬೇಕಾದ್ರೆ ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆ ಆಗಬೇಕು ಎಂಬ ಹಠ ಮಾಡಿದ್ದು.

ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಕನ್ನಡಿಗರನ್ನು ಒದೆಯಬೇಕು ಎಂದು ಹೇಳಿಕೆ ನೀಡಿದ್ದು, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಗದಂತೆ ತೊಡರುಗಾಲು ಹಾಕಿರುವುದು, ತಮ್ಮ ರಾಜ್ಯದ ಯೋಜನೆಗಳ ಅನುಷ್ಠಾನಕ್ಕಾಗಿ ಕರ್ನಾಟಕದ ಹಿತಾಸಕ್ತಿಯನ್ನು ಬಲಿಗೊಡುತ್ತಿರುವುದು.ಹೀಗೆ ಕನ್ನಡಿ
ಗನ ಸ್ವಾಭಿಮಾನ ಮತ್ತು ಸಾರ್ವಭೌಮತ್ವವನ್ನು ಪದೆ ಪದೆ ಕೆಣಕಲು ಪ್ರಯತ್ನಿಸುತ್ತಿರುವುದೇ ಆಗಿದೆ.

ಮೇಲಿನ ತಮಿಳರ ಈ ಎಲ್ಲ ಸಣ್ಣತನಗಳನ್ನು ಸಹಿಸಿಕೊಂಡು ಅವರೊಡನೆ ಇನ್ನೂ ಸಹಬಾಳ್ವೆ ನಡೆಸುತ್ತಿರುವ ಕನ್ನಡಿಗನದು ಸಂಕುಚಿತ ಸ್ವಭಾವ ಎನ್ನುವುದಾದರೆ ಕನ್ನಡಿಗ ಸಣ್ಣವ, ಅಸಹನೆಯುಳ್ಳವ, ಭಾಷಾಂದ, ಕನ್ನಡೇತರರ ವಿರೋಧಿ, ಸದಾ ದ್ವೇಷ ಸಾಧನೆಯ ಗುರಿಯುಳ್ಳವ ಎಂದು ಒಪ್ಪಿಕೊಳ್ಳಬಹುದಾಗಿದೆ.

ಈ ಕುರಿತಾಗಿ ಇಂದು ಪ್ರಜಾವಾಣಿ - ವಾಚಕರ ವಾಣಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ನೋಡಿ.... ಕರ್ನಾಟಕದಲ್ಲಿ ತಿರುವಳ್ಳುವರ್ ಕುರಿತಾಗಿ ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿರುವಾಗ, ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಬೆಂಗಳೂರಿನಲ್ಲಿಯೇ ಆರಾಮವಾಗಿ ಕಾಲ ಕಳೆಯುತ್ತಿದ್ದು ನಮ್ಮ ನಮ್ಮವರೆ ಕಿತ್ತಾಡುವುದನ್ನು ನೋಡಿ ಪುಳಕಿತಗೊಂಡಿರುವುದು ಸತ್ಯ.

ತಮಿಳರು ತಮ್ಮ ದೊಡ್ಡತನ ಮೆರೆಯುವ ಒಂದು ಹೇಳಿಕೆ ನೀಡುವ ಬಗ್ಗೆ ತಲೆಯೆ ಕೆಡಿಸಿಕೊಂಡಿಲ್ಲ.
ತಮಿಳರು ಎಂದಿಗೂ ಸ್ವಾಭಿಮಾನಿಗಳು, ದೊಡ್ಡತನ ಮೆರೆದು ದಡ್ಡರಾಗುವವರಲ್ಲ ಎಂದು ಮಾತ್ರ ಇದರಿಂದ ಸಾಬೀತಾಗುತ್ತಿದೆ. ಯಾವ ಕಾರಣಕ್ಕಾಗಿ ನಮ್ಮನ್ನಾಳುತ್ತಿರುವವರು ಅವರ ಹಿಂಬಾಲಕರು ಈ ನಿಲುವಿಗೆ ತಲೆಬಾಗಿದ್ದಾರೆ? ಉತ್ತರವಿದೆಯೇ ??

ಕಲ್ಯಾಣ ರಾಮನ್

Monday, July 27, 2009

ವಿಕ ಭಟ್ಟರ ಇಬ್ಬಂದಿತನ ...



ನಿನ್ನೆ ವಿಜಯ ಕರ್ನಾಟಕದಲ್ಲಿ ಹುಟ್ಟುಹಬ್ಬದ ಫ್ಲೆಕ್ಸ ಸಂಸ್ಕೃತಿ ಬಗ್ಗೆ ಖಾರವಾಗಿ ಭಟ್ಟರು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ಅವರ ರಾಜಕೀಯ ನಾಯಕರ ಚೇಲಾಗಳು ಹಾಕಿಸುವ ಶುಭಾಷಯ ಬ್ಯಾನರ್ ಒಂದು ಕಡೆ ಆದರೆ ಇನ್ನೊಂದು ಕಡೆ ವಿಜಯ ಕರ್ನಾಟಕದ ಪುಟಗಳಲ್ಲಿ ಪೇಜು ಪೇಜು ಉಘೇ ಉಘೇ ಪ್ರಾಯೋಜಿತ ಲೇಖನಗಳು ಮತ್ತು ಭಟ್ಟರು ಯಾರನ್ನು ಬೈದು ಉಗಿದು ಹಾಕಿದ್ದಾರೋ ಅವರದೇ ಹುಟ್ಟುಹಬ್ಬದ ಶುಭಾಯಗಳು ರಾರಾಜಿಸುತ್ತವೆ.
ಆಚೆ ಕಡೆ ಫ್ರೀ ಆಗಿ ಕಾಣುವ ಅವು ಅಸಹ್ಯವಾದರೆ, ಇನ್ನೌ ದುಡ್ಡು ಕೊಟ್ಟೂ ಕೊಂಡುಕೊಳ್ಳುವ ಓದುಗರಿಗೆ ಬೇಡವೆಂದರೂ ಅದು ಪತ್ರಿಕೆಗಳಲ್ಲಿ ಕಣ್ಣಿಗೆ ಬೀಳುವುದು ಪರಮ-ಅಸಹ್ಯವೇ ಸರಿ. ಇನ್ನು ಮುಂದಾದರೂ ಭಟ್ಟರು ಹೇಳುವುದು ಮತ್ತು ಮಾಡುವುದು ಒಂದೇ ಮಾಡಲಿ ...